ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಈ ಆಟಗಾರರ ಪ್ರಾಮುಖ್ಯತೆ ಈಗ ಗೊತ್ತಾಗಿರಬಹುದು: ಸೌರವ್ ಗಂಗೂಲಿ

Hope all of us realise: Sourav Ganguly praised team india performence

ಸಿಡ್ನಿ ಟೆಸ್ಟ್ ಪಂದ್ಯವನ್ನು ಭಾರತ ರೋಚಕವಾಗಿ ಡ್ರಾ ಮಾಡಿಕೊಂಡಿದೆ. ಅಂತಿಮ ದಿನ ಟೀಮ್ ಇಂಡಿಯಾ ಆಟಗಾರರು ತೋರಿದ ಪ್ರದರ್ಶನಕ್ಕೆ ದಿಗ್ಗಜ ಆಟಗಾರರಿಂದ ಶ್ಲಾಘನೆ ವ್ಯಕ್ತವಾಗುತ್ತಿದೆ. ಟೀಮ್ ಇಂಡಿಯಾದ ಮಾಜಿ ನಾಯಕ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕೂಡ ಸಿಡ್ನಿ ಟೆಸ್ಟ್ ಪಂದ್ಯವನ್ನು ಡ್ರಾ ಮಾಡಿಕೊಂಡ ರೀತಿಯ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ.

ಭಾರತ ಆಸಿಸ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯವನ್ನು ಡ್ರಾ ಮಾಡಿಕೊಂಡಿರುವ ಸಂದರ್ಭವನ್ನು ಟೀಮ್ ಇಂಡಿಯಾದ ಪ್ರಮುಖ ಆಟಗಾರರ ಪ್ರಾಮುಖ್ಯತೆಯನ್ನು ವಿವರಿಸಲು ಗಂಗೂಲಿ ಬಳಸಿಕೊಂಡಿದ್ದಾರೆ. ಚೇತೇಶ್ವರ್ ಪೂಜಾರ, ಆರ್ ಅಶ್ವಿನ್ ಹಾಗೂ ರಿಷಭ್ ಪಂತ್ ಬಗ್ಗೆ ಸೌರವ್ ಗಂಗೂಲಿ ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನು ನಂಬುವುದು ಕಠಿಣ : ಪಂದ್ಯ ಡ್ರಾ ಬಳಿಕ ಆಸಿಸ್ ನಾಯಕನ ಪ್ರತಿಕ್ರಿಯೆಇದನ್ನು ನಂಬುವುದು ಕಠಿಣ : ಪಂದ್ಯ ಡ್ರಾ ಬಳಿಕ ಆಸಿಸ್ ನಾಯಕನ ಪ್ರತಿಕ್ರಿಯೆ

ಸೌರವ್ ಗಂಗೂಲಿ ಟ್ವೀಟ್

ಸೌರವ್ ಗಂಗೂಲಿ ಟ್ವೀಟ್

"ನಮಗೆಲ್ಲರಿಗೂ ಪೂಜಾರ, ಪಂತ್ ಹಾಗೂ ಅಶ್ವಿನ್ ಅವರು ಕ್ರಿಕೆಟ್ ತಂಡದಲ್ಲಿ ಇರಬೇಕಾದ ಪ್ರಾಮುಖ್ಯತೆ ಅರ್ಥವಾಗಿದೆ ಎಂದು ಭಾವಿಸುತ್ತೇನೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದು ಗುಣಮಟ್ಟದ ಬೌಲರ್‌ಗಳ ವಿರುದ್ಧ ಯಾವಾಗಲೂ ದೊಡ್ಡ ಹೊಡೆತಗಳನ್ನು ಬಾರಿಸುವುದಲ್ಲ, ಸರಿಸುಮಾರು 400 ಟೆಸ್ಟ್ ವಿಕೆಟ್‌ಗಳು ಹಾಗೇ ಸುಮ್ಮನೆ ಬಂದಿಲ್ಲ, ಅದ್ಭುತವಾದ ಹೋರಾಟ ಟೀಮ್ ಇಂಡಿಯಾ. ಸರಣಿಯನ್ನು ಗೆಲ್ಲುವ ಸಮಯ ಬಂದಿದೆ" ಎಂದು ಸೌರವ್ ಗಂಗೂಲಿ ಟ್ವೀಟ್ ಮಾಡಿದ್ದಾರೆ.

ಪೂಜಾರ ಅಶ್ವಿನ್ ಬಗ್ಗೆ ಟೀಕೆ

ಪೂಜಾರ ಅಶ್ವಿನ್ ಬಗ್ಗೆ ಟೀಕೆ

ಟೆಸ್ಟ್ ಪಂದ್ಯದಲ್ಲಿ ಚೇತೇಶ್ವರ್ ಪೂಜಾರ ಕಡಿಮೆ ಸ್ಟ್ರೈಕ್‌ರೇಟ್ ಹೊಂದಿದ್ದಾರೆ ಎಂಬ ಬಗ್ಗೆ ಕ್ರಿಕೆಟ್ ಪಂಡಿತರು, ಮಾಜಿ ಆಟಗಾರರು ಹಾಗೂ ಅಭಿಮಾನಿಗಳು ಪೂಜಾರ ಪ್ರದರ್ಶನದ ಬಗ್ಗೆ ಅಪಸ್ವರವೆತ್ತಿದ್ದರು. ಮತ್ತೊಂದೆಡೆ ಆರ್ ಅಶ್ವಿನ್ ವಿದೇಶಿ ನೆಲದಲ್ಲಿ ಸೂಕ್ತವಾದ ಬೌಲರ್ ಅಲ್ಲ ಎಂಬ ಬಗ್ಗೆಯೂ ಅನೇಕ ಮಾತುಗಳು ಕೇಳಿ ಬಂದಿತ್ತು. ಆದರೆ ಆಸಿಸ್ ವಿರುದ್ಧದ ಸರಣಿಯಲ್ಲಿ ಆರ್ ಅಶ್ವಿನ್ ಅದ್ಭುತವಾದ ಪ್ರದರ್ಶನ ನೀಡುವ ಮೂಲಕ ತಂಡಕ್ಕೆ ನೆರವಾಗಿದ್ದಾರೆ.

ಅದ್ಭುತ ಪ್ರದರ್ಶನ ನೀಡಿದ ಪಂತ್

ಅದ್ಭುತ ಪ್ರದರ್ಶನ ನೀಡಿದ ಪಂತ್

ಇನ್ನು ಮೂರನೇ ಟೆಸ್ಟ್ ಪಂದ್ಯದಲ್ಲಿ ಯುವ ಆಟಗಾರ ರಿಷಭ್ ಪಂತ್ ನೀಡಿದ ಅದ್ಭುತ ಪ್ರದರ್ಶನ ಪಂದ್ಯದ ಮುಖ್ಯಾಂಶಗಳಲ್ಲಿ ಒಂದು. ಆಸ್ಟ್ರೇಲಿಯಾ ತಂಡ ನೀಡಿದ ಬೃಹತ್ ಗುರಿಯನ್ನು ಭಾರತ ಮುಟ್ಟಬಲ್ಲದು ಎಂಬಲ್ಲಿಗೆ ರಿಷಭ್ ಪಂತ್ ತಂದು ನಿಲ್ಲಿಸಿದ್ದರು. ಆದರೆ 97 ರನ್ ಗಳಿಸಿದ ಅವರು ವಿಕೆಟ್ ಒಪ್ಪಿಸಿ ಶತಕವನ್ನು ತಪ್ಪಿಸಿಕೊಂಡರು. ಬಳಿಕ ಪೂಜಾರ ವಿಕೆಟ್ ಕೂಡ ಉರುಳಿದ ಬಳಿಕ ಭಾರತ ಪಂದ್ಯವನ್ನು ಡ್ರಾ ಮಾಡಿಕೊಳ್ಳುವತ್ತ ದೃಷ್ಟಿನೆಟ್ಟಿತು.

ಡ್ರಾ ಮಾಡಿಕೊಂಡ ಭಾರತ

ಡ್ರಾ ಮಾಡಿಕೊಂಡ ಭಾರತ

ಭಾರತೀಯ ಕ್ರಿಕೆಟ್ ತಂಡ ಸಿಡ್ನಿ ಪಂದ್ಯದಲ್ಲಿ ಬೃಹತ್ ಮೊತ್ತವನ್ನು ಬೆನ್ನಟ್ಟಿ ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಆಸಿಸ್ ವಿರುದ್ಧದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ 1-1 ಸಮಬಲದಲ್ಲಿ ಮುಂದುವರಿದಿದ್ದು ಬ್ರಿಸ್ಬೇನ್‌ನಲ್ಲಿ ನಡೆಯಲಿರುವ ಅಂತಿಮ ಪಂದ್ಯ ಸರಣಿಯ ನಿರ್ಣಾಯಕವೆನಿಸಿದೆ

Story first published: Monday, January 11, 2021, 18:52 [IST]
Other articles published on Jan 11, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X