ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

31 ವರ್ಷಗಳ ಹಿಂದಿನ ಕೆಟ್ಟ ದಾಖಲೆ ಮತ್ತೆ ನೆನಪಿಸಿದ ಟೀಮ್ ಇಂಡಿಯಾ!

Ind vs Nz 3rd ODI : First time in 31 years India suffer ODi Whitewash | Virat Kohli | NZ | India
India vs New Zealand: First time in 31 years India suffer ODI series whitewash

ಮೌಂಟ್‌ಮೌಂಗನ್ಯುಯಿ, ಫೆಬ್ರವರಿ 11: ಆರಂಭಿಕ ಬ್ಯಾಟ್ಸ್‌ಮನ್ ಹೆನ್ರಿ ನಿಕೋಲ್ಸ್ 80, ಮಾರ್ಟಿನ್ ಗಪ್ಟಿಲ್ 66, ಕಾಲಿನ್ ಡಿ ಗ್ರ್ಯಾಂಡ್‌ಹೋಮ್‌ ಸ್ಫೋಟಕ ಅರ್ಧ ಶತಕದಿಂದ (28 ಎಸೆತಗಳಲ್ಲಿ 58 ರನ್) ಆತಿಥೇಯ ನ್ಯೂಜಿಲೆಂಡ್‌ ವಿರುದ್ಧ ಪ್ರವಾಸಿ ಭಾರತ ತಂಡ ಏಕದಿನ ಸರಣಿಯಲ್ಲಿ 3-0ಯ ವೈಟ್‌ವಾಷ್‌ ಮುಖಭಂಗ ಅನುಭವಿಸಿದೆ.

ವಿಶ್ವದ ನಂಬರ್ 1 ಬೌಲರ್ ಜಸ್ಪ್ರೀತ್ ಬೂಮ್ರಾ ಕಥೆ ಹೀಗ್ಯಾಕಾಯ್ತು?ವಿಶ್ವದ ನಂಬರ್ 1 ಬೌಲರ್ ಜಸ್ಪ್ರೀತ್ ಬೂಮ್ರಾ ಕಥೆ ಹೀಗ್ಯಾಕಾಯ್ತು?

ಮೌಂಟ್‌ ಮೌಂಗನ್ಯುಯಿಯಲ್ಲಿ ಮಂಗಳವಾರ (ಫೆಬ್ರವರಿ 11) ನಡೆದ ಇತ್ತಂಡಗಳ ಪಂದ್ಯದಲ್ಲಿ ಟೀಮ್ ಇಂಡಿಯಾವನ್ನು ವೈಟ್‌ವಾಷ್‌ನಿಂದ ಪಾರು ಮಾಡಲು ಶ್ರೇಯಸ್ ಐಯ್ಯರ್ (62 ರನ್), ಕೆಎಲ್ ರಾಹುಲ್ (112 ರನ್) ಮಾಡಿದ ಪ್ರಯತ್ನ ವ್ಯರ್ಥಗೊಂಡಿತು. ಕಿವೀಸ್ 5 ವಿಕೆಟ್‌ ಜಯ ಗಳಿಸಿತು.

ಈ ಭಾರತೀಯ ಕ್ರಿಕೆಟರ್ ಕಮ್ರನ್ ಅಕ್ಮಲ್ ಪಾಲಿನ ನೆಚ್ಚಿನ ಸಿಕ್ಸ್ ಹಿಟ್ಟರ್!ಈ ಭಾರತೀಯ ಕ್ರಿಕೆಟರ್ ಕಮ್ರನ್ ಅಕ್ಮಲ್ ಪಾಲಿನ ನೆಚ್ಚಿನ ಸಿಕ್ಸ್ ಹಿಟ್ಟರ್!

ನ್ಯೂಜಿಲೆಂಡ್‌ ವಿರುದ್ಧ ಮೂರನೇ ಏಕದಿನ ಪಂದ್ಯದಲ್ಲೂ ಸೋಲುವುದರೊಂದಿಗೆ ಭಾರತ ಏಕದಿನ ಕ್ರಿಕೆಟ್‌ನಲ್ಲಿ 31 ವರ್ಷಗಳ ಹಿಂದಿನ ಕೆಟ್ಟ ದಾಖಲೆಯನ್ನು ಮರುಕಳಿಸಿದೆ.

ಟಿ20 ಸರಣಿ ಗೆದ್ದು, ಏಕದಿನ ಸರಣಿ ಸೋತಿತು

ಟಿ20 ಸರಣಿ ಗೆದ್ದು, ಏಕದಿನ ಸರಣಿ ಸೋತಿತು

ಇದೇ ನ್ಯೂಜಿಲೆಂಡ್ ಪ್ರವಾಸ ಸರಣಿಯಲ್ಲೇ ಭಾರತ ಐದು ಪಂದ್ಯಗಳ ಟಿ20ಐ ಸರಣಿಯಲ್ಲಿ ಐದೂ ಪಂದ್ಯಗಳನ್ನು ಗೆದ್ದು ಬೀಗಿತ್ತು. ಟಿ20 ಸರಣಿಯಲ್ಲಾದ ಮುಖಭಂಗಕ್ಕೆ ಕಿವೀಸ್, ಏಕದಿನ ಸರಣಿಯಲ್ಲಿ ಮುಯ್ಯಿ ತೀರಿಸಿಕೊಂಡಿದೆ. ಮೂರೂ ಪಂದ್ಯಗಳನ್ನು ಗೆದ್ದು ಭಾರತಕ್ಕೆ ವೈಟ್‌ವಾಷ್‌ ಮುಖಭಂಗ ಅನುಭವಿಸುವಂತೆ ಮಾಡಿದೆ.

31 ವರ್ಷಗಳ ಹಿಂದಿನ ಕೆಟ್ಟ ದಾಖಲೆ

31 ವರ್ಷಗಳ ಹಿಂದಿನ ಕೆಟ್ಟ ದಾಖಲೆ

ಟೀಮ್ ಇಂಡಿಯಾ 3+ (3ಕ್ಕೂ ಹೆಚ್ಚಿನ) ಏಕದಿನ ಪಂದ್ಯಗಳ ಸರಣಿಯಲ್ಲಿ ವೈಟ್‌ವಾಷ್ ಗೊಂಡಿದ್ದು ಸುಮಾರು 31 ವರ್ಷಗಳ ಹಿಂದೆ ಅಂದರೆ 1988/89ರಲ್ಲಿ. ಅಂದು ವೆಸ್ಟ್ ಇಂಡೀಸ್ ವಿರುದ್ಧ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಐದೂ ಪಂದ್ಯಗಳನ್ನು ಸೋತು ಭಾರತ ಅವಮಾನಕ್ಕೀಡಾಗಿತ್ತು. ಅದಾಗಿ ನ್ಯೂಜಿಲೆಂಡ್‌ ವಿರುದ್ಧ 3-0ಯಿಂದ ಈ ಸರಣಿ ಸೋತು ಹಳೆಯ ಕೆಟ್ಟ ದಾಖಲೆಯನ್ನು ಭಾರತ ನೆನಪಿಸಿದೆ.

ಭಾರತ ಕ್ಲೀನ್ ಸ್ವೀಪ್‌ಗೊಂಡಿದ್ದು

ಭಾರತ ಕ್ಲೀನ್ ಸ್ವೀಪ್‌ಗೊಂಡಿದ್ದು

ಮೂರಕ್ಕೂ ಹೆಚ್ಚು ಏಕದಿನ ಪಂದ್ಯಗಳ ಸರಣಿಯೊಂದರಲ್ಲಿ ಭಾರತ ಕ್ಲೀನ್ ಸ್ವೀಪ್‌ಗೊಂಡ ದಾಖಲೆಗಳನ್ನು ಕೆದಕಿದರೆ, 1983-84ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 5-0ಯ ಸರಣಿ ಸೋಲು, 1988-89ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಮತ್ತೆ 5-0ಯ ಸರಣಿ ಪರಾಭವ, 2006-07ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 4-0ಯ ಸರಣಿ ಸೋಲು (31 ವರ್ಷಗಳ ಹಿಂದಿನ ಕೆಟ್ಟ ದಾಖಲೆಯಲ್ಲಿ ಈ ಸರಣಿಯನ್ನು ಪರಿಗಣಿಸಲಾಗಿಲ್ಲ; ಯಾಕೆಂದರೆ ಐದು ಪಂದ್ಯಗಳ ಈ ಸರಣಿಯ ಒಂದು ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು), ಅದಾಗಿ 2020ರಲ್ಲಿ ನ್ಯೂಜಿಲೆಂಡ್ ವಿರುದ್ಧ 3-0ಯ ಸರಣಿ ಪರಾಭವ.

3ನೇ ಪಂದ್ಯದ ಸಂಕ್ಷಿಪ್ತ ಸ್ಕೋರ್‌

3ನೇ ಪಂದ್ಯದ ಸಂಕ್ಷಿಪ್ತ ಸ್ಕೋರ್‌

ಮೌಂಟ್‌ ಮೌಂಗನ್ಯುಯಿಯ ಬೇ ಓವಲ್‌ನಲ್ಲಿ ನಡೆದಿದ್ದ ಮೂರನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ನ್ಯೂಜಿಲೆಂಡ್ ಬೌಲಿಂಗ್ ಆಯ್ದುಕೊಂಡಿತ್ತು. ಬ್ಯಾಟಿಂಗ್‌ಗೆ ಇಳಿದ ಭಾರತ 296-7 (50) ಸ್ಕೋರ್‌ ಮಾಡಿತ್ತು. ಗುರಿ ಬೆನ್ನತ್ತಿದ ನ್ಯೂಜಿಲೆಂಡ್ 300-5 (47.1) ರನ್‌ನೊಂದಿಗೆ ಗೆಲುವನ್ನಾಚರಿಸಿತು. ಹೆನ್ರಿ ನಿಕೋಲ್ಸ್ ಪಂದ್ಯಶ್ರೇಷ್ಠ, ರಾಸ್ ಟೇಲರ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.

Story first published: Tuesday, February 11, 2020, 23:14 [IST]
Other articles published on Feb 11, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X