Team India Captain : ರೋಹಿತ್ ಶರ್ಮಾ ODI ನಾಯಕತ್ವದಿಂದ ವಜಾಗೊಂಡರೆ, ಆ ಹುದ್ದೆಗೆ ಈ ನಾಲ್ವರ ಪೈಪೋಟಿ!

ಮೂರೂ ಮಾದರಿಯ ಕ್ರಿಕೆಟ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸುತ್ತಿರುವ ರೋಹಿತ್ ಶರ್ಮಾ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಅದರಲ್ಲೂ ವೈಟ್ ಬಾಲ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತೀಯ ನಾಯಕನಾಗಿ ರೋಹಿತ್ ಶರ್ಮಾ ಕಠಿಣ ಪಂದ್ಯಾವಳಿಗಳನ್ನು ಎದುರಿಸಬೇಕಾಯಿತು.

2022ರ ಏಷ್ಯಾಕಪ್ ಸೋಲು, 2022ರ ಐಸಿಸಿ ಪುರುಷರ ಟಿ20 ವಿಶ್ವಕಪ್ ಸೋಲು, ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿ ಸೋಲು ರೋಹಿತ್ ಶರ್ಮಾ ಮಟ್ಟಿಗೆ ದೊಡ್ಡ ಕಹಿ ಅನುಭವ ನೀಡಿವೆ.

ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿ ಸೋಲಿನ ನಂತರ ರೋಹಿತ್ ಶರ್ಮಾ ಮೇಲೆ ತೀವ್ರ ಒತ್ತಡ ಸೃಷ್ಟಿಯಾಗಿದೆ. ರೋಹಿತ್ ಅವರನ್ನು ವೈಟ್‌ಬಾಲ್ ಕ್ರಿಕೆಟ್ ತಂಡದ ನಾಯಕತ್ವದಿಂದ ವಜಾಗೊಳಿಸಬೇಕೆಂದು ಭಾರತೀಯ ಅಭಿಮಾನಿಗಳು ಬಯಸುತ್ತಿದ್ದಾರೆ.

IND vs BAN: ಬಾಂಗ್ಲಾ ವಿರುದ್ಧ ಸರಣಿ ಸೋಲಿಗೆ ಬಿಸಿಸಿಐ ಗರಂ; ರೋಹಿತ್, ದ್ರಾವಿಡ್‌ಗೆ ಸಂಕಷ್ಟ?IND vs BAN: ಬಾಂಗ್ಲಾ ವಿರುದ್ಧ ಸರಣಿ ಸೋಲಿಗೆ ಬಿಸಿಸಿಐ ಗರಂ; ರೋಹಿತ್, ದ್ರಾವಿಡ್‌ಗೆ ಸಂಕಷ್ಟ?

ವಾಸ್ತವಿಕವಾಗಿ, ರೋಹಿತ್ ಶರ್ಮಾರನ್ನು ನಾಯಕತ್ವದಿಂದ ವಜಾಗೊಳಿಸಿದರೆ, ಭಾರತ ಕ್ರಿಕೆಟ್ ತಂಡದ ಮಟ್ಟಿಗೆ ಆಘಾತಕಾರಿ ನಿರ್ಧಾರವಾಗಿ ಪರಿಣಮಿಸುತ್ತದೆ. ಭಾರತದಲ್ಲಿ ಮುಂದಿನ ವರ್ಷ ಏಕದಿನ ವಿಶ್ವಕಪ್ ನಡೆಯಲಿದೆ ಮತ್ತು 12 ತಿಂಗಳಿಗಿಂತ ಕಡಿಮೆ ಅವಧಿ ಇರುವ ಸಂದರ್ಭದಲ್ಲಿ ನಾಯಕನನ್ನು ಬದಲಿಸುವುದು ಭಾರತದ ಐಸಿಸಿ ಟ್ರೋಫಿ ಕನಸು ಮತ್ತಷ್ಟು ದೂರವಾಗಲಿದೆ.

2023ರ ಏಕದಿನ ವಿಶ್ವಕಪ್ ಮುನ್ನ ಅಥವಾ ನಂತರ ರೋಹಿತ್ ಶರ್ಮಾ ಅವರ ಬದಲಾಗಿ ಭಾರತ ಕ್ರಿಕೆಟ್ ತಂಡದ ನಾಯಕ ಸ್ಥಾನವನ್ನು ತುಂಬುವ ಆಟಗಾರರು ಯಾರು ಪ್ರಶ್ನೆಗೆ ಉತ್ತರ ಇಲ್ಲಿದೆ.

ಮೊದಲ ಆಯ್ಕೆಯಲ್ಲಿ ಒಬ್ಬರಾದ ಶ್ರೇಯಸ್ ಅಯ್ಯರ್

ಮೊದಲ ಆಯ್ಕೆಯಲ್ಲಿ ಒಬ್ಬರಾದ ಶ್ರೇಯಸ್ ಅಯ್ಯರ್

ಭಾರತ ಏಕದಿನ ತಂಡದ ಆಡುವ ಹನ್ನೊಂದರ ಬಳಗದಲ್ಲಿ ಶ್ರೇಯಸ್ ಅಯ್ಯರ್ ಮೊದಲ ಆಯ್ಕೆಗಳಲ್ಲಿ ಒಬ್ಬರಾಗಿದ್ದಾರೆ. ಸದ್ಯ ಶ್ರೇಯಸ್ ಅಯ್ಯರ್ 50 ಓವರ್‌ಗಳ ಕ್ರಿಕೆಟ್‌ನಲ್ಲಿ ಭಾರತ ತಂಡದ ಅತ್ಯುತ್ತಮ ನಂಬಿಕಸ್ಥ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿದ್ದಾರೆ. ಈ ಹಿಂದೆ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಿದ್ದಾರೆ ಮತ್ತು ಇದೀಗ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಸಾರಥ್ಯ ವಹಿಸಿದ್ದಾರೆ. 50 ಓವರ್‌ಗಳಲ್ಲಿ ರಾಷ್ಟ್ರೀಯ ತಂಡದ ನಾಯಕತ್ವಕ್ಕೆ ಪ್ರಮುಖ ಸ್ಪರ್ಧಿಗಳಲ್ಲಿ ಶ್ರೇಯಸ್ ಅಯ್ಯರ್ ಮೊದಲ ಸ್ಥಾನದಲ್ಲಿದ್ದಾರೆ.

ಹಾರ್ದಿಕ್ ಪಾಂಡ್ಯಗೆ ಫಿಟ್‌ನೆಸ್ ದೊಡ್ಡ ಸಮಸ್ಯೆ

ಹಾರ್ದಿಕ್ ಪಾಂಡ್ಯಗೆ ಫಿಟ್‌ನೆಸ್ ದೊಡ್ಡ ಸಮಸ್ಯೆ

ಟಿ20 ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಲು ಸಿದ್ಧರಾಗಿರುವ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ, ಏಕದಿನ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಲು ಪ್ರಮುಖ ಸ್ಪರ್ಧಿಯಾಗಿದ್ದಾರೆ. ಆದರೆ ಹಾರ್ದಿಕ್ ಪಾಂಡ್ಯಗೆ ಅವರ ಫಿಟ್‌ನೆಸ್ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಅವರು ತಮ್ಮ ಫಿಟ್‌ನೆಸ್‌ಗಾಗಿ ಕಷ್ಟಪಡುತ್ತಿದ್ದಾರೆ. ಅದೃಷ್ಟವಶಾತ್ ಕಳೆದ ಒಂದು ವರ್ಷದಿಂದ ಹಾರ್ದಿಕ್ ಪಾಂಡ್ಯ ಯಾವುದೇ ಗಾಯಕ್ಕೆ ತುತ್ತಾಗಿಲ್ಲ. ಅವರು ತಾವು ಫಿಟ್ ಎಂಬುದನ್ನು ಸಾಬೀತುಪಡಿಸಿದರೆ 2023ರ ವಿಶ್ವಕಪ್ ನಂತರ ಭಾರತದ ವೈಟ್ ಬಾಲ್ ನಾಯಕರಾಗುವ ಸಾಧ್ಯತೆ ಇದೆ.

ವಿಕೆಟ್ ಕೀಪರ್- ಬ್ಯಾಟ್ಸ್‌ಮನ್ ರಿಷಭ್ ಪಂತ್

ವಿಕೆಟ್ ಕೀಪರ್- ಬ್ಯಾಟ್ಸ್‌ಮನ್ ರಿಷಭ್ ಪಂತ್

ಭಾರತದ ವಿಕೆಟ್‌ಕೀಪರ್ ಮತ್ತು ಎಡಗೈ ಬ್ಯಾಟರ್ ರಿಷಭ್ ಪಂತ್ ಕೂಡ ಏಕದಿನ ತಂಡದ ನಾಯಕತ್ವ ನಿಭಾಯಿಸುವ ಸ್ಪರ್ಧಿಗಳಲ್ಲಿ ಸ್ಥಾನ ಪಡೆಯುತ್ತಾರೆ. ರಿಷಭ್ ಪಂತ್ ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಉತ್ತಮ ಫಾರ್ಮ್‌ನಲ್ಲಿ ಇಲ್ಲದಿರಬಹುದು. ಆದರೆ ಪಂತ್ ಬ್ಯಾಟ್‌ನೊಂದಿಗೆ ಫಾರ್ಮ್‌ಗೆ ಮರಳಿದರೆ, ಅವರು ನಾಯಕತ್ವ ಜವಾಬ್ದಾರಿ ಹೊತ್ತುಕೊಳ್ಳುವ ರೇಸ್‌ನಲ್ಲಿ ಪ್ರಮುಖ ಆಟಗಾರನಾಗಿರುತ್ತಾರೆ.

ಉಪನಾಯಕರಾಗಿರುವ ಕನ್ನಡಿಗ ಕೆಎಲ್ ರಾಹುಲ್

ಉಪನಾಯಕರಾಗಿರುವ ಕನ್ನಡಿಗ ಕೆಎಲ್ ರಾಹುಲ್

ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ ಭಾರತ ತಂಡದ ಉಪನಾಯಕರಾಗಿದ್ದಾರೆ. ಕನ್ನಡಿಗ ಕೆಎಲ್ ರಾಹುಲ್ ಭಾರತ ಏಕದಿನ ತಂಡವನ್ನು ಮುನ್ನಡೆಸಲು ಅಗ್ರ ಸ್ಪರ್ಧಿಯಾಗಿದ್ದಾರೆ. ಆದರೆ ಅದಾಗಬೇಕಾದರೆ ಮೊದಲು, ರಾಹುಲ್ ತಾವು ಬ್ಯಾಟ್‌ನಿಂದ ರನ್ ಗಳಿಸುತ್ತೇನೆ ಎಂಬುದನ್ನು ಸಾಬೀತುಪಡಿಸಬೇಕಿದೆ. ಒಂದು ವೇಳೆ ವಿಫಲವಾದರೆ, ಇತರರು ಆ ಅವಕಾಶವನ್ನು ಪಡೆದುಕೊಳ್ಳಬಹುದು.

ಬಾಂಗ್ಲಾದೇಶದ ವಿರುದ್ಧ ಸತತ ಎರಡು ಪಂದ್ಯ ಮತ್ತು ಏಕದಿನ ಸರಣಿ ಸೋಲನ್ನು ಗಂಭೀರವಾಗಿ ತೆಗೆದುಕೊಂಡಿರುವ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸೋಲಿನ ನಂತರ ಮುಂಬೈನಲ್ಲಿ ಪರಾಮರ್ಶೆ ಸಭೆಯನ್ನು ನಡೆಸಲು ಸಿದ್ಧವಾಗಿದೆ. ಇದು ಭಾರತ ತಂಡದ ನಾಯಕತ್ವದ ಬದಲಾವಣೆಗೆ ಮುನ್ನುಡಿ ಬರೆಯಲಿದೆ ಎಂದೇ ಹೇಳಲಾಗುತ್ತಿದೆ.

For Quick Alerts
ALLOW NOTIFICATIONS
For Daily Alerts
Story first published: Thursday, December 8, 2022, 21:09 [IST]
Other articles published on Dec 8, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X