ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮೊದಲ ಟಿ20ಐ : ಐರ್ಲೆಂಡ್ ವಿರುದ್ಧ ಭಾರತಕ್ಕೆ 76ರನ್ ಗಳ ಜಯ

By Mahesh
IND vs IRE 1st T20 : ಐರ್ಲೆಂಡ್ ವಿರುದ್ಧ ಭಾರತಕ್ಕೆ 76ರನ್ ಗಳ ಜಯ | Oneindia Kannada
Rohith sharma

ಡಬ್ಲಿನ್, ಜೂನ್ 27: ಐರ್ಲೆಂಡ್ ವಿರುದ್ಧದ ಎರಡು ಪಂದ್ಯಗಳ ಟಿ20ಐ ಸರಣಿಯ ಮೊದಲ ಪಂದ್ಯದಲ್ಲಿ ಭಾರತೀಯ ಬ್ಯಾಟ್ಸ್ ಮನ್ ಗಳು ಭರ್ಜರಿ ಬ್ಯಾಟಿಂಗ್, ಬೌಲಿಂಗ್ ಪ್ರದರ್ಶಿಸಿ ತಂಡಕ್ಕೆ ಜಯ ತಂದಿತ್ತಿದ್ದಾರೆ. ಐರ್ಲೆಂಡ್ ವಿರುದ್ಧದ ಮೊದಲ ಪಂದ್ಯವನ್ನು 76ರನ್ ಗಳಿಂದ ವಿರಾಟ್ ಕೊಹ್ಲಿ ಪಡೆ ಗೆದ್ದು ಕೊಂಡಿದೆ.

ಟೀಂ ಇಂಡಿಯಾ ನೀಡಿದ್ದ 209 ರನ್​ಗಳ ಬೃಹತ್ ಗುರಿಯನ್ನು ಬೆನ್ನತ್ತಿದ ಐರ್ಲೆಂಡ್​ ತಂಡವು ನಿರಂತರವಾಗಿ ವಿಕೆಟ್ ಕಳೆದುಕೊಂಡಿತು. ಐರ್ಲೆಂಡ್​ ಪರ ಜೇಮ್ಸ್ ಶಾನನ್ (60) ಉತ್ತಮ ಆಟ ಪ್ರದರ್ಶಿಸಿದರು.

ಭಾರತದ ಪರ ಚೈನಾಮನ್ ಸ್ಪಿನ್ನರ್ ಕುಲ್​ ದೀಪ್​ ಯಾದವ್ (21ರನ್ನಿತ್ತು 4 ವಿಕೆಟ್) ಮತ್ತು ಲೆಗ್ ಸ್ಪಿನ್ನರ್ ಯಜುವೇಂದ್ರ ಚಾಹಲ್​ (38 ಕ್ಕೆ3) ಕರಾರುವಾಕ್ ಬೌಲಿಂಗ್ ಮೂಲಕ ಐರ್ಲೆಂಡ್ ತಂಡವನ್ನು ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್​ ನಷ್ಟಕ್ಕೆ 132 ರನ್ನಿಗೆ ನಿಯಂತ್ರಿಸಿದರು.

1
43318

ಇದಕ್ಕೂ ಮುನ್ನ ರೋಹಿತ್ ಶರ್ಮ 97ರನ್ (61 ಎಸೆತಗಳು, 8 ಬೌಂಡರಿ, 5ಸಿಕ್ಸರ್), ಶಿಖರ್ ಧವನ್ 74ರನ್ (45ಎ, 5ಬೌಂ, 5ಸಿ) ಗಳಿಸಿ ಉತ್ತಮ ಪ್ರದರ್ಶನ ನೀಡಿದರು. ಮೊದಲ ವಿಕೆಟ್ ಗೆ 160ರನ್ ಕಲೆ ಹಾಕಿದರು. 20 ಓವರ್ ಗಳಲ್ಲಿ ಭಾರತ 208/5 ಸ್ಕೋರ್ ಮಾಡಿತು.

ಐರ್ಲೆಂಡ್ ಪರ ಪೀಟರ್ ಚೇಸ್ ಕೊನೆ ಓವರ್ ನಲ್ಲಿ ಎಂಎಸ್ ಧೋನಿ, ರೋಹಿತ್ ಶರ್ಮ, ವಿರಾಟ್ ಕೊಹ್ಲಿ ವಿಕೆಟ್ ಕಿತ್ತರು. ಒಟ್ಟಾರೆ 35ಕ್ಕೆ 4 ವಿಕೆಟ್ ಗಳಿಸಿ ಉತ್ತಮ ಪ್ರದರ್ಶನ ನೀಡಿದರು.

ಮೊದಲ ಪಂದ್ಯದಲ್ಲಿ ಪ್ರವಾಸಿ ಭಾರತ ವಿರುದ್ಧ ಟಾಸ್ ಗೆದ್ದ ಐರ್ಲೆಂಡ್ ನಾಯಕ ಗ್ಯಾರಿ ವಿಲ್ಸನ್ ಅವರು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

ಟಿ 20 ranking ನಲ್ಲಿ ಭಾರತ ಮೂರನೇ ಸ್ಥಾನದಲ್ಲಿದ್ದರೆ, ಐರ್ಲೆಂಡ್ 17ನೇ ಸ್ಥಾನದಲ್ಲಿದೆ. ಇತ್ತೀಚೆಗೆ ಹೆಚ್ಚು ಟಿ 20 ಸರಣಿಗಳನ್ನು ಆಡಿರುವ ಐರ್ಲೆಂಡ್, ಭಾರತಕ್ಕೆ ಪೈಪೋಟಿ ನೀಡುವ ಉತ್ಸಾಹದಲ್ಲಿದೆ.

ಇದೇ ಮೊದಲ ಬಾರಿಗೆ ಭಾರತ ಮತ್ತು ಐರ್ಲೆಂಡ್ ಟಿ 20 ಸರಣಿ ಆಡುತ್ತಿವೆ. ಇದುವರೆಗೂ ಉಭಯ ತಂಡಗಳು ಟಿ 20ಯಲ್ಲಿ ಒಮ್ಮೆ ಮಾತ್ರ ಮುಖಾಮುಖಿಯಾಗಿವೆ. 2009ರ ವಿಶ್ವಕಪ್ ಟಿ 20ಯಲ್ಲಿ ಭಾರತ ತಂಡವು ಐರ್ಲೆಂಡ್ ವಿರುದ್ಧ ಎಂಟು ವಿಕೆಟ್‌ಗಳ ಗೆಲುವು ದಾಖಲಿಸಿತ್ತು.

ಲೈವ್ ಸ್ಕೋರ್ ಕಾರ್ಡ್ ಕಾಮೆಂಟ್ರಿ

17 ರನ್ ಬಾರಿಸಿದರೆ ವಿರಾಟ್ ಕೊಹ್ಲಿ ಪುರುಷರ ಟಿ 20ಯಲ್ಲಿ 2000 ರನ್ ಗಡಿ ದಾಟಿದ ಭಾರತದ ಮೊದಲ ಮತ್ತು ವಿಶ್ವದ ಮೂರನೇ ಆಟಗಾರ ಎನಿಸಿಕೊಳ್ಳಲಿದ್ದಾರೆ. ಮುಂದಿನ ಒಂಬತ್ತು ಪಂದ್ಯಗಳ ಒಳಗೆ ಈ ಗುರಿ ತಲುಪಿದರೆ ಅತಿ ವೇಗದಲ್ಲಿ 2000 ರನ್ ಗಳಿಸಿದ ಆಟಗಾರನಾಗಲಿದ್ದಾರೆ.

ಮೊದಲ ಟಿ20 ಪಂದ್ಯದ ಮುನ್ನೋಟ</a> | <a class=ಟಿ20 ಪಂದ್ಯಗಳ ವೇಳಾಪಟ್ಟಿ" title="ಮೊದಲ ಟಿ20 ಪಂದ್ಯದ ಮುನ್ನೋಟ | ಟಿ20 ಪಂದ್ಯಗಳ ವೇಳಾಪಟ್ಟಿ" />ಮೊದಲ ಟಿ20 ಪಂದ್ಯದ ಮುನ್ನೋಟ | ಟಿ20 ಪಂದ್ಯಗಳ ವೇಳಾಪಟ್ಟಿ

ಇಂದಿನ ಪಂದ್ಯಕ್ಕೆ ಆಡುವ ಹನ್ನೊಂದರಲ್ಲಿ ಕೆಎಲ್ ರಾಹುಲ್ ಹಾಗೂ ದಿನೇಶ್ ಕಾರ್ತಿಕ್ ಆಯ್ಕೆ ಮಾಡಿಲ್ಲದಿರುವುದು ಅಭಿಮಾನಿಗಳಿಗೆ ಅಚ್ಚರಿ, ಆಕ್ರೋಶಕ್ಕೆ ಕಾರಣವಾಗಿದೆ.


ಐಪಿಎಲ್ ನಲ್ಲಿ ರಾಹುಲ್ ಹಾಗೂ ಕಾರ್ತಿಕ್ ಉತ್ತಮ ಪ್ರದರ್ಶನ ನೀಡಿದ್ದರೂ, ರೋಹಿತ್ ಶರ್ಮಗೆ ಮಣೆ ಹಾಕಲಾಗಿದೆ. ತಂಡಕ್ಕೆ ಆಯ್ಕೆ ಮಾಡಿ, ಬೆಂಚು ಕಾಯುವಂತೆ ಮಾಡುವ ಕ್ರಮಕ್ಕೆ ಧಿಕ್ಕಾರ ಕೂಗಲಾಗಿದೆ.

ಎಲ್ಲಿ ಪ್ರಸಾರ: ಸೋನಿ ಪಿಕ್ಚರ್ಸ್ ನೆಟ್ವರ್ಕ್ಸ್ ಇಂಡಿಯಾ(ಎಸ್ ಪಿಎನ್). ಸೋನಿ ಸಿಕ್ಸ್, ಸೋನಿ ಸಿಕ್ಸ್ ಎಚ್ ಡಿಯಲ್ಲಿ ಇಂಗ್ಲೀಷ್ ಹಾಗೂ ಸೋನಿ ಟೆನ್ 3 ಹಾಗೂ ಎಚ್ ಡಿಯಲ್ಲಿ ಹಿಂದಿ ಕಾಮೆಂಟ್ರಿಯಲ್ಲಿ ನೇರ ಪ್ರಸಾರ ವೀಕ್ಷಿಸಬಹುದು

Story first published: Thursday, June 28, 2018, 1:06 [IST]
Other articles published on Jun 28, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X