ಟೀಮ್ ಇಂಡಿಯಾ ಆಡುವ ಬಳಗದ ಬಗ್ಗೆ ಭವಿಷ್ಯ ನುಡಿದ ಮೈಕಲ್ ವಾನ್

ಲೀಡ್ಸ್, ಆಗಸ್ಟ್ 24: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಮೂರನೇ ಪಂದ್ಯ ಬುಧವಾರ ಆರಂಭವಾಗಲಿದೆ. ಲಾರ್ಡ್ಸ್ ಪಂದ್ಯವನ್ನು ಗೆದ್ದಿರುವ ಟೀಮ್ ಇಂಡಿಯಾ ಈ ಪಂದ್ಯವನ್ನು ಕೂಡ ಗೆಲ್ಲುವ ಕಾತುರದಲ್ಲಿದೆ. ಆದರೆ ಆತಿಥೇಯ ಇಂಗ್ಲೆಂಡ್ ತಂಡ ಹೆಡಿಂಗ್ಲೆ ಅಂಗಳದಲ್ಲಿ ಟೀಮ್ ಇಂಡಿಯಾಗೆ ಕಠಿಣ ಸವಾಲನ್ನು ನೀಡುವುದರಲ್ಲಿ ಅನುಮಾನವಿಲ್ಲ. ಹೀಗಾಗಿ ಮೂರನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಯಾವ ಆಟಗಾರರ ಸಂಯೋಜನೆಯಲ್ಲಿ ಆಡಲಿಳಿಯಲಿದೆ ಎಂಬುದು ಕುತೂಹಲ ಮೂಡಿಸಿದೆ. ಆದರೆ ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್ ಟೀಮ್ ಇಂಡಿಯಾ ಈ ಪಂದ್ಯದಲ್ಲಿ ಮೊದಲೆರಡು ಪಂದ್ಯಗಳಲ್ಲಿ ಆಡುವ ಬಳಗದಿಂದ ಹೊರಗುಳಿದಿದ್ದ ಆಟಗಾರನ ಸೇರ್ಪಡೆಯ ಬಗ್ಗೆ ಮಾತನಾಡಿದ್ದಾರೆ.

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಟೀಮ್ ಇಂಡಿಯಾದ ಅನುಭವಿ ಆಟಗಾರ ಆರ್ ಅಶ್ವಿನ್ ಆಡುವ ಬಳಗದಲ್ಲಿ ಕಾಣಿಸಿಕೊಳ್ಳದೆ ಅಚ್ಚರಿ ಮೂಡಿಸಿದ್ದರು. ಆದರೆ ಮೂರನೇ ಪಂದ್ಯದಲ್ಲಿಯೂ ಆರ್ ಅಶ್ವಿನ್ ಇಂಗ್ಲೆಂಡ್ ವಿರುದ್ಧ ಆಡದೆ ಇದ್ದರೆ ನನಗೆ ಬಹಳ ಆಶ್ಚರ್ಯವಾಗಲಿದೆ ಎಂದು ಮೈಕಲ್ ವಾನ್ ಹೇಳಿದ್ದಾರೆ.

ಅಫ್ಘಾನಿಸ್ತಾನ-ಪಾಕಿಸ್ತಾನ ಏಕದಿನ ಸರಣಿ ಶ್ರೀಲಂಕಾದಿಂದ ಪಾಕಿಸ್ತಾನಕ್ಕೆ ಸ್ಥಳಾಂತರಅಫ್ಘಾನಿಸ್ತಾನ-ಪಾಕಿಸ್ತಾನ ಏಕದಿನ ಸರಣಿ ಶ್ರೀಲಂಕಾದಿಂದ ಪಾಕಿಸ್ತಾನಕ್ಕೆ ಸ್ಥಳಾಂತರ

ಇನ್ನು ಈ ಪಂದ್ಯದಲ್ಲಿ ಭಾರತ ನಾಲ್ಕು ವೇಗಿಗಳ ಬದಲಿಗೆ ಮೂವರು ವೇಗಿಗಳು ಹಾಗೂ ಇಬ್ಬರು ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿಯಲಿದೆ ಎಂದು ಮೈಕಲ್ ವಾನ್ ಭವಿಷ್ಯ ನುಡಿದಿದ್ದಾರೆ. ಎರಡನೇ ಪಂದ್ಯದಲ್ಲಿ ಆಡಿದ್ದ ಅನುಭವಿ ವೇಗಿ ಇಶಾಂತ್ ಶರ್ಮಾ ಆರ್ ಅಶ್ವನ್‌ಗಾಗಿ ಸ್ಥಾನವನ್ನು ಬಿಟ್ಟುಕೊಡಬೇಕಾಗಲಿದೆ ಎಂದು ಮೈಕಲ್ ವಾನ್ ಹೇಳಿಕೆ ನೀಡಿದ್ದಾರೆ. ಇಶಾಂತ್ ಶರ್ಮಾ ಎರಡನೇ ಟೆಸ್ಟ್ ಪಂದ್ಯದಲ್ಲಿ ಶಾರ್ದೂಲ್ ಠಾಕೂರ್ ಬದಲಿಗೆ ಕಣಕ್ಕಿಳಿದಿದ್ದರು. ನಾಟಿಂಗ್‌ಹ್ಯಾಮ್‌ನಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಶಾರ್ದೂಲ್ ಠಾಕೂರ್ ಬಳಿಕ ಗಾಯಗೊಂಡಿದ್ದರು. ಹೀಗಾಗಿ ಲಾರ್ಡ್ಸ್ ಅಂಗಳದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಶಾರ್ದೂಲ್ ಕಣಕ್ಕಿಳಿದಿರಲಿಲ್ಲ.

ಸದ್ಯ ಶಾರ್ದೂಲ್ ಠಾಕೂರ್ ಕೂಡ ಗಾಯದಿಂದ ಚೇತರಿಸಿಕೊಂಡಿದ್ದು ಮೂರನೇ ಟೆಸ್ಟ್ ಪಂದ್ಯಕ್ಕೆ ಎಲ್ಲಾ ಆಟಗಾರರು ಕೂಡ ಆಡಲು ಲಭ್ಯವಿದ್ದಾರೆ. ಹೀಗಾಗಿ ತಂಡದಲ್ಲಿ ಯಾವ ರೀತಿಯ ಬದಲಾವಣೆ ಮಾಡಿಕೊಳ್ಳಬಹುದು ಎಂಬುದು ಕುತೂಹಲ ಮೂಡಿಸಿದೆ. ಈ ಬಗ್ಗೆ ಮೈಕಲ್ ವಾನ್ ಪ್ರತಿಕ್ರಿಯೆ ನೀಡಿದ್ದಾರೆ. "ನೋಡಲು ಈ ವಾರ ತುಂಬಾ ಉತ್ತಮವಾಗಿರುವಂತೆ ತೋರುತ್ತಿದೆ. ಬಿಸಿಲಿನಿಂದ ಕೂಡಿದ್ದು ಉತ್ತಮ ವಾತಾವರಣದಿಂದ ಕೂಡಿದೆ. ಈ ವಾರದಲ್ಲಿಯೂ ಆರ್ ಅಶ್ವಿನ್ ಆಡಲು ಇಳಿಯದಿದ್ದರೆ ನನಗೆ ಬಹಳ ಅಚ್ಚರಿಯಾಗಲಿದೆ" ಎಂದಿದ್ದಾರೆ ಮೈಕಲ್ ವಾನ್.

"ನನ್ನ ಪ್ರಕಾರ ಅವರು ಇಬ್ಬರು ಸ್ಪಿನ್ನರ್‌ಗಳು ಹಾಗೂ ಮೂವರು ವೇಗಿಗಳೊಂದಿಗೆ ಕಣಕ್ಕಿಳಿಯಲಿದ್ದಾರೆ. ಹೆಡಿಂಗ್ಲೆ ಅಂಗಳದಲ್ಲಿ ಅದು ಅತ್ಯುತ್ತಮ ನಿರ್ಧಾರವಾಗಲಿದೆ. ಇದು ಬ್ಯಾಟಿಂಗ್‌ಅನ್ನು ಕೂಡ ಒಳಗೊಂಡಿರುವುದು ಮಹತ್ವದ ಸಂಗತಿ. ಹೀಗಾಗಿ ಲಾರ್ಡ್ಸ್ ಮೈದಾನದಲ್ಲಿ ಆಡಿದ ಪಂದ್ಯದಲ್ಲಿ ಅಂತಿಮ ದಿನ ಇಶಾಂತ್ ಶರ್ಮಾ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಹೊರತಾಗಿಯೂ ಇಶಾಂತ್ ಶರ್ಮಾ ಮೂರನೇ ಟೆಸ್ಟ್ ಪಂದ್ಯದಲ್ಲಿ ಆಡುವುದು ಅನುಮಾನವಾಗಿದೆ" ಎಂದಿದ್ದಾರೆ ಮೈಕಲ್ ವಾನ್.

ಇನ್ನು ಲೀಡ್ಸ್ ಮೈದಾನದಲ್ಲಿ ದಿನ ಕಳೆದಂತೆಯೇ ಸ್ಪಿನ್ನರ್‌ಗಳಿಗೆ ಹೆಚ್ಚನ ಅನುಕೂ ದೊರೆಯುವ ಸಾಧ್ಯತೆಯನ್ನು ವಾನ್ ಹೇಳಿದ್ದಾರೆ. "ಇಂಗ್ಲೆಂಡ್ ತಂಡ ಕಳೆದ ಕೆಲ ವರ್ಷಗಳಲ್ಲಿ ಆಡಿರುವುದನ್ನು ಗಮನಿಸಿದ ಬಳಿಕ ಹಾಗೂ ಕೌಂಟಿ ಕ್ರಿಕೆಟ್ ಪಂದ್ಯವನ್ನು ಕೂಡ ಗಮನಿಸಿದ ನಂತರ ಇಲ್ಲಿ ಸ್ಪಿನ್ ಬೌಲಿಂಗ್‌ಗೂ ಹೆಚ್ಚಿನ ಅವಕಾಶವಿದೆ ಎಂಬುದನ್ನು ಅರಿತಿತುಕೊಳ್ಳಬಹುದಾಗಿದೆ.

ಲಾರ್ಡ್ಸ್ ಪಂದ್ಯದಲ್ಲಿ ಗೆಲುವು ಸಾಧಿಸಿದ ಉತ್ಸಾಹದಲ್ಲಿರುವ ಟೀಮ್ ಇಂಡಿಯಾ ಹಾಗೂ ಸೋಲಿಗೆ ಪ್ರತಿಕಾರವನ್ನು ತೀರಿಸಿಕೊಳ್ಳಲು ಕಾಯುತ್ತಿರುವ ಇಂಗ್ಲೆಂಡ್ ತಂಡಗಳು ಈಗ ಮೂರನೇ ಕದನಕ್ಕೆ ಸಜ್ಜಾಗುತ್ತಿದೆ. ಲೀಡ್ಸ್ ಅಂಗಳದಲ್ಲಿ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಮೂರನೇ ಪಂದ್ಯ ಬುಧವಾರದಿಂದ ಆರಂಭವಾಗಲಿದೆ. ಎರಡೂ ತಂಡಗಳ ಜಿದ್ದಾಜಿದ್ದಿನ ಹೋರಾಟ ಈಗ ಸರಣಿಯಲ್ಲಿನ ರೋಚಕತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಟೀಮ್ ಇಂಡಿಯಾ ಲಾರ್ಡ್ಸ್ ಅಂಗಳದಲ್ಲಿ ಗೆಲುವು ಸಾಧಿಸಿದ್ದರೂ ತಂಡದಲ್ಲಿ ಕೆಲ ಬದಲಾವಣೆಯಾಗುವ ಸಾಧ್ಯತೆಯಿದೆ. ಅನುಭವಿ ಚೇತೇಶ್ವರ್ ಪೂಜಾರಾಗೆ ವಿಶ್ರಾಂತಿ ನೀಡುವ ಸಾಧ್ಯತೆಯಿದ್ದು ಸೂರ್ಯಕುಮಾರ್ ಯಾದವ್ ಟೆಸ್ಟ್ ಕ್ಯಾಪ್ ತೊಡುವ ಸಾಧ್ಯತೆಯಿದೆ. ಬೌಲಿಂಗ್ ವಿಭಾಗದಲ್ಲಿ ತಂಡದ ಸಂಯೋಜನೆ ಹೇಗಿರಬಹುದು ಎಂಬುದು ಕೂಡ ಕುತೂಹಲದ ಪ್ರಶ್ನೆಯಾಗಿದೆ
ಭಾರತ ಸಂಭಾವ್ಯ ತಂಡ: ಕೆಎಲ್ ರಾಹುಲ್, ರೋಹಿತ್ ಶರ್ಮಾ, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರಿಷಭ್ ಪಂತ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್/ ರವೀಂದ್ರ ಜಡೇಜಾ, ಇಶಾಂತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಮತ್ತು ಮೊಹಮ್ಮದ್ ಶಮಿ

Anderson ಹಾಗು Bumrah ನಡುವೆ ಅಸಲಿಗೆ ನಡೆದಿದ್ದೇನು | Oneindia kannada

ಇನ್ನು ಇಂಗ್ಲೆಂಡ್ ತಂಡದಲ್ಲಿ ಕೆಲ ಪ್ರಮುಖ ಬದಲಾವಣೆಗಳು ನಡೆಯುವುದು ಖಚಿತ. ಇಂಗ್ಲೆಂಡ್ ತಂಡದಲ್ಲಿ ಸಿಬ್ಲಿ ಹಾಗೂ ಕ್ರಾವ್ಲೆ ಮೂರನೇ ಟೆಸ್ಟ್‌ನಿಂದ ಹೊರಬಿದ್ದಿರುವ ಕಾರಣದಿಂದಾಗಿ ಆರಂಭಿಕನಾಗಿ ರೋರಿ ಬರ್ನ್ಸ್‌ಗೆ ಹಸೀಬ್ ಹಮೀದ್ ಸಾಥ್ ನೀಡುವುದು ಬಹುತೇಕ ಸ್ಪಷ್ಟ. ಮತ್ತೊಂದೆಡೆ ಮೂರನೇ ಕ್ರಮಾಂಕಕ್ಕೂ ಒಲ್ಲೀ ಪೋಪ್ ಹಾಗೂ ಡೇವಿಡ್ ಮಲನ್ ಮಧ್ಯೆ ಯಾರಿಗೆ ಅವಕಾಶ ದೊರೆಯಬಹುದು ಎಂಬುದು ಕುತೂಹಲಕ್ಕೆ ಮೂಡಿಸಿದೆ. ಈ ಸ್ಥಾನಕ್ಕೆ ಈ ಇಬ್ಬರು ಆಟಗಾರರು ತೀವ್ರ ಪೈಪೋಟಿ ನಡೆಸಲಿದ್ದಾರೆ. ಉಳಿದಂತೆ ಲಾರ್ಡ್ಸ್ ಟೆಸ್ಟ್‌ನಲ್ಲಿ ಭುಜದ ಗಾಯಕ್ಕೆ ಒಳಗಾಗಿರುವ ಮಾರ್ಕ್‌ವುಡ್ ಮೂರನೇ ಟೆಸ್ಟ್‌ನಲ್ಲಿ ಕಣಕ್ಕಿಳಿಯುವುದಿಲ್ಲ. ಹೀಗಾಗಿ ಅವರ ಸ್ಥಾನದಲ್ಲಿ ಸಾಕಿಬ್ ಮಹಮೂದ್‌ಗೆ ಆಡಲು ಅವಕಾಶ ದೊರೆಯಬಹುದು. ಉಳಿದಂತೆ ಲಾರ್ಡ್ಸ್ ಅಂಗಳದಲ್ಲಿ ಕಣಕ್ಕಿಳಿದ ಆಟಗಾರರು ಹೆಡಿಂಗ್ಲೆಯಲ್ಲಿಯೂ ಆಡುವ ಬಳಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ.ಇಂಗ್ಲೆಂಡ್ ಸಂಭಾವ್ಯ ತಂಡ: ರೋರಿ ಬರ್ನ್ಸ್, ಹಸೀಬ್ ಹಮೀದ್, ಒಲೀ ಪೋಪ್/ಡೇವಿಡ್ ಮಲನ್, ಜೋ ರೂಟ್ (ನಾಯಕ), ಜೋಸ್ ಬಟ್ಲರ್ (ವಿಕೆಟ್ ಕೀಪರ್), ಜಾನಿ ಬೈರ್‌ಸ್ಟೊ, ಮೊಯೀನ್ ಅಲಿ, ಒಲ್ಲಿ ರಾಬಿನ್ಸನ್, ಸ್ಯಾಮ್ ಕರನ್, ಜೇಮ್ಸ್ ಆಂಡರ್ಸನ್ ಮತ್ತು ಸಾಕಿಬ್ ಮಹಮೂದ್

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 15 - October 24 2021, 03:30 PM
ಶ್ರೀಲಂಕಾ
ಬಾಂಗ್ಲಾದೇಶ್
Predict Now

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Tuesday, August 24, 2021, 15:15 [IST]
Other articles published on Aug 24, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X