ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್ 2019: ದಕ್ಷಿಣ ಆಫ್ರಿಕಾ ವಿರುದ್ಧ ಆಡಲಿರುವ ಸಂಭಾವ್ಯ ಭಾರತ ತಂಡ

ICC World Cup 2019, India vs South Africa: India’s predicted XI

ಸೌತಾಂಪ್ಟನ್, ಜೂನ್ 4: ಈ ಕಡೆ ಭಾರತಕ್ಕೆ ವಿಶ್ವಕಪ್ 2019ರ ಮೊದಲನೇ ಪಂದ್ಯವಾದ್ದರಿಂದ ಗೆಲ್ಲಲೇಬೇಕು. ಆ ಕಡೆ ಮೊದಲ ಎರಡೂ ಪಂದ್ಯಗಳಲ್ಲೂ ಸೋತಿದ್ದರಿಂದ ದಕ್ಷಿಣ ಆಫ್ರಿಕಾಕ್ಕೂ ಗೆಲುವು ಅತೀ ಅನಿವಾರ್ಯ. ಹೀಗಾಗಿ ಬುಧವಾರ (ಜೂನ್ 5) ದಕ್ಷಿಣ ಆಫ್ರಿಕಾ vs ಭಾರತ ನಡುವಿನ ವಿಶ್ವಕಪ್ ಪಂದ್ಯ ತೀವ್ರ ಕುತೂಹಲ ಮೂಡಿಸಿದೆ. ಪಂದ್ಯ ಜಿದ್ದಾ-ಜಿದ್ದಿಗೇರೋದನ್ನು ನಿರೀಕ್ಷಿಸಲಾಗಿದೆ.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು ಮೈಖೇಲ್ ಕನ್ನಡದ 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಸೌತಾಂಪ್ಟನ್‌ನ ರೋಸ್‌ ಬೌಲ್‌ನಲ್ಲಿ ನಡೆಯುವ ಪಂದ್ಯದಲ್ಲಿ ಟೀಮ್ ಇಂಡಿಯಾಕ್ಕಿಂತಲೂ ದಕ್ಷಿಣ ಆಫ್ರಿಕಾದ ಮೇಲೆ ಒತ್ತಡ ಹೆಚ್ಚು. ಇಂಗ್ಲೆಂಡ್ ಮತ್ತು ಬಾಂಗ್ಲಾದೇಶ ವಿರುದ್ಧ ಸೋತು ಸೆಮಿಫೈನಲ್ ಹಾದಿ ಕಠಿಣವಾಗಿಸಿಕೊಂಡಿರುವ ಆಫ್ರಿಕಾ, ಭಾರತದ ವಿರುದ್ಧವೂ ಸೋತರೆ ಅದರ ವಿಶ್ವಕಪ್ ಕನಸೇ ಮುರಿದು ಬೀಳಲಿದೆ.

ವಿಶ್ವಕಪ್: ಕೇಸರಿ ಜೆರ್ಸಿಯೊಂದಿಗೆ ಮೈದಾನಕ್ಕಿಳಿಯಲಿದೆ ಟೀಮ್ ಇಂಡಿಯಾ!ವಿಶ್ವಕಪ್: ಕೇಸರಿ ಜೆರ್ಸಿಯೊಂದಿಗೆ ಮೈದಾನಕ್ಕಿಳಿಯಲಿದೆ ಟೀಮ್ ಇಂಡಿಯಾ!

ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಭಾರತವೂ ಆರಂಭಿಕ ಪಂದ್ಯದಲ್ಲೇ ಗೆಲುವಿನ ನಿರೀಕ್ಷೆಯಲ್ಲಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬಳಗದಲ್ಲಿ ಕಾಣಿಸಿಕೊಳ್ಳುವ ಸಂಭಾವ್ಯ ಆಟಗಾರರ ಪಟ್ಟಿ ಇಲ್ಲಿದೆ.

{headtohead_cricket_3_6}

ಆರಂಭಿಕರಾಗಿ ರೋಹಿತ್-ಧವನ್

ಆರಂಭಿಕರಾಗಿ ರೋಹಿತ್-ಧವನ್

ಟೀಮ್ ಇಂಡಿಯಾ ಆರಂಭಿಕ ಬ್ಯಾಟಿಂಗ್ ಕ್ರಮಾಂಕದಲ್ಲಿ ಎಂದಿನಂತೆ ಅನುಭವಿ ಆಟಗಾರರಾದ ಉಪನಾಯಕ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಇಳಿಯಲಿದ್ದಾರೆ. ಬಾಂಗ್ಲಾ ವಿರುದ್ಧದ ವಿಶ್ವಕಪ್ ಅಭ್ಯಾಸ ಪಂದ್ಯದಲ್ಲಿ ರೋಹಿತ್-ಧವನ್ ಇಬ್ಬರೂ ಬ್ಯಾಟಿಂಗ್ ವೈಫಲ್ಯ ತೋರಿಸಿದ್ದರು. ಆದರೂ ಫಾ ಡು ಪ್ಲೆಸಿಸ್ ಬಳಗದ ವಿರುದ್ಧ ಧವನ್-ರೋಹಿತ್ ಇಬ್ಬರೂ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಿದೆ. 3ನೇ ಕ್ರಮಾಂಕದಲ್ಲಿ ಎಂದಿನಂತೆ ನಾಯಕ ವಿರಾಟ್ ಕೊಹ್ಲಿ ಇಳಿಯಲಿದ್ದಾರೆ.

ಮಧ್ಯಮ ಕ್ರಮಾಂಕ

ಮಧ್ಯಮ ಕ್ರಮಾಂಕ

ಬಾಂಗ್ಲಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಕೆಎಲ್ ರಾಹುಲ್ ಉತ್ತಮ ಪ್ರದರ್ಶನ ನೀಡಿದ್ದರು. ಹೀಗಾಗಿ ನಾಲ್ಕನೇ ಕ್ರಮಾಂಕದಲ್ಲಿ ಕನ್ನಡಿಗ ಕೆಎಲ್ ರಾಹುಲ್ ಮೈದಾನಕ್ಕಿಳಿಯೋದು ಬಹುತೇಕ ಖಚಿತ. ಇನ್ನು 5ನೇ ಸ್ಥಾನದಲ್ಲಿ ಕೂಲ್ ಕ್ಯಾಪ್ಟನ್ ಖ್ಯಾತಿಯ ಎಂಎಸ್ ಧೋನಿ ಬ್ಯಾಟ್ ಎತ್ತಿಕೊಳ್ಳಲಿದ್ದಾರೆ.

ಆಲ್ ರೌಂಡರ್‌ಗಳು

ಆಲ್ ರೌಂಡರ್‌ಗಳು

ಟೀಮ್ ಇಂಡಿಯಾದಲ್ಲಿ ಎಕ್ಸ್ ಫ್ಯಾಕ್ಟರ್ (ನಿರ್ಣಾಯಕ ಆಟಗಾರ) ಆಗಿ ಗುರುತಿಸಿಕೊಂಡಿರುವ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ 6ನೇ ಕ್ರಮಾಂಕದಲ್ಲಿ ತಂಡವನ್ನು ಬೆಂಬಲಿಸುವುದನ್ನು ನಿರೀಕ್ಷಿಸಲಾಗಿದೆ. 7ನೇ ಕ್ರಮಾಂಕದಲ್ಲಿ ಅನುಭವಿ ಆಟಗಾರ ಮತ್ತೊಬ್ಬ ಆಲ್ ರೌಂಡರ್ ರವೀಂದ್ರ ಜಡೇಜಾ ಕಾಣಿಸಿಕೊಳ್ಳೋದು ನಿರೀಕ್ಷಿತ (ಈ ಜಾಗದಲ್ಲಿ ಮತ್ತೊಬ್ಬ ಆಲ್ ರೌಂಡರ್ ವಿಜಯ್ ಶಂಕರ್ ಕಾಣಿಸಿಕೊಂಡರೂ ಅಚ್ಚರಿಯಿಲ್ಲ).

ಬೌಲಿಂಗ್ ವಿಭಾಗ

ಬೌಲಿಂಗ್ ವಿಭಾಗ

ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಭಾರತದ ಬೌಲಿಂಗ್ ವಿಭಾಗದಲ್ಲಿ ಸ್ಪಿನ್ನರ್‌ಗಳ ಬದಲು ವೇಗಿಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಹೀಗಾಗಿ 8ನೇ ಕ್ರಮಾಂಕದಲ್ಲಿ ಭುವನೇಶ್ವರ್ ಕುಮಾರ್, 9ರಲ್ಲಿ ಸ್ಪಿನ್ನರ್ ಯುಜುವೇಂದ್ರ ಚಾಹಲ್, 10ನೇ ಬ್ಯಾಟಿಂಗ್‌ ಕ್ರಮಾಂಕದಲ್ಲಿ ಚೈನಾಮನ್ ಬೌಲರ್ ಕುಲದೀಪ್ ಯಾದವ್ ಅಥವಾ ವೇಗಿ ಮೊಹಮ್ಮದ್ ಶಮಿ ಮತ್ತು 11ರಲ್ಲಿ ವೇಗಿ ಜಸ್‌ಪ್ರೀತ್ಬೂಮ್ರಾ ಕಾಣಿಸುವುದನ್ನು ನಿರೀಕ್ಷಿಸಲಾಗಿದೆ. ಆದರೆ ಅಂತಿಮ ಘಳಿಗೆಯಲ್ಲಿ ಬದಲಾವಣೆಯಾಗಲೂಬಹುದು.

Story first published: Tuesday, June 4, 2019, 17:12 [IST]
Other articles published on Jun 4, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X