ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್ ಪ್ರವಾಸಕ್ಕೆ ನಾನು ಶೇ 100 ಫಿಟ್ ಎಂದರು ವಿರಾಟ್ ಕೊಹ್ಲಿ

I am 100% fit and raring to go: Virat Kohli

ನವದೆಹಲಿ, ಜೂನ್ 22: ತಮ್ಮ ಫಿಟ್ನೆಸ್ ಕುರಿತ ಎಲ್ಲ ಅನುಮಾನಗಳನ್ನು ತಳ್ಳಿಹಾಕಿರುವ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ತಾವು ಶೇ 100ರಷ್ಟು ಫಿಟ್ ಆಗಿದ್ದು, ಇಂಗ್ಲೆಂಡ್‌ಗೆ ತೆರಳಲು ಉತ್ಸುಕನಾಗಿರುವುದಾಗಿ ಹೇಳಿದ್ದಾರೆ.

'ನಾನು ಹೊರಡಲು ಶೇ 100ರಷ್ಟು ಸಿದ್ಧನಾಗಿದ್ದೇನೆ. ನನ್ನ ಕತ್ತಿನ ಸಮಸ್ಯೆ ಶಮನವಾಗಿದೆ. ಮುಂಬೈನಲ್ಲಿ ಆರೇಳು ಅವಧಿ ಅಭ್ಯಾಸ ನಡೆಸಿದ್ದು, ಸಂಪೂರ್ಣನಾಗಿ ಫಿಟ್ ಆಗದ್ದೇನೆ.

ಮತ್ತೆ ಶುರುವಾಯಿತು ಬಿಸಿಸಿಐ-ಸಿಒಎ ಜಟಾಪಟಿಮತ್ತೆ ಶುರುವಾಯಿತು ಬಿಸಿಸಿಐ-ಸಿಒಎ ಜಟಾಪಟಿ

ನಾನು ಫಿಟ್ನೆಸ್ ಪರೀಕ್ಷೆಗೂ ಒಳಪಟ್ಟಿದ್ದೇನೆ. ದೇಹ ಈಗಲು ಆಡಲು ಪೂರಕವಾದ ಸ್ಥಿತಿಯಲ್ಲಿದೆ ಎಂದು ಕೊಹ್ಲಿ ಹೇಳಿದ್ದಾರೆ.

ಮೈದಾನಕ್ಕೆ ಹಿಂದಿರುಗಲು ನಾನು ನಿಜಕ್ಕೂ ಕಾತರನಾಗಿದ್ದೇನೆ. ನೀವು ಸಾಕಷ್ಟು ಕ್ರಿಕೆಟ್ ಆಡಿದಾಗಲೂ ಸಿಗುವ ಅಪರೂಪದ ಅನುಭವ ಇದು.

ಆದರೆ, ಅದರಾಚೆ ಈ ಬ್ರೇಕ್ ತುಂಬಾ ಸಹಾಯ ಮಾಡಿತು. ಇದರಿಂದ ಹೊಸ ಉಲ್ಲಾಸ ಪಡೆದುಕೊಳ್ಳಲು ಮತ್ತು ಉತ್ಸಾಹದೊಂದಿಗೆ ಅಲ್ಲಿಗೆ ಮತ್ತೆ ಮರಳಲು ಸಾಧ್ಯವಾಗುತ್ತದೆ ಎಂದು ಕೊಹ್ಲಿ ಹೇಳಿದ್ದಾರೆ.

ಯೋಗ ಮತ್ತು ಸೆಲ್ಫಿ ದಿನ; ಕ್ರಿಕೆಟಿಗರ ಕಸರತ್ತು, ಕರಾಮತ್ತು!ಯೋಗ ಮತ್ತು ಸೆಲ್ಫಿ ದಿನ; ಕ್ರಿಕೆಟಿಗರ ಕಸರತ್ತು, ಕರಾಮತ್ತು!

ಐಪಿಎಲ್ ಟೂರ್ನಿ ವೇಳೆ ಕೊಹ್ಲಿ ಕತ್ತಿನ ಗಾಯಕ್ಕೆ ತುತ್ತಾಗಿದ್ದರು. ಹೀಗಾಗಿ ಅವರು ಸಸೆಕ್ಸ್ ಪರ ಕೌಂಟಿ ಪಂದ್ಯಗಳಲ್ಲಿ ಆಡುವ ಬಯಕೆಯನ್ನು ಈಡೇರಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ.

'ನಾನು ಇಂಗ್ಲೆಂಡ್‌ಗೆ ತೆರಳಿ ಅಲ್ಲಿನ ಸನ್ನಿವೇಶದ ಅನುಭವ ಪಡೆದುಕೊಳ್ಳಬೇಕೆಂದು ಬಯಸಿದ್ದೆ. ಅಲ್ಲಿ ನಾವು ನಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಆಡಿಲ್ಲ. ನಾಲ್ಕು ವರ್ಷದ ಹಿಂದೆ ನಾವು ಅಲ್ಲಿ ಆಡಿದ್ದು. ಪೂಜಾರ, ಇಶಾಂತ್ ಶರ್ಮಾರಂತೆ ಆ ಪರಿಸ್ಥಿತಿಯಲ್ಲಿ ಆಡುವ ಕಷ್ಟಗಳನ್ನು ತಿಳಿದುಕೊಳ್ಳಬೇಕಿತ್ತು'.

ಮಹಿಳಾ ಕ್ರಿಕೆಟ್: ಒಂದೇ ದಿನದಲ್ಲಿ ಎರಡೆರಡು ದಾಖಲೆಮಹಿಳಾ ಕ್ರಿಕೆಟ್: ಒಂದೇ ದಿನದಲ್ಲಿ ಎರಡೆರಡು ದಾಖಲೆ

ಆದರೆ, ಶೇ 90ರಷ್ಟು ಫಿಟ್ ಆಗಿದ್ದು, ಅಲ್ಲಿಗೆ ತೆರಳಿ ಆಡುವುದಕ್ಕೆ ಹೋಲಿಸಿದರೆ ಈಗಿನಂತೆ ಸಂಪೂರ್ಣ ಸಿದ್ಧನಾಗಿ ಮತ್ತು ಹೊಸ ಉತ್ಸಾಹದೊಂದಿಗೆ ಹೋಗುತ್ತಿರುವುದು ಒಳ್ಳೆಯದು ಅನಿಸುತ್ತಿದೆ.

ಇಂತಹ ದೀರ್ಘಾವಧಿ ಪ್ರವಾಸ ಕೈಗೊಳ್ಳುವ ವೇಳೆ ನೀವು ಶೇ 100ರಷ್ಟು ಫಿಟ್ನೆಸ್ ಮತ್ತು ಫ್ರೆಶ್ ಆಗಿರುವುದೇ ಹೆಚ್ಚು ಮುಖ್ಯವಾಗುತ್ತದೆ ಎಂದು ಕೊಹ್ಲಿ ಹೇಳಿದ್ದಾರೆ.

ಇಂಗ್ಲೆಂಡ್‌ಗೆ ಎರಡು ತಿಂಗಳ ಪ್ರವಾಸ ಕೈಗೊಳ್ಳಲಿರುವ ಭಾರತ ತಂಡ ಅಲ್ಲಿ ಐದು ಟೆಸ್ಟ್, ಮೂರು ಏಕದಿನ ಮತ್ತು ಮೂರು ಟಿ 20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಲಿದೆ.

Story first published: Friday, June 22, 2018, 17:21 [IST]
Other articles published on Jun 22, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X