ಜಿಂಬಾಬ್ವೆ ಪ್ರವಾಸ ಕೈಗೊಂಡು ಸ್ನಾನಕ್ಕೂ ನೀರಿಲ್ಲದೇ ಪರದಾಡಿದ ಕೆಎಲ್ ರಾಹುಲ್ ಪಡೆ; ಕಾರಣವೇನು?

ಸದ್ಯ ಜಿಂಬಾಬ್ವೆ ಪ್ರವಾಸವನ್ನು ಕೈಗೊಂಡಿರುವ ಟೀಂ ಇಂಡಿಯಾ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಸೆಣಸಾಟ ನಡೆಸುತ್ತಿದೆ. ಇದೇ ತಿಂಗಳ ಅಂತಿಮ ವಾರದಲ್ಲಿ ನಡೆಯಲಿರುವ ಏಷ್ಯಾಕಪ್ ಟೂರ್ನಿಗೂ ಮುನ್ನ ಟೀಮ್ ಇಂಡಿಯಾ ಆಡಲಿರುವ ಅಂತಿಮ ಸರಣಿ ಇದಾಗಿದ್ದು, ಹಲವು ತಿಂಗಳುಗಳ ಬಳಿಕ ಟೀಮ್ ಇಂಡಿಯಾ ಸೇರಿರುವ ಕೆಎಲ್ ರಾಹುಲ್‌ಗೆ ನಾಯಕತ್ವ ನೀಡಲಾಗಿದೆ. ಇನ್ನು ಉಭಯ ತಂಡಗಳ ನಡುವಿನ ಪ್ರಥಮ ಏಕದಿನ ಪಂದ್ಯ ಇಂದು ( ಆಗಸ್ಟ್ 18 ) ನಡೆಯುತ್ತಿದ್ದು, ಸರಣಿಗೆ ಚಾಲನೆ ದೊರಕಿದೆ.

ಕುಟುಂಬ ಸಾಕಲು ಹಣ ಬೇಕು, ಯಾರಾದರೂ ಕೆಲಸ ಕೊಡಿ; ಸಚಿನ್ ಗೆಳೆಯ, ಮಾಜಿ ಸ್ಟಾರ್ ಕ್ರಿಕೆಟಿಗನ ಅಳಲು!ಕುಟುಂಬ ಸಾಕಲು ಹಣ ಬೇಕು, ಯಾರಾದರೂ ಕೆಲಸ ಕೊಡಿ; ಸಚಿನ್ ಗೆಳೆಯ, ಮಾಜಿ ಸ್ಟಾರ್ ಕ್ರಿಕೆಟಿಗನ ಅಳಲು!

ಭಾರತ ಮತ್ತು ಜಿಂಬಾಬ್ವೆ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಎಲ್ಲಾ ಪಂದ್ಯಗಳೂ ಸಹ ಜಿಂಬಾಬ್ವೆಯ ರಾಜಧಾನಿಯಾದ ಹರಾರೆಯ ಹರಾರೆ ಸ್ಪೋರ್ಟ್ಸ್ ಕ್ಲಬ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಟೀಮ್ ಇಂಡಿಯಾ ಆಟಗಾರರು ಸರಣಿಯ ಪ್ರಥಮ ಪಂದ್ಯ ಆರಂಭವಾಗುವುದಕ್ಕೂ ನಾಲ್ಕು ದಿನಗಳಿಗೂ ಮುನ್ನ ಹರಾರೆಯನ್ನು ತಲುಪಿ ಸರಣಿಗಾಗಿ ತಾಲೀಮನ್ನು ಆರಂಭಿಸಿದ್ದರು. ಹೀಗೆ ದೂರದ ಜಿಂಬಾಬ್ವೆ ಪ್ರವಾಸ ಕೈಗೊಂಡು ಹರಾರೆ ತಲುಪಿ ಕಣಕ್ಕಿಳಿದಿರುವ ಟೀಮ್ ಇಂಡಿಯಾದ ಆಟಗಾರರಿಗೆ ಪ್ರಮುಖ ಹಾಗೂ ಅತ್ಯಮೂಲ್ಯವಾದ ಮೂಲ ಸೌಕರ್ಯವಾದ ನೀರಿನ ಸರಬರಾಜಿನಲ್ಲಿ ತೀವ್ರ ಅಭಾವ ಉಂಟಾಗಿದೆ.

NZ vs WI: ಅಲ್ಪ ಮೊತ್ತಕ್ಕೆ ಆಲ್ಔಟ್ ಆಗಿ ವಿಂಡೀಸ್ ವಿರುದ್ಧ ಹೀನಾಯವಾಗಿ ಸೋತ ವಿಲಿಯಮ್ಸನ್ ಬಳಗNZ vs WI: ಅಲ್ಪ ಮೊತ್ತಕ್ಕೆ ಆಲ್ಔಟ್ ಆಗಿ ವಿಂಡೀಸ್ ವಿರುದ್ಧ ಹೀನಾಯವಾಗಿ ಸೋತ ವಿಲಿಯಮ್ಸನ್ ಬಳಗ

ಹೌದು, ಈಗ ಜಿಂಬಾಬ್ವೆಯಲ್ಲಿ ಬೀಡು ಬಿಟ್ಟಿರುವ ಟೀಮ್ ಇಂಡಿಯಾ ಆಟಗಾರರು ನೀರಿಲ್ಲದೇ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ವತಃ ಬಿಸಿಸಿಐ ಕೂಡ ಟೀಮ್ ಇಂಡಿಯಾ ಆಟಗಾರರಿಗೆ ಕಡಿಮೆ ನೀರನ್ನು ಬಳಸಿ ಎಂದು ಸೂಚನೆಯನ್ನು ನೀಡಿದೆ.

ಸ್ನಾನಕ್ಕೂ ನೀರಿನ ಕೊರತೆ

ಸ್ನಾನಕ್ಕೂ ನೀರಿನ ಕೊರತೆ

ಜಿಂಬಾಬ್ವೆಯ ಹರಾರೆ ನಗರದಲ್ಲಿ ನೀರಿನ ಕೊರತೆ ಇರುವ ಕಾರಣ ಬಿಸಿಸಿಐ ಟೀಮ್ ಇಂಡಿಯಾ ಆಟಗಾರರಿಗೆ ದಿನಕ್ಕೆ ಕೇವಲ ಒಂದು ಬಾರಿ ಸ್ನಾನ ಮಾಡುವಂತೆ ಸೂಚಿಸಿದೆ ಹಾಗೂ ಸ್ನಾನ ಮಾಡುವಾಗ ಕಡಿಮೆ ನೀರನ್ನು ಬಳಸುವಂತೆ ತಿಳಿಸಿದೆ. ಈ ವಿಷಯವನ್ನು ಬಿಸಿಸಿಐ ಟೀಂ ಮ್ಯಾನೇಜರ್ ಮೂಲಕ ಆಟಗಾರರಿಗೆ ತಲುಪಿಸಿದ್ದು ನೀರನ್ನು ಮಿತವಾಗಿ ಬಳಸುವಂತೆ ತಿಳಿಸಿದೆ.

ಪೂಲ್ ಸೆಷನ್ ರದ್ದು

ಪೂಲ್ ಸೆಷನ್ ರದ್ದು

ಹೀಗೆ ನೀರಿನ ಬೃಹತ್ ಸಮಸ್ಯೆ ಇರುವ ಕಾರಣ ಈಗಾಗಲೇ ಸಾಕಷ್ಟು ಸಮಸ್ಯೆ ಎದುರಿಸುತ್ತಾ ಸ್ನಾನ ಮಾಡಲೂ ಸಹ ಪರದಾಡುತ್ತಿರುವ ಟೀಮ್ ಇಂಡಿಯಾ ಆಟಗಾರರಿಗೆ ಪೂಲ್ ಸೆಷನ್ ಅನ್ನೂ ಸಹ ರದ್ದು ಮಾಡಿ ಬಿಸಿಸಿಐ ಆದೇಶ ಹೊರಡಿಸಿದೆ. "ಹೌದು, ಹರಾರೆಯಲ್ಲಿ ನೀರಿನ ಪರಿಸ್ಥಿತಿ ತೀವ್ರವಾಗಿದ್ದು, ಆ ಬಗ್ಗೆ ಆಟಗಾರರಿಗೆ ಮಾಹಿತಿ ನೀಡಲಾಗಿದೆ. ಯಾವುದೇ ಕಾರಣಕ್ಕೂ ನೀರನ್ನು ವ್ಯರ್ಥ ಮಾಡದಂತೆ ಮತ್ತು ಸಾಧ್ಯವಾದಷ್ಟು ಕಡಿಮೆ ಸಮಯದವರೆಗೆ ಸ್ನಾನ ಮಾಡುವಂತೆ ತಿಳಿಸಲಾಗಿದೆ. ಅಲ್ಲದೆ, ನೀರನ್ನು ಉಳಿಸಲು ಪೂಲ್ ಸೆಷನ್‌ಗಳನ್ನು ಕಡಿತಗೊಳಿಸಲಾಗಿದೆ" ಎಂದು ಬಿಸಿಸಿಐ ಹಿರಿಯ ಅಧಿಕಾರಿಯೋರ್ವರು ಇನ್‌ಸೈಡ್ ಸ್ಪೋರ್ಟ್ಸ್ ವೆಬ್ ತಾಣಕ್ಕೆ ಮಾಹಿತಿ ನೀಡಿದ್ದಾರೆ.

ಭಾರತ-ಜಿಂಬಾಬ್ವೆ ಮೊದಲ ಪಂದ್ಯದಲ್ಲಿರ್ತಾರಾ ಆರ್‌.ಸಿ.ಬಿ ಹುಡುಗ ಶಾಬಾಜ್..? *Cricket | OneIndia Kannada
ಇದಕ್ಕಿಂತ ಕೆಟ್ಟ ಹಂತ ತಲುಪಿದ್ದ ಜಿಂಬಾಬ್ವೆ

ಇದಕ್ಕಿಂತ ಕೆಟ್ಟ ಹಂತ ತಲುಪಿದ್ದ ಜಿಂಬಾಬ್ವೆ

ಇನ್ನು ಟೀಮ್ ಇಂಡಿಯಾ ಜಿಂಬಾಬ್ವೆ ಪ್ರವಾಸ ಕೈಗೊಂಡಾಗಲೆಲ್ಲಾ ನೀರಿನ ಅಭಾವವನ್ನು ಎದುರಿಸಿದೆ. ಈ ಹಿಂದಿನ ಪ್ರವಾಸಗಳಲ್ಲಿಯೂ ಇದೇ ರೀತಿಯ ತಲೆದೋರಿದ ಉದಾಹರಣೆಗಳಿವೆ. ಇನ್ನು ಹರಾರೆ ವಿಚಾರಕ್ಕೆ ಬಂದರೆ ಈ ಹಿಂದೆ 2019ರ ಸಮಯದಲ್ಲಿ ನೀರಿನ ಸಮಸ್ಯೆ ತೀವ್ರ ಹೆಚ್ಚಿನ ಪ್ರಮಾಣದಲ್ಲಿ ಇದ್ದದ್ದರಿಂದ ಆ ವರ್ಷ ಅಲ್ಲಿನ ಜನ ಕುಡಿಯುವುದಕ್ಕಾಗಿ ಕೊಳಚೆ ನೀರನ್ನೇ ಬಳಸಲೂ ಸಹ ಆರಂಭಿಸಿದ್ದರು. ಇಷ್ಟರ ಮಟ್ಟಿಗೆ ಹರಾರೆ ನಗರದ ನಿವಾಸಿಗಳು ನೀರಿನ ಕುರಿತಾಗಿ ಸಮಸ್ಯೆಯನ್ನು ಎದುರಿಸಿದ್ದಾರೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Read more about: india zimbabwe
Story first published: Thursday, August 18, 2022, 14:26 [IST]
Other articles published on Aug 18, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X