ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಚೇಸಿಂಗ್ ಕಿಂಗ್ ಕೊಹ್ಲಿಯಿಂದ ಮತ್ತೊಂದು ಶತಕ, ಭಾರತಕ್ಕೆ ಜಯ

By Manjunatha
India mark 6 wickets win over South Africa

ಡರ್ಬನ್, ಫೆಬ್ರವರಿ 02: ದಕ್ಷಿಣ ಆಫ್ರಿಕಾ ವಿರುದ್ಧ ಡರ್ಬನ್‌ನ ಕಿಂಗ್ಸ್‌ಮೇಡ್ ಕ್ರೀಡಾಂಗಣದಲ್ಲಿ ನಡೆದ ಮೊದಲ ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಅವರ ಶತಕದಿದಾಗಿ ಭಾರತ ಭರ್ಜರಿ ವಿಜಯ ಸಾಧಿಸಿದೆ. ಚೇಸಿಂಗ್‌ನಲ್ಲಿ ಕೊಹ್ಲಿ ಗಳಿಸಿದ 20ನೇ ಶತಕ ಇದು. ಚೇಸಿಂಗ್‌ನಲ್ಲಿ ಕೊಹ್ಲಿ ಸರಾಸರಿ 94.04.

ನಾಯಕ ವಿರಾಟ್‌ ಕೊಹ್ಲಿ ಅವರ ಜವಾಬ್ದಾರಿಯುತ ಶತಕದ ನೆರವಿನಿಂದ ದಕ್ಷಿಣ ಆಫ್ರಿಕಾ ಒಡ್ಡಿದ್ದ 269 ರನ್‌ಗಳ ಸವಾಲನ್ನು ಭಾರತ 6 ವಿಕೆಟ್ ಉಳಿಸಿಕೊಂಡು 45.3 ಓವರ್‌ಗಳಲ್ಲೇ ಅನಾಯಾಸವಾಗಿ ಪೂರೈಸಿದೆ.

ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ಆರಂಭಿಕ ಕುಸಿತ ಅನುಭವಿಸಿತಾದರೂ ಆ ನಂತರ ನಾಯಕ ಡುಪ್ಲಿಸಿಸ್ ಅವರ ಭರ್ಜರಿ ಶತಕ (120) ದಿಂದಾಗಿ 268 ರನ್‌ಗಳನ್ನು ದಾಖಲಿಸಿತು. ವೇಗಕ್ಕೆ ನೆರವು ನೀಡುವ ಪಿಚ್‌ನಲ್ಲಿ ಇದೊಂದು ಉತ್ತಮ ಗುರಿ ಎಂದೇ ಹೇಳಲಾಗಿತ್ತು. ಡುಪ್ಲಿಸ್ ಹೊರತು ಪಡಿಸಿ ಇನ್ನಾವ ಬ್ಯಾಟ್ಸ್‌ಮನ್‌ಗಳೂ ಅರ್ಧಶತಕ ಕೂಡ ಗಳಿಸಲಿಲ್ಲ.

ಸ್ಕೋರ್ ಕಾರ್ಡ್

ಭಾರತ ಬೌಲರ್‌ಗಳು ತಮ್ಮ ಅತ್ಯುತ್ತಮ ಪ್ರದರ್ಶವನ್ನು ಮುಂದುವರೆಸಿ ಅತಿಥೇಯರನ್ನು ಕಾಡಿದರು. ಅತ್ಯುತ್ತಮ ಬೌಲಿಂಗ್ ದಾಳಿ ನಡೆಸಿದ ಕಲದೀಪ್ ಯಾದವ್ 10 ಓವರ್‌ಗೆ 34 ರನ್ ನೀಡಿ ಪ್ರಮುಖ 3 ವಿಕೆಟ್ ಕಬಳಿಸಿದರು. ಚಾಹಲ್ 2 ವಿಕೆಟ್, ಭುವನೇಶ್ವರ್ ಕುಮಾರ್ ಮತ್ತು ಬುಮ್ರಾ ತಲಾ 1 ವಿಕೆಟ್ ಗಳಿಸಿದರು.

ಗುರಿ ಬೆನ್ನತ್ತಿದ ಭಾರತದ ಬ್ಯಾಟ್ಸ್‌ಮನ್‌ಗಳು ಉತ್ತಮ ಆರಂಭ ಕಂಡುಕೊಂಡರಾದರೂ ಅದನ್ನು ಮುಂದುವರೆಸಲಾಗಲಿಲ್ಲ. ರೋಹಿತ್ ಶರ್ಮಾ 20 ರನ್‌ಗೆ ಮಾರ್ನೆ ಮಾರ್ಕಲ್ ಬೌಲಿಂಗ್‌ನಲ್ಲಿ ಕೀಪರ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಉತ್ತಮವಾಗಿ ಆಡುತ್ತಿದ್ದ ಶಿಖರ್ ಧವನ್ (35) ಇಲ್ಲದ ರನ್ ಕದಿಯಲು ಹೋಗಿ ರನ್‌ಔಟ್ ಆದರು.

ಆಗ ಜೊತೆಯಾದ ವಿರಾಟ್ ಕೊಹ್ಲಿ ಮತ್ತು ಅಜಿಂಕ್ಯಾ ರಹಾನೆ ತಾಳ್ಮೆಯ ಅತ್ಯುತ್ತಮ ಜೊತೆಯಾಟ ಆಡಿ. ಪಂದ್ಯವನ್ನು ದಕ್ಷಿಣ ಆಫ್ರಿಕ ಕೈಯಿಂದ ಕಸಿದುಕೊಂಡರು. ನಾಯಕನ ಸ್ಥಾನಕ್ಕೆ ತಕ್ಕ ಆಟವಾಡಿದ ವಿರಾಟ್ ಕೊಹ್ಲಿ 119 ಬಾಲುಗಳಲ್ಲಿ 112 ರನ್ ಗಳಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 10 ಬೌಂಡರಿಗಳಿದ್ದರು. ಯಾವುದೇ ಉದ್ವೇಗಕ್ಕೆ ಒಳಗಾಗದೆ ಜವಾಬ್ದಾರಿಯುತವಾಗಿ ಆಡಿದ ಕೊಹ್ಲಿ ಅತ್ಯುತ್ತಮವಾಗಿ ಇನ್ನಿಂಗ್ಸ್ ಕಟ್ಟಿದರು.

ಕೊಹ್ಲಿಗೆ ಅತ್ಯುತ್ತಮ ಬೆಂಬಲ ನೀಡಿದ ರಹಾನೆ 86 ಬಾಲ್ ಎದುರಿಸಿ 79 ರನ್ ಗಳಿಸಿದರು ಅವರು 5 ಫೋರ್‌ ಮತ್ತು 2 ಸಿಕ್ಸರ್‌ ಭಾರಿಸಿದರು. ತಂಡ ಇನ್ನೇನು ಗೆಲುವಿನ ಅಂಚಿಗೆ ಬಂದಾಗ ಇಬ್ಬರೂ ಬ್ಯಾಟ್ಸ್‌ಮನ್‌ಗಳು ಕೇವಲ ಆರು ರನ್ ಅಂತರದಲ್ಲಿ ವಿಕೆಟ್ ಒಪ್ಪಿಸಿದರು. ಆದರೆ ಆ ನಂತರ ಬಂದ ಹಾರ್ದಿಕ್ ಪಾಂಡ್ಯಾ (3) ಮತ್ತು ಎಂ.ಎಸ್.ಧೋನಿ (4) ಗೆಲುವಿಗೆ ಬೇಕಾಗಿದ್ದ ರನ್‌ಗಳನ್ನು ಬಾರಿಸಿ ಔಪಚಾರಿಕವಾಗಿ ಗೆಲುವು ತಂದುಕೊಟ್ಟರು.

Story first published: Friday, February 2, 2018, 11:09 [IST]
Other articles published on Feb 2, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X