ಹೆಡಿಂಗ್ಲೆ ಟೆಸ್ಟ್: ಮೈದಾನದ ಮೇಲೆ ಹಾರಾಡಿದ ವಿಮಾನದಲ್ಲಿತ್ತು ಸಂದೇಶ!: ವಿಡಿಯೋ

England Cricket Board ವಿರುದ್ಧ ಪ್ರತಿಭಟಿಸಲು ವಿಮಾನ ಹಾರಿಸಿದ ಪ್ರತಿಭಟನಾಕಾರರು | Oneindia Kannada

ಲೀಡ್ಸ್, ಆಗಸ್ಟ್ 27: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಮೂರನೇ ಪಂದ್ಯದ ಮೂರನೇ ದಿನದಾಟ ನಡೆಯುತ್ತಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ನೀರಸ ಪ್ರದರ್ಶನ ನೀಡಿದ್ದ ಟೀಮ್ ಇಂಡಿಯಾ ಎರಡನೇ ಇನ್ನಿಂಗ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ಭರವಸೆ ಮೂಡಿಸಿದೆ. ಈ ಮಧ್ಯೆ ಮೂರನೇ ದಿನದಾಟದಲ್ಲಿ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಮುಜುಗರ ಪಡುವಂತಾ ಘಟನೆ ನಡೆದಿದೆ.

ಲೀಡ್ಸ್‌ನ ಹೆಡಿಂಗ್ಲೆ ಮೈದಾನದಲ್ಲಿ ಮೂರನೇ ಟೆಸ್ಟ್‌ನ ಮೂರನೇ ದಿನದಾಟ ನಡೆಯುತ್ತಿದ್ದರೆ ಆಕಾಶದ ಮೇಲೆ ವಿಮಾನವೊಂದು ಹಾರಾಡುತ್ತಾ ಬಂದಿತ್ತು. ಆದರೆ ಆ ವಿಮಾನದ ಹಿಂದೆ ಸಂದೇಶವೊಂದನ್ನು ಕಟ್ಟಿ ಬಿಡಲಾಗಿತ್ತು. ಇದು ಹೆಡಿಂಗ್ಲೆ ಮೈದಾನದಲ್ಲಿ ಪಂದ್ಯವನ್ನು ವೀಕ್ಷಿಸುತ್ತಾ ಇದ್ದ ಎಲ್ಲಾ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿದೆ. ಆದರೆ ಅದರಲ್ಲಿದ್ದ ಸಂದೇಶ ಮಾತ್ರ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಗೆ ಮುಜುಗರನ್ನುಂಟು ಮಾಡುವಂತಿತ್ತು.

ಹೆಡಿಂಗ್ಲೆ ಮೈದಾನದ ಮೇಲೆ ಹಾರಾಡಿದ್ದ ವಿಮಾನದ ಹಿಂಬಾಗಕ್ಕೆ ದಾರದ ಮೂಲಕ ಬ್ಯಾನರ್ ಸಂದೇಶವನ್ನು ಕಟ್ಟು ಬಿಡಲಾಗಿತ್ತು. ಇದರಲ್ಲಿ "ಇಸಿಬಿಯನ್ನು ಕಿತ್ತೊಗೆಯಿರಿ, ಟೆಸ್ಟ್ ಕ್ರಿಕೆಟ್‌ಅನ್ನು ಉಳಿಸಿರಿ" ಎಂಬ ಸಂದೇಶವನ್ನು ಬರೆಯಲಾಗಿತ್ತು. ಈ ಮೂಲಕ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯ ವಿರುದ್ಧ ಅಸಮಾಧಾನವನ್ನು ವ್ಯಕ್ತಪಡಿಸಲಾಗಿದೆ. ಆದರೆ ಈ ರೀತಿ ಮಾಡಿದವರು ಯಾರು? ಇದರ ಉದ್ದೇಶ ಏನಾಗಿತ್ತು ಎಂಬುದು ಮಾತ್ರ ಇನ್ನಷ್ಟೇ ತಿಳಿದುಬರಬೇಕಾಗಿದೆ.

ಲೀಡ್ಸ್‌ನ ಹೆಡಿಂಗ್ಲೆ ಅಂಗಳದಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಕ್ರಿಕೆಟ್ ತಂಡ ಅದ್ಭುತ ಪ್ರದರ್ಶನ ನೀಡುವ ಮೂಲಕ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ತಂಡ 354 ರನ್‌ಗಳ ಭರ್ಜರಿ ಮುನ್ನಡೆ ಪಡೆದುಕೊಂಡಿದೆ. ಈ ಮೂಲಕ ಪಂದ್ಯವನ್ನು ಸಂಪೂರ್ಣವಾಗಿ ತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ತಂಡವನ್ನು ಇಂಗ್ಲೆಂಡ್ ಬೌಲರ್‌ಗಳು ಕೇವಲ 78 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾಗಿದ್ದರು. ಈ ಮೂಲಕ ಟೀಮ್ ಇಂಡಿಯಾ ಆಘಾತವನ್ನು ಅನುಭವಿಸಿದೆ.

ಇದಕ್ಕೆ ಪ್ರತಿಯಾಗಿ ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ ಭರ್ಜರಿ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿತ್ತು. ನಾಯಕ ಜೋ ರುಟ್ ಸಿಡಿಸಿದ ಭರ್ಜರಿ ಶತಕದ ನೆರವಿವಿನಿಂದ ಇಂಗ್ಲೆಂಡ್ ತಂಡ 432 ರನ್‌ಗಳನ್ನು ಗಳಿಸಲು ಶಕ್ತವಾಯಿತು. ಈ ಮೂಲಕ ಭಾರತ ತಂಡದ ವಿರುದ್ಧ ಗೆಲುವು ಸಾಧಿಸುವ ವಿಶ್ವಾಸದಲ್ಲಿದೆ ಇಂಗ್ಲೆಂಡ್.

ಆದರೆ ಇಂಗ್ಲೆಂಡ್ ತಂಡಕ್ಕೆ ಎರಡನೇ ಇನ್ನಿಂಗ್ಸ್‌ನಲ್ಲಿ ಅತ್ಯುತ್ತಮ ಪ್ರತಿರೋಧ ವ್ಯಕ್ತವಾಗುತ್ತಿದೆ. ಟೀಮ್ ಇಂಡಿಯಾ ಎರಡನೇ ಇನ್ನಿಂಗ್ಸ್‌ನಲ್ಲಿ ಉತ್ತಮ ಪ್ರತಿಕ್ರಿಯೆ ನೀಡುವ ಲಕ್ಷಣ ತೋರಿಸಿದೆ. ಆರಂಭಿಕ ಆಟಗಾರ ಕೆಎಲ್ ರಾಹುಲ್ ವಿಕೆಟ್‌ಅನ್ನು ಟೀಮ್ ಇಂಡಿಯಾ ಅಗ್ಗಕ್ಕೆ ಕಳೆದುಕೊಂಡಿದೆಯಾದರೂ ಆರಂಭಿಕ ಆಟಗಾರ ರೋಹಿತ್ ಶರ್ಮಾ ಹಾಗೂ ಚೇತೇಶ್ವರ್ ಪೂಜಾರ ಅದ್ಭುತ ಪ್ರದರ್ಶನ ನಿಡುತ್ತಿದ್ದಾರೆ. ಟೀ ವಿರಾಮದ ಸಂದರ್ಭದಲ್ಲಿ ಭಾರತ 116 ರನ್‌ಗಳಿಗೆ ಒಂದು ವಿಕೆಟ್ ಕಳೆದುಕೊಂಡಿತ್ತು. ರೋಹಿತ್ ಶರ್ಮಾ 59 ರನ್‌ಗಳಿಸಿದ್ದರೆ ಚೇತೇಶ್ವರ್ ಪೂಜಾರ 44 ರನ್‌ಗಳಿಸಿ ಕ್ರೀಸ್‌ನಲ್ಲಿದ್ದರು. ಟೀ ವಿರಾಮದ ಅಂತ್ಯದಲ್ಲಿ ಭಾರತ 238 ರನ್‌ಗಳ ಹಿನ್ನೆಡೆಯನ್ನು ಅನುಭವಿಸುತ್ತಿತ್ತು.

ಭಾರತ ಹಾಗೂ ಇಂಗ್ಲೆಂಡ್ ಆಡುವ ಬಳಗ ಟೀಮ್ ಇಂಡಿಯಾ ಆಡುವ ಬಳಗ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಕೆಎಲ್ ರಾಹುಲ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ರಿಷಭ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ,

ಇಂಗ್ಲೆಂಡ್ ಆಡುವ ಬಳಗ: ಜೋ ರೂಟ್ (ನಾಯಕ), ರೋರಿ ಬರ್ನ್ಸ್, ಹಸೀಬ್ ಹಮೀದ್, ಡೇವಿಡ್ ಮಲನ್, ಜಾನಿ ಬೈರ್‌ಸ್ಟೊವ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಮೊಯೀನ್ ಅಲಿ, ಸ್ಯಾಮ್ ಕರನ್, ಕ್ರೇಗ್ ಓವರ್‌ಟನ್, ಜೇಮ್ಸ್ ಆಂಡರ್ಸನ್, ಒಲ್ಲಿ ರಾಬಿನ್ಸನ್,

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 22 - October 28 2021, 07:30 PM
ಆಸ್ಟ್ರೇಲಿಯಾ
ಶ್ರೀಲಂಕಾ
Predict Now

For Quick Alerts
ALLOW NOTIFICATIONS
For Daily Alerts
Story first published: Friday, August 27, 2021, 20:58 [IST]
Other articles published on Aug 27, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X