ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs ENG : ಭಾರತ vs ಇಂಗ್ಲೆಂಡ್ 2ನೇ ಟೆಸ್ಟ್: ಸಂಭಾವ್ಯ ತಂಡ, ಪಿಚ್ ರಿಪೋರ್ಟ್, ಹವಾಮಾನ ವರದಿ

IND vs ENG 2nd Test : Probable Playing XI, Lords Pitch Report, Injury Update and London Weather Forecast

ಬೆಂಗಳೂರು ಆಗಸ್ಟ್ 10: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಎರಡನೇ ಪಂದ್ಯದತ್ತ ಈಗ ಕ್ರಿಕೆಟ್ ಪ್ರೇಮಿಗಳ ಚಿತ್ತ ನೆಟ್ಟಿದೆ. ಐದು ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಗೆಲುವಿನ ಸನಿಹಕ್ಕೆ ತಲುಪಿದ್ದರೂ ಮಳೆಯ ಕಾರಣದಿಂದಾಗಿ ಪಂದ್ಯವನ್ನು ಗೆಲ್ಲಲು ಸಾಧ್ಯವಾಗಿರಲಿಲ್ಲ. ಕೊನೆಯ ದಿನದಾಟ ಸಂಪೂರ್ಣವಾಗಿ ಮಳೆಗೆ ಆಹುತುಯಾದ ಕಾರಣದಿಂದಾಗಿ ಪಂದ್ಯ ಡ್ರಾ ಫಲಿತಾಂಶವನ್ನು ಪಡೆದುಕೊಂಡಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಭಾಗವೂ ಆಗಿರುವ ಈ ಟೆಸ್ಟ್ ಸರಣಿಯಲ್ಲಿ ಮೊದಲ ಒಂದ್ಯ ಡ್ರಾ ಅಗಿರುವ ಕಾರಣದಿಂದಾಗಿ ಭಾರತ ಹಾಗೂ ಇಂಗ್ಲೆಂಡ್ ಎರಡು ತಂಡಗಳು ಕೂಡ ಈಗ ಸಮಾನ ಅಂಕಗಳನ್ನು ಹಂಚಿಕೊಂಡಿದೆ.

ಈ ಸರಣಿಯ ಎರಡನೇ ಪಂದ್ಯ ಐತಿಹಾಸಿಕ ಲಾರ್ಡ್ಸ್‌ ಅಂಗಳದಲ್ಲಿ ನಡೆಯಲಿದೆ. ಆಗಸ್ಟ್ 12ರಂದು ಗುರುವಾರ ಪಂದ್ಯ ಆರಂಭವಾಗಲಿದ್ದು ಎರಡು ತಂಡಗಳು ಕೂಡ ಉತ್ತಮ ಪ್ರದರ್ಶನ ನೀಡುವ ಮೂಲಕ ಪಂದ್ಯವನ್ನು ವಶಕ್ಕೆ ಪಡೆಯಲು ಹವಣಿಸುತ್ತಿದೆ. ಹೀಗಾಗಿ ಯಾವ ತಂಡ ಈ ಪಂದ್ಯದಲ್ಲಿ ಮೇಲುಗೈ ಸಾಧಿಸಲಿದೆ ಎಂಬುದು ಕೂಡ ಕುತೂಹಲನ್ನು ಮೂಡಿಸಿದೆ.

ಟಿ20 ವಿಶ್ವಕಪ್‌ ತಂಡದಿಂದ ದಿಗ್ಗಜ ಆಟಗಾರನಿಗೆ ಕೊಕ್ ನೀಡಿದ ನ್ಯೂಜಿಲೆಂಡ್ಟಿ20 ವಿಶ್ವಕಪ್‌ ತಂಡದಿಂದ ದಿಗ್ಗಜ ಆಟಗಾರನಿಗೆ ಕೊಕ್ ನೀಡಿದ ನ್ಯೂಜಿಲೆಂಡ್

ಎರಡು ತಂಡಗಳು ಕೂಡ ಸಾಕಷ್ಟು ಬಲಿಷ್ಠ ಆಟಗಾರರನ್ನು ಹಿಂದಿದ್ದು ಗೆಲ್ಲುವ ಸಮಾನ ಅವಕಾಶವನ್ನು ಹೊಂದಿದೆ. ತವರಿನ ಲಾಭ ಇಂಗ್ಲೆಂಡ್ ತಂಡಕ್ಕಿದ್ದರೂ ಇಂಗ್ಲೆಂಡ್ ವಿರುದ್ಧ ಮೇಲುಗೈ ಸಾಧಿಸುವ ಸಾಮರ್ಥ್ಯ ಭಾರತ ತಂಡಕ್ಕಿದೆ. ಹೀಗಾಗಿ ಈ ಪಂದ್ಯದ ಆರಂಭಕ್ಕೂ ಮುನ್ನ ಕೆಲ ಸಂಗತಿಗಳು ಪ್ರಮುಖ ಪಾತ್ರವಹಿಸುತ್ತವೆ. ಹೀಗಾಗಿ ಅಂತಾ ಮಹತ್ವದ ಅಂಶಗಳತ್ತ ಚಿತ್ತ ಹರಿಸೋಣ. ಮುಂದೆ ಓದಿ..

ಪಂದ್ಯದ ವಿವರಗಳು ಮತ್ತು ನೇರಪ್ರಸಾರದ ಮಾಹಿತಿ

ಪಂದ್ಯದ ವಿವರಗಳು ಮತ್ತು ನೇರಪ್ರಸಾರದ ಮಾಹಿತಿ

ಇಂಗ್ಲೆಂಡ್ vs ಭಾರತ, 2 ನೇ ಟೆಸ್ಟ್
ದಿನಾಂಕ: ಆಗಸ್ಟ್ 12, ಗುರುವಾರದಿಂದ ಆಗಸ್ಟ್ 16 ಸೋಮವಾರದವರೆಗೆ
ಸಮಯ: ಭಾರತೀಯ ಕಾಲಮಾನ ಮಧ್ಯಾಹ್ನ 3:30
ಸ್ಥಳ: ಲಾರ್ಡ್ಸ್, ಲಂಡನ್
ನೇರಪ್ರಸಾರ ಮತ್ತು ಸ್ಟ್ರೀಮಿಂಗ್: ಸೋನಿ ಸಿಕ್ಸ್ ಮತ್ತು ಸೋನಿ ಲಿವ್

ಪಿಚ್ ರಿಪೋರ್ಟ್ ಹವಾಮಾನ ವರದಿ

ಪಿಚ್ ರಿಪೋರ್ಟ್ ಹವಾಮಾನ ವರದಿ

ಐತಿಹಾಸಿಕ ಹಿನ್ನೆಲೆಯುಳ್ಳ ಲಾರ್ಡ್ಸ್ ಅಂಗಳ ವೇಗಿಗಳ ಪಾಲಿಗೆ ಹೆಚ್ಚಿನ ನೆರವು ನೀಡುತ್ತದೆ. ಪಂದ್ಯ ಮುಂದುವರಿದಂತೆಯೇ ಬ್ಯಾಟ್ಸ್‌ಮನ್‌ಗಳ ಪಾಲಿಗೆ ಪಿಚ್ ಮತ್ತಷ್ಟು ಕಠಿಣವಾಗುತ್ತಾ ಸಾಗುತ್ತದೆ. ಮೊದಲ ಇನ್ನಿಂಗ್ಸ್‌ನ ಸರಾಸರಿ ಈ ಅಂಗಳದಲ್ಲಿ 312 ರನ್ ಇದ್ದು ಮೊದಲ ಇನ್ನಿಂಗ್ಸ್ ಬ್ಯಾಟ್ಸ್‌ಮನ್‌ಗಳ ಪಾಲಿಗೆ ಸುಲಭವಾಗಿರಲಿದೆ. ಆದರೆ ಬಳಿಕ ಬ್ಯಾಟ್ಸ್‌ಮನ್‌ಗಳಿಗೆ ಸಾಕಷ್ಟು ಸವಾಲಾಗಲಿದೆ ಎಂಬುದು ಈ ಹಿಂದಿನ ದಾಖಲೆಗಳಿಂದ ತಿಳಿಯುತ್ತದೆ. ಹೀಗಾಗಿ ಟಾಸ್ ಗೆದ್ದ ತಂಡ ಮೊದಲಿಗೆ ಬ್ಯಾಟಿಂಗ್ ಆಯ್ದುಕೊಳ್ಳುವ ಸಾಧ್ಯತೆ ಹೆಚ್ಚಿದ್ದು ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆಯನ್ನು ಪಡೆಯುವ ಗುರಿಯನ್ನು ಹೊಂದಿರಲಿದೆ.

ನಾಟಿಂಗ್‌ಹ್ಯಾಮ್ ಪಂದ್ಯ ಮಳೆಗೆ ಆಹುತಿಯಾದ ಕಾರಣ ಲಾರ್ಡ್ಸ್ ಪಂದ್ಯದ ಮೇಲೆಯೂ ಮಳೆಯ ಆತಂಕ ಅಭಿಮಾನಿಗಳನ್ನು ಕಾಡುತ್ತಿದೆ. ಹಮಾಮಾನ ವರದಿಗಳ ಪ್ರಕಾರ ಪಂದ್ಯದುದ್ದಕ್ಕೂ ಮೋಡಕವಿದ ವಾತಾವರಣವಿರಲಿದೆ. ಆದರೆ ಮಳೆಯಾಗುವ ಮೂಲಕ ಪಂದ್ಯಕ್ಕೆ ಅಡ್ಡಿಯಾಗುವ ಸಾಧ್ಯತೆ ತೀರಾ ಕಡಿಮೆಯಿದೆ ಎನ್ನಲಾಗಿದೆ.

ಲಾರ್ಡ್ಸ್ ಅಂಗಳದ ದಾಖಲೆ

ಲಾರ್ಡ್ಸ್ ಅಂಗಳದ ದಾಖಲೆ

ಕ್ರಿಕೆಟ್ ಕಾಶಿ ಎಂದು ಕರೆಯಲ್ಪಡುವ ಲಾರ್ಡ್ಸ್ ಅಂಗಳದಲ್ಲಿ ಈವರೆಗೆ 140 ಟೆಸ್ಟ್ ಪಂದ್ಯಗಳನ್ನು ಆಡಲಾಗಿದೆ. ಇದರಲ್ಲಿ 50 ಪಂದ್ಯಗಳಲ್ಲಿ ಮೊದಲಿಗೆ ಬ್ಯಾಟಿಂಗ್ ನಡೆಸಿದ ತಂಡಗಳು ಗೆದ್ದುಕೊಂಡಿದೆ. ಎರಡನೇ ಬ್ಯಾಟಿಂಗ್ ನಡೆಸಿದ ತಂಡಗಳು ಕೂಡ ಉತ್ತಮ ಪ್ರಮಾಣದಲ್ಲಿ ಗೆಲುವು ಸಾಧಿಸಿದರೂ ಮೊದಲು ಬ್ಯಾಟಿಂಗ್‌ಗೆ ಗೆಲುವು ಸಾಧಿಸಿದ ಪ್ರಮಾಣಕ್ಕೆ ಹೋಲಿಸಿದರೆ ಇದರ ಅಂಕಿಅಂಶ ಕಡಿಮೆಯಿದೆ. ಅಂದರೆ 39 ಪಂದ್ಯಗಳಲ್ಲಿ ಎರಡನೇ ಬ್ಯಾಟಿಂಗ್ ನಡೆಸಿದ ತಂಡ ಗೆದ್ದಿದೆ. ಹೀಗಾಗಿ ಮೊದಲು ಬ್ಯಾಟಿಂಗ್ ನಡೆಸುವ ತಂಡಕ್ಕೆ ಉತ್ತಮ ಅವಕಾಶ ಎಂದು ಹೇಳಬಹುದು.

ಮೊದಲು ಬ್ಯಾಟಿಂಗ್ ನಡೆಸಿದ ತಂಡ ಗೆದ್ದ ಪಂದ್ಯಗಳು 50
ಮೊದಲು ಬೌಲಿಂಗ್ ನಡೆಸಿದ ತಂಡ ಗೆದ್ದ ಪಂದ್ಯಗಳು 39
1 ನೇ ಇನ್ನಿಂಗ್ಸ್ ಸರಾಸರಿ ಸ್ಕೋರ್ 312
2 ನೇ ಇನ್ನಿಂಗ್ಸ್‌ನ ಸರಾಸರಿ ಸ್ಕೋರ್ 298
3 ನೇ ಇನ್ನಿಂಗ್ಸ್‌ನ ಸರಾಸರಿ ಸ್ಕೋರ್ 257
4 ನೇ ಇನ್ನಿಂಗ್ಸ್‌ನ ಸರಾಸರಿ ಸ್ಕೋರ್ 155
ಅತಿ ಹೆಚ್ಚು ರನ್‌ಗಳಿಸಿದ ತಂಡ ಆಸ್ಟ್ರೇಲಿಯಾ(ಇಂಗ್ಲೆಂಡ್ ವಿರುದ್ಧ) 729/6 (232 ಓವರ್)
ಅತಿ ಕಡಿಮೆ ರನ್‌ಗಳಿಸಿದ ತಂಡ ಐರ್ಲೆಂಡ್(ಇಂಗ್ಲೆಂಡ್ ವಿರುದ್ಧ) 38/10 (15.4 ಓವರ್)

ಗಾಯಾಳುಗಳ ಅಪ್‌ಡೇಟ್ ಹಾಗೂ ತಂಡದ ಸುದ್ದಿ

ಗಾಯಾಳುಗಳ ಅಪ್‌ಡೇಟ್ ಹಾಗೂ ತಂಡದ ಸುದ್ದಿ

ಟೀಮ್ ಇಂಡಿಯಾ: ಪ್ರವಾಸಿ ಭಾರತ ತಂಡ ಎರಡನೇ ಟೆಸ್ಟ್ ಪಂದ್ಯಕ್ಕೆ ಮೊದಲ ಟೆಸ್ಟ್ ಪಂದ್ಯದಲ್ಲಿ ಆಡುವ ಬಳಗದಲ್ಲಿ ಕಾಣಿಸಿಕೊಂಡಿದ್ದ ತಂಡದೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ. ನಾಯಕ ವಿರಾಟ್ ಕೊಹ್ಲಿ ಈ ಸರಣಿಯಲ್ಲಿ ಭಾರತ ನಾಲ್ಕು ವೇಗಿಗಳು ಹಾಗೂ ಒರ್ವ ಸ್ಪಿನ್ನರ್ ಜೊತೆಗೆ ಕಣಕ್ಕಿಳಿಯುವುದಾಗಿ ಭಾನುವಾರ ಅಂತ್ಯವಾದ ಪಂದ್ಯದ ಬಳಿಕ ತಿಳಿಸಿದ್ದಾರೆ. ಆರ್ ಅಶ್ವಿನ್ ಎರಡನೇ ಟೆಸ್ಟ್ ಪಂದ್ಯದಲ್ಲಿಯೂ ಬೆಂಚ್ ಕಾಯಬೇಕಾದ ಅನಿವಾರ್ಯತೆ ಉಂಟಾಗುವ ಸಾಧ್ಯತೆಯಿದೆ.
ಇಂಗ್ಲೆಂಡ್: ಆತಿಥೇಯ ಇಂಗ್ಲೆಂಡ್ ತಂಡದಲ್ಲಿಯೂ ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆಯಿಲ್ಲ. ಆಲ್‌ರೌಂಡರ್ ಕ್ರಿಸ್ ವೋಕ್ಸ್ ಗಾಯಗೊಂಡಿದ್ದು ಮೂರನೇ ಟೆಸ್ಟ್ ವೇಳೆಗೆ ಆಯ್ಕೆಗೆ ಲಭ್ಯವಾಗುವ ಸಾಧ್ಯತೆಯಿದೆ.

Ravichandran Ashwin ಅವರ ಪಾಲಿಗೆ ವಿಲನ್ ಆಗಿದ್ದಾರಾ Virat | Oneindia Kannada
ಸಂಭಾವ್ಯ ತಂಡಗಳು

ಸಂಭಾವ್ಯ ತಂಡಗಳು

ಟೀಮ್ ಇಂಡಿಯಾ ಸಂಭಾವ್ಯ ತಂಡ
ರೋಹಿತ್ ಶರ್ಮಾ, ಕೆಎಲ್ ರಾಹುಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರಿಷಭ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬೂಮ್ರಾ
ಇಂಗ್ಲೆಂಡ್ ಸಂಭಾವ್ಯ ತಂಡ
ರೋರಿ ಬರ್ನ್ಸ್, ಡೊಮಿನಿಕ್ ಸಿಬ್ಲಿ, ಜಾಕ್ ಕ್ರಾವ್ಲಿ, ಜೋ ರೂಟ್ (ನಾಯಕ), ಜಾನಿ ಬೈರ್‌ಸ್ಟೊ, ಡೇನಿಯಲ್ ಲಾರೆನ್ಸ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಸ್ಯಾಮ್ ಕರನ್, ಒಲಿ ರಾಬಿನ್ಸನ್, ಸ್ಟುವರ್ಟ್ ಬ್ರಾಡ್, ಜೇಮ್ಸ್ ಆಂಡರ್ಸನ್

Story first published: Tuesday, August 10, 2021, 18:53 [IST]
Other articles published on Aug 10, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X