ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs NZ 3rd ODI : ಅಂತಿಮ ಏಕದಿನ ಪಂದ್ಯ ಗೆಲ್ಲುತ್ತಾ ಟೀಮ್ ಇಂಡಿಯಾ: ಸಂಭಾವ್ಯ XI, ಪಿಚ್ ರಿಪೋರ್ಟ್

India vs New Zealand 3rd ODI: Preview, probable XI and pitch report

ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಏಕದಿನ ಸರಣಿಯಲ್ಲಿ ಮುಖಾಮುಖಿಯಾಗಲಿದ್ದು ಈ ಸರಣಿಯ ಅಂತಿಮ ಪಂದ್ಯ ಬುಧವಾರದಂದು ನಡೆಯಲಿದೆ. ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ್ದರೂ ಬೌಲಿಂಗ್‌ನಲ್ಲಿ ವೈಫಲ್ಯ ಅನುಭವಿಸಿದ ಕಾರಣ 7 ವಿಕೆಟ್‌ಗಳ ಅಂತರದ ಭಾರೀ ಸೋಲು ಅನುಭವಿಸಿತು. ಆದರೆ ಎರಡನೇ ಪಂದ್ಯ ಮಳೆಗೆ ಆಹುತಿಯಾದ ಕಾರಣ ಪಂದ್ಯ ರದ್ದಾಗಿದೆ. ಹೀಗಾಗಿ ಅಂತಿಮ ಪಂದ್ಯದಲ್ಲಿ ಭಾರತಕ್ಕೆ ಸರಣಿಯನ್ನು ಸಮಬಲಗೊಳಿಸುವ ಅವಕಾಶ ಮಾತ್ರವೇ ಇದೆ.

ಈ ಸರಣಿಯಲ್ಲಿ ಭಾರತ ತಂಡ ಬ್ಯಾಟಿಂಗ್ ವಿಭಾಗದಲ್ಲಿ ಅತ್ಯುತ್ತಮ ಪ್ರದರ್ಶನವನ್ನು ನೀಡಿದೆ. ಆರಂಭಿಕರಾದ ಶುಬ್ಮನ್ ಗಿಲ್, ಶಿಖರ್ ಧವನ್ ಶ್ರೇಯಸ್ ಐಯ್ಯರ್, ಸೂರ್ಯಕುಮಾರ್ ಯಾದವ್ ಮೊದಲಾದ ಆಟಗಾರರ ಬ್ಯಾಟಿಂಗ್‌ನಿಂದ ಉತ್ತಮವಾಗಿ ರನ್‌ಗಳು ಹರಿದುಬಂದಿದೆ. ಆದರೆ ಯುವ ಬೌಲಿಂಗ್ ವಿಭಾಗ ಮಾತ್ರ ಮಿಂಚುವಲ್ಲಿ ವಿಫಲವಾಗಿದೆ. ಆದರೆ ಪ್ರತಿಭಾನ್ವಿತ ಆಟಗಾರರ ಬಳಗವನ್ನು ಆತಿಥೇಯ ಕಿವೀಸ್ ಪಡೆ ನಿರ್ಲಕ್ಷಿಸುವಂತಿಲ್ಲ ಎಂಬುದು ನಿಜ.

ಈತ ಭಾರತದಲ್ಲಿನ ನನ್ನ ನೆಚ್ಚಿನ ವೇಗದ ಬೌಲರ್; ಮಾಜಿ ಆಸೀಸ್ ಬೌಲರ್ ಬ್ರೆಟ್ ಲೀಈತ ಭಾರತದಲ್ಲಿನ ನನ್ನ ನೆಚ್ಚಿನ ವೇಗದ ಬೌಲರ್; ಮಾಜಿ ಆಸೀಸ್ ಬೌಲರ್ ಬ್ರೆಟ್ ಲೀ

ಪಂದ್ಯದ ಸಮಯ, ಹಾಗೂ ನೇರಪ್ರಸಾರದ ಮಾಹಿತಿ

ಪಂದ್ಯದ ಸಮಯ, ಹಾಗೂ ನೇರಪ್ರಸಾರದ ಮಾಹಿತಿ

ಭಾರತ ಹಾಗೂ ನ್ಯೂಜಿಲೆಂಡ್ ವಿರುದ್ಧದ ಅಂತಿಮ ಏಕದಿನ ಪಂದ್ಯ ಬುಧವಾರ ನವೆಂಬರ್ 30ರಂದು ನಡೆಯಲಿದೆ. ಕ್ರೈಸ್ಟ್ ಚರ್ಚ್‌ನ ಹೆಡಿಂಗ್ಲೆ ಓವಲ್‌ನಲ್ಲಿ ಈ ಪಂದ್ಯ ನಡೆಯಲಿದ್ದು ಭಾರತೀಯ ಕಾಲಮಾನ ಮುಂಜಾನೆ 7 ಗಂಟೆಗೆ ಪಂದ್ಯ ಆರಂಭವಾಗಲಿದೆ. ಇನ್ನು ಪ್ರೈವ್ ವಿಡಿಯೋದಲ್ಲಿ ಈ ಪಂದ್ಯದ ನೇರಪ್ರಸಾರವನ್ನು ವೀಕ್ಷಿಸಬಹುದಾಗಿದೆ.

ಪಿಚ್ ರಿಪೋರ್ಟ್

ಪಿಚ್ ರಿಪೋರ್ಟ್

ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಏಕದಿನ ಸರಣಿಯ ಅಂತಿಮ ಪಂದ್ಯ ಕ್ರೈಸ್ಟ್ ಚರ್ಚ್‌ನಲ್ಲಿ ನಡೆಯಲಿದೆ. ಇಲ್ಲಿ ಕಳೆದ ಐದು ಏಕದಿನ ಪಂದ್ಯಗಳ ಅಂಕಿಅಂಶವನ್ನು ನೋಡಿದಾಗ ಮೊದಲ ಇನ್ನಿಂಗ್ಸ್‌ನಲ್ಲಿ ಇಲ್ಲಿನ ಸರಾಸರಿ ಸ್ಕೋರ್ 261 ಆಗಿದೆ. ಕಳೆದ ಐದು ಪಂದ್ಯಗಳಲ್ಲಿ ಇಲ್ಲಿ ವೇಗಿಗಳು 71 ಶೇಕಡಾದಷ್ಟು ವಿಕೆಟ್ ಪಡೆದುಕೊಂಡಿದ್ದಾರೆ,. ಹೀಗಾಗಿ ಇಲ್ಲಿ ವೇಗದ ಬೌಲಿಂಗ್ ಮಹತ್ವದ ಪಾತ್ರವನ್ನು ವಹಿಸುತ್ತದೆ. ಇನ್ನು ಈ ಪಂದ್ಯಕ್ಕೂ ಮಳೆ ಅಡ್ಡಿಯುಂಟು ಮಾಡುವ ನಿರೀಕ್ಷೆಯಿರುವ ಕಾರಣ ಇಲ್ಲಿ ರನ್ ಬೆನ್ನಟ್ಟುವುದು ಉತ್ತಮ ನಿರ್ಧಾರವಾಗಬಹುದು.

ಸಂಭಾವ್ಯ ಆಡುವ ಬಳಗ ಹೀಗಿದೆ

ಸಂಭಾವ್ಯ ಆಡುವ ಬಳಗ ಹೀಗಿದೆ

ಭಾರತ: ಶಿಖರ್ ಧವನ್ (ನಾಯಕ), ಶುಬ್ಮನ್ ಗಿಲ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್/ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ಸಂಜು ಸ್ಯಾಮ್ಸನ್, ವಾಷಿಂಗ್ಟನ್ ಸುಂದರ್, ದೀಪಕ್ ಚಹಾರ್, ಅರ್ಶ್‌ದೀಪ್ ಸಿಂಗ್, ಉಮ್ರಾನ್ ಮಲಿಕ್ ಮತ್ತು ಕುಲದೀಪ್ ಯಾದವ್.

ನ್ಯೂಜಿಲೆಂಡ್: ಡೆವೊನ್ ಕಾನ್ವೇ, ಫಿನ್ ಅಲೆನ್, ಕೇನ್ ವಿಲಿಯಮ್ಸನ್ (ನಾಯಕ), ಗ್ಲೆನ್ ಫಿಲಿಪ್ಸ್, ಟಾಮ್ ಲ್ಯಾಥಮ್ (ವಿಕೆಟ್ ಕೀಪರ್), ಡ್ಯಾರಿಲ್ ಮಿಚೆಲ್, ಮಿಚೆಲ್ ಸ್ಯಾಂಟ್ನರ್, ಮೈಕೆಲ್ ಬ್ರೇಸ್‌ವೆಲ್, ಮ್ಯಾಟ್ ಹೆನ್ರಿ, ಟಿಮ್ ಸೌಥಿ ಮತ್ತು ಲಾಕಿ ಫರ್ಗುಸನ್.

Story first published: Tuesday, November 29, 2022, 10:48 [IST]
Other articles published on Nov 29, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X