ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ICC ODI Ranking: ಅಗ್ರಸ್ಥಾನ ಉಳಿಸಿಕೊಂಡ ಪಾಕ್‌ನ ಬಾಬರ್ ಅಜಮ್, ಇಮಾಮ್‌ ಉಲ್‌ ಹಕ್‌ 3ನೇ ಸ್ಥಾನ

By ಶಿವಕುಮಾರ ಮುರಡಿಮಠ
ICC ODI Ranking

ಐಸಿಸಿ ಪುರುಷರ ಓಡಿಐ ರ್ಯಾಂಕಿಂಗ್ ಪ್ರಕಟಗೊಂಡಿದ್ದು, ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಆಜಮ್ ಅಗ್ರಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಬಾಬರ್ ಅಜಮ್ ಅಷ್ಟೇ ಅಲ್ಲದೆ ಅದ್ಭುತ ಫಾರ್ಮ್‌ನಲ್ಲಿರುವ ಎಡಗೈ ಬ್ಯಾಟ್ಸ್‌ಮನ್ ಇಮಾಮ್ ಉಲ್‌ಹಕ್‌ ಮೂರನೇ ರ್ಯಾಂಕಿಂಗ್‌ಗೆ ಏರಿಕೆಗೊಂಡಿದ್ದಾರೆ.

DC vs LSG Preview: ಪಂದ್ಯದ ಪಿಚ್ ವರದಿ, ಸಂಭಾವ್ಯ ಆಡುವ ಬಳಗ, ನೇರಪ್ರಸಾರದ ಮಾಹಿತಿDC vs LSG Preview: ಪಂದ್ಯದ ಪಿಚ್ ವರದಿ, ಸಂಭಾವ್ಯ ಆಡುವ ಬಳಗ, ನೇರಪ್ರಸಾರದ ಮಾಹಿತಿ

ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಇಮಾಮ್ ಉಲ್ ಹಕ್ ಸೆಂಚುರಿ ಸಹ ಸಿಡಿಸಿದ್ದರು. ಆಸ್ಟ್ರೇಲಿಯಾ ವಿರುದ್ದ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ಬಾಬರ್‌ ಅಜಮ್ ಮತ್ತು ಇಮಾಮ್ ತಲಾ ಮೂರು ಪಂದ್ಯಗಳನ್ನು ಆಡಿದ್ದಾರೆ. ಬಾಬರ್‌ 138ರ ಬ್ಯಾಟಿಂಗ್ ಸರಾಸರಿಯೊಂದಿಗೆ 276ರನ್ ಕಲೆಹಾಕಿದ್ರೆ, ಇಮಾಮ್ 149 ಬ್ಯಾಟಿಂಗ್ ಸರಾಸರಿಯೊಂದಿಗೆ 298ರನ್ ಗಳನ್ನು ಕಲೆಹಾಕುವ ಮೂಲಕ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಗೌರವಕ್ಕೆ ಭಾಗಿಯಾಗಿದ್ದಾರೆ.

ಏಕದಿನ ಸರಣಿಯಿಂದ ಹೊರಗುಳಿದಿದ್ದ ಆಸ್ಟ್ರೆಲಿಯಾ ತಂಡದ ನಾಯಕ ಆರೋನ್ ಫಿಂಚ್ ಮೂರು ಸ್ಥಾನಕ್ಕೆ ಕುಸಿದು 10ನೇ ಕ್ರಮಾಂಕಕ್ಕೆ ತಲುಪಿದ್ದಾರೆ. ಆಸ್ಟ್ರೇಲಿಯಾ ಪರ ಇನ್ನಿಂಗ್ಸ್ ತೆರೆಯುವ ಅವಕಾಶ ಪಡೆದ ನಂತರ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ಎಡಗೈ ಬ್ಯಾಟರ್ ಟ್ರಾವಿಸ್ ಹೆಡ್ 5 ಸ್ಥಾನ ಏರಿಕೆಯಾಗಿ 34ಕ್ಕೆ ತಲುಪಿದರು.

ಭಾರತದ ಬ್ಯಾಟ್ಸ್‌ಮನ್‌ಗಳ ರ್ಯಾಂಕಿಂಗ್
ಟಾಪ್ 10 ನಲ್ಲಿ ಇಬ್ಬರು ಭಾರತದ ಆಟಗಾರರು ಸ್ಥಾನ ಭದ್ರಗೊಳಿಸಿಕೊಂಡಿದ್ದು, ಮಾಜಿ ನಾಯಕ ವಿರಾಟ್ ಕೊಹ್ಲಿ 881 ಅಂಕಗಳೊಂದಿಗೆ 2 ಸ್ಥಾನದಲ್ಲಿದ್ದಾರೆ. ಪ್ರಸ್ತುತ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ 791 ಅಂಕಗಳೊಂದಿಗೆ 4 ಸ್ಥಾನದಲ್ಲಿದ್ದಾರೆ.

ಟಾಮ್ ಲ್ಯಾಥಮ್ ರ್ಯಾಂಕಿಂಗ್‌ನಲ್ಲೂ ಏರಿಕೆ
ಎರಡನೇ ಏಕದಿನ ಪಂದ್ಯದಲ್ಲಿ ನೆದರ್ಲೆಂಡ್ಸ್‌ ವಿರುದ್ದ ಅಜೇಯ 140 ರನ್ ಗಳಿಸಿದ ನಂತರ ಟಾಮ್ ಲ್ಯಾಥಮ್ ಮೂರು ಸ್ಥಾನ ಏರಿಕೆಯಾಗಿದ್ದು ಒಡಿಐ ರ್ಯಾಂಕಿಂಗ್‌ನಲ್ಲಿ 25 ನೇ ಸ್ಥಾನ ತಲುಪಿದ್ದಾರೆ. ಇನ್ನು ನೆದರ್ಲೆಂಡ್ಸ್‌ ವಿರುದ್ದ ಕೊನೆಯ ಅಂತರಾಷ್ಟ್ರೀಯ ಪಂದ್ಯಾವನ್ನಾಡಿದ ಅನುಭವಿ ಬ್ಯಾಟರ್ ರಾಸ್ ಟೇಲರ್ ಮೂರು ಸ್ಥಾನಗಳನ್ನು ಕಳೆದುಕೊಂಡು ನಂ.7ಕ್ಕೆ ತಲುಪಿದ್ದಾರೆ.

ಬ್ಯಾಟ್ಸ್‌ಮನ್‌ಗಳ ಜೊತೆಗೆ ಬೌಲಿಂಗ್ ರ್ಯಾಂಕಿಂಗ್‌ನಲ್ಲೂ ಪಾಕಿಸ್ತಾನದ ಯುವ ವೇಗಿ ಶಾಹೀನ್ ಅಫ್ರಿದಿ ಅವರ ಅತ್ಯುತ್ತಮ ಬೌಲಿಂಗ್ ಪ್ರದರ್ಶನದಿಂದ ಟಾಪ್10 ನಲ್ಲಿ ಉಳಿದುಕೊಂಡಿದ್ದಾರೆ. ಕೀವಿಸ್ ವೇಗಿ ಟ್ರೆಂಟ್ ಬೌಲ್ಟ್ ಅಗ್ರಸ್ಥಾನದಲ್ಲಿದ್ದಾರೆ.

ಪ್ಯಾಟ್ ಕಮಿನ್ಸ್ ಸಿಡಿಲಬ್ಬರದ ಬ್ಯಾಟಿಂಗ್ ನಿಂದ KL ರಾಹುಲ್ ರೆಕಾರ್ಡ್ ಬ್ರೇಕ್ | Oneindia Kannada

ಪಾಕಿಸ್ತಾನದ ವಿರುದ್ದದ ಏಕದಿನ ಸರಣಿಯ ಸಮಯದಲ್ಲಿ ಉತ್ತಮ ಪ್ರದರ್ಶನ ನೀಡದ ಹಿನ್ನಲೆಯಲ್ಲಿ ಆಸ್ಟ್ರೇಲಿಯಾದ ಆ್ಯಡಂ ಜಂಪಾ ಐದು ಸ್ಥಾನಗಳನ್ನು ಕಳೆದುಕೊಳ್ಳುವುದರೊಂದಿಗೆ ಟಾಪ್ 10ನಿಂದ ಹೊರಗುಳಿದಿದ್ದಾರೆ.

Story first published: Thursday, April 7, 2022, 9:57 [IST]
Other articles published on Apr 7, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X