ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಲೀಸೆಸ್ಟರ್‌ಶೈರ್ ತಂಡವನ್ನು ಚಚ್ಚಿ ಹಾಕಿದ ದ್ರಾವಿಡ್ ಹುಡುಗರು

ಲೀಸೆಸ್ಟರ್‌ಶೈರ್ ತಂಡವನ್ನು ಚಚ್ಚಿ ಹಾಕಿದ ದ್ರಾವಿಡ್ ಹುಡುಗರು | Oneindia Kannada
india a scored 458 against Leicestershire in a practice match

ಲಂಡನ್, ಜೂನ್ 20: ಇಂಗ್ಲೆಂಡ್‌ನ ಬೌನ್ಸಿ ಪಿಚ್‌ಗಳ ಕುರಿತು ಅಳುಕುತ್ತಲೇ ಕಠಿಣ ಅಭ್ಯಾಸ ನಡೆಸಿರುವ ಭಾರತದ ಕ್ರಿಕೆಟಿಗರಿಗೆ ಮನೋಸ್ಥೈರ್ಯ ತುಂಬುವ ಕೆಲಸವನ್ನು ಹೊಸ ಪ್ರತಿಭೆಗಳು ಮಾಡುತ್ತಿವೆ!

ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತ 'ಎ' ತಂಡದ ಆಟಗಾರರು ಎರಡನೆಯ ಏಕದಿನ ಅಭ್ಯಾಸ ಪಂದ್ಯದಲ್ಲಿ ಲೀಸೆಸ್ಟರ್‌ಶೈರ್ ವಿರುದ್ಧ ಭರ್ಜರಿ ಜಯ ದಾಖಲಿಸಿದೆ.

ಮಂಗಳವಾರ ನಡೆದ ಪಂದ್ಯದಲ್ಲಿ ಅತ್ತ ಇಂಗ್ಲೆಂಡ್ ತಂಡ ಆಸ್ಟ್ರೇಲಿಯಾ ವಿರುದ್ಧ ದಾಖಲೆಯ ರನ್ ಪೇರಿಸಿದರೆ, ಇತ್ತ ರಾಹುಲ್ ದ್ರಾವಿಡ್ ಮಾರ್ಗದರ್ಶನದ 'ಎ' ತಂಡದ ಆಟಗಾರರು ಇಂಗ್ಲೆಂಡ್‌ನ ಕೌಂಟಿ ತಂಡದ ವಿರುದ್ಧ ಅದೇ ರೀತಿ ಆಕ್ರಮಣಕಾರಿ ಆಟ ಪ್ರದರ್ಶಿಸಿತು.

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ವಿಶ್ವದಾಖಲೆಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ವಿಶ್ವದಾಖಲೆ

ಆರಂಭಿಕ ಆಟಗಾರರಾದ ಪೃಥ್ವಿ ಶಾ 132 (90) ಮತ್ತು ಕನ್ನಡಿಗ ಮಯಂಕ್ ಅಗರ್ವಾಲ್ 151 (106) ಲೀಸೆಸ್ಟರ್ ಶೈರ್ ಬೌಲರ್‌ಗಳನ್ನು ಚೆಂಡಾಡಿದರು. ಇಬ್ಬರೂ ಮೊದಲ ವಿಕೆಟ್‌ಗೆ ಕೇವಲ 26 ಓವರ್‌ಗಳಲ್ಲಿ 221 ರನ್ ಸೇರಿಸಿದರು. 18 ಬೌಂಡರಿ ಮತ್ತು 5 ಭರ್ಜರಿ ಸಿಕ್ಸರ್ ಸಿಡಿಸಿದ ಮಯಂಕ್ ಅಗರ್ವಾಲ್ ಗಾಯಗೊಂಡು ನಿವೃತ್ತರಾದರು.

ಭಾರತ 50 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 458 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಇದರಲ್ಲಿ ಶುಭ್‌ಮನ್ ಗಿಲ್ (86) ಮತ್ತು ದೀಪಕ್ ಹೂಡಾ (ಅಜೇಯ 38) ಬಿರುಸಿನ ಬ್ಯಾಟಿಂಗ್‌ನ ಕಾಣಿಕೆಯೂ ಸೇರಿತ್ತು.

ಬೃಹತ್ಬ ರನ್‌ ಗುರಿ ಬೆನ್ನತ್ತಿದ ಲೀಸೆಸ್ಟರ್‌ಶೈರ್ ತಂಡ ಕೇವಲ 177 ರನ್‌ಗಳಿಗೆ ಎಲ್ಲ ವಿಕೆಟ್‌ಗಳನ್ನು ಕಳೆದುಕೊಂಡು 281 ರನ್‌ಗಳ ಭಾರಿ ಅಂತರದ ಸೋಲು ಅನುಭವಿಸಿತು.

ಭಾರತದ ವಿರುದ್ಧದ ಟಿ 20 ಸರಣಿಗೆ ಇಂಗ್ಲೆಂಡ್‌ ತಂಡದಲ್ಲಿ 'ಅಣ್ತಮ್ಮ' ಭಾರತದ ವಿರುದ್ಧದ ಟಿ 20 ಸರಣಿಗೆ ಇಂಗ್ಲೆಂಡ್‌ ತಂಡದಲ್ಲಿ 'ಅಣ್ತಮ್ಮ'

ಭಾರತದ ಪರ ದೀಪಕ್ ಚಾಹರ್ 3, ಪ್ರಸಿದ್ಧ್ ಕೃಷ್ಣ, ದೀಪಕ್ ಹೂಡಾ ಮತ್ತು ಅಕ್ಸರ್ ಪಟೇಲ್ ತಲಾ 2 ವಿಕೆಟ್ ಪಡೆದರು.

ಮೊದಲ ಅಭ್ಯಾಸ ಪಂದ್ಯದಲ್ಲಿ ಭಾರತ 'ಎ' ತಂಡವು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ವಿರುದ್ಧ 125 ರನ್‌ಗಳ ಗೆಲುವು ಪಡೆದಿತ್ತು.

ಜೂನ್ 22 ರಿಂದ ಭಾರತ 'ಎ', ವೆಸ್ಟ್‌ ಇಂಡೀಸ್ 'ಎ' ಮತ್ತು ಇಂಗ್ಲೆಂಡ್ ಲಯನ್ಸ್ ತಂಡಗಳ ನಡುವೆ ತ್ರಿಕೋನ ಏಕದಿನ ಸರಣಿ ಆರಂಭವಾಗಲಿದೆ.

ಇದರ ಬೆನ್ನಲ್ಲೇ ಭಾರತದ ಹಿರಿಯರ ತಂಡವು ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ.

ಸಂಕ್ಷಿಪ್ತ ಸ್ಕೋರ್
ಭಾರತ: 458/4 (50) ಪೃಥ್ವಿ ಶಾ 132, ಮಯಂಕ್ ಅಗರ್ವಾಲ್ (ಗಾಯಗೊಂಡು ನಿವೃತ್ತಿ) 151, ಶುಭ್‌ಮನ್ ಗಿಲ್ 86, ದೀಪಕ್ ಹೂಡಾ 38. ಅತೀಕ್ ಜಾವಿದ್ 91ಕ್ಕೆ2, ಹ್ಯಾರಿ ಫುನೆಲ್ 67ಕ್ಕೆ 1

ಲೀಸೆಸ್ಟರ್‌ಶೈರ್: 177/10 (40.4) ಟಾಮ್ ವೆಲ್ಸ್ 62, ಹ್ಯಾರಿ ಡಿಯರ್ಡನ್ 31, ಹ್ಯಾರಿ ಸ್ವಿಂಡೆಲ್ಸ್ 28. ದೀಪಕ್ ಚಾಹರ್ 24ಕ್ಕೆ3, ದೀಪಕ್ ಹೂಡಾ 9ಕ್ಕೆ 2, ಅಕ್ಸರ್ ಪಟೇಲ್ 18ಕ್ಕೆ2.

Story first published: Wednesday, June 20, 2018, 12:00 [IST]
Other articles published on Jun 20, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X