ಏಕದಿನ ಸರಣಿಗೂ ಮುನ್ನ ದಕ್ಷಿಣ ಆಫ್ರಿಕಾಕ್ಕೆ ತೀವ್ರ ಆಘಾತ!

Posted By:
Proteas without injured De Villiers for first three India ODIs

ಕೇಪ್ ಟೌನ್, ಜನವರಿ 30 : ಪ್ರವಾಸಿ ಭಾರತ ವಿರುದ್ಧದ ಟೆಸ್ಟ್ ಸರಣಿಯನ್ನು ಗೆದ್ದಿರುವ ಅತಿಥೇಯ ದಕ್ಷಿಣ ಆಫ್ರಿಕಾ ಈಗ ಏಕದಿನ ಸರಣಿಗೆ ಸಿದ್ಧವಾಗುತ್ತಿದೆ.

ಆದರೆ, ಸರಣಿ ಆರಂಭಕ್ಕೂ ಮುನ್ನ ತೀವ್ರ ಆಘಾತ ಅನುಭವಿಸಿದೆ. ಸ್ಟಾರ್ ಆಟಗಾರ ಎಬಿ ಡಿ ವಿಲಿಯರ್ಸ್ ಅವರು ಸರಣಿಯ ಮೊದಲ ಮೂರು ಪಂದ್ಯಗಳಿಂದ ಹೊರಗುಳಿಯಬೇಕಾಗಿದೆ.

ಭಾರತ v/s ದಕ್ಷಿಣ ಆಫ್ರಿಕಾ ಸರಣಿ ವೇಳಾಪಟ್ಟಿ

ಟೆಸ್ಟ್ ಸರಣಿಯ ವೇಳೆ ಬಲಗೈ ತೋರು ಬೆರಳಿಗೆ ಗಾಯ ಮಾಡಿಕೊಂಡಿರುವ ಎಬಿ ಡಿ ವಿಲಿಯರ್ಸ್ ಅವರು ಮುಂದಿನ ಎರಡು ವಾರಗಳ ಕಾಲ ವಿಶ್ರಾಂತಿ ಪಡೆಯಬೇಕಿದೆ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಪ್ರಕಟಿಸಿದೆ.

ಏಕದಿನ ಸರಣಿಗೆ ಟೀಂ ಇಂಡಿಯಾ ಪ್ರಕಟ

ಫೆಬ್ರವರಿ 01ರಿಂದ ಆರಂಭವಾಗಲಿರುವ ಆರು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳ ಸರಣಿಯ ಮೊದಲ ಮೂರು ಪಂದ್ಯಗಳಿಗೆ ಎಬಿಡಿ ಅಲಭ್ಯರಾಗಲಿದ್ದಾರೆ.

ಆದರೆ, ನಾಲ್ಕನೇ ಪಂದ್ಯಕ್ಕೆ ಆಯ್ಕೆಗೆ ಲಭ್ಯರಾಗಲಿದ್ದಾರೆ ಎಂದು ತಿಳಿದು ಬಂದಿದೆ. ಎಬಿ ಡಿ ಅವರಿಗೆ ಬದಲಿ ಆಟಗಾರನನ್ನು ಆಯ್ಕೆ ಸಮಿತಿ ಸೂಚಿಸಿಲ್ಲ. (ಪಿಟಿಐ)

Story first published: Tuesday, January 30, 2018, 23:01 [IST]
Other articles published on Jan 30, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ