ಭಾರತ vs ನ್ಯೂಜಿಲೆಂಡ್: 2ನೇ ಏಕದಿನ ಪಂದ್ಯ, ಆಟಗಾರರ ಸಂಭಾವ್ಯ ದಾಖಲೆಗಳು ಹಾಗೂ ಮೈಲಿಗಲ್ಲುಗಳು

ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಭಾನುವಾರ ಎರಡನೇ ಏಕದಿನ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದು ಹ್ಯಾಮಿಲ್ಟನ್‌ನ ಸೆಡಾನ್ ಮೈದಾನದಲ್ಲಿ ಈ ಪಂದ್ಯ ಆಯೋಜನೆಯಾಗಲಿದೆ. ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ವಿರುದ್ಧ ಆತಿಥೇಯ ನ್ಯೂಜಿಲೆಂಡ್ ತಂಡ ಅಮೋಘ ಗೆಲುವು ಸಾಧಿಸಿದ್ದು ಸರಣಿಯಲ್ಲಿ ಮುನ್ನಡೆ ಸಾಧಿಸಿದೆ. ಟಾಮ್ ಲ್ಯಾಥಮ್ ಅವರ ಭರ್ಜರಿ ಶತಕ(145 ರನ್) ನಾಯಕ ಕೇನ್ ವಿಲಿಯಮ್ಸನ್ ಅವರ ಅಜೇಯ ಆಟದ ನೆರವಿನಿಂದಾಗಿ ಟೀಮ್ ಇಂಡಿಯಾ ಈ ಪಂದ್ಯವನ್ನು ಭಾರೀ ಅಂತರದಿಂದ ಕಳೆದುಕೊಂಡಿತ್ತು.

ಭಾನುವಾರ ನಡೆಯಲಿರುವ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವು ಸಾಧಿಸುವುದು ಅನಿವಾರ್ಯವಾಗಿದ್ದು ಟೀಮ್ ಇಂಡಿಯಾ ಗೆದ್ದರೆ ಮಾತ್ರವೇ ಈ ಸರಣಿಯಲ್ಲಿ ಜೀವಂತವಾಗುಳಿಯಲು ಸಾಧ್ಯವಿದೆ. ಹೀಗಾಗಿ ಭಾನುವಾರ ನಡೆಯಲಿರುವ ಪಂದ್ಯ ಸಾಕಷ್ಟು ಕುತೂಹಲ ಮೂಡಿಸಿದೆ.

IND vs NZ: ಎರಡನೇ ಪಂದ್ಯದಲ್ಲಿ ಗೆದ್ದರಷ್ಟೇ ಸರಣಿ ಜೀವಂತ, ಸಂಭಾವ್ಯ ಆಡುವ ಬಳಗ, ಪಿಚ್ ಮತ್ತು ಹವಾಮಾನ ವರದಿIND vs NZ: ಎರಡನೇ ಪಂದ್ಯದಲ್ಲಿ ಗೆದ್ದರಷ್ಟೇ ಸರಣಿ ಜೀವಂತ, ಸಂಭಾವ್ಯ ಆಡುವ ಬಳಗ, ಪಿಚ್ ಮತ್ತು ಹವಾಮಾನ ವರದಿ

ನ್ಯೂಜಿಲೆಂಡ್ ಮತ್ತು ಭಾರತ ಇದುವರೆಗೆ 111 ಏಕದಿನ ಪಂದ್ಯಗಳಲ್ಲಿ ಮುಖಾಮುಖಿಯಾಗಿದೆ. ಈ ಪೈಕಿ ಕಿವೀಸ್ ಪಡೆ 50 ಪಂದ್ಯಗಳಲ್ಲಿ ಗೆದ್ದಿದ್ದರೆ ಮತ್ತು ಭಾರತ 55ರಲ್ಲಿ ಗೆಲುವು ಸಾಧಿಸಿದೆ. ಒಂದು ಪಂದ್ಯ ಟೈನಲ್ಲಿ ಕೊನೆಗೊಂಡಿದ್ದು ಐದು ಯಾವುದೇ ಫಲಿತಾಂಶವಿಲ್ಲದೆ ಅಂತ್ಯವಾಗಿದೆ. ನ್ಯೂಜಿಲೆಂಡ್ ನೆಲದಲ್ಲಿ ಈ ಎರಡು ತಂಡಗಳು ಒಟ್ಟಾರೆಯಾಗಿ 43 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು ಆತಿಥೇಯ ಪಡೆ 26 ಬಾರಿ ಮತ್ತು ಭಾರತ 14 ಬಾರಿ ಜಯಗಳಿಸಿದೆ. ಎರಡು ಪಂದ್ಯಗಳು ಯಾವುದೇ ಫಲಿತಾಂಶವಿಲ್ಲದೆ ಕೊನೆಯಾಗಿದೆ. ಇನ್ನು ಈ ಎರಡು ತಂಡಗಳ ನಡುವಿನ ಏಕೈಕ ಟೈ ಪಂದ್ಯವು 2014 ರಲ್ಲಿ ಆಕ್ಲೆಂಡ್‌ನಲ್ಲಿ ನಡೆದಿತ್ತು.

ಸಂಭಾವ್ಯ ದಾಖಲೆಗಳು ಹಾಗೂ ಮೈಲುಗಲ್ಲುಗಳು

*ಕಿವಿಸ್ ತಂಡದ ಪ್ರಮುಖ ವೇಗದ ಬೌಲರ್ ಟಿಮ್ ಸೌಥಿ 202 ವಿಕೆಟ್‌ಗಳನ್ನು ಪಡೆದುಕೊಂಡಿದ್ದು ಇನ್ನು ಎರಡು ವಿಕೆಟ್ ಪಡೆದರೆ ನ್ಯೂಜಿಲೆಂಡ್ ಪರವಾಗಿ ಅತೀ ಹೆಚ್ಚು ಏಕದಿನ ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಳ್ಳಲಿದ್ದಾರೆ. ಸದ್ಯ 203 ವಿಕೆಟ್ ಪಡೆದಿರುವ ಕ್ರಿಸ್ ಹ್ಯಾರಿಸ್ ಅವರನ್ನು ಹಿಂದಿಕ್ಕಲು ಎರಡು ವಿಕೆಟ್‌ಗಳ ಅಗತ್ಯ ಸೌಥಿಗಿದೆ.

* ರಿಷಬ್ ಪಂತ್ ಏಕದಿನ ಮಾದರಿಯಲ್ಲಿ ಈವರೆಗೆ 3965 ರನ್‌ಗಳನ್ನು ಗಳಿಸಿದ್ದು 4000 ರನ್‌ಗಳ ಗಡಿ ತಲುಪಲು 35 ರನ್‌ಗಳ ಅಗತ್ಯವಿದೆ.

*ಟಿಮ್ ಸೌಥಿ 149 ಏಕದಿನ ಪಂದ್ಯಗಳನ್ನು ಆಡಿದ್ದು ಭಾನುವಾರ ನಡೆಯಲಿರುವ ಪಂದ್ಯದಲ್ಲಿ ಕಣಕ್ಕಿಳಿಯುತ್ತಿದ್ದಂತೆಯೇ ಸೌಥಿ 150 ಪಂದ್ಯಗಳಲ್ಲಿ ಆಡಿದ ಸಾಧನೆ ಮಾಡಿದಂತಾಗುತ್ತದೆ.

* ಡೆವೊನ್ ಕಾನ್ವೇ ಏಕದಿನ ಮಾದರಿಯಲ್ಲಿ 50 ಬೌಂಡರಿಗಳನ್ನು ಪೂರ್ಣಗೊಳಿಸಲು ಆರು ಬೌಂಡರಿಗಳ ಅಗತ್ಯವಿದೆ.

* ಟಾಮ್ ಲ್ಯಾಥಮ್ ಏಕದಿನ ಕ್ರಿಕೆಟ್‌ನಲ್ಲಿ 49 ಸಿಕ್ಸರ್‌ಗಳನ್ನು ಬಾರಿಸಿದ್ದು ಇನ್ನು ಕೇವಲ ಒಂದು ಸಿಕ್ಸರ್ ಬಾರಿಸಿದರೆ 50 ಸಿಕ್ಸರ್ ಬಾರಿಸಿದ ಆಟಗಾರರ ಪಟ್ಟಿಗೆ ಸೇರಿಕೊಳ್ಳಲಿದ್ದಾರೆ

* ಟಾಮ್ ಲ್ಯಾಥಮ್ ಏಕದಿನ ಮಾದರಿಯಲ್ಲಿ 291 ಬೌಂಡರಿಗಳನ್ನು ಬಾರಿಸಿದ್ದು 300 ಬೌಂಡರಿಗಳ ಗುರಿ ತಲುಪಲು ಒಂಬತ್ತು ಬೌಂಡರಿಗಳ ಅಗತ್ಯವಿದೆ.

IND vs NZ: ಹ್ಯಾಮಿಲ್ಟನ್‌ ಸವಾಲಿನಲ್ಲಿ ಗೆಲ್ಲುತ್ತಾ ಭಾರತ? ಇಲ್ಲಿ ಭಾರತ ಗೆದ್ದಿರುವ ಪಂದ್ಯಗಳೆಷ್ಟು ಗೊತ್ತಾ?IND vs NZ: ಹ್ಯಾಮಿಲ್ಟನ್‌ ಸವಾಲಿನಲ್ಲಿ ಗೆಲ್ಲುತ್ತಾ ಭಾರತ? ಇಲ್ಲಿ ಭಾರತ ಗೆದ್ದಿರುವ ಪಂದ್ಯಗಳೆಷ್ಟು ಗೊತ್ತಾ?

ಭಾರತ: ಶಿಖರ್ ಧವನ್ (ನಾಯಕ), ರಿಷಬ್ ಪಂತ್ (ಉಪ ನಾಯಕ & ವಿಕೆಟ್ ಕೀಪರ್), ಶುಬ್ಮನ್ ಗಿಲ್, ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ವಾಶಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಶಹಬಾಜ್ ಅಹ್ಮದ್, ಯುಜ್ವೇಂದ್ರ ಚಹಾಲ್, ಕುಲದೀಪ್ ಯಾದವ್, ಅರ್ಶ್‌ದೀಪ್ ಸಿಂಗ್, ದೀಪಕ್ ಚಹಾರ್, ಕುಲದೀಪ್ ಸೇನ್, ಉಮ್ರಾನ್ ಮಲಿಕ್.

ನ್ಯೂಜಿಲೆಂಡ್: ಕೇನ್ ವಿಲಿಯಮ್ಸನ್ (ನಾಯಕ), ಫಿನ್ ಅಲೆನ್, ಮೈಕೆಲ್ ಬ್ರೇಸ್ವೆಲ್, ಡೆವೊನ್ ಕಾನ್ವೇ, ಲಾಕಿ ಫರ್ಗುಸನ್, ಡ್ಯಾರಿಲ್ ಮಿಚೆಲ್, ಆಡಮ್ ಮಿಲ್ನೆ, ಜಿಮ್ಮಿ ನೀಶಮ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥಿ, ಟಾಮ್ ಲ್ಯಾಥಮ್ (ವಿಕೆಟ್ ಕೀಪರ್), ಮ್ಯಾಟ್ ಹೆನ್ರಿ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Saturday, November 26, 2022, 23:08 [IST]
Other articles published on Nov 26, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X