ಭಾರತ-ದ.ಆಫ್ರಿಕಾ ಮೊದಲ ಏಕದಿನ ಪಂದ್ಯ, ಗೆಲ್ಲುವ ವಿಶ್ವಾಸ

Posted By:
India-South Africa playing their first match of one day series

ಡರ್ಬನ್, ಫೆಬ್ರವರಿ 01: ಟೆಸ್ಟ್ ಸರಣಿಯಲ್ಲಿ ಕಳೆದುಕೊಂಡದನ್ನು ಏಕದಿನ ಸರಣಿಯಲ್ಲಿ ಮರಳಿ ಸಂಪಾದಿಸುವ ಉಮೇದಿನಲ್ಲಿ ವಿರಾಟ್ ಕೊಹ್ಲಿ ಪಡೆ ಇಂದು ದಕ್ಷಿಣ ಆಫ್ರಿಕ ವಿರುದ್ಧ ಮೊದಲ ಏಕದಿನ ಕ್ರಿಕೆಟ್‌ ಪಂದ್ಯ ಆಡಲಿದೆ.

ಡರ್ಬನ್‌ನ ಕಿಂಗ್ಸ್‌ಮೇಡ್‌ ಅಂಗಳದಲ್ಲಿ ನಡೆಯಲಿರುವ ದಕ್ಷಿಣ ಆಫ್ರಿಕಾ- ಭಾರತ ನಡುವಿನ ಏಕದಿನ ಸರಣಿಯ ಮೊದಲ ಪಂದ್ಯ ಭಾರತೀಯ ಕಾಲಮಾನದಂತೆ ಸಂಜೆ 4.30ಕ್ಕೆ ಪ್ರಾರಂಭವಾಗಲಿದೆ.

ಟೆಸ್ಟ್ ಸರಣಿ ಸೋತರು ಕೊನೆಯ ಟೆಸ್ಟ್ ಪಂದ್ಯದಲ್ಲಿ ಪುಟಿದೆದ್ದು ವಿಶ್ವಾಸದಲ್ಲಿರುವ ಭಾರತ ಏಕದಿನ ಸರಣಿಯನ್ನು ಜಯಿಸಿ ಏಕದಿನ ಕ್ರಿಕೆಟ್ ರ್ಯಾಕಿಂಗ್‌ನಲ್ಲಿ ಮೊದಲ ಸ್ಥಾನಕ್ಕೇರುವ ಗುರಿ ಹೊಂದಿದೆ. ಪ್ರಸ್ತುತ ದಕ್ಷಿಣ ಆಫ್ರಿಕ ಮೊದಲ ಸ್ಥಾನದಲ್ಲಿದೆ.

ಆರು ಪಂದ್ಯಗಳ ಏಕದಿನ ಸರಣಿಯನ್ನು 4-2 ರಲ್ಲಿ ಭಾರತ ಗೆದ್ದಲ್ಲಿ ದಕ್ಷಿಣ ಆಫ್ರಿಕ ಎರಡನೇ ಸ್ಥಾನಕ್ಕೆ ಜಾರಿ ಭಾರತವು ಮೊದಲ ಸ್ಥಾನಕ್ಕೇರುತ್ತದೆ. ಈ ವರೆಗೆ ಒಂದು ಬಾರಿಯೂ ದಕ್ಷಿಣ ಆಫ್ರಿಕದಲ್ಲಿ ಸರಣಿ ಗೆಲ್ಲದ ಭಾರತ ತಂಡ ಈ ಬಾರಿ ಇತಿಹಾಸ ನಿರ್ಮಿಸುವ ಉತ್ಸಾಹದಲ್ಲಿದೆ.

ಎರಡು ಶತಕದ ನಿರೀಕ್ಷೆ

ಎರಡು ಶತಕದ ನಿರೀಕ್ಷೆ

ಕಳೆದ ವರ್ಷಾಂತ್ಯದಲ್ಲಿ ನಡೆದ ಶ್ರೀಲಂಕ ವಿರುದ್ಧ ಏಕದಿನ ಸರಣಿಯಲ್ಲಿ ವಿಶ್ರಾಂತಿ ಪಡೆದಿದ್ದ ವಿರಾಟ್ ಕೊಹ್ಲಿ ಈ ಏಕದಿನ ಸರಣಿಯಲ್ಲಿ ತಂಡವನ್ನು ಮುನ್ನಡೆಸುತ್ತಿರುವುದು ತಂಡಕ್ಕೆ ಬಲ ತುಂಬಿದೆ. ಟೆಸ್ಟ್ ಸರಣಿಯಲ್ಲಿ ಶತಕ ಭಾರಿಸಿ ಲಯದಲ್ಲಿರುವ ವಿರಾಟ್‌ ಅವರ ಬ್ಯಾಟಿನಿಂದ ಏಕದಿನ ಸರಣಿಯಲ್ಲಿ ಎರಡಾದರೂ ಶತಕ ಬರಬಹುದೆಂಬ ನಿರೀಕ್ಷೆ ಇದೆ.

ಅವಕಾಶ ಬಳಸಿಕೊಳ್ಳುವುದೇ ಭಾರತ?

ಅವಕಾಶ ಬಳಸಿಕೊಳ್ಳುವುದೇ ಭಾರತ?

ಟೆಸ್ಟ್ ಸರಣಿ ವೇಳೆ ಬೆರಳಿಗೆ ಗಾಯ ಮಾಡಿಕೊಂಡಿರುವ ದಕ್ಷಿಣ ಆಫ್ರಿಕದ ಸ್ಟಾರ್ ಆಟಗಾರ ಎ.ಬಿ.ಡಿವಿಲಿಯರ್ಸ್ ಸರಣಿಯ ಮೊದಲ ನಾಲ್ಕು ಪಂದ್ಯಗಳಿಗೆ ಲಭ್ಯವಿಲ್ಲ. ಈ ಅವಕಾಶವನ್ನು ಭಾರತ ಹೇಗೆ ಬಳಸಿಕೊಳ್ಳುತ್ತದೆ ಎಂಬುದು ಮುಖ್ಯ. ಎಬಿಡಿ ಬದಲಿಗೆ ಹೊಸ ಆಟಗಾರರೊಬ್ಬರು ಪಾದಾರ್ಪಣೆ ಮಾಡಬಹುದು ಎನ್ನಲಾಗಿದೆ.

ಮಧ್ಯಮ ಕ್ರಮಾಂಕ ಮತ್ತು ಸ್ಪಿನ್ನರ್‌ಗಳ ವಿಭಾಗ

ಮಧ್ಯಮ ಕ್ರಮಾಂಕ ಮತ್ತು ಸ್ಪಿನ್ನರ್‌ಗಳ ವಿಭಾಗ

ಶ್ರೇಯಸ್ ಅಯ್ಯರ್‌, ದಿನೇಶ್ ಕಾರ್ತಿಕ್‌ ಅಥವಾ ಮನೀಶ್ ಪಾಂಡೆ ಅವರ ಪೈಕಿ ಮಧ್ಯಮ ಕ್ರಮಾಂಕದಲ್ಲಿ ಸ್ಥಾನ ಪಡೆಯುವ ಮತ್ತೊಬ್ಬ ಆಟಗಾರ ಯಾರು ಎಂಬ ಕುತೂಹಲ ಇದೆ. ಸ್ಪಿನ್ನರ್‌ಗಳಲ್ಲೂ ಇದೇ ಗೊಂದಲ ಇದ್ದು ಕುಲದೀಪ್ ಯಾದವ್, ಅಕ್ಷರ್ ಪಟೇಲ್ ಅಥವಾ ಯಜುವೇಂದ್ರ ಚಾಹಲ್ ಅವರ ಸ್ಥಾನ ಪಡೆಯುವರು ಯಾರು ಎಂಬ ಕುತೂಹಲ ಇದೆ. ಆಲ್‌ರೌಂಡರ್‌ ಕೇದಾರ್ ಜಾಧವ್ ಅವರಿಗೂ ಅವಕಾಶ ಸಿಗುವ ಸಾಧ್ಯತೆಯೂ ಇದೆ.

ಪಿಚ್ ಗುಣ ಎಂತಹುದು

ಪಿಚ್ ಗುಣ ಎಂತಹುದು

ದ.ಆಫ್ರಿಕದಲ್ಲಿ ಒಮ್ಮೆಯೂ ಭಾರತ ಏಕದಿನ ಸರಣಿ ಗೆದ್ದಿಲ್ಲ. ಇಂದು ಪಂದ್ಯ ನಡೆಯುತ್ತಿರುವ ಡರ್ಬನ್‌ ನ ಕಿಂಗ್ಸ್‌ಮೇಡ್‌ ಕ್ರೀಡಾಂಗಣದಲ್ಲಿ ಭಾರತ ಒಮ್ಮೆಯೂ ದಕ್ಷಿಣ ಆಫ್ರಿಕ ವಿರುದ್ಧ ಗೆದ್ದಿಲ್ಲ. ಡರ್ಬನ್ ಪಿಚ್ ಮೊದಲು ಬ್ಯಾಟಿಂಗ್‌ ಮಾಡಿದವರಿಗೆ ಗೆದ್ದಿರುವ ಉದಾಹರಣೆ ಹೆಚ್ಚಿದೆ. ಹಾಗಾಗಿ ಟಾಸ್‌ ಕೂಡ ಪಂದ್ಯದಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದೆ.

Story first published: Thursday, February 1, 2018, 12:55 [IST]
Other articles published on Feb 1, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ