ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಐರ್ಲೆಂಡ್ 2ನೇ ಟಿ20: ಈ ಮೈಲಿಗಲ್ಲುಗಳ ಮೇಲೆ ಪಾಂಡ್ಯ, ಇಶಾನ್ ಕಿಶನ್ ಮತ್ತು ಡಿಕೆ ಕಣ್ಣು

India vs Ireland 2nd T20 stats preview: Players records and approaching milestones

ಐರ್ಲೆಂಡ್ ಪ್ರವಾಸವನ್ನು ಕೈಗೊಂಡಿರುವ ಟೀಮ್ ಇಂಡಿಯಾ 2 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಕಣಕ್ಕಿಳಿದಿದೆ. ಈ ಪೈಕಿ ಪ್ರಥಮ ಪಂದ್ಯ ಈಗಾಗಲೇ ಮುಕ್ತಾಯಗೊಂಡಿದ್ದು, ಈ ಪಂದ್ಯದಲ್ಲಿ ಗೆದ್ದ ಟೀಮ್ ಇಂಡಿಯಾ ಮುನ್ನಡೆಯನ್ನು ಕಾಯ್ದುಕೊಂಡಿದೆ.

ರಿಷಭ್ ಪಂತ್ ಪದಾರ್ಪಣೆ ಮಾಡಿದ್ದ ಪಂದ್ಯದಲ್ಲಿ ಆಡಿದ್ದ ಈ ಐವರು ಆಟಗಾರರು ಈಗ ತಂಡದಲ್ಲಿಯೇ ಇಲ್ಲರಿಷಭ್ ಪಂತ್ ಪದಾರ್ಪಣೆ ಮಾಡಿದ್ದ ಪಂದ್ಯದಲ್ಲಿ ಆಡಿದ್ದ ಈ ಐವರು ಆಟಗಾರರು ಈಗ ತಂಡದಲ್ಲಿಯೇ ಇಲ್ಲ

ಹೌದು, ಭಾರತ ಮತ್ತು ಐರ್ಲೆಂಡ್ ತಂಡಗಳ ನಡುವಿನ ಪ್ರಥಮ ಟಿ ಟ್ವೆಂಟಿ ಪಂದ್ಯ ನಿನ್ನೆ ( ಜೂನ್ 26 ) ಡಬ್ಲಿನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಜರುಗಿತು. ಈ ಪಂದ್ಯದಲ್ಲಿ ಟೀಂ ಇಂಡಿಯಾ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡಿತು ಹಾಗೂ ಆತಿಥೇಯ ಐರ್ಲೆಂಡ್ ಮೊದಲು ಬ್ಯಾಟಿಂಗ್ ಮಾಡಿತು. ಇನ್ನು ಪಂದ್ಯಕ್ಕೆ ಮಳೆರಾಯ ಅಡ್ಡಿ ಉಂಟು ಮಾಡಿದ ಕಾರಣ ಓವರ್‌ಗಳ ಸಂಖ್ಯೆಯನ್ನು 12ಕ್ಕೆ ಇಳಿಸಲಾಗಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಐರ್ಲೆಂಡ್ 12 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 108 ರನ್ ಕಲೆಹಾಕಿತು. ಇತ್ತ 9.2 ಓವರ್‌ಗಳಲ್ಲಿಯೇ ಗುರಿಯನ್ನು ದಾಟಿ ಗೆಲುವಿನ ನಗೆ ಬೀರಿದ ಟೀಮ್ ಇಂಡಿಯಾ 3 ವಿಕೆಟ್ ನಷ್ಟಕ್ಕೆ 111 ರನ್ ಕಲೆಹಾಕಿ 7 ವಿಕೆಟ್‍ಗಳ ಅಂತರದ ಜಯ ಸಾಧಿಸಿ ಸರಣಿಯಲ್ಲಿ ಗೆಲುವಿನ ಖಾತೆ ತೆರೆದಿದೆ.

ನಾಯಕನಾಗಿ ಅತಿಹೆಚ್ಚು ಟೆಸ್ಟ್ ಶತಕ ಬಾರಿಸಿದ ಆಟಗಾರರ ಪಟ್ಟಿ; ಕೊಹ್ಲಿ, ಪಾಂಟಿಂಗ್ ಅಲ್ಲ ನಂಬರ್ 1!ನಾಯಕನಾಗಿ ಅತಿಹೆಚ್ಚು ಟೆಸ್ಟ್ ಶತಕ ಬಾರಿಸಿದ ಆಟಗಾರರ ಪಟ್ಟಿ; ಕೊಹ್ಲಿ, ಪಾಂಟಿಂಗ್ ಅಲ್ಲ ನಂಬರ್ 1!

ಇನ್ನು ಭಾರತ ಮತ್ತು ಐರ್ಲೆಂಡ್ ತಂಡಗಳ ನಡುವಿನ ದ್ವಿತೀಯ ಟಿ ಟ್ವೆಂಟಿ ಪಂದ್ಯ ನಾಳೆ ( ಜೂನ್ 28 ) ಇದೇ ಡಬ್ಲಿನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಐರ್ಲೆಂಡ್ ಈ ಪಂದ್ಯದಲ್ಲಿ ಗೆದ್ದು ವೈಟ್ ವಾಷ್ ಮುಖಭಂಗ ತಪ್ಪಿಸಿಕೊಳ್ಳುವ ಯೋಜನೆಯಲ್ಲಿದ್ದರೆ, ಟೀಮ್ ಇಂಡಿಯಾ ಈ ಪಂದ್ಯದಲ್ಲಿಯೂ ಗೆದ್ದು ಐರ್ಲೆಂಡ್ ವಿರುದ್ಧ ಟಿ ಟ್ವೆಂಟಿ ಕ್ರಿಕೆಟ್ ಇತಿಹಾಸದಲ್ಲೇ ಯಾವುದೇ ಪಂದ್ಯವನ್ನು ಸೋಲದ ತನ್ನ ಮೈಲಿಗಲ್ಲನ್ನು ಮುಂದುವರೆಸುವ ಯೋಜನೆಯಲ್ಲಿದೆ. ಹೀಗೆ ಈ ಪಂದ್ಯದಲ್ಲಿ ಎರಡೂ ತಂಡಗಳು ಗೆಲುವಿನತ್ತ ಕಣ್ಣಿಟ್ಟಿದ್ದರೆ, ಕೆಲ ಆಟಗಾರರು ತಮ್ಮದೇ ಆದ ಕೆಲ ಮೈಲಿಗಲ್ಲುಗಳನ್ನು ಸೃಷ್ಟಿಸುವ ಸಾಧ್ಯತೆಗಳಿವೆ. ಅವುಗಳ ಪಟ್ಟಿ ಕೆಳಕಂಡಂತಿದೆ ಓದಿ.

ಈ ಮೈಲಿಗಲ್ಲು ಮುಟ್ಟುತ್ತಾರಾ ಹಾರ್ದಿಕ್ ಪಾಂಡ್ಯ?

ಈ ಮೈಲಿಗಲ್ಲು ಮುಟ್ಟುತ್ತಾರಾ ಹಾರ್ದಿಕ್ ಪಾಂಡ್ಯ?

• ಭಾರತ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಟಿ20ಯಲ್ಲಿ 250 ಬೌಂಡರಿಗಳನ್ನು ಪೂರೈಸಲು ಈ ಪಂದ್ಯದಲ್ಲಿ 6 ಬೌಂಡರಿಗಳನ್ನು ಬಾರಿಸಬೇಕಾದ ಅಗತ್ಯವಿದೆ.

• ಟಿ20ಯಲ್ಲಿ 50 ಬೌಂಡರಿಗಳನ್ನು ಪೂರೈಸಲು ಹಾರ್ದಿಕ್ ಪಾಂಡ್ಯಗೆ ಇನ್ನೂ 5 ಬೌಂಡರಿಗಳನ್ನು ಬಾರಿಸಬೇಕಾದ ಅಗತ್ಯವಿದೆ.

ರಾಹುಲ್ ತ್ರಿಪಾಠಿ ಮುಟ್ಟಬಹುದಾದ ಮೈಲಿಗಲ್ಲುಗಳು

ರಾಹುಲ್ ತ್ರಿಪಾಠಿ ಮುಟ್ಟಬಹುದಾದ ಮೈಲಿಗಲ್ಲುಗಳು

• ಭಾರತದ ಬ್ಯಾಟರ್ ರಾಹುಲ್ ತ್ರಿಪಾಠಿ ಟಿ20ಯಲ್ಲಿ 250 ಬೌಂಡರಿಗಳನ್ನು ಪೂರೈಸಲು ಇನ್ನೂ 2 ಬೌಂಡರಿಗಳನ್ನು ಬಾರಿಸಬೇಕಾದ ಅಗತ್ಯವಿದೆ.

• ಭಾರತದ ಬ್ಯಾಟರ್ ರಾಹುಲ್ ತ್ರಿಪಾಠಿಗೆ ಟಿ20ಯಲ್ಲಿ 100 ಸಿಕ್ಸರ್‌ಗಳನ್ನು ಪೂರೈಸಲು ಇನ್ನೂ 3 ಸಿಕ್ಸರ್‌ಗಳನ್ನು ಬಾರಿಸಬೇಕಿದೆ.

ಈ ಮೈಲಿಗಲ್ಲುಗಳ ಮೇಲೆ ಇಶಾನ್ ಕಿಶನ್ ಮತ್ತು ಡಿ ಕೆ ಕಣ್ಣು

ಈ ಮೈಲಿಗಲ್ಲುಗಳ ಮೇಲೆ ಇಶಾನ್ ಕಿಶನ್ ಮತ್ತು ಡಿ ಕೆ ಕಣ್ಣು

• ದಿನೇಶ್ ಕಾರ್ತಿಕ್ ಈ ಪಂದ್ಯದಲ್ಲಿ 4 ರನ್ ಕಲೆಹಾಕಿದರೆ ಅಂತರರಾಷ್ಟ್ರೀಯ ಟಿ ಟ್ವೆಂಟಿ ಕ್ರಿಕೆಟ್‍ನಲ್ಲಿ 500 ರನ್ ಪೂರೈಸಿದ ಮೈಲಿಗಲ್ಲನ್ನು ಮುಟ್ಟಲಿದ್ದಾರೆ.

• ಇಶಾನ್ ಕಿಶನ್ ಈ ಪಂದ್ಯದಲ್ಲಿ 3 ಬೌಂಡರಿ ಬಾರಿಸಿದರೆ 350 ಟಿ20 ಕ್ರಿಕೆಟ್‌ ಬೌಂಡರಿಗಳನ್ನು ಬಾರಿಸಿದ ಮೈಲಿಗಲ್ಲನ್ನು ಮುಟ್ಟಲಿದ್ದಾರೆ.

Story first published: Tuesday, June 28, 2022, 10:38 [IST]
Other articles published on Jun 28, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X