ಕೆಎಲ್ ರಾಹುಲ್ ಬದಲಿಗೆ ಬೇರೆ ಆಟಗಾರನಿಗೆ ಅವಕಾಶ ನೀಡಬೇಕು: ಸಂಜಯ್ ಮಂಜ್ರೇಕರ್

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಎರಡು ವರ್ಷಗಳ ನಂತರ ಕೆಎಲ್ ರಾಹುಲ್ ಆಡುವ ಬಳಗದಲ್ಲಿ ಅವಕಾಶವನ್ನು ಗಳಿಸಿ ಉತ್ತಮ ಪ್ರದರ್ಶನ ನೀಡುವಲ್ಲಿ ಸಫಲವಾಗಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ ಕೆಎಲ್ ರಾಹುಲ್ ನೀಡಿದ ಪ್ರದರ್ಶನ ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧ ಮೇಲುಗೈ ಸಾಧಿಸುವಲ್ಲಿ ಪ್ರಮುಖ ಕಾರಣವಾಗಿತ್ತು. ಎರಡನೇ ಇನ್ನಿಂಗ್ಸ್‌ನಲ್ಲಿ ರಾಹುಲ್ ದೊಡ್ಡ ಮೊತ್ತವನ್ನು ಗಳಿಸುವಲ್ಲಿ ವಿಫಲವಾದರೂ ಅವರ ಪ್ರದರ್ಶನ ಸಾಕಷ್ಟು ಸಕಾರಾತ್ಮಕವಾಗಿತ್ತು. ಹಾಗಿದ್ದರೂ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಮಾತ್ರ ಕೆಎಲ್ ರಾಹುಲ್ ಟೆಸ್ಟ್ ಕ್ರಿಕೆಟ್‌ಗೆ ಸೂಕ್ತ ಆಟಗಾರನಲ್ಲ ಎಂಬ ರೀತಿಯ ವಾದವನ್ನು ಮುಂದಿಡುತ್ತಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಆರಂಭಕ್ಕೂ ಮುನ್ನ ಆರಂಭಿಕ ಆಟಗಾರ ಶುಬ್ಮನ್ ಗಿಲ್ ಗಾಯಗೊಂಡು ಸರಣಿಯಿಂದ ಹೊರಬಿದ್ದರು. ಅದಾದ ಬಳಿಕ ಆರಂಭಿಕ ಆಟಗಾರನಾಗಿರುವ ಮಯಾಂಕ್ ಅಗರ್ವಾಲ್ ಅಭ್ಯಾಸದ ವೇಳೆ ತಲೆಗೆ ಏಟು ಮಾಡಿಕೊಂಡು ಕನ್ಕೂಶನ್‌ಗೆ ಒಳಗಾಗಿದ್ದು ವಿಶ್ರಾಂತಿಯನ್ನು ಸೂಚಿಸಲಾಗಿತ್ತು. ಹೀಗಾಗಿ ಕೆಎಲ್ ರಾಹುಲ್ ಆಡುವ ಬಳಗದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಲ್ಲದೆ ತಂಡಕ್ಕೆ ಆಸರೆಯಾದರು.

ಬೇರೆಯವರಿಗೆ ಅವಕಾಶ ನೀಡಲಿ

ಬೇರೆಯವರಿಗೆ ಅವಕಾಶ ನೀಡಲಿ

ಆದರೆ ಮೊದಲ ಟೆಸ್ಟ್ ಪಂದ್ಯದ ವಿಮರ್ಶೆಯ ಸಂದರ್ಭದಲ್ಲಿ ಸೋನಿ ಸ್ಪೋರ್ಟ್ಸ್ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಸಂಜಯ್ ಮಂಜ್ರೇಕರ್ ಮೊದಲ ಟೆಸ್ಟ್‌ನಲ್ಲಿ ರಾಹುಲ್ ನಿಡಿದ ಪ್ರದರ್ಶನವನ್ನು ಪ್ರಶಂಸಿಸುತ್ತಲೇ ಟೆಸ್ಟ್ ಕ್ರಿಕೆಟ್‌ನ ಆಡುವ ಬಳಗದಿಂದ ರಾಹುಲ್‌ ಅವರನ್ನು ಹೊರಗಿಡುವುದು ಉತ್ತಮ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. "ನಾನು ಕೆಎಲ್ ರಾಹುಲ್ ಅವರ ಪ್ರದರ್ಶನವನ್ನು ಮೆಚ್ಚಿಕೊಂಡಿದ್ದೇನೆ. ಕೆಎಲ್ ರಾಹುಲ್ ಕಳೆದ ನಾಲ್ಕೈದು ಸರಣಿಗಳಲ್ಲಿ ವಿಫಲವಾಗುತ್ತಾ ಬಂದಿದ್ದಾರೆ ಎಂದು ಪದೇ ಪದೇ ಹೇಳಿದ್ದೇನೆ. ಹಾಗಾಗಿ ನಾನು ಬೇರೆ ಯಾವುದಾದರೂ ಆಟಗಾರನಿಗೆ ಕೆಎಲ್ ರಾಹುಲ್‌ಗೆ ನೀಡುವ ಸ್ಥಾನವನ್ನು ನೀಡುವುದು ಉತ್ತಮ ಎಂದು ಭಾವಿಸುತ್ತೇನೆ. ಯಾಕೆಂದರೆ ಕೆಎಲ್ ರಾಹುಲ್ ಟೆಸ್ಟ್ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನವನ್ನು ನೀಡಿಕೊಂಡು ಬರುವಲ್ಲಿ ವಿಫಲವಾಗಿದ್ದಾರೆ" ಎಂದು ಸಂಜಯ್ ಮಂಜ್ರೇಕರ್ ಹೇಳಿದ್ದಾರೆ

ಮಂಜ್ರೇಕರ್ ದ್ವಂದ್ವ ಹೇಳಿಕೆ

ಮಂಜ್ರೇಕರ್ ದ್ವಂದ್ವ ಹೇಳಿಕೆ

ಇನ್ನು ಇದೇ ಸಂದರ್ಭದಲ್ಲಿ ಸಂಜಯ್ ಮಂಜ್ರೇಕರ್ ಹಿಂದಿನ ಪಂದ್ಯಗಳಲ್ಲಿ ವೈಫಲ್ಯವನ್ನು ಅನುಭವಿಸಿದ ಹೊರತಾಗಿಯೂ ಪ್ರಥಮ ಟೆಸ್ಟ್‌ನಲ್ಲಿ ನೀಡಿದ ಪ್ರದರ್ಶನ ಉತ್ತಮವಾಗಿತ್ತು ಎಂದು ಪ್ರಶಂಸಿಸಿದ್ದಾರೆ. "ನೀವು ಟೆಸ್ಟ್ ಕ್ರಿಕೆಟ್‌ನಲ್ಲಿ ಆಡುತ್ತಿದ್ದೀರಿ ಎಂದಾದರೆ, ಹಿಂದಿನ ಪ್ರದರ್ಶನಗಳ ನೆನಪು ಉತ್ತಮವಾಗಿಲ್ಲದಿದ್ದರೆ ಉತ್ತಮವಾಗಿ ಹಾಗೂ ಆತ್ಮವಿಶ್ವಾಸದಿಂದ ಆಡುವುದು ಸುಲಭವಲ್ಲ. ಅದು ಅವರಿಗೂ ಗೊತ್ತಿದೆ. ಆದರೆ ಕಳೆದ ಪಂದ್ಯದಲ್ಲಿ ಕೆಎಲ್ ರಾಹುಲ್ ಕಠಿಣ ಸಂದರ್ಭದಲ್ಲಿಯೂ ಉತ್ತಮ ಪ್ರದರ್ಶನ ನೀಡಿದರು. ಅವರು ಸಾಕಷ್ಟು ತಾಳ್ಮೆಯನ್ನು ಪ್ರದರ್ಶಿಸಿದ್ದಾರೆ" ಎಂದಿದ್ದಾರೆ ಸಂಜಯ್ ಮಂಜ್ರೇಕರ್

ಕೆಎಲ್ ರಾಹುಲ್‌ಗೆ ತಾಂತ್ರಿಕ ಸಮಸ್ಯೆ ಎಂದ ಮಂಜ್ರೇಕರ್

ಕೆಎಲ್ ರಾಹುಲ್‌ಗೆ ತಾಂತ್ರಿಕ ಸಮಸ್ಯೆ ಎಂದ ಮಂಜ್ರೇಕರ್

ಇನ್ನು ಟೆಸ್ಟ್ ಕ್ರಿಕೆಟ್‌ನಲ್ಲಿ ಕೆಎಲ್ ರಾಹುಲ್ ತಾಂತ್ರಿಕ ಸಮಸ್ಯೆಯನ್ನು ಹೊಂದಿದ್ದಾರೆ ಎಂದು ಮಂಜ್ರೇಕರ್ ಹೇಳಿದ್ದಾರೆ. "ಕೆಎಲ್ ರಾಹುಲ್ ತಾಂತ್ರಿಕ ಸಮಸ್ಯೆಯನ್ನು ಹೊಂದಿದ್ದಾರೆ. ಆದ ಕಾರಣದಿಂದಲೇ ಅವರು ತಂಡದಿಂದ ಹೊರಬಿದ್ದಿದ್ದರು. ಆಫ್‌ಸೈಡ್‌ನ ಹೊರಗಡೆಯಿರುವ ಎಸೆತಗಳನ್ನುಆಡಬೇಕೋ ಬೇಡವೋ ಎಂಬ ದ್ವಂದ್ವಕ್ಕೆ ಅವರು ಒಳಗಾಗುತ್ತಾರೆ. ಆದರೆ ಈ ಪಂದ್ಯದಲ್ಲಿ ಅವರು ಆ ಗೊಂದಲವನ್ನು ಹೊಂದಿರಲಿಲ್ಲ. ಯಾವ ಪಂದ್ಯವನ್ನು ಬಿಡಬೇಕು ಎಂದು ಸ್ಪಷ್ಟವಾಗಿದ್ದರು" ಎಂದು ಸಂಜಯ್ ಮಂಜ್ರೇಕರ್ ಅಭಿಪ್ರಾಯಪಟ್ಟಿದ್ದಾರೆ.

ಎರಡನೇ ಪಂದ್ಯದಲ್ಲಿಯೂ ರಾಹುಲ್ ಫಿಕ್ಸ್

ಎರಡನೇ ಪಂದ್ಯದಲ್ಲಿಯೂ ರಾಹುಲ್ ಫಿಕ್ಸ್

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯ ಮಳೆಯಿಂದಾಗಿ ಡ್ರಾಗೊಂಡ ನಂತರ ಈಗ ಎರಡನೇ ಪಂದ್ಯವನ್ನಾಡಲು ತಂಡ ಸಜ್ಜಾಗಿದೆ. ಮೊದಲ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಪಂದ್ಯದಲ್ಲಿ ಗೆಲುವಿನ ಸನಿಹದವರೆಗೆ ತಲುಪಿದ್ದ ಟೀಮ್ ಇಂಡಿಯಾದ ಆಡುವ ಬಳಗವನ್ನು ಎರಡನೇ ಪಂದ್ಯದಲ್ಲಿಯೂ ಉಳಿಸಿಕೊಳ್ಳಲು ನಾಯಕ ವಿರಾಟ್ ಕೊಹ್ಲಿ ಚಿಂತಿಸಿದ್ದಾರೆ. ಕೆಎಲ್ ರಾಹುಲ್ ಮುಂದಿನ ಪಂದ್ಯದಲ್ಲಿಯೂ ಆರಂಭಿಕನಾಗಿ ಕಣಕ್ಕಿಳಿಯುವುದು ಖಚಿತವಾಗಿದೆ. ಗುರುವಾರ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಎರಡನೇ ಪಂದ್ಯ ಆರಂಭವಾಗಲಿದ್ದು ಲಾರ್ಡ್ಸ್ ಅಂಗಳ ಈ ಪಂದ್ಯಕ್ಕೆ ಆತಿಥ್ಯವಹಿಸಿಕೊಳ್ಳಲಿದೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Tuesday, August 10, 2021, 18:42 [IST]
Other articles published on Aug 10, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X