ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐರ್ಲೆಂಡ್‌ಗೆ ಭಾರತ ನೀಡಿದ್ದ 228 ರನ್ ಗುರಿಯನ್ನು 226ಕ್ಕೆ ಇಳಿಸಿದ್ದು ಈ ಕಾರಣಕ್ಕೆ!

Here is the reason behind revision of Team Indias total from 227 to 225 in 2nd T20 against Ireland

ಇತ್ತೀಚೆಗಷ್ಟೇ ತವರು ನೆಲದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 5 ಪಂದ್ಯಗಳ ಟಿ ಟ್ವೆಂಟಿ ಸರಣಿಯನ್ನಾಡಿ 2 - 2 ಅಂತರದಲ್ಲಿ ಸರಣಿ ಸಮಬಲ ಮಾಡಿಕೊಂಡಿದ್ದ ಟೀಮ್ ಇಂಡಿಯಾ ತನ್ನ ಮುಂದಿನ ಸರಣಿಯಲ್ಲಿ ಐರ್ಲೆಂಡ್ ವಿರುದ್ಧ ಸೆಣಸಾಟವನ್ನು ನಡೆಸಿ ಸರಣಿಯನ್ನು ಸಂಪೂರ್ಣವಾಗಿ ಕೈವಶ ಮಾಡಿಕೊಂಡಿದೆ.

2022ರಲ್ಲಿ ಅತಿ ಹೆಚ್ಚು ಟೆಸ್ಟ್ ಶತಕ ಬಾರಿಸಿರುವ ಟಾಪ್ 4 ಬ್ಯಾಟ್ಸ್‌ಮನ್‌ಗಳಿವರು; ಯಾರು ನಂಬರ್ 1?2022ರಲ್ಲಿ ಅತಿ ಹೆಚ್ಚು ಟೆಸ್ಟ್ ಶತಕ ಬಾರಿಸಿರುವ ಟಾಪ್ 4 ಬ್ಯಾಟ್ಸ್‌ಮನ್‌ಗಳಿವರು; ಯಾರು ನಂಬರ್ 1?

ಹೌದು, ಐರ್ಲೆಂಡ್ ಪ್ರವಾಸವನ್ನು ಕೈಗೊಂಡಿದ್ದ ಟೀಮ್ ಇಂಡಿಯಾ ಆತಿಥೇಯ ಐರ್ಲೆಂಡ್ ವಿರುದ್ಧ 2 ಪಂದ್ಯಗಳ ಟ್ವೆಂಟಿ ಸರಣಿಯನ್ನು ಆಡಿತು. ಜೂನ್ 26 ಮತ್ತು ಜೂನ್ 28ರಂದು ನಡೆದ ಈ ಎರಡೂ ಟಿ ಟ್ವೆಂಟಿ ಪಂದ್ಯಗಳಲ್ಲಿಯೂ ಟೀಮ್ ಇಂಡಿಯಾ ಜಯ ಸಾಧಿಸಿ ಐರ್ಲೆಂಡ್ ತಂಡಕ್ಕೆ ವೈಟ್ ವಾಷ್ ಬಳಿಯಿತು.

ರೋಹಿತ್ ಅಲಭ್ಯರಾದರೆ ಇಂಗ್ಲೆಂಡ್ ಟೆಸ್ಟ್‌ನಲ್ಲಿ ಕಣಕ್ಕಿಳಿಯುಬಹುದಾದ 3 ಆರಂಭಿಕ ಜೋಡಿ; ಯಾರು ಬೆಸ್ಟ್?ರೋಹಿತ್ ಅಲಭ್ಯರಾದರೆ ಇಂಗ್ಲೆಂಡ್ ಟೆಸ್ಟ್‌ನಲ್ಲಿ ಕಣಕ್ಕಿಳಿಯುಬಹುದಾದ 3 ಆರಂಭಿಕ ಜೋಡಿ; ಯಾರು ಬೆಸ್ಟ್?

ಮಂಗಳವಾರ ಡಬ್ಲಿನ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಇತ್ತಂಡಗಳ ನಡುವೆ ನಡೆದ ದ್ವಿತೀಯ ಟಿ ಟ್ವೆಂಟಿ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 225 ರನ್ ಕಲೆಹಾಕಿ ಎದುರಾಳಿ ಐರ್ಲೆಂಡ್ ತಂಡಕ್ಕೆ 226 ರನ್‌ಗಳ ಗುರಿಯನ್ನು ನೀಡಿತ್ತು. ಅತ್ತ ಟೀಮ್ ಇಂಡಿಯಾ ನೀಡಿದ್ದ ಈ ಬೃಹತ್ ಮೊತ್ತವನ್ನು ಬೆನ್ನತ್ತುವ ಸನಿಹಕ್ಕೆ ಬಂದು ಎಡವಿದ ಐರ್ಲೆಂಡ್ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 221 ರನ್ ಕಲೆಹಾಕಿ 4 ರನ್‌ಗಳ ಅಂತರದಲ್ಲಿ ಸೋಲನ್ನು ಅನುಭವಿಸಿತು. ಹೀಗೆ ದ್ವಿತೀಯ ಟಿ ಟ್ವೆಂಟಿ ಪಂದ್ಯದಲ್ಲಿ ಟೀಂ ಇಂಡಿಯಾ ರೋಚಕ ಗೆಲುವು ಸಾಧಿಸಿದರೆ, ತಂಡದ ರನ್ ಮೊತ್ತದಲ್ಲಿ 2 ರನ್‌ಗಳ ಕಡಿತ ಏಕಾಯ್ತು ಎಂಬ ಪ್ರಶ್ನೆ ಕೆಲ ಕ್ರಿಕೆಟ್ ಅಭಿಮಾನಿಗಳಲ್ಲಿ ಮೂಡಿತ್ತು. ಹೌದು, ಟೀಮ್ ಇಂಡಿಯಾದ ಇನ್ನಿಂಗ್ಸ್ ಮುಗಿದಾಗ 227 ರನ್ ಕಲೆಹಾಕಿದೆ ಎಂದು ಸ್ಕೋರ್ ಬೋರ್ಡ್ ಹೇಳುತ್ತಿತ್ತು. ಆದರೆ ಕೆಲವೇ ಕ್ಷಣಗಳಲ್ಲಿ 227 ರನ್‌ಗಳಿಂದ 225ಕ್ಕೆ ಟೀಮ್ ಇಂಡಿಯಾ ರನ್ ಮೊತ್ತ ಇಳಿಕೆಯಾಯಿತು. ಹೀಗೆ ರನ್ ಮೊತ್ತ ಇಳಿಕೆಯಾದದ್ದರ ಹಿಂದಿನ ಕಾರಣ ಈ ಕೆಳಕಂಡಂತಿದೆ.

ಅಸಲಿ ಕಾರಣ ಇದು

ಅಸಲಿ ಕಾರಣ ಇದು

ಟೀಮ್ ಇಂಡಿಯಾ ಇನ್ನಿಂಗ್ಸ್ ವೇಳೆ 20ನೇ ಓವರ್ ಬೌಲಿಂಗ್‌ ಮಾಡಿದ್ದು ಐರ್ಲೆಂಡ್ ತಂಡದ ಬೌಲರ್ ಮಾರ್ಕ್ ಅಡೈರ್. ಈ ಓವರ್‌ನ ಮೊದಲ ಎಸೆತವನ್ನು ಹಾರ್ದಿಕ್ ಪಾಂಡ್ಯ ಬೌಂಡರಿ ಕಡೆಗೆ ಅಟ್ಟಿದ್ದರು. ಆದರೆ, ಐರ್ಲೆಂಡ್ ತಂಡದ ನಾಯಕ ಬಾಲ್ಬಿರ್ನಿ ಚೆಂಡನ್ನು ತಡೆದು ರನ್ ಉಳಿಸಿದ್ದರು. ಈ ಸಂದರ್ಭದಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ಹರ್ಷಲ್ ಪಟೇಲ್ ಜೋಡಿ 2 ರನ್ ಓಡಿತ್ತಾ ಅಥವಾ ಇಲ್ಲವಾ ಎಂಬ ಸಂದೇಹ ಉಂಟಾಗಿತ್ತು ಹಾಗೂ ತಂಡದ ಮೊತ್ತಕ್ಕೆ 2 ರನ್ ಸೇರ್ಪಡೆಗೊಂಡಿತ್ತು. ಆದರೆ, ಇನ್ನಿಂಗ್ಸ್ ಮುಕ್ತಾಯವಾದ ನಂತರ ಈ ಎಸೆತದಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ಹರ್ಷಲ್ ಪಟೇಲ್ ಯಾವುದೇ ರನ್ ಓಡಿಲ್ಲ ಎಂಬುದು ಖಾತರಿಯಾಗಿ ನೀಡಲಾಗಿದ್ದ 2 ರನ್‌ಗಳನ್ನು ಕಡಿತಗೊಳಿಸಲಾಯಿತು. ಹೀಗಾಗಿಯೇ ಟೀಮ್ ಇಂಡಿಯಾ ಐರ್ಲೆಂಡ್ ತಂಡಕ್ಕೆ ನೀಡಿದ್ದ 228 ರನ್‌ಗಳ ಗುರಿ 226ಕ್ಕೆ ಕುಸಿತವಾಯಿತು.

ರೋಚಕ ಜಯ ಕಂಡ ಇಂಡಿಯಾ

ರೋಚಕ ಜಯ ಕಂಡ ಇಂಡಿಯಾ

ಇನ್ನು ಟೀಮ್ ಇಂಡಿಯಾ ಇಷ್ಟು ಬೃಹತ್ ಮೊತ್ತ ಕಲೆ ಹಾಕಿದರೂ ಸಹ ಎದುರಾಳಿ ಐರ್ಲೆಂಡ್ ಚೇಸ್ ಮಾಡುವ ಸನಿಹಕ್ಕೆ ಬಂದಿತ್ತು. ಪಂದ್ಯದ ಅಂತಿಮ ಓವರ್‌ನಲ್ಲಿ ಐರ್ಲೆಂಡ್ ತಂಡಕ್ಕೆ ಗೆಲ್ಲಲು 17 ರನ್‌ಗಳ ಅವಶ್ಯಕತೆಯಿತ್ತು. ಅಂತಿಮ ಓವರ್ ಎಸೆದ ಉಮ್ರಾನ್ ಮಲಿಕ್ 2 ಬೌಂಡರಿ ಸಹಿತ 12 ರನ್ ನೀಡಿ ತಂಡ ಗೆಲ್ಲುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು. ಹೀಗೆ ಅಂತಿಮ ಎಸೆತದವರೆಗೂ ಪಂದ್ಯ ರೋಚಕತೆಯಿಂದ ಕೂಡಿತ್ತು.

2 ಪ್ರಶಸ್ತಿ ಗೆದ್ದ ದೀಪಕ್ ಹೂಡಾ

2 ಪ್ರಶಸ್ತಿ ಗೆದ್ದ ದೀಪಕ್ ಹೂಡಾ

ಈ ಪಂದ್ಯದಲ್ಲಿ ಅಬ್ಬರದ ಶತಕ ಸಿಡಿಸಿ ಟೀಮ್ ಇಂಡಿಯಾ ಬೃಹತ್ ಮೊತ್ತ ಕಲೆ ಹಾಕುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ದೀಪಕ್ ಹೂಡಾ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಹಾಗೂ ಐರ್ಲೆಂಡ್ ವಿರುದ್ಧದ ಪ್ರಥಮ ಪಂದ್ಯದಲ್ಲಿಯೂ 29 ಎಸೆತಗಳಲ್ಲಿ ಅಜೇಯ 47 ರನ್ ಬಾರಿಸಿದ್ದ ದೀಪಕ್ ಹೂಡಾ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಕಾರಣಕ್ಕೆ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಕೂಡ ಪಡೆದುಕೊಂಡರು.

Story first published: Thursday, June 30, 2022, 9:38 [IST]
Other articles published on Jun 30, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X