ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ರೀಡಾ ಸ್ಫೂರ್ತಿ ಮೆರೆದ ರಾಹುಲ್: ಅಂಪೈರ್, ಅಭಿಮಾನಿಗಳಿಂದ ಮೆಚ್ಚುಗೆ

Honest KL Rahul Impresses Umpire Ian Gould During Sydney Test

ಸಿಡ್ನಿ, ಜನವರಿ 5: ಆಸ್ಟ್ರೇಲಿಯಾ ಪ್ರವಾಸದ ಹೆಚ್ಚಿನ ಪಂದ್ಯಗಳಲ್ಲಿ ಸೊನ್ನೆ ಅಥವಾ ಬೆರಳಂಕೆಯ ರನ್ನಿಗೆ ವಿಕೆಟ್ ಒಪ್ಪಿಸಿ ಗೇಲಿ ಮಾಡಲ್ಪಟ್ಟಿದ್ದ ಭಾರತದ ಆರಂಭಿಕ ಆಟಗಾರ ಕೆಎಲ್ ರಾಹುಲ್ ಅವರು ಅಂಪೈರ್ ಸಹಿತ ಅಪಾರ ಕ್ರಿಕೆಟ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. 4ನೇ ಟೆಸ್ಟ್ ವೇಳೆ ಪ್ರಾಮಾಣಿಕತೆ ಮೆರೆಯುವ ಮೂಲಕ ರಾಹುಲ್ ಕ್ರೀಡಾಭಿಮಾನಿಗಳ ಮನ ಗೆದ್ದರು.

ಈತ 2ನೇ ಆ್ಯಡಂ ಗಿಲ್‌ಕ್ರಿಸ್ಟ್: ಭಾರತದ ಬ್ಯಾಟ್ಸ್ಮನ್‌ಗೆ ಪಾಂಟಿಂಗ್‌ ಶ್ಲಾಘನೆಈತ 2ನೇ ಆ್ಯಡಂ ಗಿಲ್‌ಕ್ರಿಸ್ಟ್: ಭಾರತದ ಬ್ಯಾಟ್ಸ್ಮನ್‌ಗೆ ಪಾಂಟಿಂಗ್‌ ಶ್ಲಾಘನೆ

ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ಶನಿವಾರ (ಜನವರಿ 5) ನಡೆದ ಭಾರತ-ಆಸ್ಟ್ರೇಲಿಯಾ 4ನೇ ಟೆಸ್ಟ್‌ನ 3ನೇ ದಿನದಾಟದಲ್ಲಿ ಕ್ಯಾಚ್ ಪಡೆದ ಸಂದರ್ಭ ಪ್ರಾಮಾಣಿಕತೆ ತೋರುವ ಮೂಲಕ ಲೋಕೇಶ್ ರಾಹುಲ್ ಅಂಪೈರ್ ಶ್ಲಾಘನೆಗೆ ಒಳಗಾದರು. ಭಾರತೀಯರು, ಕನ್ನಡಿಗರೂ ಹೆಮ್ಮೆ ಪಡುವಂತೆ ಮಾಡಿದರು.

ಸಿಡ್ನಿ, 4ನೇ ಟೆಸ್ಟ್: ವಿಶೇಷತೆಯೊಂದಿಗೆ ಅಭಿಮಾನಿಗಳ ಮನಗೆದ್ದ ಕೊಹ್ಲಿಸಿಡ್ನಿ, 4ನೇ ಟೆಸ್ಟ್: ವಿಶೇಷತೆಯೊಂದಿಗೆ ಅಭಿಮಾನಿಗಳ ಮನಗೆದ್ದ ಕೊಹ್ಲಿ

ಆಸೀಸ್ ಇನ್ನಿಂಗ್ಸ್‌ಗೆ ಇಳಿದಿತ್ತು. ಆರಂಭಿಕ ಆಟಗಾರರಾದ ಉಸ್ಮಾನ್ ಖವಾಜಾ ಮತ್ತು ಮಾರ್ಕಸ್ ಹ್ಯಾರಿಸ್ ಕ್ರೀಸ್‌ನಲ್ಲಿದ್ದರು. ಹ್ಯಾರಿಸ್ ಬ್ಯಾಟಿಂಗ್ ವೇಳೆ ರವೀಂದ್ರ ಜಡೇಜಾ ಅವರು 14.1ನೇ ಓವರ್ ಎಸೆದರು. ಮಾರ್ಕಸ್ ಬ್ಯಾಟ್‌ ತಾಗಿದ ಚೆಂಡು ರಾಹುಲ್ ಅವರತ್ತ ಚಿಮ್ಮಿ ಬಂತು. ರಾಹುಲ್ ಅದನ್ನು ಜಿಗಿದು ಕ್ಯಾಚ್ ಮಾಡಿದರು.

ಜಿಗಿದು ಕ್ಯಾಚ್ ಮಾಡಿದ ಬಳಿಕ ಸಾವರಿಸಿಕೊಂಡ ರಾಹುಲ್ ರಿವ್ಯೂಗೂ ಮೊದಲೇ ಅದು ನೌಟೌಟ್ ಎಂದು ಕೈಸನ್ನೆ ಮೂಲಕ ಸೂಚಿಸಿದರು. ಮೇಲ್ನೋಟಕ್ಕೆ ಔಟ್ ನಂತೆ ಕಂಡರೂ ಅದು ಔಟ್ ಅಲ್ಲವೆಂದು ಪ್ರಾಮಾಣಿಕವಾಗಿ ಒಪ್ಪಿಕೊಂಡ ರಾಹುಲ್ ನಡೆಗೆ ಅಭಿಮಾನಿಗಳು ಮೆಚ್ಚಿಕೊಳ್ಳಲೇಬೇಕಾಯ್ತು.

ಆಟದ ವೇಳೆ WWE ಸ್ಟಾರ್ ಶಾನ್ ಮೈಕಲ್ಸ್‌ನಂತೆ ಜಂಪ್‌ ಮಾಡಿದ ಪಂತ್!ಆಟದ ವೇಳೆ WWE ಸ್ಟಾರ್ ಶಾನ್ ಮೈಕಲ್ಸ್‌ನಂತೆ ಜಂಪ್‌ ಮಾಡಿದ ಪಂತ್!

ರಾಹುಲ್ ಪ್ರಾಮಾಣಿಕತೆಯನ್ನು ಮೆಚ್ಚಿಕೊಂಡ ಫೀಲ್ಡ್ ಅಂಪೈರ್ ಇಯಾನ್ ಗೌಲ್ಡ್ ಚಪ್ಪಾಳೆ ತಟ್ಟಿ ಅಭಿನಂದಿಸಿದರಲ್ಲದೆ, ರಾಹುಲ್ ಅವರತ್ತ ಹೆಚ್ಚೆಟ್ಟು (ಥಂಬ್) ತೋರಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ರಾಹುಲ್ ಪ್ರಾಮಾಣಿಕತೆಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದೆ.

Story first published: Saturday, January 5, 2019, 16:29 [IST]
Other articles published on Jan 5, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X