ಭಾರತ vs ಕಿವೀಸ್: ಸೌರವ್ ಗಂಗೂಲಿ ದಾಖಲೆ ಸರಿಗಟ್ಟಿದ ವಿರಾಟ್ ಕೊಹ್ಲಿ

IND vs NZ 1st ODI : Kohli Surpasses Ganguly but Dhoni is still on Top | Virat Kohli | Ganguly

ಹ್ಯಾಮಿಲ್ಟನ್, ಫೆಬ್ರವರಿ 5: ಉತ್ತಮ ಫಾರ್ಮ್‌ನಲ್ಲಿರುವ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನ್ಯೂಜಿಲೆಂಡ್‌ ವಿರುದ್ಧದ ಮೊದಲನೇ ಏಕದಿನ ಪಂದ್ಯದಲ್ಲಿ ದಾಖಲೆ ನಿರ್ಮಿಸಿದ್ದಾರೆ. ಹ್ಯಾಮಿಲ್ಟನ್‌ನ ಸೆಡ್ಡನ್ ಪಾರ್ಕ್‌ನಲ್ಲಿ ಬುಧವಾರ (ಫೆಬ್ರವರಿ 5) ನಡೆದ ಪಂದ್ಯದಲ್ಲಿ ಅರ್ಧ ಶತಕ ಬಾರಿಸಿದ್ದರಿಂದ ಕಿಂಗ್‌ ಕೊಹ್ಲಿ ಹೆಸರಿನಲ್ಲಿ ಮತ್ತೊಂದು ದಾಖಲೆ ನಿರ್ಮಾಣವಾಗಿದೆ.

ಕೆಣಕಿದ ಅಭಿಮಾನಿಗೆ ಸರಿಯಾಗೇ ತಿರುಗೇಟು ನೀಡಿದ ಮಯಾಂತಿ ಲ್ಯಾಂಗರ್ಕೆಣಕಿದ ಅಭಿಮಾನಿಗೆ ಸರಿಯಾಗೇ ತಿರುಗೇಟು ನೀಡಿದ ಮಯಾಂತಿ ಲ್ಯಾಂಗರ್

ಹ್ಯಾಮಿಲ್ಟನ್ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ ಪರ, ಕೊಹ್ಲಿ 63 ಎಸೆತಗಳಿಗೆ 51 ರನ್ ಸೇರಿಸಿದರು. ಕೊಹ್ಲಿ ಅರ್ಧ ಶತಕ, ಕೆಎಲ್ ರಾಹುಲ್ ಅರ್ಧ ಶತಕ, ಶ್ರೇಯಸ್ ಐಯ್ಯರ್ ಶತಕದಾಟದಿಂದ ಭಾರತ ಭರ್ಜರಿ ರನ್ ಕಲೆ ಹಾಕಿತ್ತಾದರೂ ಪಂದ್ಯದಲ್ಲಿ ಕಿವೀಸ್ ಗೆಲುವು ದಾಖಲಿಸಿದೆ.

ಪಾಕಿಸ್ತಾನ ಯು-19 ತಂಡ ಜೈಸ್ವಾಲ್ ನೋಡಿ ಕಲಿಯಬೇಕಿದೆ: ಶೋಯೆಬ್ ಅಖ್ತರ್ಪಾಕಿಸ್ತಾನ ಯು-19 ತಂಡ ಜೈಸ್ವಾಲ್ ನೋಡಿ ಕಲಿಯಬೇಕಿದೆ: ಶೋಯೆಬ್ ಅಖ್ತರ್

ಪಂದ್ಯದಲ್ಲಿ ಸೋತು ಭಾರತ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0ಯ ಹಿನ್ನಡೆ ಅನುಭವಿಸಿದೆಯಾದರೂ ಕೊಹ್ಲಿ ಹೆಸರಿಗೆ ದಾಖಲೆಯಂತೂ ಸೇರ್ಪಡೆಯಾಗಿದೆ.

340+ ರನ್‌ ಚೇಸಿಂಗ್

340+ ರನ್‌ ಚೇಸಿಂಗ್

ಭಾರತ ಪರ ಕೊಹ್ಲಿ 51, ಶ್ರೇಯಸ್ ಐಯ್ಯರ್ 103, ಕೆಎಲ್ ರಾಹುಲ್ 88, ಪೃಥ್ವಿ ಶಾ 20, ಮಯಾಂಕ್ ಅಗರ್ವಾಲ್ 32, ಕೇದಾರ್ ಜಾಧವ್ 26 ರನ್‌ನೊಂದಿಗೆ ತಂಡ 50 ಓವರ್‌ಗೆ 4 ವಿಕೆಟ್‌ ನಷ್ಟದಲ್ಲಿ 347 ರನ್ ಗಳಿಸಿತ್ತು. ಗುರಿ ಬೆಂಬತ್ತಿದ ನ್ಯೂಜಿಲೆಂಡ್, ಮಾರ್ಟಿನ್ ಗಪ್ಟಿಲ್ 32, ಹೆನ್ರಿ ನಿಕೋಲ್ಸ್ 78, ರಾಸ್ ಟೇಲರ್ 109, ನಾಯಕ ಟಾಮ್ ಲ್ಯಾಥಮ್ 69 ರನ್ ಸೇರ್ಪಡೆಯೊಂದಿಗೆ 48.1ನೇ ಓವರ್‌ಗೆ 6 ವಿಕೆಟ್‌ ಕಳೆದು 348 ರನ್ ಬಾರಿಸಿ ಗೆಲುವು ಸಂಭ್ರಮಿಸಿತು.

ನಾಯಕನಾಗಿ 5000+ ರನ್

ನಾಯಕನಾಗಿ 5000+ ರನ್

ಬುಧವಾರದ ಪಂದ್ಯದಲ್ಲಿ 51 ರನ್‌ ಬಾರಿಸಿದ ಕೊಹ್ಲಿ, ಟೀಮ್ ಇಂಡಿಯಾದ ನಾಯಕನಾಗಿದ್ದುಕೊಂಡು ಏಕದಿನ ಕ್ರಿಕೆಟ್‌ನಲ್ಲಿ 5123 ರನ್ ಪೂರೈಸಿದ್ದಾರೆ. ಇದು ಭಾರತದ ಸಾಧಕರ ಸಾಲಿನಲ್ಲಿ ಮೂರನೇ ಅತ್ಯಧಿಕ ರನ್‌ ಆಗಿ ಗುರುತಿಸಿಕೊಂಡಿದೆ. ಕೊಹ್ಲಿ ಈ ದಾಖಲೆಗಾಗಿ 83 ಇನ್ನಿಂಗ್ಸ್‌ಗಳನ್ನು ಬಳಸಿಕೊಂಡಿದ್ದಾರೆ.

ಗಂಗೂಲಿ ದಾಖಲೆ ಪತನ

ಗಂಗೂಲಿ ದಾಖಲೆ ಪತನ

ಭಾರತ ತಂಡದ ನಾಯಕನಾಗಿದ್ದುಕೊಂಡು ಏಕದಿನದಲ್ಲಿ ಅತ್ಯಧಿಕ ರನ್ ಬಾರಿಸಿದ್ದ ದಾಖಲೆಗಾಗಿ ಸೌರವ್ ಗಂಗೂಲಿ ಗುರುತಿಸಿಕೊಂಡಿದ್ದರು. ಗಂಗೂಲಿ 142 ಇನ್ನಿಂಗ್ಸ್‌ಗಳಲ್ಲಿ 5082 ಬಾರಿಸಿ ಈ ಮೈಲಿಗಲ್ಲು ಸ್ಥಾಪಿಸಿದ್ದರು. ಆದರೆ ಕೊಹ್ಲಿ 5123 ರನ್ ಬಾರಿಸಿರುವುದರಿಂದ ಗಂಗೂಲಿ ದಾಖಲೆ ಬದಿಗೆ ಸರಿದಿದೆ.

ಎಂಎಸ್ ಧೋನಿ ಮೊದಲಿಗ

ಎಂಎಸ್ ಧೋನಿ ಮೊದಲಿಗ

ರಾಷ್ಟ್ರೀಯ ತಂಡದ ನಾಯಕನಾಗಿದ್ದುಕೊಂಡು ಏಕದಿನದಲ್ಲಿ ಅತ್ಯಧಿಕ ರನ್‌ ದಾಖಲೆ ಪಟ್ಟಿಯಲ್ಲಿ ಸದ್ಯ ಮಾಜಿ ನಾಯಕ, ಕೂಲ್ ಕ್ಯಾಪ್ಟನ್ ಮೊದಲ ಸ್ಥಾನದಲ್ಲಿದ್ದಾರೆ. ಧೋನಿ 6641 ರನ್ (172 ಇನ್ನಿಂಗ್ಸ್‌), ಮೊಹಮ್ಮದ್ ಅಝರುದ್ದೀನ್ 5239 ರನ್ (162), ವಿರಾಟ್ ಕೊಹ್ಲಿ 5123 ರನ್ (83), ಸೌರವ್ ಗಂಗೂಲಿ 5082 (142) ದಾಖಲೆ ಸಾಲಿನಲ್ಲಿದ್ದಾರೆ.

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 5 - October 19 2021, 03:30 PM
ಸ್ಕಾಟ್ಲೆಂಡ್
ಪಪುವಾ ನ್ಯೂ ಗಿನಿವಾ
Predict Now

For Quick Alerts
ALLOW NOTIFICATIONS
For Daily Alerts
Story first published: Wednesday, February 5, 2020, 17:47 [IST]
Other articles published on Feb 5, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X