ಭಾರತ vs ಜಿಂಬಾಬ್ವೆ: ಜಿಂಬಾಬ್ವೆ ಪ್ರವಾಸದಿಂದ ದ್ರಾವಿಡ್‌ಗೆ ಬ್ರೇಕ್; ಬದಲಿ ಕೋಚ್ ಆಯ್ಕೆ!

ಇದೇ ತಿಂಗಳ ಅಂತಿಮ ವಾರದಲ್ಲಿ ಪ್ರತಿಷ್ಠಿತ ಏಷ್ಯಾಕಪ್ ಟೂರ್ನಿ ಆರಂಭವಾಗಲಿದ್ದು, ಇದಕ್ಕೂ ಮುನ್ನ ಟೀಮ್ ಇಂಡಿಯಾ ಜಿಂಬಾಬ್ವೆ ಪ್ರವಾಸವನ್ನು ಕೈಗೊಳ್ಳಲಿದ್ದು ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಸೆಣಸಾಟವನ್ನು ನಡೆಸಲಿದೆ. ಇನ್ನು ಈ ಜಿಂಬಾಬ್ವೆ ಪ್ರವಾಸ ಕೈಗೊಳ್ಳುವ ಭಾರತ ತಂಡವನ್ನು ರೋಹಿತ್ ಶರ್ಮಾ ಅಲಭ್ಯತೆಯಲ್ಲಿ ಶಿಖರ್ ಧವನ್ ಮುನ್ನಡೆಸಲಿದ್ದಾರೆ ಎನ್ನಲಾಗಿತ್ತು. ಆದರೆ, ನಂತರ ಹೊರಬಿದ್ದ ಸುದ್ದಿಯಲ್ಲಿ ಕೆಎಲ್ ರಾಹುಲ್ ತಂಡವನ್ನು ನಾಯಕನಾಗಿ ಮುನ್ನಡೆಸಲಿದ್ದು ಶಿಖರ್ ಧವನ್ ಉಪನಾಯಕನಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂಬ ವಿಚಾರ ಖಚಿತವಾಗಿದ್ದು, ಸದ್ಯ ಇದೀಗ ಬಂದಿರುವ ಬ್ರೇಕಿಂಗ್ ಸುದ್ದಿಯ ಪ್ರಕಾರ ತಂಡಕ್ಕೆ ನೂತನ ಕೋಚ್ ನೇಮಕಗೊಂಡಿದ್ದಾರೆ ಎನ್ನಲಾಗುತ್ತಿದೆ.

ಮಹಾರಾಜ ಟ್ರೋಫಿ: ಪಡಿಕ್ಕಲ್ ಭರ್ಜರಿ ಕಮ್‌ಬ್ಯಾಕ್; ಹುಬ್ಬಳ್ಳಿ ಸೋಲಿಸಿ ಅಗ್ರಸ್ಥಾನಕ್ಕೇರಿದ ಗುಲ್ಬರ್ಗಾ ಮಿಸ್ಟಿಕ್ಸ್!ಮಹಾರಾಜ ಟ್ರೋಫಿ: ಪಡಿಕ್ಕಲ್ ಭರ್ಜರಿ ಕಮ್‌ಬ್ಯಾಕ್; ಹುಬ್ಬಳ್ಳಿ ಸೋಲಿಸಿ ಅಗ್ರಸ್ಥಾನಕ್ಕೇರಿದ ಗುಲ್ಬರ್ಗಾ ಮಿಸ್ಟಿಕ್ಸ್!

ಇನ್ನು ಈ ಸರಣಿಗಾಗಿ ಟೀಮ್ ಇಂಡಿಯಾ ಆಟಗಾರರಾದ ಕೆಎಲ್ ರಾಹುಲ್, ಶಿಖರ್ ಧವನ್, ಶಾರ್ದೂಲ್ ಠಾಕೂರ್, ಪ್ರಸಿದ್ಧ್ ಕೃಷ್ಣ ಹಾಗೂ ಮೊಹಮ್ಮದ್ ಸಿರಾಜ್ ರೀತಿಯ ಆಟಗಾರರು ಭಾರತದಿಂದ ನೇರವಾಗಿ ಜಿಂಬಾಬ್ವೆಯ ರಾಜಧಾನಿ ಹರಾರೆಗೆ ಆಗಸ್ಟ್ 14ರ ಭಾನುವಾರದಂದು ಹಾರಲಿದ್ದರೆ, ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯನ್ನಾಡಿ ಸದ್ಯ ಯುಎಸ್‌ಎಯಲ್ಲಿ ಬೀಡುಬಿಟ್ಟಿರುವ ಆಟಗಾರರಾದ ಇಶಾನ್ ಕಿಶನ್, ಸಂಜು ಸಾಮ್ಸನ್ ಹಾಗೂ ದೀಪಕ್ ಹೂಡಾ ಮುಂತಾದವರು ಯುಎಸ್‌ನಿಂದ ನೇರವಾಗಿ ಆಗಸ್ಟ್ 15ರಂದು ಹರಾರೆ ತಲುಪಲಿದ್ದಾರೆ.

ಈ ಕ್ರಿಕೆಟಿಗರು ಕ್ರಿಕೆಟ್‍ನಲ್ಲಿ ಮಿಂಚಿದ್ದು ಮಾತ್ರವಲ್ಲದೇ ಸಿನಿಮಾಗಳಲ್ಲಿ ಅಭಿನಯಿಸಿ ನಟರಾದದ್ದು ನಿಮಗೆ ಗೊತ್ತಾ?ಈ ಕ್ರಿಕೆಟಿಗರು ಕ್ರಿಕೆಟ್‍ನಲ್ಲಿ ಮಿಂಚಿದ್ದು ಮಾತ್ರವಲ್ಲದೇ ಸಿನಿಮಾಗಳಲ್ಲಿ ಅಭಿನಯಿಸಿ ನಟರಾದದ್ದು ನಿಮಗೆ ಗೊತ್ತಾ?

ಇನ್ನು ಈ ಸರಣಿಯಿಂದ ಏಷ್ಯಾಕಪ್ ಟೂರ್ನಿಯಲ್ಲಿ ಕಣಕ್ಕಿಳಿಯಲಿರುವ ಭಾರತ ತಂಡದ ಹಲವು ಆಟಗಾರರಿಗೆ ವಿಶ್ರಾಂತಿಯನ್ನು ನೀಡಲಾಗಿದ್ದು, ಆಟಗಾರರ ಜತೆ ಇದೀಗ ಕೋಚ್ ರಾಹುಲ್ ದ್ರಾವಿಡ್‌ಗೂ ವಿಶ್ರಾಂತಿ ನೀಡಲಾಗಿದೆ.

ರಾಹುಲ್‌ ದ್ರಾವಿಡ್‌ಗೆ ವಿಶ್ರಾಂತಿ

ರಾಹುಲ್‌ ದ್ರಾವಿಡ್‌ಗೆ ವಿಶ್ರಾಂತಿ

ರಾಹುಲ್ದ್ರಾವಿಡ್‌ ಈಗಷ್ಟೇ ಮನೆಗೆ ಹಿಂತಿರುಗಿದ್ದು, ಮೂರು ತಿಂಗಳ ಬಳಿಕ ನಂತರ ಮನೆಗೆ ಬಂದಿದ್ದಾರೆ. ರಾಹುಲ್ ದ್ರಾವಿಡ್ ಮೈದಾನಕ್ಕಿಳಿದು ಆಡದೇ ಇರಬಹುದು ಆದರೆ ಅವರಿಗೂ ಸಹ ವಿಶ್ರಾಂತಿಯ ಅಗತ್ಯವಿದೆ, ಹೀಗಾಗಿ ಜಿಂಬಾಬ್ವೆ ಪ್ರವಾಸದಿಂದ ಹೊರಗುಳಿದು ವಿಶ್ರಾಂತಿ ಪಡೆದ ನಂತರ ಅವರು ನೇರವಾಗಿ ದುಬೈಗೆ ಹಾರಲಿದ್ದಾರೆ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೋರ್ವರು ಇನ್‌ಸೈಡ್ ಸ್ಪೋರ್ಟ್ಸ್ ಕ್ರೀಡಾ ವೆಬ್‌ತಾಣಕ್ಕೆ ತಿಳಿಸಿದ್ದಾರೆ.

ಲಕ್ಷ್ಮಣ್ ಬದಲಿ ಕೋಚ್

ಲಕ್ಷ್ಮಣ್ ಬದಲಿ ಕೋಚ್

ಇನ್ನೂ ಮುಂದುವರೆದು ಮಾತನಾಡಿರುವ ಬಿಸಿಸಿಐನ ಹಿರಿಯ ಅಧಿಕಾರಿ ರಾಹುಲ್ ದ್ರಾವಿಡ್ ಅನುಪಸ್ಥಿತಿಯಲ್ಲಿ ವಿವಿಎಸ್ ಲಕ್ಷ್ಮಣ್ ಟೀಮ್ ಇಂಡಿಯಾವನ್ನು ಜಿಂಬಾಬ್ವೆ ಪ್ರವಾಸದಲ್ಲಿ ಕೋಚ್ ಆಗಿ ಮುನ್ನಡೆಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಹಾಗೂ ಜಿಂಬಾಬ್ವೆ ಸರಣಿ ಆಗಸ್ಟ್ 22ಕ್ಕೆ ಮುಕ್ತಾಯವಾಗಲಿದ್ದು, ರಾಹುಲ್ ದ್ರಾವಿಡ್ ಟೀಮ್ ಇಂಡಿಯಾ ಆಟಗಾರರ ಜತೆ ಆಗಸ್ಟ್ 23ಕ್ಕೆ ದುಬೈಗೆ ಹಾರಲಿದ್ದಾರೆ ಎಂದೂ ಸಹ ತಿಳಿಸಿದ್ದಾರೆ.

ಜಿಂಬಾಬ್ವೆ ಪ್ರವಾಸಕ್ಕೆ ಪ್ರಕಟವಾದ ಭಾರತ ತಂಡ

ಜಿಂಬಾಬ್ವೆ ಪ್ರವಾಸಕ್ಕೆ ಪ್ರಕಟವಾದ ಭಾರತ ತಂಡ

ಜಿಂಬಾಬ್ವೆ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಪ್ರಕಟವಾದ ಭಾರತ ತಂಡ ಹೀಗಿದೆ: ಕೆಎಲ್ ರಾಹುಲ್ (ನಾಯಕ) ಶಿಖರ್ ಧವನ್ (ಉಪನಾಯಕ), ರುತುರಾಜ್ ಗಾಯಕ್ವಾಡ್, ಸುಭುಮನ್ ಗಿಲ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ಇಶಾನ್ ಕಿಶನ್ (ವಿಕೆಟ್-ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್-ಕೀಪರ್), ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್, ಅವೇಶ್ ಖಾನ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್, ದೀಪಕ್ ಚಾಹರ್.

ಭಾರತ ಮತ್ತು ಜಿಂಬಾಬ್ವೆ ನಡುವೆ ಒಟ್ಟು ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದ್ದು, ಈ ಎಲ್ಲಾ ಪಂದ್ಯಗಳ ದಿನಾಂಕ, ಸಮಯ ಹಾಗೂ ಪಂದ್ಯ ನಡೆಯುವ ಸ್ಥಳದ ಮಾಹಿತಿ ಈ ಕೆಳಕಂಡಂತಿದೆ.

ಆಗಸ್ಟ್ 18- ಜಿಂಬಾಬ್ವೆ vs ಭಾರತ, 1ನೇ ಏಕದಿನ - ಹರಾರೆ ಸ್ಪೋರ್ಟ್ಸ್ ಕ್ಲಬ್, ಹರಾರೆ - ಮಧ್ಯಾಹ್ನ 12:45 ಕ್ಕೆ

ಆಗಸ್ಟ್ 20- ಜಿಂಬಾಬ್ವೆ vs ಭಾರತ, 2ನೇ ಏಕದಿನ - ಹರಾರೆ ಸ್ಪೋರ್ಟ್ಸ್ ಕ್ಲಬ್, ಹರಾರೆ - ಮಧ್ಯಾಹ್ನ 12:45 ಕ್ಕೆ

ಆಗಸ್ಟ್ 22- ಜಿಂಬಾಬ್ವೆ vs ಭಾರತ, 3ನೇ ಏಕದಿನ - ಹರಾರೆ ಸ್ಪೋರ್ಟ್ಸ್ ಕ್ಲಬ್, ಹರಾರೆ - ಮಧ್ಯಾಹ್ನ 12:45 ಕ್ಕೆ

For Quick Alerts
ALLOW NOTIFICATIONS
For Daily Alerts
Read more about: india zimbabwe vvs laxman
Story first published: Friday, August 12, 2022, 22:13 [IST]
Other articles published on Aug 12, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X