ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs AUS Test: ಭಾರತದ ವಿರುದ್ಧದ ಟೆಸ್ಟ್ ಸರಣಿಗೆ ಆಸ್ಟ್ರೇಲಿಯಾ ಹೊಸ ವೇಗದ ಅಸ್ತ್ರ!

IND vs AUS Test: Team India Should Prepare To Face Australian Pacer Lance Morris Who Bowls At 150 KMPH

ಭಾರತದ ವಿರುದ್ಧ ನಡೆಯಲಿರುವ ಪ್ರತಿಷ್ಠಿತ ಬಾರ್ಡರ್ ಗವಾಸ್ಕರ್ ಟ್ರೋಫಿಗಾಗಿ ಆಸ್ಟ್ರೇಲಿಯಾ ಬಲಿಷ್ಠ ತಂಡವನ್ನು ಪ್ರಕಟಿಸಿದೆ. 2004ರಿಂದ ಇದುವರೆಗೆ ಭಾರತದ ನೆಲದಲ್ಲಿ ಆಸ್ಟ್ರೇಲಿಯಾ ಟೆಸ್ಟ್ ಸರಣಿಯನ್ನು ಗೆದ್ದಿಲ್ಲ, ಈ ಬಾರಿಯ ಸರಣಿಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು, ಸರಣಿ ಗೆಲ್ಲಲು ರಣತಂತ್ರ ರೂಪಿಸುತ್ತಿದೆ.

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಗಾಯಗೊಂಡಿರುವ ಸ್ಟಾರ್ ವೇಗಿ ಮಿಚೆಲ್ ಸ್ಟಾರ್ಕ್ ಭಾರತದ ವಿರುದ್ಧದ ಸರಣಿಯ ಮೊದಲನೇ ಟೆಸ್ಟ್ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಈ ವೇಗಿಯ ಬದಲಾಗಿ ಕಣಕ್ಕಿಳಿಸಲು ಆಸ್ಟ್ರೇಲಿಯಾ ಹೊಸ ಅಸ್ತ್ರವನ್ನು ಸಿದ್ಧಪಡಿಸಿದೆ.

SA20: ಬೌಲಿಂಗ್‌ನಲ್ಲೂ ಆರ್​ಸಿಬಿ ಆಟಗಾರನ ಮೋಡಿ: ಒಂದೇ ಓವರ್​ನಲ್ಲಿ ಎರಡು ವಿಕೆಟ್ ಕಿತ್ತ ಜ್ಯಾಕ್ಸ್SA20: ಬೌಲಿಂಗ್‌ನಲ್ಲೂ ಆರ್​ಸಿಬಿ ಆಟಗಾರನ ಮೋಡಿ: ಒಂದೇ ಓವರ್​ನಲ್ಲಿ ಎರಡು ವಿಕೆಟ್ ಕಿತ್ತ ಜ್ಯಾಕ್ಸ್

ಭಾರತದ ನೆಲದಲ್ಲಿ ತಮ್ಮ ಬೌಲಿಂಗ್ ಸಾಮರ್ಥ್ಯ ಸಾಬೀತುಪಡಿಸಲು ಸಿದ್ಧರಾಗುತ್ತಿದ್ದಾರೆ ಆಸ್ಟ್ರೇಲಿಯಾ ಯುವ ವೇಗಿ ಲ್ಯಾನ್ಸ್ ಮೋರಿಸ್, 150 ಕಿಲೋ ಮೀಟರ್ ವೇಗದಲ್ಲಿ ಬೌಲಿಂಗ್ ಮಾಡುವ ಇವರನ್ನು ಭಾರತದ ವಿರುದ್ಧದ ಸರಣಿಯ ಮೊದಲನೇ ಪಂದ್ಯದಲ್ಲಿ ಕಣಕ್ಕಿಳಿಸಲಿದೆ ಆಸ್ಟ್ರೇಲಿಯಾ. ಮೋರಿಸ್ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡಲು ಕಾಯುತ್ತಿದ್ದಾರೆ.

ನಾಯಕ ಪ್ಯಾಟ್ ಕಮಿನ್ಸ್ ಮತ್ತು ಲ್ಯಾನ್ಸ್ ಮೋರಿಸ್ ಜೋಡಿ ಭಾರತದ ಬ್ಯಾಟರ್ ಗಳನ್ನು ಕಾಡಲು ಭರ್ಜರಿಯಾಗಿಯೇ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಐಸಿಸಿ ರ್‍ಯಾಂಕಿಂಗ್‌ನಲ್ಲಿ ನಂಬರ್ 1 ತಂಡವಾಗಿರುವ ಆಸ್ಟ್ರೇಲಿಯಾಗೆ ಭಾರತದ ವಿರುದ್ಧದ ಸರಣಿ ಸವಾಲಾಗಿದೆ.

ಸಚಿನ್ ತೆಂಡೂಲ್ಕರ್ or ವಿರಾಟ್ ಕೊಹ್ಲಿ; ಈ ಬ್ಯಾಟಿಂಗ್ ದಿಗ್ಗಜರ ನಡುವೆ ಪ್ಯಾಟ್ ಕಮ್ಮಿನ್ಸ್ ಆಯ್ಕೆ ಯಾರು?ಸಚಿನ್ ತೆಂಡೂಲ್ಕರ್ or ವಿರಾಟ್ ಕೊಹ್ಲಿ; ಈ ಬ್ಯಾಟಿಂಗ್ ದಿಗ್ಗಜರ ನಡುವೆ ಪ್ಯಾಟ್ ಕಮ್ಮಿನ್ಸ್ ಆಯ್ಕೆ ಯಾರು?

 ಉತ್ತಮ ಅವಕಾಶ ಎಂದ ಮೋರಿಸ್

ಉತ್ತಮ ಅವಕಾಶ ಎಂದ ಮೋರಿಸ್

ಭಾರತದಲ್ಲಿ ಟೆಸ್ಟ್ ಆಡುವ ಬಗ್ಗೆ ಲ್ಯಾನ್ಸ್ ಮೋರಿಸ್ ಪ್ರತಿಕ್ರಿಯೆ ನೀಡಿದ್ದು, "ನಾನು ಸಾಧ್ಯವಾದಷ್ಟು ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ, ಭಾರತದಲ್ಲಿ ಆಡುವುದು ನನಗೆ ಸಿಕ್ಕಿರುವ ಅತ್ಯುತ್ತಮ ಅವಕಾಶ. ಉತ್ತಮ ಪ್ರದರ್ಶನ ನೀಡುವ ವಿಶ್ವಾಸವಿದೆ" ಎಂದು ಹೇಳಿದ್ದಾರೆ.

''ಸ್ಪರ್ಧೆಗೆ ಮರಳಿರುವುದು ಸಂತಸ ತಂದಿದೆ. ನಾನು ಸುಮಾರು ನಾಲ್ಕು ಅಥವಾ ಐದು ವಾರಗಳ ಕಾಲ ನೆಟ್‌ನಲ್ಲಿ ಬೌಲಿಂಗ್ ಮಾಡುತ್ತಿದ್ದೆ, ನೆಟ್ಸ್‌ನಲ್ಲಿ ಕೆಲವು ಅತ್ಯುತ್ತಮ ಬ್ಯಾಟರ್‌ಗಳಿಗೆ ಬೌಲಿಂಗ್ ಮಾಡುವುದು ಸಂತೋಷವಾಗಿದೆ." ಎಂದು ಹೇಳಿದರು.

 ಆತನ ಬಗ್ಗೆ ಇರಬೇಕು ಎಚ್ಚರಿಕೆ!

ಆತನ ಬಗ್ಗೆ ಇರಬೇಕು ಎಚ್ಚರಿಕೆ!

ಸತತವಾಗಿ 150 ಕಿಲೋ ಮೀಟರ್ ವೇಗದಲ್ಲಿ ಬೌಲಿಂಗ್ ಮಾಡುವ ಮೋರಿಸ್ ಬಗ್ಗೆ, ಭಾರತೀಯ ಬ್ಯಾಟರ್ ಗಳು ಸಾಕಷ್ಟು ಎಚ್ಚರಿಕೆ ವಹಿಸಬೇಕಿದೆ. ಶೆಫೀಲ್ಡ್ ಶೀಲ್ಡ್ ಮತ್ತು ಬಿಬಿಎಲ್‌ನಲ್ಲಿ ಎಸೆತದಲ್ಲಿ ಹಲವು ಬ್ಯಾಟರ್ ಗಳು ಮೋರಿಸ್‌ ಬೌನ್ಸರ್ ಎಸೆತದಲ್ಲಿ ತಲೆಗೆ ಪೆಟ್ಟು ತಿಂದಿದ್ದಾರೆ.

ಮಿಚೆಲ್‌ ಸ್ಟಾರ್ಕ್‌ ಬಿಟ್ಟರೆ ಆಸ್ಟ್ರೇಲಿಯಾ ತಂಡದಲ್ಲಿ 150 ಕಿಲೋ ಮೀಟರ್ ವೇಗದಲ್ಲಿ ಸ್ಥಿರವಾಗಿ ಬೌಲಿಂಗ್ ಮಾಡುವ ವೇಗಿಗಳು ಇರಲಿಲ್ಲ. ಮೋರಿಸ್ ತಮ್ಮ ವೇಗ ಮತ್ತು ಬೌನ್ಸರ್ ಎಸೆತದಲ್ಲಿ ಪರಿಣಾಮಕಾರಿಯಾಗಿದ್ದು, ಮೊದಲ ಟೆಸ್ಟ್ ಪಂದ್ಯದಲ್ಲಿ ಸ್ಟಾರ್ಕ್‌ ಬದಲಾಗಿ ಕಣಕ್ಕಿಳಿಯಲಿದ್ದಾರೆ.

 ಬೆಂಗಳೂರಿನಲ್ಲಿ ಅಭ್ಯಾಸ

ಬೆಂಗಳೂರಿನಲ್ಲಿ ಅಭ್ಯಾಸ

ಮೂಲಗಳ ಪ್ರಕಾರ, ಜನವರಿ 31ಕ್ಕೆ ಭಾರತಕ್ಕೆ ಬರಲಿರುವ ಆಸ್ಟ್ರೇಲಿಯಾ ತಂಡ, ಬೆಂಗಳೂರಿನಲ್ಲಿ ಶಿಬಿರ ನಡೆಸಲಿದೆ. ಇಲ್ಲಿ ಅಭ್ಯಾಸ ಮಾಡಿದ ನಂತರ ಮೊದಲನೇ ಟೆಸ್ಟ್ ಪಂದ್ಯವನ್ನಾಡಲು ನಾಗ್ಪುರಕ್ಕೆ ತೆರಳಲಿದ್ದಾರೆ. ಫೆಬ್ರವರಿ 9 ರಂದು ಸರಣಿಯ ಮೊದಲನೇ ಪಂದ್ಯ ನಡೆಯಲಿದೆ.

ಭಾರತ ಕೂಡ ಆಸ್ಟ್ರೇಲಿಯಾವನ್ನು ಎದುರಿಸಲು ಸಾಕಷ್ಟು ಸಿದ್ಧತೆ ಮಾಡಿಕೊಳ್ಳುತ್ತಿದೆ. ಆಸ್ಟ್ರೇಲಿಯಾ ವಿರುದ್ಧ ಸರಣಿ ಗೆದ್ದರೆ, ನಂಬರ್ 1 ಟೆಸ್ಟ್ ತಂಡವಾಗುವ ಜೊತೆಗೆ ವಿಶ್ವಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ಗೆ ಅರ್ಹತೆ ಕೂಡ ಪಡೆಯಲಿದೆ. ಆಸ್ಟ್ರೇಲಿಯಾ ಈಗಾಗಲೇ ವಿಶ್ವಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ ತಲುಪಿದೆ.

ಟೆಸ್ಟ್ ಸರಣಿಗೆ ಆಸ್ಟ್ರೇಲಿಯಾ ತಂಡ: ಪ್ಯಾಟ್ ಕಮ್ಮಿನ್ಸ್ (ನಾಯಕ), ಆಷ್ಟನ್ ಅಗರ್, ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ, ಕ್ಯಾಮೆರಾನ್ ಗ್ರೀನ್, ಜೋಶ್ ಹ್ಯಾಜಲ್‌ವುಡ್, ಪೀಟರ್ ಹ್ಯಾಂಡ್ಸ್‌ಕಾಂಬ್, ಟ್ರಾವಿಸ್ ಹೆಡ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಸ್‌ಚಾಗ್ನೆ, ನಾಥನ್ ಲಿಯಾನ್, ಲ್ಯಾನ್ಸ್ ಮೋರಿಸ್, ಟಾಡ್ ಮರ್ಫಿ, ಮ್ಯಾಥ್ಯೂ ರೆನ್‌ಶಾ, ಸ್ಟೀವ್ ಸ್ಟಾರ್ಮಿಕ್, ಸ್ಟೀವ್ ಸ್ಟಾರ್ಮಿಕ್ , ಮಿಚೆಲ್ ಸ್ವೆಪ್ಸನ್, ಡೇವಿಡ್ ವಾರ್ನರ್.

Story first published: Monday, January 23, 2023, 8:50 [IST]
Other articles published on Jan 23, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X