'ನನಗೆ ಅವಕಾಶ ತಪ್ಪಿಸಿ ತಂಡದಿಂದ ಹೊರಗಿಟ್ಟ'; ಎಬಿ ಡಿವಿಲಿಯರ್ಸ್ ಮತ್ತೊಂದು ಮುಖ ಬಿಚ್ಚಿಟ್ಟ ಆಟಗಾರ!

ಎಬಿ ಡಿವಿಲಿಯರ್ಸ್ ದಕ್ಷಿಣ ಆಫ್ರಿಕಾ ಕ್ರಿಕೆಟ್ ಕಂಡ ಅತ್ಯುತ್ತಮ ಕ್ರಿಕೆಟಿಗರಲ್ಲಿ ಒಬ್ಬರು. ಕೇವಲ ದಕ್ಷಿಣ ಆಫ್ರಿಕಾದಲ್ಲಿ ಮಾತ್ರವಲ್ಲದೆ ವಿಶ್ವದಾದ್ಯಂತ ಅಭಿಮಾನಿ ಬಳಗವನ್ನು ಹೊಂದಿರುವ ಕ್ರಿಕೆಟಿಗ ಎಬಿ ಡಿವಿಲಿಯರ್ಸ್. ಅದರಲ್ಲಿಯೂ ಭಾರತದಲ್ಲಿ ಅತಿ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿರುವ ಎಬಿ ಡಿವಿಲಿಯರ್ಸ್ ಭಾರತೀಯ ಸ್ಟಾರ್ ಆಟಗಾರರಷ್ಟೇ ಭಾರತದಲ್ಲಿ ಕ್ರೇಜ್ ಮತ್ತು ಹುಚ್ಚು ಅಭಿಮಾನಿಗಳನ್ನು ಹೊಂದಿದ್ದಾರೆ.

ಕೆಎಲ್ ರಾಹುಲ್‌ನ್ನು ದಿಗ್ಗಜ ಕ್ರಿಕೆಟಿಗನಿಗೆ ಹೋಲಿಸಿದ ಜಹೀರ್ ಖಾನ್ಕೆಎಲ್ ರಾಹುಲ್‌ನ್ನು ದಿಗ್ಗಜ ಕ್ರಿಕೆಟಿಗನಿಗೆ ಹೋಲಿಸಿದ ಜಹೀರ್ ಖಾನ್

ತಮ್ಮ ಅತ್ಯುತ್ತಮ ಬ್ಯಾಟಿಂಗ್ ವೈಖರಿಯಿಂದ ಕ್ರೀಡಾಭಿಮಾನಿಗಳ ಮನಗೆದ್ದಿರುವ ಎಬಿ ಡಿವಿಲಿಯರ್ಸ್ ಹಲವಾರು ಯುವ ಕ್ರಿಕೆಟಿಗರಿಗೆ ಮಾದರಿ ಕೂಡ ಹೌದು. ಜೀವನದಲ್ಲಿ ಒಳ್ಳೆಯ ಕ್ರಿಕೆಟರ್ ಆಗಬೇಕೆಂದುಕೊಂಡಿರುವ ಹಲವಾರು ಯುವ ಕ್ರಿಕೆಟಿಗರ ಪಾಲಿನ ಹೀರೋ ಎಬಿ ಡಿ ವಿಲಿಯರ್ಸ್. ಕೇವಲ ಮೈದಾನದಲ್ಲಿ ಮಾತ್ರವಲ್ಲದೇ ಹೊರಜಗತ್ತಿನಲ್ಲಿಯೂ ಕೂಡ ಎಬಿ ಡಿವಿಲಿಯರ್ಸ್ ಓರ್ವ ಜಂಟಲ್ ಮನ್. ವಿವಾದಗಳಿಂದ ಸದಾ ದೂರ ಇರುವ ಎಬಿ ಡಿವಿಲಿಯರ್ಸ್ ತಾವಾಯ್ತು ತಮ್ಮ ಕ್ರಿಕೆಟ್ ಆಯ್ತು ಎನ್ನುವ ಮನೋಭಾವದವರು. ಆದರೆ ಇದೀಗ ಇಂಥ ಎಬಿ ಡಿವಿಲಿಯರ್ಸ್ ಕುರಿತು ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಖಾಯಾ ಜೊಂಡೊ ಗಂಭೀರ ಆರೋಪವೊಂದನ್ನು ಮಾಡಿದ್ದು ಎಬಿ ಡಿವಿಲಿಯರ್ಸ್ ಇನ್ನೊಂದು ಮುಖವನ್ನು ಪರಿಚಯ ಮಾಡಿಸಿದ್ದಾರೆ.

ಭಾರತ vs ಇಂಗ್ಲೆಂಡ್ ಪ್ರಥಮ ಟೆಸ್ಟ್: ನಾಲ್ಕನೇ ದಿನ ಮಳೆ ಇರುತ್ತಾ? ಇಲ್ಲಿದೆ ಹವಾಮಾನ ವರದಿಭಾರತ vs ಇಂಗ್ಲೆಂಡ್ ಪ್ರಥಮ ಟೆಸ್ಟ್: ನಾಲ್ಕನೇ ದಿನ ಮಳೆ ಇರುತ್ತಾ? ಇಲ್ಲಿದೆ ಹವಾಮಾನ ವರದಿ

ಎಬಿ ಡಿವಿಲಿಯರ್ಸ್ ನಾಯಕತ್ವದ ದಕ್ಷಿಣ ಆಫ್ರಿಕಾ ತಂಡ 2015ರ ಸಮಯದಲ್ಲಿ ಭಾರತ ಪ್ರವಾಸವನ್ನು ಕೈಗೊಂಡಿತ್ತು. ಹೀಗೆ ಭಾರತ ಪ್ರವಾಸ ಕೈಗೊಂಡಿದ್ದ ದಕ್ಷಿಣ ಆಫ್ರಿಕಾದ ತಂಡದಲ್ಲಿದ್ದ ಆಟಗಾರರ ಪೈಕಿ ಇದೀಗ ಎಬಿಡಿ ವಿಲಿಯರ್ಸ್ ಕುರಿತು ಆರೋಪ ಮಾಡುತ್ತಿರುವ ಖಾಯಾ ಜೊಂಡೊ ಕೂಡ ಒಬ್ಬರು. ಸದ್ಯ ಖಾಯಾ ಜೊಂಡೊ ಮಾಡುತ್ತಿರುವ ಆರೋಪ ದಕ್ಷಿಣ ಆಫ್ರಿಕಾ 2015ರಲ್ಲಿ ಕೈಗೊಂಡಿದ್ದ ಭಾರತ ಪ್ರವಾಸದ ಕುರಿತಾಗಿಯೇ. ಇದೇ ಪ್ರವಾಸದಲ್ಲಿ ಎಬಿ ಡಿವಿಲಿಯರ್ಸ್ ತನಗೆ ಮಾಡಿದ ಮೋಸದ ಕುರಿತು ಮನಬಿಚ್ಚಿ ಮಾತನಾಡಿರುವ ಖಾಯಾ ಜೊಂಡೊ ಈ ಕೆಳಕಂಡ ನಂಬಲಸಾಧ್ಯವಾದ ವಿಷಯಗಳನ್ನು ಹಂಚಿಕೊಂಡಿದ್ದಾರೆ..

ಎಬಿ ಡಿವಿಲಿಯರ್ಸ್ ನನ್ನನ್ನು ತಂಡದಿಂದ ಹೊರಗಿಟ್ಟರು!

ಎಬಿ ಡಿವಿಲಿಯರ್ಸ್ ನನ್ನನ್ನು ತಂಡದಿಂದ ಹೊರಗಿಟ್ಟರು!

ದಕ್ಷಿಣ ಆಫ್ರಿಕಾ ಭಾರತ ಪ್ರವಾಸ ಕೈಗೊಂಡಿದ್ದರ ಕುರಿತು ಮಾತನಾಡಿರುವ ಖಾಯ ಜೊಂಡೋ ಎಬಿ ಡಿವಿಲಿಯರ್ಸ್ ಅವಕಾಶ ನೀಡದೆ ತಂಡದಿಂದ ಹೊರಗಿಟ್ಟರು ಎಂದು ಆರೋಪಿಸಿದ್ದಾರೆ. ಭಾರತ ವಿರುದ್ಧದ ಸರಣಿಯ ಮೂರನೇ ಏಕದಿನ ಪಂದ್ಯಕ್ಕೂ ಮುನ್ನ ಜೆಪಿ ಡುಮಿನಿ ಗಾಯಕ್ಕೊಳಗಾದರು. ಹೀಗಾಗಿ ಜೆಪಿ ಡುಮಿನಿ ಜಾಗಕ್ಕೆ ನನ್ನನ್ನು ಆಯ್ಕೆ ಮಾಡಬೇಕಾಗಿತ್ತು, ಆದರೆ ಎಬಿಡಿ ವಿಲಿಯರ್ಸ್ ನನಗೆ ಅವಕಾಶ ನೀಡದೆ ದಕ್ಷಿಣ ಆಫ್ರಿಕಾ ತಂಡದಲ್ಲಿ ಸ್ಥಾನವನ್ನೇ ಪಡೆದುಕೊಳ್ಳದಿದ್ದ ಎಲ್ಗರ್‌ಗೆ ಅವಕಾಶ ನೀಡಿದರು ಎಂದು ಖಾಯಾ ಜೊಂಡೊ ಆರೋಪಿಸಿದ್ದಾರೆ.

ಅಂದೇ ನಾನು ಆರಾಧಿಸುತ್ತಿದ್ದ ಡಿವಿಲಿಯರ್ಸ್ ಮೇಲೆ ನನಗೆ ಗೌರವ ಹೋಯಿತು

ಅಂದೇ ನಾನು ಆರಾಧಿಸುತ್ತಿದ್ದ ಡಿವಿಲಿಯರ್ಸ್ ಮೇಲೆ ನನಗೆ ಗೌರವ ಹೋಯಿತು

ಎಬಿ ಡಿವಿಲಿಯರ್ಸ್ ನಡೆದುಕೊಂಡ ರೀತಿ ನೋಡಿ ಒಂದುಕ್ಷಣ ನಾನೇ ಬೇಸರಕ್ಕೊಳಗಾದೆ, ಎಬಿ ಡಿವಿಲಿಯರ್ಸ್ ನನ್ನ ಹೀರೋ ಎಂದು ಆರಾಧಿಸುತ್ತಾ ಬೆಳೆದು ಬಂದ ನಾನು ಎಬಿ ಡಿವಿಲಿಯರ್ಸ್ ಕೈಗೊಂಡ ನಿರ್ಧಾರ ನೋಡಿ ಆತನ ಮೇಲಿಟ್ಟಿದ್ದ ಗೌರವವನ್ನು ಕಳೆದುಕೊಂಡೆ ಎಂದು ಖಾಯಾ ಜೊಂಡೊ ಹೇಳಿದ್ದಾರೆ. ತನ್ನ ಬದಲು ಬೇರೆ ಆಟಗಾರನನ್ನು ಆಯ್ಕೆ ಮಾಡಿದ ಕೂಡಲೇ ಬಳಿ ಬಂದ ಎಬಿ ಡಿವಿಲಿಯರ್ಸ್ ತಾನು ಕೈಗೊಂಡ ನಿರ್ಧಾರವನ್ನು ಸಮರ್ಥಿಸಿಕೊಳ್ಳಲು ಆರಂಭಿಸಿದರು. ಇದನ್ನೆಲ್ಲಾ ಕಂಡ ನನಗೆ ಆತನ ಮೇಲಿದ್ದ ಪ್ರೀತಿ ಮತ್ತು ಗೌರವ ಅಲ್ಲೇ ಕುಗ್ಗಿ ಹೋಯಿತು ಎಂದು ಖಾಯಾ ಜೊಂಡೊ ಬೇಸರ ವ್ಯಕ್ತಪಡಿಸಿದ್ದಾರೆ.

ಬೇಸರದಿಂದ ನಾನೇ ತಂಡ ಬಿಟ್ಟು ಬಂದೆ

ಬೇಸರದಿಂದ ನಾನೇ ತಂಡ ಬಿಟ್ಟು ಬಂದೆ

ಎಬಿ ಡಿವಿಲಿಯರ್ಸ್ ನಡೆದುಕೊಂಡ ರೀತಿ ಕಂಡ ನನಗೆ ನಿಜಕ್ಕೂ ಬೇಸರ ಮತ್ತು ಆಘಾತವಾಯಿತು. ಎಬಿ ಡಿವಿಲಿಯರ್ಸ್ ತೆಗೆದುಕೊಂಡ ನಿರ್ಧಾರದ ಕುರಿತು ನನ್ನ ಬಳಿಯೇ ಬಂದು ಸಮರ್ಥಿಸಿಕೊಂಡಾಗ ಅವರ ಮೇಲಿನ ಗೌರವ ಹೋಯಿತು ಮತ್ತು ತಂಡಕ್ಕೆ ನನ್ನ ಅಗತ್ಯವಿಲ್ಲ ಎಂಬ ವಿಷಯ ಕೂಡ ಅರ್ಥವಾಯಿತು. ಹೀಗಾಗಿಯೇ ನಾನು ಆ ಪಂದ್ಯದ ನಂತರ ತಂಡದಿಂದ ಸ್ವತಃ ಹೊರಗುಳಿದೆ ಎಂದು ಖಾಯಾ ಜೊಂಡೊ ಹೇಳಿಕೊಂಡಿದ್ದಾರೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Saturday, August 7, 2021, 16:18 [IST]
Other articles published on Aug 7, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X