ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್: ಲಾರ್ಡ್ಸ್‌ನಲ್ಲೂ ವೆಸ್ಟ್ ಇಂಡೀಸ್ ಗಂಗ್ನಮ್ ಡ್ಯಾನ್ಸ್ ಮಾಡುತ್ತಾ?

ICC World Cup: Will West Indies do the Gangnam dance at Lords too?

ಕಿಂಗ್ಸ್‌ಟೌನ್, ಮೇ 23: ಗಂಗ್ನಮ್ ಡ್ಯಾನ್ಸಿಗೆ ವೆಸ್ಟ್ ಇಂಡೀಸ್ ತಂಡ ಬಲು ಫೇಮಸ್ಸು. 2012ರ ಟಿ20 ವಿಶ್ವಕಪ್‌ ಟ್ರೋಫಿ ಗೆದ್ದಾಗಲೂ ಕ್ರಿಸ್‌ಗೇಲ್ ಅವರಿದ್ದ ವಿಂಡೀಸ್ ಗಂಗ್ನಮ್ ಡ್ಯಾನ್ಸ್ ಮೂಲಕ ಜನ ಸೆಳೆದಿತ್ತು. 2019ರ ವಿಶ್ವಕಪ್‌ನಲ್ಲೂ ಕೆರಿಬಿಯನ್ನರು ಡ್ಯಾನ್ಸ್ ಮಾಡಬಲ್ಲರ?

ಫೇವರಿಟ್ಸ್‌ ಎಂದ ಮಾತ್ರಕ್ಕೆ ಭಾರತ ಪ್ರಶಸ್ತಿ ಗೆದ್ದಂತಲ್ಲ: ಶಾಕಿಬ್‌!ಫೇವರಿಟ್ಸ್‌ ಎಂದ ಮಾತ್ರಕ್ಕೆ ಭಾರತ ಪ್ರಶಸ್ತಿ ಗೆದ್ದಂತಲ್ಲ: ಶಾಕಿಬ್‌!

1975 ಮತ್ತು 1979ರಲ್ಲಿ ಏಕದಿನ ವಿಶ್ವಕಪ್‌ ಬಳಿಕ ವೆಸ್ಟ್ ಇಂಡೀಸ್ 1996ರಲ್ಲಿ ಕಡೇಯಸಾರಿ ಸೆಮಿಫೈನಲ್‌ನಲ್ಲಿ ಆಡಿತ್ತು. ಈ ಬಾರಿಯ ವಿಶ್ವಕಪ್‌ನಲ್ಲೂ ವೆಸ್ಟ್ ಇಂಡೀಸ್ ಕಾದಾಟಕ್ಕಿಳಿದ ತಂಡಗಳಲ್ಲಿ ಒಂದಾಗಿದೆಯಾದರೂ ಬಲಿಷ್ಠ ತಂಡಗಳಲ್ಲಿ ಸಾಲಿನಲ್ಲಿ ವೆಸ್ಟ್ ಇಂಡೀಸ್ ಇಲ್ಲ.

ಏಕದಿನ ವಿಶ್ವಕಪ್ ಇತಿಹಾಸ ಪುಟಗಳಲ್ಲಿ ಇಂದಿಗೂ ಮುರಿಯದ ದಾಖಲೆಗಳು!ಏಕದಿನ ವಿಶ್ವಕಪ್ ಇತಿಹಾಸ ಪುಟಗಳಲ್ಲಿ ಇಂದಿಗೂ ಮುರಿಯದ ದಾಖಲೆಗಳು!

ಹಾಗಂತ ವೆಸ್ಟ್ ಇಂಡೀಸ್ ಈ ಬಾರಿ ಚಾಂಪಿಯನ್‌ಪಟ್ಟ ಗೆದ್ದುಕೊಳ್ಳಲು ಸಾಧ್ಯವಿಲ್ಲವೆ? ಆರಂಭಿಕ ವಿಶ್ವಕಪ್ ಆವೃತ್ತಿಗಳ ಚಾಂಪಿಯನ್ ವಿಂಡೀಸ್ ತಂಡವನ್ನು ಯಾಕೆ ಸಂಪೂರ್ಣ ಕಡೆಗಣಿಸುವಂತಿಲ್ಲ ಅನ್ನೋದಕ್ಕೆ ಇಲ್ಲೊಂದಿಷ್ಟು ಅಂಶಗಳಿವೆ.

ತಂಡದ ಶಕ್ತಿ

ತಂಡದ ಶಕ್ತಿ

ವೆಸ್ಟ್ ಇಂಡೀಸ್ ತಂಡದ ಬ್ಯಾಟಿಂಗ್ ಲೈನ್ ಅಪ್ ಗಮನಿಸಿದರೆ ಎದುರಾಳಿ ತಂಡಗಳು ಅಂಜಿಕೊಳ್ಳಲೇಬೇಕು. ಭರ್ಜರಿ ಹೊಡೆತಗಳಿಗೆ ಕೈಎತ್ತೋ ಬ್ಯಾಟ್ಸ್ಮನ್‌ಗಳು ತಂಡದಲ್ಲಿ ಸಾಕಷ್ಟು ಮಂದಿಯಿದ್ದಾರೆ. ಅದರಲ್ಲೂ ಕ್ರಿಸ್‌ ಗೇಲ್ ನಂತ ಅನುಭವಿ, ಸ್ಫೋಟಕ ಬ್ಯಾಟ್ಸ್ಮನ್‌ ಕೂಡ ಆಡುತ್ತಿದ್ದಾರೆ. ಇನ್ನು ಶಾಯ್ ಹೋಪ್ ಜೊತೆ ಆಲ್‌ ರೌಂಡರ್ ಡ್ಯಾರೆನ್ ಬ್ರಾವೋ, (ನಾಯಕ) ಜೇಸನ್ ಹೋಲ್ಡರ್ ಕೂಡ ಅಪಾಯಕಾರಿ ಆಟಗಾರರೆ.

ವಿಂಡೀಸ್ ದೌರ್ಬಲ್ಯ

ವಿಂಡೀಸ್ ದೌರ್ಬಲ್ಯ

ವೈವಿಧ್ಯತೆಯಿಲ್ಲದ ಬೌಲಿಂಗ್ ದಾಳಿ ವೆಸ್ಟ್ ಇಂಡೀಸ್ ಪಾಲಿಗೆ ಮುಳುವಾಗಲಿದೆ. ತಂಡದಲ್ಲಿರುವ ಕೆಮರ್‌ ರೋಚ್, ಶಾನನ್ ಗೇಬ್ರಿಯಲ್, ಒಶಾನೆ ಥಾಮಸ್ ಅವರಂತ ಮಾರಕ ವೇಗಿಗಳಿದ್ದಾರಾದರೂ ಬ್ಯಾಟಿಂಗ್ ಪಿಚ್ ಇಂಗ್ಲೆಂಡ್‌ನಲ್ಲಿ ಇವರು ಹೆಚ್ಚು ನೆರವಾಗಲಾರರು. ಈ ಮೂವರಿಂದಾಗಿ ಎದುರಾಳಿ ತಂಡಕ್ಕೆ ರನ್‌ ಲಾಭವಾಗುವ ಸಾಧ್ಯತೆಗಳೇ ಹೆಚ್ಚು. ಗಾಯದಿಂದಾಗಿ ಸುನಿಲ್ ನರೇನ್ ತಂಡದಿಂದ ಹೊರಗುಳಿದಿರುವುದು ತಂಡಕ್ಕೆ ಮತ್ತೊಂದು ಹೊಡೆತ. ಇನ್ನು ಆಲ್ ರೌಂಡರ್‌ಗಳ ಸಾಲಿನಲ್ಲಿರುವ ಆ್ಯಶ್ಲೆ ನರ್ಸ್ ಮತ್ತು ಫ್ಯಾಬಿಯಾನ್ ಅಲೆನ್ ಅಂಥ ಹೇಳಿಕೊಳ್ಳೋ ಫಾರ್ಮ್‌ನಲ್ಲೇನೂ ಇಲ್ಲ.

ಮತ್ತೊಂದು ಹಿನ್ನಡೆ

ಮತ್ತೊಂದು ಹಿನ್ನಡೆ

ಸದ್ಯ ಏಕದಿನ ರ್ಯಾಂಕಿಂಗ್‌ನಲ್ಲಿ 8ನೇ ಸ್ಥಾನದಲ್ಲಿರುವುದರಿಂದ ವೆಸ್ಟ್ ಇಂಡೀಸ್ ಎದುರಾಳಿ ತಂಡವನ್ನು ಹೆಚ್ಚೇನೂ ಭೀತಿಗೊಳಿಸಲಾರದು. ಏಕದಿನದಲ್ಲಿ ಮಿಸ್‌ ಫೀಲ್ಡಿಂಗ್‌ಗಾಗಿ ವಿಂಡೀಸ್ ಅನೇಕ ಪಂದ್ಯಗಳಲ್ಲಿ ಸೋತ ನಿದರ್ಶನಗಳೂ ಇವೆ. ಕ್ಯಾಚ್ ಕೈ ಚೆಲ್ಲೋದು, ಉದಾಸೀನದ ಫೀಲ್ಡಿಂಗ್ ಇವು ತಂಡದ ಹಿನ್ನಡೆಯ ಅಂಶಗಳು

ವಿಶೇಷಾಕರ್ಷಣೆ

ವಿಶೇಷಾಕರ್ಷಣೆ

2019ರ ಐಪಿಎಲ್‌ನಲ್ಲಿ ಒಟ್ಟು 52 ಸಿಕ್ಸ್‌ಗಳಿಂದ 504 ರನ್ ಮತ್ತು 205 ಸ್ಟ್ರೈಕ್‌ ರೇಟ್ ನೊಂದಿಗೆ ಟೂರ್ನಿಯ ಅತೀ ಆಕರ್ಷಣೀಯ ಆಟಗಾರನಾಗಿ ಕಾಣಿಸಿದ್ದ ಆಲ್ ರೌಂಟರ್ ಆಟಗಾರ ಆ್ಯಂಡ್ರೆ ರಸೆಲ್ ವೆಸ್ಟ್ ಇಂಡೀಸ್ ತಂಡದ ದೊಡ್ಡ ಶಕ್ತಿ. ಬೌಲಿಂಗ್‌ನಲ್ಲಿ ರಸೆಲ್ ವಿಶ್ವಕಪ್‌ನಲ್ಲಿ ಅಂಥ ಮಿಂಚು ಹರಿಸಲಾರರದು. ಆದರೆ ಬ್ಯಾಟಿಂಗ್‌ನಲ್ಲಿ ಖಂಡಿತಾ ರಸದೌತಣ ನಿರೀಕ್ಷಿತ.

Story first published: Thursday, May 23, 2019, 17:37 [IST]
Other articles published on May 23, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X