ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಜಿಂಬಾಬ್ವೆ ವಿರುದ್ಧ ಗೆಲುವು: ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ನೂತನ ದಾಖಲೆ ಬರೆದ ರಾಹುಲ್ ಪಡೆ!

IND vs ZIM: India creates most consecutive ODI wins record by beating Zimbabwe for 13th time

ಸದ್ಯ ಜಿಂಬಾಬ್ವೆ ಪ್ರವಾಸದಲ್ಲಿ ನಿರತವಾಗಿರುವ ಟೀಮ್ ಇಂಡಿಯಾ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಸೆಣಸಾಟವನ್ನು ನಡೆಸುತ್ತಿದೆ. ಮೊದಲಿಗೆ ಉಭಯ ತಂಡಗಳ ನಡುವಿನ ಪ್ರಥಮ ಏಕದಿನ ಪಂದ್ಯ ಇಂದು ( ಆಗಸ್ಟ್ 18 ) ಜಿಂಬಾಬ್ವೆಯ ರಾಜಧಾನಿ ಹರಾರೆಯ ಹರಾರೆ ಸ್ಪೋರ್ಟ್ಸ್ ಕ್ಲಬ್ ಕ್ರೀಡಾಂಗಣದಲ್ಲಿ ನಡೆಯಿತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ಕೆಎಲ್ ರಾಹುಲ್ ಫೀಲ್ಡಿಂಗ್ ಆಯ್ದುಕೊಂಡು ಎದುರಾಳಿ ಜಿಂಬಾಬ್ವೆ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು.

ಮಹಾರಾಜ ಟ್ರೋಫಿ: ಪಡಿಕ್ಕಲ್ ಸುನಾಮಿ; ಮಯಾಂಕ್ ಪಡೆಗೆ ಸೋಲುಣಿಸಿದ ಗುಲ್ಬರ್ಗಾ!ಮಹಾರಾಜ ಟ್ರೋಫಿ: ಪಡಿಕ್ಕಲ್ ಸುನಾಮಿ; ಮಯಾಂಕ್ ಪಡೆಗೆ ಸೋಲುಣಿಸಿದ ಗುಲ್ಬರ್ಗಾ!

ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ್ದ ಜಿಂಬಾಬ್ವೆ 40.3 ಓವರ್‌ಗಳಲ್ಲಿ 189 ರನ್ ಕಲೆಹಾಕಿ ಆಲ್ಔಟ್ ಆಗಿ ತನ್ನ ಎದುರಾಳಿ ಟೀಂ ಇಂಡಿಯಾಗೆ ಗೆಲ್ಲಲು 190 ರನ್‌ಗಳ ಸಾಮಾನ್ಯ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ ಪರ ಆರಂಭಿಕ ಆಟಗಾರರಾದ ಶಿಖರ್ ಧವನ್ ಮತ್ತು ಶುಬ್‌ಮನ್ ಗಿಲ್ ಅಜೇಯ ಆಟವನ್ನಾಡಿದ್ದು ತಂಡ ಯಾವುದೇ ವಿಕೆಟ್ ನಷ್ಟವಿಲ್ಲದೇ ಗೆಲುವು ಸಾಧಿಸಿದೆ. 30.5 ಓವರ್‌ಗಳಲ್ಲಿ 192 ರನ್ ಕಲೆಹಾಕಿ ಗೆದ್ದು ಬೀಗಿದೆ.

ಚಾಹಲ್-ಧನಶ್ರೀ ದಾಂಪತ್ಯ ಜೀವನದಲ್ಲಿ ಬಿರುಕು?: ನನ್ನ ಹೊಸ ಜೀವನ ಶುರು ಎಂದ ಚಾಹಲ್!ಚಾಹಲ್-ಧನಶ್ರೀ ದಾಂಪತ್ಯ ಜೀವನದಲ್ಲಿ ಬಿರುಕು?: ನನ್ನ ಹೊಸ ಜೀವನ ಶುರು ಎಂದ ಚಾಹಲ್!

ಆರಂಭಿಕರಾಗಿ ಕಣಕ್ಕಿಳಿದ ಶಿಖರ್ ಧವನ್ 113 ಎಸೆತಗಳಲ್ಲಿ ಅಜೇಯ 81 ರನ್ ಕಲೆಹಾಕಿದರೆ, ಶುಬ್‌ಮನ್ ಗಿಲ್ 72 ಎಸೆತಗಳಲ್ಲಿ ಅಜೇಯ 82 ರನ್ ಬಾರಿಸಿದರು. ಈ ಮೂಲಕ ಕೆಎಲ್ ರಾಹುಲ್ ನಾಯಕತ್ವದಲ್ಲಿ ಟೀಮ್ ಇಂಡಿಯಾ ಇದೇ ಮೊದಲ ಬಾರಿಗೆ ಪಂದ್ಯವನ್ನು ಗೆದ್ದಿದೆ. ಹೀಗೆ ಕೆಎಲ್ ರಾಹುಲ್ ನಾಯಕತ್ವದಲ್ಲಿ ಮೊದಲ ಬಾರಿಗೆ ಟೀಮ್ ಇಂಡಿಯಾ ಅಂತರರಾಷ್ಟ್ರೀಯ ಪಂದ್ಯ ಜಯ ಸಾಧಿಸುವ ಮೂಲಕ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಐತಿಹಾಸಿಕ ದಾಖಲೆಯೊಂದನ್ನು ಬರೆದಿದೆ.

ನಿರ್ದಿಷ್ಟ ತಂಡವೊಂದರ ವಿರುದ್ಧ ಸತತ 13 ಪಂದ್ಯಗಳಲ್ಲಿ ಗೆಲುವು

ನಿರ್ದಿಷ್ಟ ತಂಡವೊಂದರ ವಿರುದ್ಧ ಸತತ 13 ಪಂದ್ಯಗಳಲ್ಲಿ ಗೆಲುವು

ಜಿಂಬಾಬ್ವೆ ವಿರುದ್ಧದ ಪ್ರಥಮ ಏಕದಿನ ಪಂದ್ಯದಲ್ಲಿ ಗೆದ್ದಿರುವ ಟೀಮ್ ಇಂಡಿಯಾ ತಂಡವೊಂದರ ವಿರುದ್ಧ ಸತತವಾಗಿ ಅತಿಹೆಚ್ಚು ಜಯ ಸಾಧಿಸಿದ ದಾಖಲೆ ಬರೆದಿದೆ. ಹೌದು, ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಜಿಂಬಾಬ್ವೆ ವಿರುದ್ಧ ಸತತ 13 ಏಕದಿನ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಗೆದ್ದಂತಾಗಿದೆ. ಈ ಹಿಂದೆ ಟೀಮ್ ಇಂಡಿಯಾ ಬಾಂಗ್ಲಾದೇಶವನ್ನು 12 ಬಾರಿ ಏಕದಿನ ಪಂದ್ಯದಲ್ಲಿ ಸೋಲಿಸಿ ಸತತವಾಗಿ ಹೆಚ್ಚು ಏಕದಿನ ಪಂದ್ಯಗಳಲ್ಲಿ ತಂಡವೊಂದನ್ನು ಸೋಲಿಸಿದ್ದ ದಾಖಲೆಯನ್ನು ಬಾಂಗ್ಲಾದೇಶದ ವಿರುದ್ಧ ಹೊಂದಿತ್ತು.

ಟೀಮ್ ಇಂಡಿಯಾ ಸತತವಾಗಿ ಗೆದ್ದದ್ದು ಈ ತಂಡಗಳ ವಿರುದ್ಧ

ಟೀಮ್ ಇಂಡಿಯಾ ಸತತವಾಗಿ ಗೆದ್ದದ್ದು ಈ ತಂಡಗಳ ವಿರುದ್ಧ

* 2013ರಿಂದ 2022ರವರೆಗೆ ಜಿಂಬಾಬ್ವೆ ವಿರುದ್ಧ ಸತತ 13 ಏಕದಿನ ಪಂದ್ಯಗಳಲ್ಲಿ ಗೆಲುವು

* 1988 ರಿಂದ 2004ರವರೆಗೆ ಬಾಂಗ್ಲಾದೇಶದ ವಿರುದ್ಧ ಸತತ 12 ಏಕದಿನ ಪಂದ್ಯಗಳಲ್ಲಿ ಗೆಲುವು

* 1986ರಿಂದ 1988ರವರೆಗೆ ನ್ಯೂಜಿಲೆಂಡ್ ವಿರುದ್ಧ ಸತತ 11 ಪಂದ್ಯಗಳಲ್ಲಿ ಗೆಲುವು

* 2002ರಿಂದ 2005ರವರೆಗೆ ಜಿಂಬಾಬ್ವೆ ವಿರುದ್ಧ ಸತತ 10 ಏಕದಿನ ಪಂದ್ಯಗಳಲ್ಲಿ ಗೆಲುವು

ಆಡುವ ಬಳಗ

ಆಡುವ ಬಳಗ

ಇನ್ನು ಈ ದಾಖಲೆ ನಿರ್ಮಾಣವಾದ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಆಡುವ ಬಳಗಗಳ ಮಾಹಿತಿ ಇಲ್ಲಿದೆ.

ಭಾರತ: ಶಿಖರ್ ಧವನ್, ಶುಭಮನ್ ಗಿಲ್, ಇಶಾನ್ ಕಿಶನ್, ಕೆಎಲ್ ರಾಹುಲ್(ನಾಯಕ), ದೀಪಕ್ ಹೂಡಾ, ಸಂಜು ಸ್ಯಾಮ್ಸನ್(ವಿಕೆಟ್ ಕೀಪರ್), ಅಕ್ಷರ್ ಪಟೇಲ್, ದೀಪಕ್ ಚಾಹರ್, ಕುಲದೀಪ್ ಯಾದವ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್

ಬೆಂಚ್‌: ರಾಹುಲ್ ತ್ರಿಪಾಠಿ, ಶಾರ್ದೂಲ್ ಠಾಕೂರ್, ಅವೇಶ್‌ ಖಾನ್, ಶಬಾಜ್ ನದೀಮ್, ರುತುರಾಜ್ ಗಾಯಕ್ವಾಡ್‌

ಜಿಂಬಾಬ್ವೆ: ತಡಿವಾನಾಶೆ ಮರುಮನಿ, ಇನೋಸೆಂಟ್ ಕೈಯಾ, ಸೀನ್ ವಿಲಿಯಮ್ಸ್, ವೆಸ್ಲಿ ಮಾಧೆವೆರೆ, ಸಿಕಂದರ್ ರಾಜಾ, ರೆಗಿಸ್ ಚಕಬ್ವಾ(ನಾಯಕ ಮತ್ತು ವಿಕೆಟ್ ಕೀಪರ್), ರಿಯಾನ್ ಬರ್ಲ್, ಲ್ಯೂಕ್ ಜೊಂಗ್ವೆ, ಬ್ರಾಡ್ ಇವಾನ್ಸ್, ವಿಕ್ಟರ್ ನ್ಯುಚಿ, ರಿಚರ್ಡ್ ನ್ಗರವ

ಬೆಂಚ್ : ತಕುಡ್ಜ್ವಾನಾಶೆ ಕೈಟಾನೊ, ಮಿಲ್ಟನ್ ಶುಂಬಾ, ಡೊನಾಲ್ಡ್ ತಿರಿಪಾನೊ, ಕ್ಲೈವ್ ಮದಂಡೆ, ಜಾನ್ ಮಸಾರಾ, ಟೋನಿ ಮುನ್ಯೊಂಗಾ, ತನಕಾ ಚಿವಂಗಾ

Story first published: Thursday, August 18, 2022, 21:29 [IST]
Other articles published on Aug 18, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X