ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಫಾರ್ಮ್‌ಗೆ ಮರಳಿದ ರೋಹಿತ್ ಶರ್ಮಾ, ಫೈನಲ್‌ಗೆ ಭಾರತ

By Manjunatha
India beats Bangladesh and enters final

ಕೊಲಂಬೊ, ಮಾರ್ಚ್ 15: ಕಳಪೆ ಫಾರ್ಮ್‌ನಲ್ಲಿದ್ದ ರೋಹಿತ್ ಶರ್ಮಾ ಅವರು ನಿನ್ನೆ ನಡೆದ ಬಾಂಗ್ಲಾದೇಶ ವಿರುದ್ಧ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಲಯಕ್ಕೆ ಮರಳಿದುದಲ್ಲದೆ ಪಂದ್ಯದಲ್ಲಿ ಭಾರತ ಜಯಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಶ್ರೀಲಂಕಾದ ಕೊಲಂಬೊದಲ್ಲಿ ನಡೆಯುತ್ತಿರುವ ನಿದಹಾಸ್ ಟೂರ್ನಿಯಲ್ಲಿ ಬಾಂಗ್ಲಾದೇಶ ತಂಡವನ್ನು 17 ರನ್‌ಗಳಿಂದ ಸೋಲಿಸಿದ ಭಾರತ ಟೂರ್ನಿಯ ಫೈನಲ್ ಪ್ರವೇಶಿಸಿತು.

ಸ್ಕೋರ್ ಕಾರ್ಡ್

ರೋಹಿತ್ ಶರ್ಮಾ, ಸುರೇಶ್ ರೈನಾ ಅವರ ಅತ್ಯುತ್ತಮ ಬ್ಯಾಟಿಂಗ್ ನಿಂದ ಭಾರತವು 20 ಓವರ್‌ನಲ್ಲಿ 3 ವಿಕೆಟ್ ಕಳೆದುಕೊಂಡು 176 ರನ್ ಗಳಿಸಿರು. ನಂತರ ವಾಷಿಂಗ್ಟನ್ ಸುಂದರ್ ಅವರ ಅತ್ಯುತ್ತಮ ಬೌಲಿಂಗ್ ನೆರವಿನಿಂದ ಭಾರತ ತಂಡ ಬಾಂಗ್ಲಾದೇಶವನ್ನು ಸುಲಭವಾಗಿ ಸೋಲಿಸಿ ಬೀಗಿತು.

ಟಿ20 : ಬಾಂಗ್ಲಾ ಮಣಿಸಿ, ಫೈನಲಿಗೆ ಲಗ್ಗೆ ಇಟ್ಟ ಭಾರತ ಟಿ20 : ಬಾಂಗ್ಲಾ ಮಣಿಸಿ, ಫೈನಲಿಗೆ ಲಗ್ಗೆ ಇಟ್ಟ ಭಾರತ

5 ಬೌಂಡರಿ 5 ಸಿಕ್ಸರ್

5 ಬೌಂಡರಿ 5 ಸಿಕ್ಸರ್

ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಬಾಂಗ್ಲಾದೇಶ, ರೋಹಿತ್ ಅವರ ಬಿರುಗಾಳಿಗೆ ಸಿಕ್ಕಿ ತರಗೆಲೆಯಾಯಿತು. 61 ಎಸೆತ ಎದುರಿಸಿದ ರೋಹಿತ್ ಶರ್ಮಾ 5 ಬೌಂಡರಿ ಮತ್ತು 5 ಸಿಕ್ಸರ್ ಸೇರಿ 89 ರನ್ ಗಳಿಸಿದರು. ಅತ್ಯುತ್ತಮವಾಗಿ ಆಡುತ್ತಿದ್ದ ಅವರು ಶತಕದಿಂದ 11 ರನ್ ದೂರದಲ್ಲಿದ್ದಾಗ ರನ್ ಔಟ್ ಆಗಿ ನಿರಾಸೆ ಹೊಂದಿದರು.

30 ಎಸೆತಕ್ಕೆ 47 ರನ್

30 ಎಸೆತಕ್ಕೆ 47 ರನ್

ಮತ್ತೊಬ್ಬ ಆರಂಭಿಕ ಬ್ಯಾಟ್ಸ್‌ಮನ್‌ ಶಿಖರ್ ಧವನ್ ತಮ್ಮ ಎಂದಿನ ಲಯದಲ್ಲಿ ಆಡಿ 27 ಎಸೆತದಲ್ಲಿ 35 ರನ್ ಗಳಿಸಿ ಔಟಡಾದರು ಅವರ ಖಾತೆಯಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್ ಇತ್ತು. ಈ ಸರಣಿಗೆ ಮತ್ತೆ ಟೀಂ ಇಂಡಿಯಾ ತಂಡದಲ್ಲಿ ಸ್ಥಾನ ಪಡೆದಿರುವ ಸುರೇಶ್ ರೈನಾ ಅವರು ಅಬ್ಬರದ ಆಟವಾಡಿ 30 ಎಸೆತಕ್ಕೆ 47 ರನ್ ಗಳಿಸಿದರು ಅವರು 5 ಬೌಂಡರಿ ಮತ್ತು 2 ಸಿಕ್ಸರ್ ಭಾರಿಸಿದರು.

3 ವಿಕೆಟ್ ಪಡೆದ ಹೊಸ ಬೌಲರ್

3 ವಿಕೆಟ್ ಪಡೆದ ಹೊಸ ಬೌಲರ್

ನಂತರ ಬಾಂಗ್ಲಾದೇಶ ಇನ್ನಿಂಗ್ಸ್‌ನ ಬೆನ್ನು ಮುರಿದಿದ್ದು ಹೊಸ ಬೌಲರ್ ವಾಷಿಂಗ್ಟನ್ ಸುಂದರ್, ಅವರು ನಾಲ್ಕು ಓವರ್‌ನಲ್ಲಿ 22 ರನ್ ನೀಡಿ ಪ್ರಮುಖ 3 ವಿಕೆಟ್ ಕಬಳಿಸಿದರು. ಉಳಿದಂತೆ ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್, ಯಜುವೇಂದ್ರ ಚಾಹಲ್ ತಲಾ ಒಂದು ವಿಕೆಟ್ ಗಳಿಸಿದರು.

ವ್ಯರ್ಥವಾದ ರಹೀಮ್ ಹೋರಾಟ

ವ್ಯರ್ಥವಾದ ರಹೀಮ್ ಹೋರಾಟ

ಬಾಂಗ್ಲಾ ಪರ ಕೊನೆಯ ವರೆಗೂ ಗೆಲುವಿಗಾಗಿ ಹೋರಾಟ ನಡೆಸಿದ ಮುಫ್ತಿಕೀರ್ ರಹೀಮ್ ಅವರು 55 ಎಸೆತಗಳಲ್ಲಿ 72 ರನ್ ಸಿಡಿಸಿ ನಾಟ್‌ಔಟ್ ಆಗಿ ಉಳಿದರು. ಈ ಪಂದ್ಯ ಜಯಿಸುವ ಮೂಲಕ ಭಾರತ ಫೈನಲ್ ಪ್ರವೇಶಿಸಿದ್ದು, ನಾಳೆ ನಡೆಯುವ ಬಾಂಗ್ಲಾದೇಶ ಮತ್ತು ಶ್ರೀಲಂಕಾ ಪಂದ್ಯದಲ್ಲಿ ವಿಜೇತವಾಗುವ ತಂಡ ಫೈನಲ್‌ನಲ್ಲಿ ಭಾರತದ ವಿರುದ್ಧ ಆಡಲಿದೆ.

Story first published: Thursday, March 15, 2018, 11:24 [IST]
Other articles published on Mar 15, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X