ಹಳೆ ಸಿರಾಜ್ ಅಲ್ಲ ಹೊಸ ಸಿರಾಜ್ ನೋಡುತ್ತೀರ, ತುಂಬಾ ಬದಲಾಗಿದ್ದೇನೆ ಎಂದ ಸಿರಾಜ್

Mohammed Siraj ಈಗ ಸಂಪೂರ್ಣ ಬದಲಾಗಿದ್ದಾರೆ | Oneindia kannada

ಕಳೆದ ಬಾರಿಯ ಆಸ್ಟ್ರೇಲಿಯಾ ಪ್ರವಾಸದ ವೇಳೆ ನಡೆದ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ತಮ್ಮ ವೃತ್ತಿ ಬದುಕಿನ ಮೊದಲ ಟೆಸ್ಟ್ ಪಂದ್ಯ ಆಡುವ ಅವಕಾಶವನ್ನು ಪಡೆದರು. ಆ ಪಂದ್ಯದಲ್ಲಿ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡ ಸಿರಾಜ್ ಸರಣಿಯಲ್ಲಿ ಆಡಿದ 3 ಪಂದ್ಯಗಳಲ್ಲಿ 13 ವಿಕೆಟ್ ಪಡೆದು ತಾನೊಬ್ಬ ಪ್ರತಿಭಾವಂತ ಬೌಲರ್ ಎಂಬುದನ್ನು ಸಾಬೀತುಪಡಿಸಿದರು.

ಯುಎಇಯಲ್ಲಿ ಐಪಿಎಲ್ ಮುಂದುವರೆದಾಗ ಈ 3 ತಂಡಗಳು ಕಂಗಾಲಾಗುವುದು ಖಚಿತ!

ಆಸ್ಟ್ರೇಲಿಯಾ ವಿರುದ್ಧದ ಅತ್ಯದ್ಭುತ ಪ್ರದರ್ಶನದ ಮೂಲಕ ಟೀಕೆಗಳಿಗೆಲ್ಲಾ ಉತ್ತರ ನೀಡಿದ ಸಿರಾಜ್ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿಯೂ ಸಹ ಅಬ್ಬರಿಸಿದರು. ನಂತರ ನಡೆದ ಐಪಿಎಲ್ ಟೂರ್ನಿಯಲ್ಲಿಯೂ ಸಿರಾಜ್ ತನ್ನ ಉತ್ತಮ ಪ್ರದರ್ಶನವನ್ನು ಮುಂದುವರಿಸಿದ್ದು ಇದೀಗ ಇಂಗ್ಲೆಂಡ್ ಪ್ರವಾಸಕ್ಕೂ ಕೂಡ ಆಯ್ಕೆಯಾಗಿದ್ದಾರೆ. ಈ ನಡುವೆ ಮಾತನಾಡಿರುವ ಸಿರಾಜ್ ಟೀಮ್ ಇಂಡಿಯಾದ ಶಾಶ್ವತ ಆಟಗಾರನಾಗಬೇಕೆಂಬ ಆಸೆಯನ್ನು ವ್ಯಕ್ತಪಡಿಸಿದ್ದಾರೆ.

ಕೊಹ್ಲಿ ಪಡೆ 42 ದಿನ ವ್ಯರ್ಥವಾಗಿ ಇಂಗ್ಲೆಂಡ್‌ನಲ್ಲಿ ಏನು ಮಾಡಲಿದೆ? ಬಿಸಿಸಿಐಗೆ ಮಾಜಿ ಆಟಗಾರನ ಖಡಕ್ ಪ್ರಶ್ನೆ!

'ನಾನೀಗ ಮೊದಲಿಗಿಂತ ತುಂಬಾ ಬದಲಾಗಿದ್ದೇನೆ ಮತ್ತು ವಿಶ್ವಾಸವನ್ನು ಹೊಂದಿದ್ದೇನೆ. ಸಾಕಷ್ಟು ಕಠಿಣ ಅಭ್ಯಾಸವನ್ನು ನಡೆಸಿ ಉತ್ತಮ ಬೌಲಿಂಗ್ ಮಾಡಲು ಬೇಕಾದ ತಂತ್ರಗಳನ್ನು ಅಳವಡಿಸಿಕೊಂಡಿದ್ದೇನೆ. ಹಳೆಯ ಸಿರಾಜ್ ಮುಗಿದು ಹೋದ ಕತೆ ನೀವೆಲ್ಲರೂ ಹೊಸ ಸಿರಾಜ್ ನೋಡುತ್ತೀರ. ಭಾರತ ತಂಡದ ಪರ ಶಾಶ್ವತ ಆಟಗಾರನಾಗುವುದು ನನ್ನ ಕನಸು' ಎಂದು ಸಿರಾಜ್ ತಮ್ಮ ಆಟದ ಕುರಿತು ವಿಶ್ವಾಸವನ್ನು ವ್ಯಕ್ತಪಡಿಸಿ ಕನಸಿನ ಬಗ್ಗೆ ಮಾತನಾಡಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Tuesday, June 1, 2021, 23:05 [IST]
Other articles published on Jun 1, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X