ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಇಂಗ್ಲೆಂಡ್ 3ನೇ ಟೆಸ್ಟ್: ಸಂಭಾವ್ಯ ತಂಡ, ಪಿಚ್, ಸಮಯ ಹಾಗೂ ಹವಾಮಾನ ವರದಿ

India vs England 3rd Test: Preview, Predicted Playing 11, Headingley weather forecast, timings, pitch report

ಲೀಡ್ಸ್, ಆಗಸ್ಟ್ 23: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಮೂರನೇ ಪಂದ್ಯ ಬುಧವಾರದಿಂದ ಆರಂಭವಾಗಲಿದೆ. ಇಂಗ್ಲೆಂಡ್‌ನ ಲೀಡ್ಸ್‌ನ ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ಈ ಪಂದ್ಯ ಬುಧವಾರ(ಆಗಸ್ಟ್ 25)ದಿಂದ ಪ್ರಾರಂಭಗೊಳ್ಳಲಿದೆ. ಮೂರನೇ ಪಂದ್ಯಕ್ಕೂ ಮುನ್ನ ಭಾರತ ಹಾಗೂ ಇಂಗ್ಲೆಂಡ್‌ನ ಆಟಗಾರರಿಗೆ 9 ದಿನಗಳ ಸುದೀರ್ಘ ವಿಶ್ರಾಂತಿ ದೊರೆತಿದ್ದು ಎಲ್ಲಾ ಆಟಗಾರರು ಕೂಡ ಮತ್ತಷ್ಟು ತಾಜಾತನದಿಂದ ಮೂರನೇ ಪಂದ್ಯಕ್ಕೆ ಸಿದ್ಧವಾಗಿದ್ದಾರೆ.

ಈ ಪಂದ್ಯಕ್ಕೂ ಮುನ್ನ ಲಾರ್ಡ್ಸ್ ಅಂಗಳದಲ್ಲಿ ನಡೆದ ಜಿದ್ದಾಜಿದ್ದಿನ ಹೋರಾಟದಲ್ಲಿ ಟೀಮ್ ಇಂಡಿಯಾ ಅಂತಿಮ ದಿನದಾಟದಲ್ಲಿ ಅದ್ಭುತ ಪ್ರದರ್ಶನವನ್ನು ನೀಡುವ ಮೂಲಕ ಗೆದ್ದು ಬೀಗಿತ್ತು. ಈ ಮೂಲಕ ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ಆತಿಥೇಯರಿಗೆ ಸೋಲಿನ ರುಚಿ ತೋರಿಸುವಲ್ಲಿ ಯಶಸ್ವಿಯಾಗಿತ್ತು.

ಸೋಲಿನ ಭೀತಿಯಲ್ಲಿದ್ದ ಪಂದ್ಯದಲ್ಲಿ ಒಂದು ಸೆಶನ್‌ನಲ್ಲಿ ನೀಡಿದ ಪ್ರದರ್ಶನ ಇಡೀ ಪಂದ್ಯವನ್ನು ಟೀಮ್ ಇಂಡಿಯಾಗೆ ಕಮ್‌ಬ್ಯಾಕ್ ಮಾಡಲು ಸಾಧ್ಯವಾಗಿಸಿತ್ತು. ಐದನೇ ದಿನದಾಟದಲ್ಲಿ ಭಾರತ ಸವಾಲಿನ ಮೊತ್ತವನ್ನು ಗಳಿಸಬೇಕಾದರೆ ರಿಷಬ್ ಪಂತ್ ತಂಡದ ಪರವಾಗಿ ಅದ್ಭುತ ಪ್ರದರ್ಶನವನ್ನು ನೀಡುವ ನಿರೀಕ್ಷೆಯಿತ್ತು. ಆದರೆ ಪಂತ್ ಅಂತಿಮ ದಿನ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲು ಸಾಧ್ಯವಾಗಲಿಲ್ಲ. ಆದರೆ ಬಳಿಕ ಜಸ್ಪ್ರೀತ್ ಬೂಮ್ರಾ ಹಾಗೂ ಮೊಹಮ್ಮದ್ ಶಮಿ ಬ್ಯಾಟಿಂಗ್ ಮೂಲಕ ಅದ್ಭುತ ಆಟವಾಡಿದರು. ಈ ಜೋಡಿ ಮುರಿಯದ 9ನೇ ವಿಕೆಟ್‌ಗೆ 89 ರನ್‌ಗಳ ಜೊತೆಯಾಟವನ್ನು ನೀಡಿತ್ತು. ಈ ಮೂಲಕ ಭಾರತ 271 ರನ್‌ಗಳ ಬೃಹತ್ ಗುರಿಯನ್ನು ಮುಂದಿಟ್ಟಿತ್ತು.

ಐಪಿಎಲ್ 2021: ಬೆಂಗಳೂರಿನಲ್ಲಿ ಕ್ವಾರಂಟೈನ್ ಆರಂಭಿಸಿದ ಆರ್‌ಸಿಬಿ-ವಿಡಿಯೋಐಪಿಎಲ್ 2021: ಬೆಂಗಳೂರಿನಲ್ಲಿ ಕ್ವಾರಂಟೈನ್ ಆರಂಭಿಸಿದ ಆರ್‌ಸಿಬಿ-ವಿಡಿಯೋ

ಬಳಿಕ ಟೀಮ್ ಇಂಡಿಯಾ ಬೌಲಿಂಗ್‌ನಲ್ಲಿಯೂ ಅಮೋಘ ಪ್ರದರ್ಶನ ನೀಡುವ ಮೂಲಕ ಎದುರಾಳಿ ಬ್ಯಾಟ್ಸ್‌ಮನ್‌ಗಳಿಗೆ ಕಂಟಕವಾದರು. ಮೊಹಮ್ಮದ್ ಸಿರಾಜ್ ಹಾಗೂ ಜಸ್ಪ್ರೀತ್ ಬೂಮ್ರಾ ಎರಡನೇ ಇನ್ನಿಂಗ್ಸ್‌ನಲ್ಲಿ ಅಬ್ಬರಿಸುವ ಮೂಲಕ ಇಂಗ್ಲೆಂಡ್ ತಂಡ 120 ರನ್‌ಗಳಿಗೆ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡಿತ್ತು. ಈ ಮೂಲಕ ವಿರಾಟ್ ಪಡೆ 151 ರನ್‌ಗಳ ಅಮೋಘ ಜಯ ಸಾಧಿಸಿದ್ದು ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಈಗ 1-0 ಅಂತರದಿಂದ ಮುನ್ನಡೆ ಪಡೆದುಕೊಂಡಿದೆ. ಹೀಗಾಗಿ ಹೆಡಿಂಗ್ಲೆ ಪಂದ್ಯದ ಮೇಲೆ ಮತ್ತಷ್ಟು ಕುತೂಹಲ ಹೆಚ್ಚಾಗಿದೆ.

ಪಂದ್ಯದ ಮಾಹಿತಿ

ಪಂದ್ಯದ ಮಾಹಿತಿ

ದಿನಾಂಕ: ಆಗಸ್ಟ್ 25ರಿಂದ 29ರವರೆಗೆ (ಬುಧವಾರ-ಭಾನುವಾರ)
ಸಮಯ: ಭಾರತೀಯ ಕಾಲಮಾನ ಮಧ್ಯಾಹ್ನ 03:30ರಿಂದ ಆರಂಭ
ಸ್ಥಳ: ಹೆಡಿಂಗ್ಲೆ, ಲೀಡ್ಸ್

ಹವಾಮಾನ ವರದಿ ಹಾಗೂ ಪಿಚ್ ರಿಪೋರ್ಟ್:

ಹವಾಮಾನ ವರದಿ ಹಾಗೂ ಪಿಚ್ ರಿಪೋರ್ಟ್:

ಹವಾಮಾನ ವರದಿ: ಲೀಡ್ಸ್‌ನ ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ತುಂಬಾ ಕಡಿಮೆಯಿದೆ. ಐದು ದಿನಗಳ ಕಾಲವೂ ಪಂದ್ಯ ನಡೆಯಲು ಪೂರಕವಾದ ವಾತಾವರಣವಿರುವುದು ಕ್ರಿಕೆಟ್ ಪ್ರೇಮಿಗಳಿಗೆ ಸಂತಸದ ಸುದ್ದಿ. ಸರಾಸರಿ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹವಾಮಾನ ವರದಿಗಳು ಹೇಳುತ್ತಿದೆ. ಪಂದ್ಯ ನಡೆಯುವ ಐದು ದಿನಗಳಲ್ಲಿಯೂ ಮಳೆಯಾಗುವ ಸಾಧ್ಯತೆ ತುಂಬಾ ವಿರಳವಾಗಿದೆ. ಹೀಗಾಗಿ ಮಳೆಯಿಂದ ಪಂದ್ಯಕ್ಕೆ ಅಡ್ಡಿಯಾಗುವ ಸಾಧ್ಯತೆ ಬಹುತೇಕ ಇಲ್ಲ.

ಪಿಚ್ ರಿಪೋರ್ಟ್: ಹೆಡಿಂಗ್ಲೆ ಕ್ರೀಡಾಂಗಣದ ಪಿಚ್ ಪಂದ್ಯದುದ್ದಕ್ಕೂ ವೇಗದ ಬೌಲರ್‌ಗಳಿಗೆ ಹೆಚ್ಚಿನ ಸಹಕಾರಿಯಾಗುವ ಸಾಧ್ಯತೆಯಿದೆ. ಇದರ ಜೊತೆಗೆ ಬ್ಯಾಟ್ಸ್‌ಮನ್‌ಗಳಿಗೂ ಪೂರಕವಾಗಿ ವರ್ತಿಸಲಿದೆ. ಹೆಚ್ಚು ಒಳಗಿದ ರೀತಿಯಲ್ಲಿ ಪಿಚ್ ಇರುವ ಕಾರಣದಿಂದಾಗಿ ನಾಲ್ಕು ಮತ್ತು ಐದನೇ ದಿನದಲಲ್ಇ ಸ್ಪಿನ್ನರ್‌ಗಳು ಕೂಡ ಪಿಚ್‌ನ ಲಾಭವನ್ನು ಪಡೆಯುವ ಅವಕಾಶಗಳಿದೆ. ತುಂಬಾ ಅದ್ಭುತವಾದ ಪಿಚ್ ಇದಾಗಿರುವ ನಿರೀಕ್ಷೆಯಿದ್ದು ಬ್ಯಾಟ್ ಹಾಗೂ ಬೌಲಿಂಗ್‌ನ ಮಧ್ಯೆ ತೀಕ್ಷ್ಣ ಹೋರಾಟ ನಡೆಯುವ ಸಾಧ್ಯತೆಯಿದೆ.

ಇಂಗ್ಲೆಂಡ್ ತಂಡದ ಸಂಭಾವ್ಯ ಆಡುವ ಬಳಗ

ಇಂಗ್ಲೆಂಡ್ ತಂಡದ ಸಂಭಾವ್ಯ ಆಡುವ ಬಳಗ

ಇಂಗ್ಲೆಂಡ್ ತಂಡದಲ್ಲಿ ಸಿಬ್ಲಿ ಹಾಗೂ ಕ್ರಾವ್ಲೆ ಮೂರನೇ ಟೆಸ್ಟ್‌ನಿಂದ ಹೊರಬಿದ್ದಿರುವ ಕಾರಣದಿಂದಾಗಿ ಆರಂಭಿಕನಾಗಿ ರೋರಿ ಬರ್ನ್ಸ್‌ಗೆ ಹಸೀಬ್ ಹಮೀದ್ ಸಾಥ್ ನೀಡುವುದು ಬಹುತೇಕ ಖಚಿತ. ಮತ್ತೊಂದೆಡೆ ಮೂರನೇ ಕ್ರಮಾಂಕಕ್ಕೂ ಒಲ್ಲೀ ಪೋಪ್ ಹಾಗೂ ಡೇವಿಡ್ ಮಲನ್ ಮಧ್ಯೆ ಯಾರಿಗೆ ಅವಕಾಶ ದೊರೆಯಬಹುದು ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಈ ಸ್ಥಾನಕ್ಕೆ ಈ ಇಬ್ಬರು ತೀವ್ರ ಪೈಪೋಟಿ ನಡೆಸಲಿದ್ದಾರೆ. ಉಳಿದಂತೆ ಲಾರ್ಡ್ಸ್ ಟೆಸ್ಟ್‌ನಲ್ಲಿ ಭುಜದ ಗಾಯಕ್ಕೆ ಒಳಗಾಗಿರುವ ಮಾರ್ಕ್‌ವುಡ್ ಮೂರನೇ ಟೆಸ್ಟ್‌ಗೆ ಅಲಭ್ಯವಾಗಲಿದ್ದಾರೆ ಎಂಬುದು ಖಚಿತವಾಗಿದೆ. ಹೀಗಾಗಿ ಅವರ ಸ್ಥಾನಕ್ಕೆ ಸಾಕಿಬ್ ಮಹಮೂದ್‌ಗೆ ಅವಕಾಶ ದೊರೆಯುವ ಸಾಧ್ಯತೆಯಿದೆ. ಉಳಿದಂತೆ ಲಾರ್ಡ್ಸ್ ಅಂಗಳದಲ್ಲಿ ಕಣಕ್ಕಿಳಿದ ಆಟಗಾರರು ಹೆಡಿಂಗ್ಲೆಯಲ್ಲಿಯೂ ಕಣಕ್ಕಿಳಿಯಲಿದ್ದಾರೆ,

ಇಂಗ್ಲೆಂಡ್ ಸಂಭಾವ್ಯ ತಂಡ: ರೋರಿ ಬರ್ನ್ಸ್, ಹಸೀಬ್ ಹಮೀದ್, ಡೇವಿಡ್ ಮಲನ್/ ಒಲೀ ಪೋಪ್, ಜೋ ರೂಟ್ (ನಾಯಕ), ಜೋಸ್ ಬಟ್ಲರ್ (ವಿಕೆಟ್ ಕೀಪರ್), ಜಾನಿ ಬೈರ್‌ಸ್ಟೊ, ಮೊಯೀನ್ ಅಲಿ, ಒಲ್ಲಿ ರಾಬಿನ್ಸನ್, ಸ್ಯಾಮ್ ಕರನ್, ಸಾಕಿಬ್ ಮಹಮೂದ್ ಮತ್ತು ಜೇಮ್ಸ್ ಆಂಡರ್ಸನ್.

ವಿರಾಟ್ ಹೀಗೆ ಎಗರಾಡೋದನ್ನ ಕಮ್ಮಿ ಮಾಡ್ಲಿಲ್ಲ ಅಂದ್ರೆ ಅಷ್ಟೆ ಕಥೆ! | Oneindia Kannada
ಟೀಮ್ ಇಂಡಿಯಾ ಸಂಭಾವ್ಯ ಆಡುವ ಬಳಗ

ಟೀಮ್ ಇಂಡಿಯಾ ಸಂಭಾವ್ಯ ಆಡುವ ಬಳಗ

ಟೀಮ್ ಇಂಡಿಯಾದ ಆಡುವ ಬಳಗದಲ್ಲಿ ಹೆಚ್ಚು ಚಿಂತಿಸುವ ಅಗತ್ಯವಿಲ್ಲ. ಅನುಭವಿ ಆಟಗಾರ ಚೇತೇಶ್ವರ್ ಪೂಜಾರ ಫಾರ್ಮ್ ಬಗ್ಗೆ ಸಾಕಷ್ಟು ಪ್ರಶ್ನೆಗಳಿದ್ದರೂ ಮತ್ತೊಂದು ಅವಕಾಶ ಅವರಿಗೆ ದೊರೆಯುವ ಸಾಧ್ಯತೆ ಹೆಚ್ಚಿದೆ. ಇನ್ನು ನಾಲ್ವರು ವೇಗಿಗಳು ಹಾಗೂ ಓರ್ವ ಸ್ಪಿನ್ನರ್ ಜೊತೆಗೆ ಕಣಕ್ಕಿಳಿಯುವ ಯೋಜನೆ ಇಂಗ್ಲೆಂಡ್ ನೆಲದಲ್ಲಿ ಯಶಸ್ಸು ನೀಡುತ್ತಿದ್ದು ಇದರಲ್ಲಿ ಬದಲಾವಣೆ ಮಾಡಿಕೊಳ್ಳುವುದರಲ್ಲಿ ಅರ್ಥವಿಲ್ಲ. ಇನ್ನು ಆರ್ ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಈ ಇಬ್ಬರು ಸ್ಪಿನ್ನರ್‌ಗಳಲ್ಲಿ ಯಾರು ಆಡಲಿಳಿಯುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. ಆರಂಬಿಕ ಎರಡು ಪಂದ್ಯಗಳಲ್ಲಿಯೂ ಅನುಭವಿ ಆರ್ ಅಶ್ವಿನ್ ಬೆಂಚ್ ಕಾದಿದ್ದಾರೆ. ಮತ್ತೊಂದೆಡೆ ರವೀಂದ್ರ ಜಡೇಜಾ ಬೌಲಿಂಗ್‌ನಲ್ಲಿ ಹೆಚ್ಚಿನ ಪರಿಣಾಮಕಾರಿಯಾಗಿ ಕಂಡು ಬಾರದಿರುವ ಹಿನ್ನೆಲೆಯಲ್ಲಿ ಆರ್ ಅಶ್ವಿನ್‌ಗೆ ಅವಕಾಶ ದೊರೆಯುವ ಸಾಧ್ಯತೆ ಹೆಚ್ಚಿದೆ. ಇನ್ನು ವೇಗಿಗಳ ಪೈಕಿ ಕಳೆದ ಪಂದ್ಯದಲ್ಲಿ ಆಡಿದ್ದ ಇಶಾಂತ್ ಶರ್ಮಾ ಬದಲಿಗೆ ಮೊದಲ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಶಾರ್ದೂಲ್ ಠಾಕೂರ್‌ಗೆ ಅವಕಾಶ ನೀಡಿದರೂ ಅಚ್ಚರಿಯಾಗಬೇಕಿಲ್ಲ.

ಭಾರತ ಸಂಭಾವ್ಯ ತಂಡ: ಕೆಎಲ್ ರಾಹುಲ್, ರೋಹಿತ್ ಶರ್ಮಾ, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರಿಷಭ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ/ ರವಿಚಂದ್ರನ್ ಅಶ್ವಿನ್, ಇಶಾಂತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್

Story first published: Tuesday, August 24, 2021, 22:09 [IST]
Other articles published on Aug 24, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X