ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ- ಇಂಗ್ಲೆಂಡ್ 2ನೇ ಏಕದಿನ ಪಂದ್ಯ: ಭಾರತ ಗೆದ್ದರೆ ಸರಣಿ ಕೈವಶ

India vs England 2nd ODI Preview: Playing XI, Timings, Telecast

ಲಂಡನ್, ಜುಲೈ 14: ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿ ಹುಮ್ಮಸ್ಸಿನಿಂದ ಬೀಗುತ್ತಿರುವ ಭಾರತ ತಂಡ, ಮೂರು ಪಂದ್ಯಗಳ ಸರಣಿಯನ್ನು ವಶಪಡಿಸಿಕೊಳ್ಳುವ ತವಕದಲ್ಲಿದೆ.

ಮೊದಲ ಪಂದ್ಯದ ಸೋಲಿನ ಸೇಡನ್ನು ತೀರಿಸಿಕೊಂಡು, ಸರಣಿಯನ್ನು ಉಳಿಸಿಕೊಳ್ಳುವ ಗುರಿ ಹೊಂದಿರುವ ಆಂಗ್ಲರ ತಂಡಕ್ಕೆ ಕುಲದೀಪ್ ಯಾದವ್ ಭಯ ಕಾಡುತ್ತಿದೆ.

ಕುಲದೀಪ್ ಮತ್ತು ಯುಜುವೇಂದ್ರ ಚಾಹಲ್ ಜೋಡಿ ಇದೇ ರೀತಿ ಪ್ರಭಾವಶಾಲಿ ಬೌಲಿಂಗ್ ದಾಳಿ ನಡೆಸಿದರೆ ಸರಣಿಯನ್ನು ವಶಪಡಿಸಿಕೊಳ್ಳುವ ಕನಸು ಸುಲಭವಾಗಲಿದೆ.

ಭಾರತ ಎ- ವೆಸ್ಟ್ ಇಂಡೀಸ್ ಎ ಕ್ರಿಕೆಟ್ ಟೆಸ್ಟ್: ಗೆಲುವು ತಂದಿತ್ತ ಪಂತ್ಭಾರತ ಎ- ವೆಸ್ಟ್ ಇಂಡೀಸ್ ಎ ಕ್ರಿಕೆಟ್ ಟೆಸ್ಟ್: ಗೆಲುವು ತಂದಿತ್ತ ಪಂತ್

ಲಾರ್ಡ್ಸ್ ಅಂಗಳದ ಪಿಚ್ ಕೂಡ ಮ್ಯಾಂಚೆಸ್ಟರ್‌ನಲ್ಲಿದ್ದ ಪಿಚ್‌ನಂತೆಯೇ ಇರಲಿದೆ. ಮ್ಯಾಂಚೆಸ್ಟರ್‌ ಟಿ20 ಪಂದ್ಯದಲ್ಲಿ ಒಣ ಪಿಚ್‌ನಲ್ಲಿ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳು ಕುಲದೀಪ್ ಮಣಿಕಟ್ಟಿನ ಸ್ಪಿನ್ ದಾಳಿಗೆ ಕಂಗೆಟ್ಟಿದ್ದರು.

ಕೇವಲ ಒಂದು ದಿನದ ಅಂತರದಲ್ಲಿ ಎರಡನೆಯ ಪಂದ್ಯ ನಡೆಯುತ್ತಿರುವುದರಿಂದ ಇಂಗ್ಲೆಂಡ್ ತಂಡಕ್ಕೆ ಕುಲದೀಪ್ ಅವರನ್ನು ಎದುರಿಸಲು ಮೆರ್ಲಿನ್ ಸ್ಪಿನ್ ಬೌಲಿಂಗ್ ಯಂತ್ರದ ನೆರವು ಪಡೆದುಕೊಳ್ಳಲು ಸಾಧ್ಯವಾಗಿಲ್ಲ.

ಉಭಯ ತಂಡಗಳು ಶುಕ್ರವಾರ ಲಂಡನ್‌ಗೆ ಪ್ರಯಾಣ ಬೆಳೆಸಿದ್ದು, ವಿಡಿಯೋ ವೀಕ್ಷಣೆ ಮಾಡಿ ತಪ್ಪುಗಳನ್ನು ತಿದ್ದಿಗಳ್ಳಲು ಸಾಕಷ್ಟು ಸಮಯ ಸಿಕ್ಕಿಲ್ಲ.

ಹೀಗಾಗು ಕುಲದೀಪ್ ಅವರನ್ನು ಎದುರಿಸುವುದು ಹೇಗೆ ಎಂಬ ಬಗ್ಗೆ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳು ಮಾನಸಿಕವಾಗಿ ತಯಾರಿ ನಡೆಸಬೇಕಲಾಗಿದೆ.

ಪಕ್ಕೆಲುಬು ನೋವಿನಿಂದ ಬಳಲುತ್ತಿರುವ ಅಲೆಕ್ಸ್ ಹೇಲ್ಸ್, ಸರಣಿಯಿಂದ ಹೊರಗೆ ಹೋಗುವಂತಾಗಿದೆ. ಅವರ ಬದಲು ತಂಡವನ್ನು ಸೇರಿಕೊಂಡಿದ್ದ ಡೇವಿಡ್ ಮಲನ್ ಮುಂದಿನ ಎರಡೂ ಪಂದ್ಯಗಳಲ್ಲಿ ತಂಡದಲ್ಲಿ ಇರಲಿದ್ದಾರೆ.

2016ರಲ್ಲಿ ಆಸ್ಟ್ರೇಲಿಯಾ ಪ್ರವಾಸದ ಬಳಿಕ ಸತತವಾಗಿ 9 ದ್ವಿರಾಷ್ಟ್ರೀಯ ಸರಣಿಗಳನ್ನು ಗೆದ್ದಿರುವ ಭಾರತ ಹತ್ತನೇ ಸರಣಿ ಮೇಲೆ ಕಣ್ಣಿಟ್ಟಿದೆ. 2017ರಲ್ಲಿ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಮಾತ್ರ ಟ್ರೋಫಿಯನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಭಾರತ ಎಡವಿದ್ದು.

ಟೆಸ್ಟ್ ಸರಣಿಗೂ ಕುಲದೀಪ್ ಯಾದವ್‌ಗೆ ಅವಕಾಶ: ಕೊಹ್ಲಿ ಬಯಕೆಟೆಸ್ಟ್ ಸರಣಿಗೂ ಕುಲದೀಪ್ ಯಾದವ್‌ಗೆ ಅವಕಾಶ: ಕೊಹ್ಲಿ ಬಯಕೆ

ಭುವನೇಶ್ವರ್ ಕುಮಾರ್ ಟ್ರೆಂಟ್ ಬ್ರಿಡ್ಜ್‌ನಲ್ಲಿ ಬೌಲಿಂಗ್ ಅಭ್ಯಾಸ ನಡೆಸಿದ್ದರೂ, ಇಂದಿನ ಪಂದ್ಯದಲ್ಲಿ ಕಣಕ್ಕೆ ಇಳಿಯುವುದು ಅನುಮಾನ. ಹಿಂದಿನ ಪಂದ್ಯದ ಹನ್ನೊಂದರ ಬಳಗವೇ ಆಡುವ ಸಾಧ್ಯತೆ ಹೆಚ್ಚಿದೆ.

ಪಂದ್ಯದ ಸಮಯ: ಮಧ್ಯಾಹ್ನ 3.30 (ಭಾರತೀಯ ಕಾಲಮಾನ)
ಸ್ಥಳ: ಲಾರ್ಡ್ಸ್ ಕ್ರೀಡಾಂಗಣ, ಲಂಡನ್
ನೇರಪ್ರಸಾರ: ಸೋನಿ ನೆಟ್‌ವರ್ಕ್ಸ್

ಸಂಭಾವ್ಯ ತಂಡಗಳು
ಭಾರತ: ವಿರಾಟ್ ಕೊಹ್ಲಿ, ಶಿಖರ್ ಧವನ್, ರೋಹಿತ್ ಶರ್ಮಾ, ಕೆಎಲ್ ರಾಹುಲ್, ಎಂಎಸ್ ಧೋನಿ, ಸುರೇಶ್ ರೈನಾ, ಹಾರ್ದಿಕ್ ಪಾಂಡ್ಯ, ಕುಲದೀಪ್ ಯಾದವ್, ಯಜುವೇಂದ್ರ ಚಾಹಲ್, ಸಿದ್ಧಾರ್ಥ್ ಕೌಲ್ ಮತ್ತು ಉಮೇಶ್ ಯಾದವ್.

ಇಂಗ್ಲೆಂಡ್: ಇಯಾನ್ ಮಾರ್ಗನ್, ಜೇಸನ್ ರಾಯ್, ಜಾನಿ ಬೈರ್‌ಸ್ಟೊ, ಜೋಸ್ ಬಟ್ಲರ್, ಬೆನ್ ಸ್ಟೋಕ್ಸ್, ಜೋ ರೂಟ್/ಡೇವಿಡ್ ಮಲನ್, ಮೊಯೀನ್ ಅಲಿ, ಆದಿಲ್ ರಶೀದ್, ಡೇವಿಡ್ ವಿಲ್ಲಿ, ಲಿಯಾಮ್ ಪ್ಲಂಕೆಟ್/ಜೇಕ್ ಬಾಲ್, ಮಾರ್ಕ್‌ ವುಡ್/ಟಾಮ್ ಕುರ್ರನ್.

Story first published: Saturday, July 14, 2018, 10:34 [IST]
Other articles published on Jul 14, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X