ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs NZ T20: ಈ ವಿಚಾರಗಳಲ್ಲಿ ಟೀಂ ಇಂಡಿಯಾ ಇನ್ನೂ ಸುಧಾರಿಸಬೇಕಿದೆ

IND vs NZ: Team India Should Looking For These Three Things In 3rd T20I

ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ 1-0 ಅಂತರದಲ್ಲಿ ಮುನ್ನಡೆ ಸಾಧಿಸಿರುವ ಟೀಂ ಇಂಡಿಯಾ ಮೂರನೇ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿ ವಶಪಡಿಸಿಕೊಳ್ಳುವ ವಿಶ್ವಾಸದಲ್ಲಿದೆ.

ಎರಡನೇ ಟಿ20 ಪಂದ್ಯದಲ್ಲಿ 65 ರನ್‌ಗಳಿಂದ ಗೆಲುವು ಸಾಧಿಸಿದ್ದರೂ, ಟೀಂ ಇಂಡಿಯಾ ಇನ್ನೂ ಸುಧಾರಣೆಯಾಗಬೇಕಾದ ಹಲವು ಅಂಶಗಳಿವೆ. ಮೂರನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಇವುಗಳ ಬಗ್ಗೆ ಗಮನ ಹರಿಸಬೇಕಾಗಿದೆ.

ಸದ್ಯ ಭಾರತದ ಬೌಲಿಂಗ್ ಎರಡನೇ ಟಿ20 ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದೆ. ಬೌಲಿಂಗ್ ವಿಭಾಗದಲ್ಲಿ ಸದ್ಯ ಯಾವುದೇ ಸಮಸ್ಯೆ ಇಲ್ಲ ಎನಿಸಿದರೂ, ಬ್ಯಾಟಿಂಗ್ ವಿಭಾಗದಲ್ಲಿ ತಂಡ ಸಾಕಷ್ಟು ಸುಧಾರಣೆಯಾಗಬೇಕಿದೆ.

ನಾನು ಕ್ರಿಮಿನಲ್ ಅಲ್ಲ: ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ವಿರುದ್ಧ ಸಿಟ್ಟಿಗೆದ್ದ ಡೇವಿಡ್ ವಾರ್ನರ್!ನಾನು ಕ್ರಿಮಿನಲ್ ಅಲ್ಲ: ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ವಿರುದ್ಧ ಸಿಟ್ಟಿಗೆದ್ದ ಡೇವಿಡ್ ವಾರ್ನರ್!

2ನೇ ಟಿ20 ಪಂದ್ಯದಲ್ಲಿ ಭಾರತ 6 ವಿಕೆಟ್ ನಷ್ಟಕ್ಕೆ 191 ರನ್ ಗಳಿಸಿತು. ಇದರಲ್ಲಿ 111 ರನ್ ಗಳಿಸಿದ್ದು ಸೂರ್ಯಕುಮಾರ್ ಯಾದವ್, 13 ರನ್‌ಗಳು ಹೆಚ್ಚುವರಿಯಾಗಿ ಬಂದರೆ, ಉಳಿದ ಬ್ಯಾಟರ್ ಗಳು 65 ಎಸೆತಗಳಲ್ಲಿ ಗಳಿಸಿದ್ದು 67 ರನ್ ಮಾತ್ರ. ಇದನ್ನು ನೋಡಿದಾಗ ಭಾರತ ಸೂರ್ಯಕುಮಾರ್ ಯಾದವ್ ಮೇಲೆ ಸಾಕಷ್ಟು ಅವಲಂಬಿಸಿರುವುದನ್ನು ನೋಡಬಹುದು.

ಪ್ರತಿ ಪಂದ್ಯದಲ್ಲಿ ಸೂರ್ಯಕುಮಾರ್ ಒಬ್ಬರೆ ರನ್ ಗಳಿಸಲು ಆಗದು. ಇತರೆ ಬ್ಯಾಟರ್ ಗಳು ಹೆಚ್ಚಿನ ರನ್ ಗಳಿಸಿದರೆ ಸೂರ್ಯಕುಮಾರ್ ಯಾದವ್ ಮೇಲಿನ ಒತ್ತಡ ಮತ್ತು ಅವಲಂಬನೆ ಕಡಿಮೆಯಾಗಲಿದೆ.

IND vs NZ: Team India Should Looking For These Three Things In 3rd T20I

ರಿಷಬ್ ಪಂತ್ ವಿಚಾರದಲ್ಲಿ ಸ್ಪಷ್ಟನೆ ಇಲ್ಲ

ರಿಷಬ್ ಪಂತ್ ಯಾವ ಕ್ರಮಾಂಕದಲ್ಲಿ ಆಡಬೇಕು ಎನ್ನುವ ಸ್ಪಷ್ಟನೆ ತಂಡದ ಮ್ಯಾನೇಜ್‌ಮೆಂಟ್‌ಗೆ ಇದ್ದಂತಿಲ್ಲ. ಐಪಿಎಲ್‌ನಲ್ಲಿ 3 ರಿಂದ 5ನೇ ಕ್ರಮಾಂಕದಲ್ಲಿ ಆಡಿದ ಅನುಭವ ಇರುವ ಪಂತ್, ಈಗ ಆರಂಭಿಕರಾಗಿ ಕಣಕ್ಕಿಳಿದಿದ್ದಾರೆ.

ತಮಗೆ ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳುವಲ್ಲಿ ಅವರು ವಿಫಲರಾಗಿದ್ದಾರೆ. ರಿಷಬ್ ಪಂತ್ ಕೂಡ ಯಾವುದೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಅವಕಾಶ ಸಿಕ್ಕರೂ ಅದನ್ನು ಬಳಸಿಕೊಳ್ಳಬೇಕಿದೆ. ಮೂರನೇ ಟಿ20 ಪಂದ್ಯದಲ್ಲಿ ರಿಷಬ್ ಪಂತ್ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಬೇಕಿದೆ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಅವರ ಸ್ಥಾನವನ್ನು ಉಳಿಸಿಕೊಳ್ಳುವುದು ಕಷ್ಟವಾಗಲಿದೆ.

IND vs NZ: Team India Should Looking For These Three Things In 3rd T20I

ಉತ್ತಮ ಫಿನಿಶರ್ ಬೇಕಿದೆ

2ನೇ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್‌ 200ಕ್ಕೂ ಹೆಚ್ಚು ರನ್ ಗಳಿಸುವ ಅವಕಾಶ ಇತ್ತು. ಆದರೆ, ಹಾರ್ದಿಕ್ ಪಾಂಡ್ಯ ನಿಧಾನಗತಿಯಲ್ಲಿ ಬ್ಯಾಟಿಂಗ್ ಮಾಡಿದರು. ಭಾರತ ತಂಡ ಅಂತಿಮ ಓವರ್ ನಲ್ಲಿ ಕೇವಲ 5 ರನ್ ಗಳಿಸಿತು. ಸೂರ್ಯಕುಮಾರ್ ಯಾದವ್ ಅಂತಿಮ ಓವರ್ ನಲ್ಲಿ ಒಂದು ಬಾಲ್ ಕೂಡ ಬೌಲಿಂಗ್ ಮಾಡಲಿಲ್ಲ. ಸೂರ್ಯಕುಮಾರ್ ನಂತರ ಭಾರತ ಅಂತಿಮ ಓವರ್ ಗಳಲ್ಲಿ ಉತ್ತಮವಾಗಿ ಫಿನಿಶ್ ಮಾಡಬೇಕಿದೆ.

ಭಾರತ ತಂಡದಲ್ಲಿ ಮಧ್ಯಮ ಮತ್ತು ಕೆಳ ಕ್ರಮಾಂಕದಲ್ಲಿ ಅತ್ಯುತ್ತಮವಾಗಿ ಇನ್ನಿಂಗ್ಸ್ ಫಿನಿಶ್ ಮಾಡುವ ಅಗತ್ಯವಿದೆ. ಈ ಹೊಣೆಯನ್ನು ಹಾರ್ದಿಕ್ ಪಾಂಡ್ಯ ಅಥವಾ ದೀಪಕ್ ಹೂಡಾ ನಿಭಾಯಿಸಬೇಕಿದೆ.

Story first published: Monday, November 21, 2022, 21:17 [IST]
Other articles published on Nov 21, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X