ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ - ನ್ಯೂಜಿಲ್ಯಾಂಡ್ 2ನೇ ಪಂದ್ಯದಲ್ಲಿ ನಡೆದುಹೋದ ಬಲು ಅಪರೂಪದ ಘಟನೆ

IND VS NZ 2nd ODI : When fielding coach becomes a substitute fielder
New Zealand fielding coach fields vs India in 2nd ODI due to lack of fit players

ಆಕ್ಲಂಡ್ ನಲ್ಲಿ ನಡೆದ ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ತೀರಾ ಅಪರೂಪದ ಘಟನೆಯೊಂದಕ್ಕೆ ಈಡನ್ ಪಾರ್ಕ್ ಮೈದಾನ ಸಾಕ್ಷಿಯಾಗಿತ್ತು.

ಎರಡು ಪಂದ್ಯವನ್ನು ಗೆದ್ದು, ಈಗಾಗಲೇ ಏಕದಿನ ಸರಣಿಯನ್ನು ತನ್ನದಾಗಿಸಿಕೊಂಡಿರುವ ಕಿವೀಸ್, ಚುಟುಕು ಕ್ರಿಕೆಟಿನಲ್ಲಿ ಆದ ಮುಖಭಂಗಕ್ಕೆ ಸೇಡು ತೀರಿಸಿಕೊಂಡಿದೆ.

ಭಾರತಕ್ಕೆ ಸೋಲು: ರವೀಂದ್ರ ಜಡೇಜಾ ಬೆನ್ನಿಗೆ ಅಂಟಿದ ಕಳಂಕಭಾರತಕ್ಕೆ ಸೋಲು: ರವೀಂದ್ರ ಜಡೇಜಾ ಬೆನ್ನಿಗೆ ಅಂಟಿದ ಕಳಂಕ

ಎರಡನೇ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಫೀಲ್ಡ್ ಆಯ್ಕೆ ಮಾಡಿಕೊಂಡಿತ್ತು. ನ್ಯೂಜಿಲ್ಯಾಂಡಿನ ಸಾಮಾನ್ಯ ಮೊತ್ತವಾದ 273 ರನ್ ಚೇಸ್ ಮಾಡಲಾಗದೇ 22ರನ್ ನಿಂದ ಸೋಲುಂಡಿತು.

ಸರಣಿ ಸೋಲಿನ ಮುಖಭಂಗದ ಜೊತೆಗೆ ವಿರಾಟ್ ಕೊಹ್ಲಿ ಹೆಸರಿಗೆ 'ಈ' ಕಳಂಕಸರಣಿ ಸೋಲಿನ ಮುಖಭಂಗದ ಜೊತೆಗೆ ವಿರಾಟ್ ಕೊಹ್ಲಿ ಹೆಸರಿಗೆ 'ಈ' ಕಳಂಕ

ನ್ಯೂಜಿಲ್ಯಾಂಡ್ ಫೀಲ್ಡ್ ಮಾಡುತ್ತಿದ್ದ ವೇಳೆ, ಅಂದರೆ ಪಂದ್ಯದ 37ನೇ ಓವರ್ ನಲ್ಲಿ ಅಪರೂಪದ ಘಟನೆಯೊಂದು ನಡೆಯಿತು. ವೇಗಿ ಟಿಮ್ ಸೌಥಿ ಬೌಲಿಂಗ್ ಮಾಡಿ ಮುಗಿಸಿದ್ದರು. ಮುಂದೆ ಓದಿ..

ಟಿಮ್ ಸೌಥಿಗೆ ಅನಾರೋಗ್ಯ, ಮೈದಾನದಿಂದ ಹೊರಗೆ

ಟಿಮ್ ಸೌಥಿಗೆ ಅನಾರೋಗ್ಯ, ಮೈದಾನದಿಂದ ಹೊರಗೆ

ನ್ಯೂಜಿಲ್ಯಾಂಡ್ ತಂಡ ಬದಲಿ ಆಟಗಾರರನ್ನಾಗಿ ಕೇವಲ ಒಬ್ಬರನ್ನು ( ಮಿಚೆಲ್ ಸಾಂಟ್ನರ್ ) ಆಯ್ಕೆ ಮಾಡಿತ್ತು. ಆದರೆ, ಆತ ಹೊಟ್ಟೆನೋವಿನಿಂದ ಬಳಲುತ್ತಿದ್ದರಿಂದ, ಡ್ರೆಸ್ಸಿಂಗ್ ರೂಂನಲ್ಲೇ ಇದ್ದರು. ಈ ವೇಳೆ, ಟಿಮ್ ಸೌಥಿಗೆ ಅನಾರೋಗ್ಯ ಕಾಡಿ, ಮೈದಾನದಿಂದ ಹೊರನಡೆದರು.

ತಂಡದ ಫೀಲ್ಡಿಂಗ್ ಕೋಚ್ ಲೂಕ್ ರಾಂಚಿ

ತಂಡದ ಫೀಲ್ಡಿಂಗ್ ಕೋಚ್ ಲೂಕ್ ರಾಂಚಿ

ಆ ವೇಳೆ, ಬದಲಿ ಆಟಗಾರನೂ ಇಲ್ಲದಿದ್ದರಿಂದ, ಇನ್ನೊಂದು ಆಟಗಾರ ಮೈದಾನಕ್ಕೆ ಹೋಗುವ ಅನಿವಾರ್ಯತೆಯಲ್ಲಿ ಕಿವೀಸ್ ಸಿಲುಕಿತು. ಬೇರೆ ದಾರಿಯಿಲ್ಲದೇ, ತಂಡದ ಫೀಲ್ಡಿಂಗ್ ಕೋಚ್ ಲೂಕ್ ರಾಂಚಿ, ಬದಲಿ ಆಟಗಾರನ ಜರ್ಸಿ ಧರಿಸಿ, ಫೀಲ್ಡ್ ಗೆ ಇಳಿದರು. ಕಿವೀಸ್ ಈ ರೀತಿಯ ಪರಿಸ್ಥಿತಿ ಎದುರಿಸುವುದು ಇದೇನೊ ಮೊದಲಲ್ಲ.

ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್, ಸಿಡ್ನಿ ಟೆಸ್ಟ್

ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್, ಸಿಡ್ನಿ ಟೆಸ್ಟ್

2015ರಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ತಂಡಗಳ ನಡುವೆ ಸಿಡ್ನಿಯಲ್ಲಿ ನಡೆಯುತ್ತಿದ್ದ ಟೆಸ್ಟ್ ಪಂದ್ಯದ ವೇಳೆಯೂ ಕಿವೀಸ್ ಇದೇ ರೀತಿಯ ಮುಜುಗರಕ್ಕೀಡಾಗಿತ್ತು. ಆ ವೇಳೆ, ತಂಡದ ಬ್ಯಾಟಿಂಗ್ ಕೋಚ್ ಆಗಿದ್ದ ಪೀಟರ್ ಫುಲ್ಟನ್ ಅವರನ್ನು ಮೈದಾನಕ್ಕೆ ಇಳಿಸಲಾಗಿತ್ತು.

ವಿಶ್ವಕಪ್ ಕ್ರಿಕೆಟ್ ಫೈನಲ್

ವಿಶ್ವಕಪ್ ಕ್ರಿಕೆಟ್ ಫೈನಲ್

ಎರಡನೇ ಪಂದ್ಯದಲ್ಲಿ ಫೀಲ್ದಿಗೆ ಇಳಿದಿದ್ದ ಲೂಕ್ ರಾಂಚಿ, ತಂಡದ ಮತ್ತು ಆಸ್ಟ್ರೇಲಿಯಾದ ಬ್ಯಾಟ್ಸ್ ಮ್ಯಾನ್ ಕಮ್ ವಿಕೆಟ್ ಕೀಪರ್ ಆಗಿದ್ದವರು. 2015ರಲ್ಲಿ ನ್ಯೂಜಿಲ್ಯಾಂಡ್ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ನಡೆದ ವಿಶ್ವಕಪ್ ಕ್ರಿಕೆಟ್ ಫೈನಲ್ ನಲ್ಲಿ ಲೂಕ್ ರಾಂಚಿ ಕಿವೀಸ್ ವಿಕೆಟ್ ಕೀಪರ್ ಆಗಿದ್ದರು.

Story first published: Sunday, February 9, 2020, 20:49 [IST]
Other articles published on Feb 9, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X