ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊಹ್ಲಿ-ಸ್ಟೋಕ್ಸ್ ಮಧ್ಯೆ ಮಾತಿನ ಚಕಮಕಿ, ಅಂಪೈರ್‌ಗಳ ಮಧ್ಯ ಪ್ರವೇಶ: ವಿಡಿಯೋ

India vs England: heated argument between Virat Kohli and Ben Stokes: umpires intervene

ಭಾರತ ಹಾಗೂ ಇಂಗ್ಲೆಂಡ್ ನಡುವಿನ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆರಂಭವಾಗಿದೆ. ಟಾಸ್ ಗೆದ್ದು ಇಂಗ್ಲೆಂಡ್ ಬ್ಯಾಟಿಂಗ್‌ಗೆ ಇಳಿದರೂ ಭಾರತ ಆರಂಭದಿಂದಲೇ ಯಶಸ್ಸನ್ನು ಪಡೆಯಲು ಯಶಸ್ವಿಯಾಗಿತು. ಮೊದಲ ಸೆಶನ್‌ನಲ್ಲಿಯೇ ಇಂಗ್ಲೆಂಡ್ ಮೂರು ವಿಕೆಟ್ ಕಳೆದುಕೊಂಡು ಆತಂಕದಲ್ಲಿದೆ. ಆದರೆ ಇವುಗಳ ಮಧ್ಯೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಇಂಗ್ಲೆಂಡ್ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಮಧ್ಯೆ ಮಾತಿನ ಚಕಮಕಿ ನಡೆದ ಘಟನೆ ನಡೆಯಿತು.

ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ಬೌನ್ಸರ್ ಒಂದನ್ನು ಎಸೆದರು. ಆ ಎಸೆತದ ಬಳಿಕ ಬೆನ್ ಸ್ಟೋಕ್ಸ್ ಏನೋ ಹೇಳಿದ್ದರು. ಆದರೆ ಇದು ನಾಯಕ ವಿರಾಟ್ ಕೊಹ್ಲಿಗೆ ಸರಿ ಕಾಣಲಿಲ್ಲ. ತಕ್ಷಣವೇ ವಿರಾಟ್ ಕೊಹ್ಲಿ ಇಂಗ್ಲೆಂಡ್ ಆಟಗಾರನತ್ತ ಬಂದು ಮಾತನಾಡಲು ಆರಂಭಿಸಿದರು.

ಐಪಿಎಲ್‌ ಕುರಿತ ಹೇಳಿಕೆಗೆ ಕ್ಷಮೆಯಾಚಿಸಿದ ವೇಗಿ ಡೇಲ್ ಸ್ಟೇನ್ಐಪಿಎಲ್‌ ಕುರಿತ ಹೇಳಿಕೆಗೆ ಕ್ಷಮೆಯಾಚಿಸಿದ ವೇಗಿ ಡೇಲ್ ಸ್ಟೇನ್

ಕೆಲ ಕಾಲ ಇಬ್ಬರ ನಡುವಿನ ಮಾತುಗಳು ಮುಂದುವರಿಯುತ್ತಿದ್ದಂತೆಯೇ ಅಂಗಳದಲ್ಲಿದ್ದ ಅಂಪೈರ್‌ಗಳು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸಿದರು. ಅದಾದ ಬಳಿಕ ಇಬ್ಬರೂ ಆಟಗಾರರು ದೂರವಾದರು. ಈ ಮಾತುಕತೆಯಲ್ಲಿ ಏನಾಗಿದೆ ಎಂಬುದು ಸ್ಪಷ್ಟವಾಗದಿದ್ದರೂ ಇಂಗ್ಲೆಂಡ್ ತಂಡದ ವರ್ತನೆಗೆ ನಾಯಕ ಕೊಹ್ಲಿ ಅಸಮಾಧಾನಗೊಂಡಿರುವುದು ಸ್ಪಷ್ಟವಾಗಿತ್ತು.

ಇದಕ್ಕೂ ಮುನ್ನ ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮಾಷೆಯ ಬಂಟರ್ ನಡೆಸಿದ್ದು ಕ್ಯಾಮರಾದಲ್ಲಿ ಸೆರೆಯಾಗಿತ್ತು. ಆಟದ ಮಧ್ಯೆ ಅಡಚಣೆಯುಂಟಾದ ಕಾರಣ ಇಂಗ್ಲೆಂಡ್ ಬ್ಯಾಟ್ಸ್‌ಮನ್ ಕೆಲ ಕ್ಷಣ ಬ್ಯಾಟಿಂಗ್ ನಿಲ್ಲಿಸಿದ್ದರು. ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ತಮಾಷೆ ಮಾಡಿದ್ದರು.

ಕಡೆಗೂ ಆರ್‌ಸಿಬಿ ದಾಂಡಿಗನಿಂದ ಬಂತು ಸ್ಪೋಟಕ ಆಟ: ಕಿವೀಸ್ ವಿರುದ್ಧ ಆಸಿಸ್‌ಗೆ ಭರ್ಜರಿ ಗೆಲುವುಕಡೆಗೂ ಆರ್‌ಸಿಬಿ ದಾಂಡಿಗನಿಂದ ಬಂತು ಸ್ಪೋಟಕ ಆಟ: ಕಿವೀಸ್ ವಿರುದ್ಧ ಆಸಿಸ್‌ಗೆ ಭರ್ಜರಿ ಗೆಲುವು

ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭಾರತ ಆರಂಭದಿಂದಲೇ ತನ್ನ ಹಿಡಿತವನ್ನು ಸಾಧಿಸಲು ಆರಂಭಿಸಿದೆ. ಅಕ್ಷರ್ ಪಟೇಲ್ ಮೊದಲ ಎರಡು ವಿಕೆಟ್ ಕಿತ್ತು ಮಿಂಚಿದರೆ ಮೊಹಮ್ಮದ್ ಸಿರಾಜ್ ಇಂಗ್ಲೆಂಡ್ ನಾಯಕ ಜೋ ರೂಟ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

Story first published: Thursday, March 4, 2021, 11:36 [IST]
Other articles published on Mar 4, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X