ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದ್ರಾವಿಡ್ ಮಾರ್ಗದರ್ಶನದಲ್ಲಿ ಕಿರಿಯರಿಗೆ ಏಷ್ಯಾಕಪ್

By Mahesh

ಕೊಲಂಬೋ, ಡಿಸೆಂಬರ್ 24 :ರಾಹುಲ್ ದ್ರಾವಿಡ್ ಮಾರ್ಗದರ್ಶನದ 19 ವಯೋಮಿತಿ ಭಾರತ ತಂಡ ಕಿರಿಯರ ಏಷ್ಯಾಕಪ್ ಏಕದಿನ ಕ್ರಿಕೆಟ್ ಟೂರ್ನಿ ಗೆದ್ದುಕೊಂಡಿದೆ. ಇದು ಭಾರತಕ್ಕೆ ಹ್ಯಾಟ್ರಿಕ್ ಪ್ರಶಸ್ತಿಯಾಗಿದೆ.
ಶುಕ್ರವಾರ ನಡೆದ 3ನೇ ಆವೃತ್ತಿಯ ಟೂರ್ನಿಯ ಫೈನಲ್​ನಲ್ಲಿ ನಾಯಕ ಅಭಿಷೇಕ್ ಶರ್ಮ(37ಕ್ಕೆ 4) ಮಾಂತ್ರಿಕ ಸ್ಪಿನ್ ದಾಳಿಯ ನೆರವಿನಿಂದ ಭಾರತ 34 ರನ್​ಗಳಿಂದ ಆತಿಥೇಯ ಶ್ರೀಲಂಕಾವನ್ನು ಮಣಿಸಿ ಪ್ರಶಸ್ತಿ ಜಯಿಸಿತು. ಮೊದಲ ಬಾರಿ ಫೈನಲ್ ಪ್ರವೇಶಿಸಿದ ಸಾಧನೆ ಮಾಡಿದ್ದ ಲಂಕಾ ರನ್ನರ್​ ಅಪ್​ಗೆ ತೃಪ್ತಿಪಡಬೇಕಾಯಿತು.

ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಭಾರತ ಹಿಮಾಂಶು ರಾಣಾ(71 ರನ್, 79 ಎಸೆತ, 6 ಬೌಂಡರಿ, 1 ಸಿಕ್ಸರ್) ಮತ್ತು ಶುಭ್​ವುನ್ ಗಿಲ್(70 ರನ್, 92 ಎಸೆತ, 4 ಬೌಂಡರಿ) ಆಕರ್ಷಕ ಅರ್ಧಶತಕದಾಟದ ನೆರವಿನಿಂದ 8 ವಿಕೆಟ್​ಗೆ 273ರನ್​ಗಳ ಸ್ಪರ್ಧಾತ್ಮಕ ಮೊತ್ತ ದಾಖಲಿಸಿತು. ಈ ಸವಾಲು ಬೆನ್ನಟ್ಟಿದ ಲಂಕಾ ತಂಡ ಅಭಿಷೇಕ್ ಶರ್ಮ ನಿರ್ಣಾಯಕ ಅವಧಿಯಲ್ಲಿ ತೋರಿದ ಮಾರಕ ಸ್ಪಿನ್ ದಾಳಿಯ ಎದುರಿಗೆ 48.4 ಓವರ್​ಗಳಲ್ಲಿ 239ರನ್​ಗೆ ಆಲೌಟ್ ಆಗಿ ನಿರಾಸೆ ಕಂಡಿತು.[ಆಸ್ಟ್ರೇಲಿಯಾದ ವಾರ್ಷಿಕ ಟೆಸ್ಟ್ ತಂಡಕ್ಕೆ ಕೊಹ್ಲಿ ನಾಯಕ!]

India down Sri Lanka to win Under-19 Asia Cup title

ಲಂಕಾಗೆ ಅಭಿಷೇಕ್ ಕಡಿವಾಣ: ಭಾರತದ ಆರಂಭಿಕ ಬೌಲಿಂಗ್ ತೀರಾ ದುಬಾರಿಯಾಗಿದ್ದರೂ ಆರಂಭಿಕ ವಿಶ್ವ ಚತುರಂಗರನ್ನು(13) ತಂಡದ ಮೊತ್ತ 27 ಆಗಿದ್ದಾಗ ವೇಗಿ ಯಶ್ ಠಾಕೂರ್ ಪೆವಿಲಿಯನ್​ಗಟ್ಟುವಲ್ಲಿ ಯಶಸ್ವಿಯಾದರು. ಬಳಿಕ ಫೀಲ್ಡಿಂಗ್​ನಲ್ಲಿ ಹಲವು ಕ್ಯಾಚ್​ಗಳ ಜೀವದಾನದ ಲಾಭ ಪಡೆದ ಲಂಕಾ ನಿರಾಳವಾಗಿ ತಂಡದ ಮೊತ್ತ 100ರ ಗಡಿ ದಾಟಿಸಿತು. ಈ ಬಳಿಕ ಅಭಿಷೇಕ್ ಮತ್ತು ಲೆಗ್ ಸ್ಪಿನ್ನರ್ ರಾಹುಲ್ ಚಾಹರ್(22ಕ್ಕೆ 3) ಜಂಟಿ ದಾಳಿ ನಡೆಸಿ ಲಂಕಾಗೆ ಹಂತ ಹಂತವಾಗಿ ಆಘಾತ ನೀಡಿದರು. ಹಸಿತಾ ಬೊಯೊಗೊಡ(37) ಆರಂಭಿಕ ರೆವೆನ್ ಕೆಲ್ಲಿ(62) ಜತೆ ತಂಡದ ಮೊತ್ತ 105ಕ್ಕೇರಿಸಿ ಅಭಿಷೇಕ್ ಓವರ್​ನಲ್ಲಿ ನಿರ್ಗಮಿಸಿದರು. ಇನ್ನೊಂದೆಡೆ ಅರ್ಧಶತಕ ಬಾರಿಸಿ ಅಪಾಯಕಾರಿಯಾಗುವ ಸೂಚನೆ ನೀಡುತ್ತಿದ್ದ ಕಮಿಂಧು ಮೆಂಡಿಸ್(53) ತಂಡದ ಮೊತ್ತ 6 ವಿಕೆಟ್​ಗೆ 211 ಆಗಿದ್ದಾಗ ಅಭಿಷೇಕ್ ಓವರ್​ನಲ್ಲಿ ರಾಣಾ ಹಿಡಿದ ಕ್ಯಾಚ್​ಗೆ ಔಟಾಗುತ್ತಿದ್ದಂತೆ ಲಂಕಾ ಸೋಲು ಖಚಿತವಾಯಿತು.[ಮೊಹಮ್ಮದ್ ಶಮಿ ಗಾಯಾಳು, ಇಂಗ್ಲೆಂಡ್ ಏಕದಿನ, ಟಿ20ಗೆ ಇಲ್ಲ]

ರಾಣಾ-ಶುಭಂ ಭರ್ಜರಿ ಆರಂಭ: ಮೊದಲು ಬ್ಯಾಟಿಂಗ್ ಮಾಡಿದ ಭಾರತ ಎಚ್ಚರಿಕೆಯ ಬ್ಯಾಟಿಂಗ್ ನಡೆಸಿತು. ಆರಂಭಿಕ ಬ್ಯಾಟ್ಸ್​ಮನ್ ಪೃಥ್ವಿ ಶಾ(39) ಹಾಗೂ ಹಿಮಾಂಶು ರಾಣಾ (71 ರನ್, 79 ಎಸೆತ, 6 ಬೌಂಡರಿ, 1 ಸಿಕ್ಸರ್) ಮೊದಲ ವಿಕೆಟ್​ಗೆ 11.2 ಓವರ್​ಗಳಲ್ಲಿ 67 ರನ್​ಗಳ ಜತೆಯಾಟವಾಡಿ ಉತ್ತಮ ಆರಂಭ ಒದಗಿಸಿದರು. ಆದರೆ ಎಡಗೈ ಸ್ಪಿನ್ನರ್ ಜಯವಿಕ್ರಮ ಓವರ್​ನಲ್ಲಿ ಸ್ಲಾಗ್ ಸ್ವೀಪ್ ಮಾಡಲೆತ್ನಿಸಿದ ಪೃಥ್ವಿ ಕ್ಯಾಚ್ ನೀಡಿ ನಿರ್ಗಮಿಸಿದರು. ನಂತರ ಹಿಮಾಂಶುಗೆ ಜತೆಯಾದ ಶುಭ್​ವುನ್ ಗಿಲ್(70 ರನ್, 92 ಎಸೆತ, 4 ಬೌಂಡರಿ) ಬಿರುಸಿನ ಆಟವಾಡಿ ಮೊತ್ತ ಹಿಗ್ಗಿಸಿದರು.

ಸ್ಲಾಗ್ ಓವರ್​ನಲ್ಲಿ ಕುಸಿತ: ನಾಯಕ ಅಭಿಷೇಕ್ ಶರ್ಮ(29) ತಂಡದ ಮೊತ್ತವನ್ನು 200 ಗಡಿ ದಾಟಿಸಿದರೂ ರನ್ಸಿಕ ಓವರ್​ನಲ್ಲಿ ಔಟಾದರು. ಒಂದು ಹಂತದಲ್ಲಿ 39.4 ಓವರ್​ಗಳಲ್ಲಿ 2 ವಿಕೆಟ್​ಗೆ 203ರನ್ ಗಳಿಸಿ ಬೃಹತ್ ಮೊತ್ತದ ಹಾದಿಯಲ್ಲಿದ್ದ ಭಾರತ ಸ್ಲಾಗ್ ಓವರ್​ನಲ್ಲಿ ನೀರಸವಾಗಿ ಆಡಿತು. ಶತಕದ ನಿರೀಕ್ಷೆಯಲ್ಲಿದ್ದ ಶುಭ್​ವುನ್ ಔಟಾಗಿದ್ದು ಪೆಟ್ಟು ನೀಡಿತು. ಮಧ್ಯಮ ಕ್ರಮಾಂಕದಲ್ಲಿ ಸಲ್ಮಾನ್ ಖಾನ್(26), ಬಾಲಂಗೋಚಿ ಕಮಲೇಶ್ ನಾಗರ್​ಕೋಟಿ(23) ಮಾತ್ರವೇ ಅಲ್ಪ ರನ್ ಗಳಿಸಿದರು.[ಧೋನಿ ಹೆಸರು ಹೇಳದ ಅಶ್ವಿನ್ ವಿರುದ್ಧ ಫ್ಯಾನ್ಸ್ ಗರಂ]

ಭಾರತ ಸತತ ಮೂರನೇ ಬಾರಿ ಏಷ್ಯಾಕಪ್​ನಲ್ಲಿ ಪ್ರಶಸ್ತಿ ಜಯಿಸಿತು. 2012ರ ಮಲೇಷ್ಯಾದಲ್ಲಿ ನಡೆದ ಮೊದಲ ಆವೃತ್ತಿಯಲ್ಲಿ ಪಾಕ್ ಜತೆ ಪ್ರಶಸ್ತಿ ಹಂಚಿಕೊಂಡರೆ, 2013-14ರ ಯುಎಇನಲ್ಲಿ ನಡೆದ ಟೂರ್ನಿಯಲ್ಲಿ ಪಾಕಿಸ್ತಾನವನ್ನೇ ಮಣಿಸಿ ಚಾಂಪಿಯನ್ ಆಗಿತ್ತು.

-ಏಜೆನ್ಸೀಸ್

Story first published: Thursday, August 30, 2018, 16:01 [IST]
Other articles published on Aug 30, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X