ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತದ ಬೌಲರ್‌ಗಳನ್ನು ಕಾಡಿದ ವಿಂಡೀಸ್ ಬಾಲಂಗೋಚಿಗಳು

india A vs west indies A 2nd unofficial test report

ಟಾಂಟಾನ್, ಜುಲೈ 11: ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದರೂ ಕೊನೆಯಲ್ಲಿ ಭಾರತ ಎ ತಂಡದ ಬೌಲರ್‌ಗಳನ್ನು ಕಾಡಿದ ವೆಸ್ಟ್ ಇಂಡೀಸ್ ಎ ತಂಡದ ಬ್ಯಾಟ್ಸ್‌ಮನ್‌ಗಳು ಗೌರವಾರ್ಹ ಮೊತ್ತ ಪೇರಿಸಿದ್ದಾರೆ.

ಇಂಗ್ಲೆಂಡ್‌ನ ಟಾಂಟಾನ್‌ನಲ್ಲಿ ನಡೆಯುತ್ತಿರುವ ಅನಧಿಕೃತ ಟೆಸ್ಟ್ ಸರಣಿಯ ಎರಡನೆಯ ಪಂದ್ಯದಲ್ಲಿ ನಾಯಕ ಶಮರ್ ಬ್ರೂಕ್ಸ್ ಅವರ ದಿಟ್ಟ ಶತಕದ ಹೋರಾಟದ ನೆರವಿನಿಂದ ವೆಸ್ಟ್ ಇಂಡೀಸ್ ಮೊದಲ ದಿನದ ಅಂತ್ಯಕ್ಕೆ 9 ವಿಕೆಟ್ ನಷ್ಟಕ್ಕೆ 301 ರನ್ ಗಳಿಸಿದೆ.

ಭಾರತ ವನಿತಾ ಕ್ರಿಕೆಟ್ ತಂಡದ ಕೋಚ್ ಸ್ಥಾನದಿಂದ ಕೆಳಗಿಳಿದ ಅರೋತೆಭಾರತ ವನಿತಾ ಕ್ರಿಕೆಟ್ ತಂಡದ ಕೋಚ್ ಸ್ಥಾನದಿಂದ ಕೆಳಗಿಳಿದ ಅರೋತೆ

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ವೆಸ್ಟ್ ಇಂಡೀಸ್ ಎ ತಂಡಕ್ಕೆ ಉತ್ತಮ ಆರಂಭ ದೊರಕಿತು. ಮೊದಲ ವಿಕೆಟ್‌ಗೆ ಜಾನ್ ಕ್ಯಾಂಪ್‌ಬೆಲ್ ಮತ್ತು ಡೆವೊನ್ ಥಾಮಸ್ 49 ರನ್ ಜತೆಯಾಟ ನೀಡಿದರು.

ಶತಕದ ಗಡಿ ದಾಟಿದ ಬಳಿಕ ವಿಂಡೀಸ್ ತಂಡ ನಿರಂತರವಾಗಿ ವಿಕೆಟ್ ಕಳೆದುಕೊಳ್ಳತೊಡಗಿತು. ನಾಯಕ ಶಮರ್ ಬ್ರೂಕ್ಸ್ ಏಕಾಂಗಿಯಾಗಿ ರನ್ ಪೇರಿಸತೊಡಗಿದರು.

india A vs west indies A 2nd unofficial test report

ಆದರೆ, ಇನ್ನೊಂದೆಡೆ ರನ್ ಗಳಿಸದಿದ್ದರೂ ಬಾಲಂಗೋಚಿಗಳು ವಿಕೆಟ್ ಬೀಳದಂತೆ ನಿಧಾನಗತಿಯಲ್ಲಿ ಆಡಿ ನಾಯಕನಿಗೆ ಬೆಂಬಲ ನೀಡಿದರು. ವಿಶಾಲ್ ಸಿಂಗ್ ಗಳಿಸಿದ್ದ 8 ರನ್ ಮಾತ್ರವಾದರೂ 63 ಎಸೆತಗಳನ್ನು ಎದುರಿಸಿದರು.

ಏಕದಿನದಲ್ಲಿ ಕೊಹ್ಲಿ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗಿಳಿಯಲಿ: ಗಂಗೂಲಿ ಏಕದಿನದಲ್ಲಿ ಕೊಹ್ಲಿ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗಿಳಿಯಲಿ: ಗಂಗೂಲಿ

11 ರನ್ ಗಳಿಸಿದ ರೇಮನ್ ರೀಫರ್ 45 ಎಸೆತಗಳನ್ನು ಎದುರಿಸಿದ್ದರೆ, ಕೊನೆಯಲ್ಲಿ ಶೆರ್ಮನ್ ಲೆವಿಸ್ 65 ಎಸೆತಗಳಲ್ಲಿ 18 ರನ್ ಗಳಿಸಿ ಒಂಬತ್ತನೇ ವಿಕೆಟ್‌ಗೆ 70 ರನ್‌ಗಳ ಜತೆಯಾಟ ನೀಡಿ, ಭಾರತದ ಬೌಲರ್‌ಗಳನ್ನು ಗೋಳುಹೋಯ್ದುಕೊಂಡರು.

ದಿನದ ಕೊನೆಯಲ್ಲಿ ಶೆರ್ಮನ್ ಲೆವಿಸ್ ವಿಕೆಟ್ ಕೀಳುವಲ್ಲಿ ಭಾರತದ ಬೌಲರ್ ಮೊಹಮದ್ ಸಿರಾಜ್ ಯಶಸ್ವಿಯಾದರು.

ಭಾರತದ ಮೊಹಮ್ಮದ್ ಸಿರಾಜ್ ಮತ್ತು ಶಹಬಾಜ್ ನದೀಮ್ ತಲಾ 3 ವಿಕೆಟ್ ಪಡೆದುಕೊಂಡರು.

ಕಳೆದ ಪಂದ್ಯದ ಎರಡನೆಯ ಇನ್ನಿಂಗ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಪೃಥ್ವಿ ಶಾ ಮತ್ತು ಮಯಂಕ್ ಅಗರ್ವಾಲ್ , ವಿಕೆಟ್ ಕೀಪರ್ ಶ್ರೀಕರ್ ಭರತ್, ಬೌಲರ್‌ಗಳಾದ ಅಂಕಿತ್ ರಜಪೂತ್ ಮತ್ತು ನವದೀಪ್ ಸೈನಿ ಅವರಿಗೆ ವಿಶ್ರಾಂತಿ ನೀಡಲಾಗಿದೆ.

ಅವರ ಬದಲು ಅಂಕಿತ್ ಬಾವ್ನೆ, ಅಭಿಮನ್ಯು ಈಶ್ವರನ್, ಮೊಹಮದ್ ಸಿರಾಜ್ ಮತ್ತು ರಜನೀಶ್ ಗುರ್ಬಾನಿ ಅವರಿಗೆ ಅವಕಾಶ ನೀಡಲಾಗಿದೆ.

ಸಂಕ್ಷಿಪ್ತ ಸ್ಕೋರ್
ವೆಸ್ಟ್ ಇಂಡೀಸ್: 301/9 (90 ಓವರ್) ಶಮರ್ ಬ್ರೂಕ್ಸ್ 121*, ಜಾನ್ ಕ್ಯಾಂಪ್‌ಬೆಲ್ 41, ಡೆವೊನ್ ಥಾಮಸ್ 27, ಮೊಹಮದ್ ಸಿರಾಜ್ 67/3, ಶಹಬಾಜ್ ನದೀಮ್ 42/3

Story first published: Wednesday, July 11, 2018, 10:36 [IST]
Other articles published on Jul 11, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X