ನ್ಯೂಜಿಲೆಂಡ್ ಹಾಗೂ ಭಾರತದ ಮಧ್ಯೆ ಬಲಿಷ್ಠ ತಂಡವನ್ನು ಹೆಸರಿಸಿದ ಪಾರ್ಥಿವ್ ಪಟೇಲ್

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯವನ್ನು ಆಡಲು ಭಾರತ ಸಜ್ಜಾಗುತ್ತಿದೆ. ನ್ಯೂಜಿಲೆಂಡ್ ವಿರುದ್ಧ ಜೂನ್ 18-22ರ ವರೆಗೆ ಈ ಐತಿಹಾಸಿಕ ಪಂದ್ಯ ನಡೆಯಲಿದ್ದು ಇಂಗ್ಲೆಂಡ್‌ನ ಸೌಥಾಂಪ್ಟನ್ ಮೈದಾನದಲ್ಲಿ ಎರಡು ತಂಡಗಳು ಮುಖಾಮುಖಿಯಾಗಲಿದೆ. ಮಹತ್ವದ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ಸಾಮರ್ಥ್ಯದ ಬಗ್ಗೆ ಪಾರ್ಥಿವ್ ಪಟೇಲ್ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

"ಟೀಮ್ ಇಂಡಿಯಾವನ್ನು ಗಮನಿಸಿದರೆ ನಿಜಕ್ಕೂ ಅತ್ಯಂತ ಬಲಿಷ್ಠ ತಂಡದಂತೆ ಕಾಣಿಸುತ್ತದೆ. ಈಗ ಭಾರತ ಹಾಗೂ ನ್ಯೂಜಿಲೆಂಡ್ ತಂಡವನ್ನು ಹೋಲಿಕೆ ಮಾಡಿದರೆ ನಮ್ಮ ತಂಡ ಎಲ್ಲಾ ವಿಭಾಗವನ್ನು ಕೂಡ ಪರಿಪೂರ್ಣವಾಗಿ ಕಂಡು ಬರುತ್ತದೆ" ಎಂದು ಟೀಮ್ ಇಂಡಿಯಾ ತಂಡದ ಸಾಮರ್ಥ್ಯದ ಬಗ್ಗೆ ಪಾರ್ಥಿವ್ ಪಟೇಲ್ ಭರವಸೆಯ ಮಾತುಗಳನ್ನು ಆಡಿದ್ದಾರೆ.

ಎಬಿಡಿಗಿಂತ ಕ್ರಿಸ್ ಗೇಲ್, ಕೊಹ್ಲಿ ಸಖತ್ ಡೇಂಜರಸ್ ಎನ್ನುತ್ತಿವೆ ಈ ಅಂಕಿಅಂಶಗಳು!ಎಬಿಡಿಗಿಂತ ಕ್ರಿಸ್ ಗೇಲ್, ಕೊಹ್ಲಿ ಸಖತ್ ಡೇಂಜರಸ್ ಎನ್ನುತ್ತಿವೆ ಈ ಅಂಕಿಅಂಶಗಳು!

ಬಲಿಷ್ಠ ಬೌಲಿಂಗ್ ವಿಭಾಗ

ಬಲಿಷ್ಠ ಬೌಲಿಂಗ್ ವಿಭಾಗ

"ವೇಗದ ಬೌಲರ್‌ಗಳ ಬಗ್ಗೆ ಹೇಳಿದರೆ ನಮ್ಮಲ್ಲಿ ಬೂಮ್ರಾ, ಇಶಾಂತ್, ಶಮಿ ಇದ್ದಾರೆ. ಅವರು ಫಿಟ್ ಇರದಿದ್ದಲ್ಲಿ ಸಿರಾಜ್ ಹಾಗೂ ಉಮೇಶ್ ಯಾದವ್ ಇದ್ದಾರೆ. ಇಷ್ಟು ಸಾಮರ್ಥ್ಯವನ್ನು ಹೊಂದಿರುವುದು ಸಾಕಾಗುತ್ತದೆ" ಎಂದು ಪಾರ್ಥಿವ್ ಪಟೇಲ್ ಹೇಳಿದ್ದಾರೆ.

ಇಂಗ್ಲೆಂಡ್ ನೆಲಕ್ಕೆ ಸೂಕ್ತವಾದ ದಾಂಡಿಗರು

ಇಂಗ್ಲೆಂಡ್ ನೆಲಕ್ಕೆ ಸೂಕ್ತವಾದ ದಾಂಡಿಗರು

"ಬ್ಯಾಟ್ಸ್‌ಮನ್‌ಗಳ ಬಗ್ಗೆ ಮಾತನಾಡಿದರೆ ರೋಹಿತ್ ಶರ್ಮಾ, ಶುಬ್ಮನ್ ಗಿಲ್, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಚೇತೇಶ್ವರ್ ಪೂಜಾರ, ರಿಷಭ್ ಪಂತ್ ಇದ್ದಾರೆ. ಇಂಗ್ಲೆಂಡ್ ನೆಲದಲ್ಲಿ ಸೂಕ್ತವಾಗಿ ಬ್ಯಾಟಿಂಗ್ ನಡೆಸಬಲ್ಲ ಬ್ಯಾಟ್ಸ್‌ಮನ್‌ಗಳ ದಂಡು ಇದೆ. ಈ ಆಡುವ ಬಳಗದಲ್ಲಿ ಕೆಎಲ್ ರಾಹುಲ್ ಅವರಂತಾ ಬ್ಯಾಟ್ಸ್‌ಮನ್‌ಗೆ ಸ್ಥಾನವಿಲ್ಲವೆಂದರೆ ಎಷ್ಟು ಬಲಿಷ್ಠವಾಗಿದೆ ಎಂಬುದು ಅರ್ಥವಾಗುತ್ತದೆ" ಎಂದಿದ್ದಾರೆ ಪಾರ್ಥಿವ್ ಪಾಟೇಲ್.

ನಿಜಕ್ಕೂ ಬಲಿಷ್ಠವಾಗಿದೆ ಭಾರತ

ನಿಜಕ್ಕೂ ಬಲಿಷ್ಠವಾಗಿದೆ ಭಾರತ

ಮುಂದುವರಿದು ಮಾತನಾಡಿದ ಪಟೇಲ್ "ಅಕ್ಷರ್ ಪಟೇಲ್ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಕೆಲ ಪಂದ್ಯಶ್ರೇಷ್ಠ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ. ಅವರು ರವೀಂದ್ರ ಜಡೇಜಾ ಅವರ ಸ್ಥಾನವನ್ನು ತುಂಬಿದ್ದರು. ಅದು ಎಷ್ಟು ಪರಿಣಾಮಕಾರಿಯಾಗಿತ್ತು ಎಂದರೆ ರವೀಂದ್ರ ಜಡೇಜಾ ಹೊರಗಿದ್ದಾರೆ ಎಂದೇ ಅನಿಸಿರಲಿಲ್ಲ. ಈಗ ಜಡೇಜಾ ಮರಳಲಿದ್ದಾರೆ. ಅಶ್ವಿನ್ ಕೂಡ ಸೇರಿಕೊಳ್ಳಲಿದ್ದಾರೆ. ಈ ತಂಡ ನಿಜಕ್ಕೂ ಬಲಿಷ್ಠವಾಗಿದೆ" ಎಂದು ಅವರು ಹೇಳಿದ್ದಾರೆ.

ಐತಿಹಾಸಿಕ ಪಂದ್ಯಕ್ಕೆ ಸಜ್ಜು

ಐತಿಹಾಸಿಕ ಪಂದ್ಯಕ್ಕೆ ಸಜ್ಜು

ಐತಿಹಾಸಿಕ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಆಡಲು ಭಾರತ ತಂಡದ 20 ಸದಸ್ಯರನ್ನು ಈಗಾಗಲೇ ಆಯ್ಕೆ ಮಾಡಲಾಗಿದೆ. ಈ ತಂಡ ಜೂನ್ ಮೊದಲ ವಾರದಲ್ಲಿ ಮುಂಬೈನಿಂದ ಇಂಗ್ಲೆಂಡ್‌ಗೆ ಪ್ರಯಾಣವನ್ನು ಬೆಳೆಸಲಿದ್ದು ಅಲ್ಲಿ ಕ್ವಾರಂಟೈನ್ ಪ್ರಕ್ರಿಯೆ ಪೂರೈಸಿ ಜೂನ್ 18-22ರ ವರೆಗೆ ನಡೆಯುವ ಟೆಸ್ಟ್ ಪಂದ್ಯದಲ್ಲಿ ಭಾಗಿಯಾಗಲಿದೆ. ಅದಾದ ನಂತರ ಭಾರತ ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಡಲಿದೆ.

For Quick Alerts
ALLOW NOTIFICATIONS
For Daily Alerts
Story first published: Tuesday, May 11, 2021, 16:40 [IST]
Other articles published on May 11, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X