ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಸಿಸ್ ಟೆಸ್ಟ್‌ಗೆ ಸ್ಟಾರ್ ಆಲ್‌ರೌಂಡರ್‌ಗಳ ಆಯ್ಕೆಯೇ ಅನುಮಾನ ಎಂದ ಆಕಾಶ್ ಚೋಪ್ರಾ

I Dont Think Hardik Pandya Can Make The Test Team For The Australia Series - Aakash Chopra

ಕೊರೊನಾ ವೈರಸ್‌ನ ಕಾರಣದಿಂದಾಗಿ ಭಾರತದಲ್ಲಿ ಇನ್ನೂ ಕ್ರಿಕೆಟ್ ಚಟುವಟಿಕೆ ಆರಂಭವಾಗಿಲ್ಲ. ಆದರೆ ಈ ವರ್ಷಾಂತ್ಯಕ್ಕೆ ಆಯೋಜನೆಯಾಗಿರುವ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ಸಾಕಷ್ಟು ಕಾತುರತೆ ಕಂಡು ಬರುತ್ತಿದೆ. ಆಟಗಾರರು ಮಾತ್ರವಲ್ಲದೆ ಮಾಜಿ ಆಟಗಾರರು ಅಭಿಮಾನಿಗಳು ಕೂಡ ಈ ಬಗ್ಗೆ ಸಾಕಷ್ಟು ಕುತೂಹಲದಿಂದಿದ್ದಾರೆ.

ಡಿಸೆಂಬರ್ ತಿಂಗಳಲ್ಲಿ ನಡೆಯಲಿರುವ ಈ ಸರಣಿಗೆ ಭಾರತ ತಂಡದ ಪ್ರಮುಖ ಆಲ್‌ರೌಂಡರ್‌ಗಳು ಆಯ್ಕೆಯಾಗುವ ಸಂಭವ ತೀರಾ ಕಡಿಮೆ ಎಂದು ಮಾಜಿ ಕ್ರಿಕೆಟಿಗ ಕಾಮೆಂಟೇಟರ್ ಅಭಿಪ್ರಾಯಪಟ್ಟಿದ್ದಾರೆ. ಇದಕ್ಕೆ ಪೂರಕವಾದ ಕಾರಣವನ್ನು ಕೂಡ ಅವರು ನೀಡಿದ್ದಾರೆ. ಹಾಗಾದರೆ ಆಕಾಶ್ ಚೋಪ್ರಾ ಹೇಳಿದಂತೆ ಆಸ್ಟ್ರೆಲಿಯಾ ವಿರುದ್ಧದ ಪ್ರತಿಷ್ಠಿತ ಟೂರ್ನಿಯನ್ನು ತಪ್ಪಿಸಿಕೊಳ್ಳುವ ಆ ಸ್ಟಾರ್ ಆಲ್‌ರೌಂಡರ್‌ಗಳು ಯಾರು ಮುಂದೆ ಓದಿ..

ಐಪಿಎಲ್ಅನ್ನು ಎಲ್ಲಾ ಟಿ20 ಲೀಗ್‌ಗಳ ಶಿಖರ ಎಂದ ನ್ಯೂಜಿಲೆಂಡ್ ಕ್ರಿಕೆಟಿಗಐಪಿಎಲ್ಅನ್ನು ಎಲ್ಲಾ ಟಿ20 ಲೀಗ್‌ಗಳ ಶಿಖರ ಎಂದ ನ್ಯೂಜಿಲೆಂಡ್ ಕ್ರಿಕೆಟಿಗ

ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಿದ ಚೋಪ್ರಾ

ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಿದ ಚೋಪ್ರಾ

ಸದ್ಯ ವೀಕ್ಷಕ ವಿವರಣೆ ಮತ್ತು ವಿಶ್ಲೇಷಣೆಯಿಂದ ಖ್ಯಾತರಾಗಿರುವ ಆಕಾಸ್ ಚೋಪ್ರಾ ವೀಕ್ಷಕರ ಪ್ರಶ್ನೆಗಳಿಗೆ ಉತ್ತರವನ್ನು ನೀಡುತ್ತಾ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅಭಿಮಾನಿಯೋರ್ವ ಆಸಿಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಇಬ್ಬರು ಆಲ್‌ರೌಂಡರ್‌ಗಳನ್ನು ಕಣಕ್ಕಿಳಿಸುವ ಸಾಧ್ಯತೆಯ ಬಗ್ಗೆ ಪ್ರಶ್ನಿಸಿದ್ದರು ಇದಕ್ಕೆ ಆಕಾಶ್ ತಮ್ಮ ವಿಶ್ಲೇಷಣೆಯನ್ನು ಮುಂದಿಟ್ಟಿದ್ದಾರೆ.

ಹಾರ್ದಿಕ್ ಪಾಂಡ್ಯ ಆಯ್ಕೆ ಬಗ್ಗೆ ಚೋಪ್ರಾ ಅನುಮಾನ

ಹಾರ್ದಿಕ್ ಪಾಂಡ್ಯ ಆಯ್ಕೆ ಬಗ್ಗೆ ಚೋಪ್ರಾ ಅನುಮಾನ

ಈ ಸಂದರ್ಭದಲ್ಲಿ ಆಕಾಶ್ ಚೋಪ್ರಾ ಆಸ್ಟ್ರೇಲಿಯಾ ವಿರುದ್ಧದ ಮಹತ್ವದ ಸರಣಿಗೆ ಹಾರ್ದಿಕ್ ಪಾಂಡ್ಯ ಆಯ್ಕೆಯಾಗುವ ಬಗ್ಗೆ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ. ಇದಕ್ಕೆ ಸೂಕ್ತ ಕಾರಣವನ್ನು ಕೂಡ ಆಕಾಶ್ ಚೋಪ್ರ ನೀಡಿದ್ದು ಸಾಕಷ್ಟು ಕುತೂಹಲ ಮೂಡಿಸಿದೆ. ಹಾರ್ದಿಕ್ ಪಾಂಡ್ಯ ಕಳೆದ ಹಲವು ಸಮಯಗಳಿಂದ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಕಾಣಿಸಿಕೊಳ್ಳದೇ ಇರುವುದು ಇದಕ್ಕೆ ಕಾರಣವಾಗಿದೆ.

ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಪಾಂಡ್ಯ

ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಪಾಂಡ್ಯ

ಹಾರ್ದಿಕ್ ಪಾಂಡ್ಯ ಕಳೆದ ವರ್ಷ ಸೆಪ್ಟೆಂಬರ್ ಅಕ್ಟೋಬರ್ ತಿಂಗಳಿನಲ್ಲಿ ಬೆನ್ನುನೋವಿಗೆ ತುತ್ತಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಹೀಗಾಗಿ ಅದಾದ ಬಳಿಕ ಯಾವುದೇ ಅಂತಾರಾಷ್ಟ್ರೀಯ ಪಂದ್ಯದಲ್ಲೂ ಅವರು ಪಾಲ್ಗೊಂಡಿಲ್ಲ. ಚೇತರಿಕೆ ಕಂಡು ಮರಳುವ ಸಂದರ್ಭದಲ್ಲಿ ಲಾಕ್‌ಡೌನ್ ಘೋಷಣೆಯಾಗಿತ್ತು. ಜೊತೆಗೆ ಸುದೀರ್ಘ ಮಾದರಿಯ ಕ್ರಿಕೆಟ್‌ನಲ್ಲಿ ಹಾರ್ದಿಕ್ ಎಷ್ಟು ಫಿಟ್ ಆಗಿದ್ದಾರೆ ಎಂಬುದು ಕೂಡ ಪ್ರಮುಖ ಸಂಗತಿಯಾಗಿದ್ದಾರೆ ಎನ್ನುವುದು ಆಕಾಶ್ ಚೋಪ್ರಾ ನೀಡಿದ ಕಾರಣವಾಗಿದೆ.

ಜಡೇಜಾ ಆಯ್ಕೆಗಿಂತ ಅಶ್ವಿನ್ ಕುಲ್‌ದೀಪ್ ಬೆಸ್ಟ್

ಜಡೇಜಾ ಆಯ್ಕೆಗಿಂತ ಅಶ್ವಿನ್ ಕುಲ್‌ದೀಪ್ ಬೆಸ್ಟ್

ಈ ಸಂದರ್ಭದಲ್ಲಿ ಆಕಾಶ್ ಚೋಪ್ರಾ ಇನ್ನೋರ್ವ ಆಲ್‌ರೌಂಡರ್ ರವೀಂದ್ರ ಜಡೇಜಾ ತಂಡಕ್ಕೆ ಆಯ್ಕೆಯಾಗುವ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿದ್ದಾರೆ. ಕುಲ್ದೀಪ್‌ ಕಳೆದ ಬಾರಿ ಆಸ್ಟ್ರೇಲಿಯಾ ಪ್ರವಾಸದಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದರು. ಹೀಗಾಗಿ ಅವರಿಗೆ ಅವಕಾಶ ನೀಡುವುದೇ ಉತ್ತಮ. ಅಶ್ವಿನ್‌ ಅವರನ್ನು ಕಡೆಗಣಿಸಲು ಸಾಧ್ಯವೇ ಇಲ್ಲ. ಹೀಗಾಗಿ ಆಸ್ಟ್ರೇಲಿಯಾ ನೆಲದಲ್ಲಿ ಜಡೇಜಾ ಮತ್ತು ಪಾಂಡ್ಯ ತಂಡದಲ್ಲಿ ಆಡುವುದನ್ನು ಮರೆಯಬೇಕಷ್ಟೆ." ಎಂದು ಆಕಾಶ್‌ ಅಭಿಪ್ರಾಯ ಪಟ್ಟಿದ್ದಾರೆ.

Story first published: Monday, July 20, 2020, 16:46 [IST]
Other articles published on Jul 20, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X