ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಇಂಗ್ಲೆಂಡ್: ಭರ್ಜರಿ ಶತಕ ಸಿಡಿಸಿ ಮಿಂಚಿದ ರಿಷಭ್ ಪಂತ್

India vs England: Rishabh Pant hits century against England

ಟೀಮ್ ಇಂಡಿಯಾ ಯುವ ಆಟಗಾರ ರಿಷಭ್ ಪಂತ್ ಇಂಗ್ಲೆಂಡ್ ವಿರುದ್ಧದ ಸರಣಿಯ ಅಂತಿಮ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಭರ್ಜರಿ ಶತಕವನ್ನು ಸಿಡಿಸಿದ್ದಾರೆ. ಈ ಮೂಲಕ ಟೀಮ್ ಇಂಡಿಯಾ ಇಂಗ್ಲೆಂಡ್ ಗಳಿಸಿದ ಮೊತ್ತವನ್ನು ಹಿಂದಿಕ್ಕಿ ಉತ್ತಮ ರನ್‌ಗಳಿಸಲು ಸಾಧ್ಯವಾಗಿದೆ. 101 ರನ್‌ಗಳಿಸಿದ ರಿಷಭ್ ಪಂತ್ ಜೇಮ್ಸ್ ಆಂಡರ್ಸನ್‌ಗೆ ವಿಕೆಟ್ ಒಪ್ಪಿಸಿದ್ದಾರೆ.

ಇದು ರಿಷಭ್ ಪಂತ್ ಟೆಸ್ಟ್ ಕ್ರಿಕೆಟ್‌ ಸಿಡಿಸಿದ ಮೂರನೇ ಶತಕವಾಗಿದ್ದರೆ ಭಾರತದ ನೆಲದಲ್ಲಿ ಸಿಡಿಸಿದ ಚೊಚ್ಚಲ ಶತಕ ಎನಿಸಿದೆ. ಈ ಮೂಲಕ ಮತ್ತೊಂದು ಗಮನಾರ್ಹ ಕೊಡುಗೆಯನ್ನು ಟೀಮ್ ಇಂಡಿಯಾ ಪರವಾಗಿ ನೀಡಿದ್ದಾರೆ ರಿಷಭ್ ಪಂತ್.

ಭಾರತ vs ಇಂಗ್ಲೆಂಡ್: ಅಂತಿಮ ಟೆಸ್ಟ್, 2ನೇ ದಿನ, Live ಸ್ಕೋರ್ ಮಾಹಿತಿಭಾರತ vs ಇಂಗ್ಲೆಂಡ್: ಅಂತಿಮ ಟೆಸ್ಟ್, 2ನೇ ದಿನ, Live ಸ್ಕೋರ್ ಮಾಹಿತಿ

ಅಮೂಲ್ಯ ಜೊತೆಯಾಟ

ಅಮೂಲ್ಯ ಜೊತೆಯಾಟ

ಟೀಮ್ ಇಂಡಿಯಾ 80 ರನ್‌ಗಳಿಸಿದ್ದಾಗ 4ನೇ ವಿಕೆಟ್ ಕಳೆದುಕೊಂಡಾಗ ರಿಷಭ್ ಪಂತ್ ರೋಹಿತ್ ಶರ್ಮಾ ಅವರನ್ನು ಸೇರಿಕೊಂಡರು. ರೋಹಿತ್ ಶರ್ಮಾ, ಆರ್ ಅಶ್ವಿನ್ ಹಾಗೂ ವಾಶಿಂಗ್ಟನ್ ಸುಂದರ್ ಅವರೊಂದಿಗೆ ಅಮೂಲ್ಯ ಜೊತೆಯಾಟವನ್ನು ನೀಡಿದರು ಪಂತ್. ಈ ಮೂಲಕ ಭಾರತವನ್ನು ಸಂಕಷ್ಟದಿಂದ ಮೇಲೆತ್ತುವಲ್ಲಿ ಸಫಲರಾದರು.

7 ಪಂದ್ಯಗಳಲ್ಲಿ 3 ಬಾರಿ ಶತಕ ತಪ್ಪಿಸಿಕೊಂಡಿದ್ದ ಪಂತ್

7 ಪಂದ್ಯಗಳಲ್ಲಿ 3 ಬಾರಿ ಶತಕ ತಪ್ಪಿಸಿಕೊಂಡಿದ್ದ ಪಂತ್

ರಿಷಭ್ ಪಂತ್ ಆಸ್ಟ್ರೇಲಿಯಾ ವಿರುದ್ಧದ ಸರಣಿಯಿಂದಲೂ ಉತ್ತಮ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದು ತಂಡಕ್ಕೆ ಹಲವು ಬಾರಿ ನೆರವಾಗಿದ್ದಾರೆ. ಕಳೆದ 7 ಪಂದ್ಯಗಳಲ್ಲಿ ಪಂತ್ 3 ಬಾರಿ ಶತಕದ ಅಂಚಿಗೆ ಬಂದು ಎಡವಿದ್ದರು. 97, 89*, ಹಾಗೂ 91 ಗಳಿಸಿದ್ದ ಪಂತ್ ಈ ಸ್ಕೋರ್‌ಗಳನ್ನು ಶತಕವನ್ನಾಗಿ ಪರಿವರ್ತಿಸಲು ವಿಫಲರಾಗಿದ್ದರು. ಕಡೆಗೂ ಈ ಜಾಲದಿಂದ ಪಂತ್ ಹೊರಬಂದಿದ್ದಾರೆ.

ದ್ವಿತಿಯಾರ್ಧದಲ್ಲಿ ಪಂತ್ ಭರ್ಜರಿ ಆಟ

ದ್ವಿತಿಯಾರ್ಧದಲ್ಲಿ ಪಂತ್ ಭರ್ಜರಿ ಆಟ

ಮೊದಲಾರ್ಧದಲ್ಲಿ ರನ್‌ಗಳಿಸಲು ಒಂದಷ್ಟು ಪರದಾಡಿದ ರಿಷಭ್ ಪಂತ್ ಅರ್ಧ ಶತಕವನ್ನುಗಳಿಸಿದ ಬಳಿಕ ತಮ್ಮ ಎಂದಿನ ಲಯಕ್ಕೆ ಮರಳಿದರು. 13 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸಿ ತಮ್ಮ ಶತಕವನ್ನು ಪೂರೈಸಿದ್ದಾರೆ. ಸಿಕ್ಸರ್ ಮೂಲಕ ಶತಕವನ್ನು ಸಂಪೂರ್ಣಗೊಳಿಸಿದ ಪಂತ್ ಬಳಿಕ ಆಂಡರ್ಸನ್ ಎಸೆದ ರಿವರ್ಸ್‌ಸ್ವಿಂಗ್ ಎಸೆತಕ್ಕೆ ಕ್ಯಾಚ್ ನೀಡಿ ನಿರ್ಗಮಿಸಿದರು

Story first published: Friday, March 5, 2021, 18:09 [IST]
Other articles published on Mar 5, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X