ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಸಿಸಿ ಮಹಿಳಾ ವಿಶ್ವ ಟಿ20 2018: ಭಾರತ ತಂಡ ಪ್ರಕಟಿಸಿದ ಬಿಸಿಸಿಐ

ICC Women’s World T20 2018: BCCI announces 15-woman India squad

ನವದೆಹಲಿ, ಸೆಪ್ಟೆಂಬರ್ 28: ಮುಂಬರಲಿರುವ ಐಸಿಸಿ ಮಹಿಳಾ ವಿಶ್ವ ಟಿ20 ಟೂರ್ನಿಗೆ ಭಾರತದ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ನವೆಂಬರ್ ತಿಂಗಳಲ್ಲಿ ವೆಸ್ಟ್ ಇಂಡೀಸ್ ನಲ್ಲಿ ಈ ಪಂದ್ಯಾಟ ನಡೆಯಲಿದ್ದು, 15 ಆಟಗಾರ್ತಿಯರಿರುವ ತಂಡವನ್ನು ಬಿಸಿಸಿಐ ಪ್ರಕಟಿಸಿದೆ.

ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಪ್ರಮುಖ ವೇಗಿಯನ್ನೇ ಕೈಬಿಟ್ಟ ಪಾಕಿಸ್ತಾನಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಪ್ರಮುಖ ವೇಗಿಯನ್ನೇ ಕೈಬಿಟ್ಟ ಪಾಕಿಸ್ತಾನ

ಕಳೆದ ಬಾರಿ 2016ರಲ್ಲಿ ಭಾರತದಲ್ಲೇ ಈ ಟೂರ್ನಿ ನಡೆಸಲಾಗಿತ್ತು. ಆದರೆ ಭಾರತದ ವನಿತೆಯರು ಕಳಪೆ ಪ್ರದರ್ಶನ ತೋರಿಸಿದ್ದರು. ಟೂರ್ನಿಯ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಭರ್ಜರಿ 72 ರನ್ ಗಳಿಂದ ಸೋಲಿಸಿದ್ದ ಭಾರತ ಆ ನಂತರ ಪಾಕಿಸ್ತಾನ, ಇಂಗ್ಲೆಂಡ್, ವೆಸ್ಟ್ ಇಂಡೀಸ್ ತಂಡಗಳೆದುರು ಸೋತು ಟೂರ್ನಿಯಿಂದ ಹೊರ ಬಿದ್ದಿತ್ತು.

ಕಳೆದ ಮಹಿಳಾ ವಿಶ್ವ ಟಿ20 ಆವೃತ್ತಿಯಲ್ಲಿ ಭಾರತವನ್ನು ಮಿಥಾಲಿ ರಾಜ್ ಮುನ್ನಡೆಸಿದ್ದರು. ಈ ಬಾರಿ ಭಾರತ ತಂಡದ ನಾಯಕತ್ವವನ್ನು ಹರ್ಮನ್ ಪ್ರೀತ್ ಕೌರ್ ವಹಿಸಿಕೊಳ್ಳಲಿದ್ದಾರೆ. ಇತ್ತೀಚೆಗೆ ಅರ್ಜುನ ಪ್ರಶಸ್ತಿ ಗೆದ್ದಿರುವ ಸ್ಮೃತಿ ಮಂಧಾನ ಅವರು ಉಪ ನಾಯಕಿ ಜವಾಬ್ದಾರಿ ನಿರ್ವಹಿಸಲಿದ್ದಾರೆ.

ಭಾರತ ತಂಡ
ಹರ್ಮನ್ ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪ ನಾಯಕಿ), ಮಿಥಾಲಿ ರಾಜ್, ಜೆಮಿಮಾ ರೋಡ್ರಿಗಸ್, ವೇದಾ ಕೃಷ್ಣಮೂರ್ತಿ, ದೀಪ್ತಿ ಶರ್ಮಾ, ತಾನಿಯಾ ಭಾಟಿಯಾ (ವಿಕೆಟ್ ಕೀಪರ್), ಪೂನಮ್ ಯಾದವ್, ರಾಧಾ ಯಾದವ್, ಅಂಜುಜಾ ಪಾಟೀಲ್, ಎಕ್ತಾ ಬಿಶ್ತ್, ಡಿ ಹೇಮಾಲತಾ, ಮಾನ್ಸಿ ಜೋಶಿ, ಪೂಜಾ ವಸ್ತ್ರಕರ್, ಅರುಂಧತಿ ರೆಡ್ಡಿ.

Story first published: Friday, September 28, 2018, 15:55 [IST]
Other articles published on Sep 28, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X