ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಸ್ಟ್ರೇಲಿಯಾದಲ್ಲಿ ಭಾರತ ಕಠಿಣ ಸವಾಲು ಎದುರಿಸಲಿದೆ: ರಾಹುಲ್ ದ್ರಾವಿಡ್

India to face stiff challenge in Australia: Rahul Dravid

ಬೆಂಗಳೂರು, ಜೂನ್ 11: ಈ ಬಾರಿ ಆಸ್ಟ್ರೇಲಿಯಾ ತಂಡಕ್ಕೆ ಸ್ಟೀವ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ಬಲವಿರುವುದರಿಂದ ಆಸ್ಟ್ರೇಲಿಯಾದಲ್ಲಿ ಟೀಮ್ ಇಂಡಿಯಾ ಕಠಿಣ ಸವಾಲು ಎದುರಿಸಲಿದೆ ಎಂದು ಭಾರತದ ಮಾಜಿ ನಾಯಕ, ಬ್ಯಾಟಿಂಗ್ ದಂತಕತೆ ರಾಹುಲ್ ದ್ರಾವಿಡ್ ಹೇಳಿದ್ದಾರೆ.

ಖಾಲಿ ಮೈದಾನದಲ್ಲಿ ಈ ವರ್ಷದ ಐಪಿಎಲ್ ನಡೆಸಲು ಬಿಸಿಸಿಐ ತಯಾರಿ!ಖಾಲಿ ಮೈದಾನದಲ್ಲಿ ಈ ವರ್ಷದ ಐಪಿಎಲ್ ನಡೆಸಲು ಬಿಸಿಸಿಐ ತಯಾರಿ!

2018-19ರಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದ ಭಾರತ ಅಲ್ಲಿ ಐತಿಹಾಸಿಕ ಟೆಸ್ಟ್ ಸರಣಿ ಜಯಿಸಿ ದಾಖಲೆ ನಿರ್ಮಿಸಿತ್ತು. ಆದರೆ ಆಗ ಆಸ್ಟ್ರೇಲಿಯಾ ತಂಡದಲ್ಲಿ ಸ್ಟೀವ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ಇಬ್ಬರೂ ಇರಲಿಲ್ಲ. ಚೆಂಡು ವಿರೂಪ ಪ್ರಕರಣದಲ್ಲಿ ಇಬ್ಬರೂ ಆಗ ಒಂದು ವರ್ಷದ ನಿಷೇಧ ಶಿಕ್ಷೆಯಲ್ಲಿದ್ದರು.

'ಇಂಗ್ಲೆಂಡ್‌ನಲ್ಲಿ ನಾನೂ ವರ್ಣಭೇದ ಎದುರಿಸಿದ್ದೆ' ಎಂದ ಭಾರತೀಯ ಕ್ರಿಕೆಟರ್!'ಇಂಗ್ಲೆಂಡ್‌ನಲ್ಲಿ ನಾನೂ ವರ್ಣಭೇದ ಎದುರಿಸಿದ್ದೆ' ಎಂದ ಭಾರತೀಯ ಕ್ರಿಕೆಟರ್!

ದಕ್ಷಿಣ ಆಫ್ರಿಕಾದಲ್ಲಿ ಆತಿಥೇಯರ ವಿರುದ್ಧ ಬಾಲ್ ಟ್ಯಾಂಪರಿಂಗ್ ನಡೆಸಿ ಒಂದು ವರ್ಷದ ಶಿಕ್ಷೆಗೆ ಗುರಿಯಾಗಿದ್ದ ಸ್ಮಿತ್, ವಾರ್ನರ್ ನಿಷೇಧ ಮುಗಿಸಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದ್ದಾರೆ. ಅಷ್ಟೇ ಅಲ್ಲ ಇಬ್ಬರೂ ಅದ್ಭುತ ಫಾರ್ಮ್ ಪ್ರದರ್ಶಿಸುತ್ತಿದ್ದಾರೆ. ಟೆಸ್ಟ್ ನಂ.1 ಸ್ಥಾನದಲ್ಲಿದ್ದ ವಿರಾಟ್ ಕೊಹ್ಲಿಯನ್ನು ಇತ್ತೀಚೆಗೆ ಸ್ಮಿತ್ ಕೆಳಗಿಳಿಸಿರುವುದೇ ಇದಕ್ಕೆ ಸಾಕ್ಷಿ.

24 ವರ್ಷಗಳ ಹಿಂದೆ ಟೀಮ್ ಇಂಡಿಯಾ ವಿಶಿಷ್ಠ ಗೆಲುವು ದಾಖಲಿಸಿದ್ದು ಇದೇ ದಿನ!24 ವರ್ಷಗಳ ಹಿಂದೆ ಟೀಮ್ ಇಂಡಿಯಾ ವಿಶಿಷ್ಠ ಗೆಲುವು ದಾಖಲಿಸಿದ್ದು ಇದೇ ದಿನ!

'ಸೋನಿ ಟೆಸ್ ಪಿಟ್ ಸ್ಟಾಪ್' ಶೋನಲ್ಲಿ ಮಾತನಾಡಿದ ರಾಹುಲ್ ದ್ರಾವಿಡ್, 'ಸ್ಮಿತ್ ಮತ್ತು ವಾರ್ನರ್ ಅವರನ್ನು ಮಿಸ್ ಮಾಡಿಕೊಳ್ಳುವುದು ಆಸ್ಟ್ರೇಲಿಯಾ ತಂಡಕ್ಕೆ ದೊಡ್ಡ ಆಘಾತ ನೀಡಿತ್ತು. ಯಾಕೆಂದರೆ ಇಬ್ಬರೂ ಟಾಪ್ ಬ್ಯಾಟ್ಸ್‌ಮನ್‌ಗಳು. ಇಬ್ಬರೂ ಆಸ್ಟ್ರೇಲಿಯಾಕ್ಕೆ ಹೆಚ್ಚು ರನ್ ಕೊಡುಗೆ ನೀಡಿದ್ದಾರೆ,' ಎಂದಿದ್ದಾರೆ.

ಆಗಸ್ಟ್‌ನಲ್ಲಿ ಇಂಡಿಯಾ vs ಶ್ರೀಲಂಕಾ ಕ್ರಿಕೆಟ್ ಸರಣಿಗೆ ಒಪ್ಪಿಗೆ ಸೂಚಿಸಿದ ಬಿಸಿಸಿಐ: ವರದಿಆಗಸ್ಟ್‌ನಲ್ಲಿ ಇಂಡಿಯಾ vs ಶ್ರೀಲಂಕಾ ಕ್ರಿಕೆಟ್ ಸರಣಿಗೆ ಒಪ್ಪಿಗೆ ಸೂಚಿಸಿದ ಬಿಸಿಸಿಐ: ವರದಿ

ಈ ಬಾರಿ ಆಸ್ಟ್ರೇಲಿಯಾ ಪ್ರವಾಸ ಸರಣಿ ಭಾರತದ ಪಾಲಿಗೆ ಸವಾಲಿನ್ನದ್ದಾಗಿರಲಿದೆ ಎಂಬ ದ್ರಾವಿಡ್ ಮಾತು ಸರಿಯೆ. ಯಾಕೆಂದರೆ ಸ್ಮಿತ್, ವಾರ್ನರ್‌ನಿಂದಾಗಿ ತಂಡ ಸಹಜವಾಗೇ ಬಲಿಷ್ಠಗೊಂಡಿದೆ. ಈ ವರ್ಷದ ಅಂತ್ಯಕ್ಕೆ ವಿರಾಟ್ ಕೊಹ್ಲಿ ಮತ್ತು ತಂಡ ಟೆಸ್ಟ್ ಸರಣಿಗಾಗಿ ಆಸ್ಟ್ರೇಲಿಯಾಕ್ಕೆ ಪ್ರವಾಸ ಹೊರಡಲಿದೆ. ಕಳೆದ ವರ್ಷ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯನ್ನು 2-1ರಿಂದ ಜಯಿಸಿತ್ತು. ಕೊನೆಯ ಪಂದ್ಯ ಡ್ರಾ ಎನಿಸಿತ್ತು.

Story first published: Thursday, June 11, 2020, 21:45 [IST]
Other articles published on Jun 11, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X