ಈತ ವಿಶ್ವದ ಬೆಸ್ಟ್ ಬ್ಯಾಟ್ಸ್‌ಮನ್ ಎಂದ ಕೊಹ್ಲಿ; ವಿರಾಟ್ ಫ್ಯಾನ್ಸ್‌ಗಿದು ಬೇಸರದ ಸುದ್ದಿ

ಸದ್ಯ ಏಷ್ಯಾ ಖಂಡದ ಪ್ರಮುಖ ಕ್ರಿಕೆಟ್ ತಂಡಗಳಾದ ಭಾರತ, ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡಗಳು ದುಬೈನಲ್ಲಿ ನಡೆಯುತ್ತಿರುವ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾಗವಹಿಸುತ್ತಿವೆ. ಈ ತಂಡಗಳ ಜತೆ ಟೂರ್ನಿಯಲ್ಲಿ ಬಾಂಗ್ಲಾದೇಶ, ಅಫ್ಘಾನಿಸ್ತಾನ ಹಾಗೂ ಅಂತಿಮ ಹಂತದಲ್ಲಿ ಅರ್ಹತೆ ಪಡೆದುಕೊಂಡ ಹಾಂಗ್ ಕಾಂಗ್ ತಂಡಗಳು ಕೂಡ ಭಾಗವಹಿಸುತ್ತಿವೆ.

Asia Cup 2022: ಗುರ್ಬಜ್ ಅಬ್ಬರ; ಲಂಕಾ ನೀಡಿದ್ದ ಗುರಿಯನ್ನು ಕೇವಲ 10 ಓವರ್‌ನಲ್ಲಿ ಚಚ್ಚಿದ ಅಫ್ಘಾನಿಸ್ತಾನAsia Cup 2022: ಗುರ್ಬಜ್ ಅಬ್ಬರ; ಲಂಕಾ ನೀಡಿದ್ದ ಗುರಿಯನ್ನು ಕೇವಲ 10 ಓವರ್‌ನಲ್ಲಿ ಚಚ್ಚಿದ ಅಫ್ಘಾನಿಸ್ತಾನ

ಇನ್ನು ಟೂರ್ನಿ ಆಗಸ್ಟ್ 27ರ ಶನಿವಾರದಂದು ನಡೆದಿರುವ ಅಫ್ಘಾನಿಸ್ತಾನ ಮತ್ತು ಶ್ರೀಲಂಕಾ ತಂಡಗಳ ನಡುವಿನ ಪಂದ್ಯದ ಮೂಲಕ ಆರಂಭಗೊಂಡಿದ್ದು, ಟೂರ್ನಿಯ ಎರಡನೇ ದಿನದಂದು ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಬಹುನಿರೀಕ್ಷಿತ ಪಂದ್ಯ ನಡೆಯಲಿದೆ. ಕಳೆದ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ನಂತರ ಉಭಯ ತಂಡಗಳು ಮುಖಾಮುಖಿಯಾಗುತ್ತಿರುವ ಪಂದ್ಯ ಇದಾಗಿದ್ದು, ಕೇವಲ ಭಾರತ ಮತ್ತು ಪಾಕಿಸ್ತಾನ ದೇಶಗಳ ಕ್ರಿಕೆಟ್ ಅಭಿಮಾನಿಗಳು ಮಾತ್ರವಲ್ಲದೆ ವಿಶ್ವದ ಹಲವಾರು ದೇಶಗಳ ಕ್ರಿಕೆಟ್ ವೀಕ್ಷಕರು ಈ ಪಂದ್ಯವನ್ನು ವೀಕ್ಷಿಸಲು ಕಾಯುತ್ತಿದ್ದಾರೆ.

Asia Cup 2022: ಟಿವಿ, ಮೊಬೈಲ್ ಮಾತ್ರವಲ್ಲ, ಈ ಚಿತ್ರಮಂದಿರಗಳಲ್ಲೂ ಭಾರತ vs ಪಾಕ್ ಪಂದ್ಯದ ನೇರಪ್ರಸಾರ! ಟಿಕೆಟ್ ದರವೆಷ್ಟು?Asia Cup 2022: ಟಿವಿ, ಮೊಬೈಲ್ ಮಾತ್ರವಲ್ಲ, ಈ ಚಿತ್ರಮಂದಿರಗಳಲ್ಲೂ ಭಾರತ vs ಪಾಕ್ ಪಂದ್ಯದ ನೇರಪ್ರಸಾರ! ಟಿಕೆಟ್ ದರವೆಷ್ಟು?

ಇನ್ನು ಭಾರತ ತಂಡದ ವಿಶ್ವಶ್ರೇಷ್ಠ ವಿರಾಟ್ ಕೊಹ್ಲಿ ಹಾಗೂ ಪಾಕಿಸ್ತಾನ ತಂಡದ ಸ್ಟಾರ್ ಆಟಗಾರ ಬಾಬರ್ ಅಜಮ್ ಇಬ್ಬರಲ್ಲಿ ಯಾರು ಬೆಸ್ಟ್ ಎಂಬ ಚರ್ಚೆ ಈ ಹಿಂದಿನಿಂದಲೂ ನಡೆಯುತ್ತಾ ಬಂದಿದ್ದು, ಪ್ರಸ್ತುತ ನಡೆಯುತ್ತಿರುವ ಏಷ್ಯಾಕಪ್ ವಿಷಯಗಳ ಕುರಿತಾದ ಚರ್ಚೆಯಲ್ಲಿಯೂ ಸಹ ಈ ವಿಷಯ ಹರಿದಾಡಿದೆ. ಇನ್ನು ಪಾಕಿಸ್ತಾನ ವಿರುದ್ಧದ ಪಂದ್ಯ ಆರಂಭಕ್ಕೂ ಮುನ್ನ ಸ್ಟಾರ್ ಸ್ಪೋರ್ಟ್ಸ್‌ ನೆಟ್‌ವರ್ಕ್ ಚಾನೆಲ್‌ನ ಸಂದರ್ಶನದಲ್ಲಿ ಭಾಗವಹಿಸಿದ್ದ ವಿರಾಟ್ ಕೊಹ್ಲಿ ಬಾಬರ್ ಅಜಮ್ ಕುರಿತು ಮಾತನಾಡಿದ್ದು, ಈ ಕೆಳಕಂಡಂತೆ ಹೇಳಿಕೆಗಳನ್ನು ನೀಡಿದ್ದಾರೆ.

ಬಾಬರ್ ಅಜಮ್ ಸದ್ಯ ವಿಶ್ವದ ಬೆಸ್ಟ್ ಬ್ಯಾಟ್ಸ್‌ಮನ್ ಎಂದ ಕೊಹ್ಲಿ

ಬಾಬರ್ ಅಜಮ್ ಸದ್ಯ ವಿಶ್ವದ ಬೆಸ್ಟ್ ಬ್ಯಾಟ್ಸ್‌ಮನ್ ಎಂದ ಕೊಹ್ಲಿ

ಹೀಗೆ ಸಂದರ್ಶನದಲ್ಲಿ ವೇಳೆ ಬಾಬರ್ ಅಜಮ್ ವಿಚಾರ ಬಂದಾಗ ಮಾತನಾಡಿದ ವಿರಾಟ್ ಕೊಹ್ಲಿ ಬಾಬರ್ ಅಜಮ್ ಅವರನ್ನು ಮೊದಲು ಭೇಟಿಯಾದ ಕ್ಷಣವನ್ನು ಮೆಲುಕು ಹಾಕಿದ್ದಾರೆ. ಹಾಗೂ ಬಾಬರ್ ಅಜಮ್ ಬಹುಷಃ ಪ್ರಸ್ತುತ ವಿಶ್ವದ ಬೆಸ್ಟ್ ಬ್ಯಾಟ್ಸ್‌ಮನ್ ಎಂದು ವಿರಾಟ್ ಕೊಹ್ಲಿ ಸ್ವತಃ ಹೇಳಿದ್ದಾರೆ. ಹೀಗೆ ವಿರಾಟ್ ಕೊಹ್ಲಿ ಬಾಬರ್ ಅಜಮ್ ಅವರನ್ನು ವಿಶ್ವದ ಬೆಸ್ಟ್ ಬ್ಯಾಟ್ಸ್‌ಮನ್ ಎಂದಿರುವುದು ಸದ್ಯ ಕೊಹ್ಲಿ ಅಭಿಮಾನಿಗಳಲ್ಲಿ ಬೇಸರವನ್ನು ಉಂಟುಮಾಡಿದೆ. ಕೊಹ್ಲಿಯೇ ವಿಶ್ವದ ನಂಬರ್ ಒನ್ ಬೆಸ್ಟ್ ಬ್ಯಾಟ್ಸ್‌ಮನ್ ಎನ್ನುತ್ತಿದ್ದ ಅಭಿಮಾನಿಗಳಿಗೆ ಇದೀಗ ತಮ್ಮ ನೆಚ್ಚಿನ ಆಟಗಾರನೇ ಅನ್ಯರನ್ನು ಬೆಸ್ಟ್ ಎಂದದ್ದನ್ನು ಕಂಡು ಬೇಸರಕ್ಕೊಳಗಾಗಿದ್ದಾರೆ.

ಅಜಮ್ ಅವರನ್ನು ಮೊದಲು ಭೇಟಿಯಾದದ್ದನ್ನು ಮೆಲುಕು ಹಾಕಿದ ಕೊಹ್ಲಿ

ಅಜಮ್ ಅವರನ್ನು ಮೊದಲು ಭೇಟಿಯಾದದ್ದನ್ನು ಮೆಲುಕು ಹಾಕಿದ ಕೊಹ್ಲಿ

2019ರ ವಿಶ್ವಕಪ್ ಸಮಯದಲ್ಲಿ ಬಾಬರ್ ಅಜಮ್ ಅವರನ್ನು ಮೊದಲ ಬಾರಿಗೆ ಭೇಟಿ ಮಾಡಿದ್ದಾಗಿ ವಿರಾಟ್ ಕೊಹ್ಲಿ ತಿಳಿಸಿದ್ದಾರೆ. ವಾಸಿಂ ತನಗೆ ಅಂಡರ್ 19 ಸಮಯದಿಂದಲೂ ಗೊತ್ತು, ವಾಸಿಂ ಮತ್ತು ತಾನು ಒಂದೇ ತಂಡ ಹಾಗೂ ಎದುರಾಳಿ ತಂಡದ ಆಟಗಾರರಾಗಿ ಕಣಕ್ಕಿಳಿದಿದ್ದೇವೆ ಎಂದಿರುವ ವಿರಾಟ್ ಕೊಹ್ಲಿ ಬಾಬರ್ ಅಜಮ್ ತನ್ನ ಬಳಿ ಮಾತನಾಬೇಕೆಂದು ಬಯಸುತ್ತಿದ್ದಾರೆ ಎಂಬುದನ್ನು ವಾಸಿಂ ತಿಳಿಸಿದ್ದರು ಹಾಗೂ ಅಂದು ಬಾಬರ್ ಅವರನ್ನು ಭೇಟಿಯಾಗಿದ್ದಾಗಿ ಕೊಹ್ಲಿ ಬಾಬರ್ ಜತೆಗಿನ ಮೊದಲಿ ಭೇಟಿಯ ನೆನಪನ್ನು ಮೆಲುಕು ಹಾಕಿದ್ದಾರೆ.

ಅಂದು ಗೌರವ ನೀಡಿದ್ದ ಗೌರವ ಈಗಲೂ ಹಾಗೆಯೇ ಇದೆ

ಅಂದು ಗೌರವ ನೀಡಿದ್ದ ಗೌರವ ಈಗಲೂ ಹಾಗೆಯೇ ಇದೆ

ಇನ್ನೂ ಮುಂದುವರೆದು ಮಾತನಾಡಿದ ವಿರಾಟ್ ಕೊಹ್ಲಿ ಅಂದು ಬಾಬರ್ ಅಜಮ್ ತಮ್ಮ ಬಳಿ ಮಾತನಾಡಲು ಬಂದಾಗ ತಾನು ವಿನಯದಿಂದ ಮಾತನಾಡಿದ್ದೆ ಹಾಗೂ ಬಾಬರ್ ಅಜಮ್ ಕೂಡ ತುಂಬಾ ಗೌರವ ಹಾಗೂ ವಿನಯದಿಂದ ಮಾತನಾಡಿದ್ದರು ಎಂದು ತಿಳಿಸಿದ್ದಾರೆ. ಇಂದು ಸತತವಾಗಿ ಉತ್ತಮ ಪ್ರದರ್ಶನ ನೀಡಿ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲೂ ವಿಶ್ವದ ಬೆಸ್ಟ್ ಬ್ಯಾಟ್ಸ್‌ಮನ್ ಎನಿಸಿಕೊಳ್ಳುತ್ತಿದ್ದರೂ ಸಹ ಬಾಬರ್ ಅಜಮ್ ಅಂದು ಯಾವ ರೀತಿ ಗೌರವದಿಂದ ಮಾತನಾಡಿದರೋ ಇಂದೂ ಸಹ ಅಷ್ಟೇ ಗೌರವದಿಂದ ಮಾತನಾಡಿದ್ದಾರೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Saturday, August 27, 2022, 23:28 [IST]
Other articles published on Aug 27, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X