ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇದೇ ಮೊದಲ ಬಾರಿಗೆ ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ಸತತ 3 ಗೆಲುವು

By Mahesh
ಇಂಡಿಯಾ vs ಆಫ್ರಿಕಾ 3ನೇ ಓಡಿಐ : ವಿರಾಟ್ ಹಾಗು ಧವನ್ ಅವರಿಂದ ಜವಾಬ್ದಾರಿಯುತ ಆಟ | Oneindia Kannada
India register Three straight ODI victory agianst SA in SA for the first time

ಕೇಪ್ ಟೌನ್, ಫೆಬ್ರವರಿ 08: ಭಾರತ ವಿರುದ್ಧದ ಮೂರನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ನಾಯಕ ಐಡೆನ್ ಮಾರ್ಕಮ್ ಅವರು ಟಾಸ್ ಗೆದ್ದರೂ ಪಂದ್ಯ ಗೆಲ್ಲಲಾಗಲಿಲ್ಲ. ಕೊಹ್ಲಿ ಭರ್ಜರಿ ಶತಕ, ಭಾರತದ ಸ್ಪಿನ್ನರ್ ಗಳಾದ ಚಾಹಲ್- ಕುಲದೀಪ್ ಕೈಚಳಕಕ್ಕೆ ಮತ್ತೊಮ್ಮೆ ಹರಿಣಗಳು ಶರಣಾಗಿದ್ದಾರೆ. ಈ ಮೂಲಕ ಅತಿಥೇಯ ಟೀಂ ಇಂಡಿಯಾ ಹೊಸ ದಾಖಲೆ ಬರೆದಿದೆ.

ಕೇಪ್ ಟೌನ್ ನಲ್ಲಿ ನಡೆದ ಮೂರನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯವನ್ನು ಭಾರತ 124ರನ್ ಗಳ ಅಂತರದಿಂದ ಗೆದ್ದುಕೊಂಡಿದೆ. ಈ ಮೂಲಕ 6 ಅಂತಾರಾಷ್ಟ್ರೀಯ ಪಂದ್ಯಗಳ ಸರಣಿಯಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಭಾರತ 3-0 ಅಂತರದಿಂದ ಮುನ್ನಡೆ ಪಡೆದುಕೊಂಡಿದೆ. ಹೀಗಾಗಿ, ಈ ಸರಣಿಯನ್ನು ಇನ್ನು ಸೋಲುವ ಮಾತೇ ಇಲ್ಲ.

ಸ್ಕೋರ್ ಕಾರ್ಡ್

ದಕ್ಷಿಣ ಆಫ್ರಿಕಾದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸತತ ಮೂರು ಏಕದಿನ ಪಂದ್ಯಗಳನ್ನು ಗೆದ್ದ ಸಾಧನೆಯನ್ನು ಇದೇ ಮೊದಲ ಬಾರಿಗೆ ಭಾರತ ತಂಡ ಮಾಡಿದೆ.

ಮಹಿಳಾ ಚಾಂಪಿಯನ್ ಶಿಪ್: ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ಸರಣಿ ಜಯಮಹಿಳಾ ಚಾಂಪಿಯನ್ ಶಿಪ್: ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ಸರಣಿ ಜಯ

ಎಬಿ ಡಿವಿಲಿಯರ್ಸ್, ಫಾಫ್ ಡು ಪ್ಲೆಸಿಸ್, ಕ್ವಾಂಟನ್ ಡಿಕಾಕ್ ಮೂವರು ಗಾಯಗೊಂಡು ತಂಡದಿಂದ ಹೊರಗುಳಿದಿರುವುದು ದಕ್ಷಿಣ ಆಫ್ರಿಕಾದ ಬಲವನ್ನು ಕುಗ್ಗಿಸಿದೆ. ಆತ್ಮವಿಶ್ವಾಸವಿಲ್ಲದ ತಂಡದ ಮೇಲೆ ಕೊಹ್ಲಿ ಪಡೆ ಭರ್ಜರಿಯಾಗಿ ಸವಾರಿ ಮಾಡಿದೆ.

ಮೂರನೇ ಏಕದಿನ ಪಂದ್ಯ ಸಂಕ್ಷಿಪ್ತ ಸ್ಕೋರ್
ಭಾರತ 303/6 (50 ಓವರ್ಸ್)
* ವಿರಾಟ್ ಕೊಹ್ಲಿ ಅಜೇಯ 160 ರನ್ (159 ಎಸೆತ, 12‍ ಬೌಂಡರಿ, 2 ಸಿಕ್ಸರ್)
* ಶಿಖರ್ ಧವನ್ 79ರನ್ (63 ಎ, 12 ಬೌಂಡರಿ)
* ಜೆಪಿ ಡುಮಿನಿ 60ಕ್ಕೆ2 ವಿಕೆಟ್, ರಬಾಡ, ಮೊರಿಸ್,ತಾಹೀರ್, ಫೆಹ್ಲುಕ್ವಯೋ ತಲಾ 1 ವಿಕೆಟ್

ದಕ್ಷಿಣ ಆಫ್ರಿಕಾ 179 ಆಲೌತ್ (40 ಓವರ್ಸ್)
* ಮಾರ್ಕಮ್ 32 (2 ಬೌಂಡರಿ, 1ಸಿಕ್ಸರ್)
* ಜೆಪಿ ಡುಮಿನಿ 51 (67ಎ, 4 ಬೌಂಡರಿ)
* ಡೇವಿಡ್ ಮಿಲ್ಲರ್ 25ರನ್
* ಯಜುವೇಂದ್ರ ಚಾಹಲ್ 46ಕ್ಕೆ4, ಕುಲದೀಪ್ ಯಾದವ್ 23ಕ್ಕೆ 4, ಬೂಮ್ರಾ 2 ವಿಕೆಟ್.
ಪಂದ್ಯ ಶ್ರೇಷ್ಠ : ವಿರಾಟ್ ಕೊಹ್ಲಿ.

Story first published: Thursday, February 8, 2018, 0:25 [IST]
Other articles published on Feb 8, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X