ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಚೊಚ್ಚಲ ಪಂದ್ಯದಲ್ಲಿ ಮಾವಿ ಮ್ಯಾಜಿಕ್: ಲಂಕಾ ವಿರುದ್ಧ ರೋಚಕ ಗೆಲುವು ಸಾಧಿಸಿದ ಭಾರತ

India vs Sri Lanka 1st T20I, Team India win the match by 2 runs in Wankhede

ಶ್ರೀಲಂಕಾ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ರೋಚಕ ಗೆಲುವು ಸಾಧಿಸಿದೆ. ಯುವ ವೇಗಿ ಶಿವಂ ಮಾವಿ ಚೊಚ್ಚಲ ಪಂದ್ಯದಲ್ಲಿಯೇ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿ ಮಿಂಚಿದ್ದು ಭಾರತದ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ. ತಮ್ಮ ಮೊದಲ ಪಂದ್ಯದಲ್ಲಿಯೇ ಮಾವಿ ನಾಲ್ಕು ವಿಕೆಟ್ ಕಬಳಿಸಿ ತಮ್ಮ ಪದಾರ್ಪಣಾ ಪಂದ್ಯವನ್ನು ಸ್ಮರಣೀಯಗೊಳಿಸಿದ್ದಾರೆ.

ಭಾರತ ನೀಡಿದ 163 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಶ್ರೀಲಂಕಾ ತಂಡ 160 ರನ್‌ಗಳಿಗೆ ತನ್ನ ಹೋರಾಟವನ್ನು ಅಂತ್ಯಗೊಳಿಸಿತು. ಈ ಮೂಲಕ ಕೇವಲ ಎರಡು ರನ್‌ಗಳ ಅಂತರದ ಸೋಲು ಅನುಭವಿಸಿದೆ. ಶ್ರೀಲಂಕಾ ನಾಯಕ ದಾಸುನ್ ಶನಕ ಉತ್ತಮ ಹೋರಾಟ ಪ್ರದರ್ಶಿಸಿದರಾದರೂ ಗೆಲುವು ದಕ್ಕಿಸಲು ವಿಫಲವಾದರು. ಟೀಮ್ ಇಂಡಿಯಾ ಪರವಾಗಿ ಶಿವಂ ಮಾವಿ 4 ವಿಕೆಟ್ ಪಡೆದು ಮಿಂಚಿದರೆ ಹರ್ಷಲ್ ಪಟೇಲ್ 2 ವಿಕೆಟ್ ಕಬಳಿಸಿದ್ದಾರೆ.

ಭಾರತದ ವಿರುದ್ಧದ ಟೆಸ್ಟ್ ಸರಣಿಗೆ ಈ ಆಲ್‌ರೌಂಡರ್ ಫಿಟ್ ಆಗುತ್ತಾರೆ ಎಂದ ಆಸ್ಟ್ರೇಲಿಯಾ ಕೋಚ್ಭಾರತದ ವಿರುದ್ಧದ ಟೆಸ್ಟ್ ಸರಣಿಗೆ ಈ ಆಲ್‌ರೌಂಡರ್ ಫಿಟ್ ಆಗುತ್ತಾರೆ ಎಂದ ಆಸ್ಟ್ರೇಲಿಯಾ ಕೋಚ್

ನಿರಾಸೆಗೊಳಿಸಿದ ಅಗ್ರಕ್ರಮಾಂಕದ ಆಟಗಾರರು

ನಿರಾಸೆಗೊಳಿಸಿದ ಅಗ್ರಕ್ರಮಾಂಕದ ಆಟಗಾರರು

ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ಆರಂಭಿಸಿದ ಭಾರತ ತಂಡಕ್ಕೆ ಆರಂಭಿಕ ಎರಡು ಓವರ್‌ಗಳಲ್ಲಿ ಇಶಾನ್ ಕಿಶನ್ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಕಾರಣ ಟೀಮ್ ಇಂಡಿಯಾ ಉತ್ತಮ ಆರಂಭ ಪಡೆಯುವ ವಿಶ್ವಾಸ ಮೂಡಿಸಿದರು. ಆದರೆ ಚೊಚ್ಚಲ ಪಂದ್ಯವನ್ನಾಡಿದ ಶುಬ್ಮನ್ ಗಿಲ್ ವಿಕೆಟ್ ಶೀಘ್ರದಲ್ಲೇ ಕಳೆದುಕೊಳ್ಳುವ ಮೂಲಕ ಟೀಮ್ ಇಂಡಿಯಾ ಹಿನ್ನಡೆ ಅನುಭವಿಸಿತು. ಅದಾದ ಬಳಿಕ ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್ ಹಾಗೂ ನಾಯಕ ಹಾರ್ದಿಕ್ ಪಾಂಡ್ಯ ಬ್ಯಾಟ್‌ನಿಂದಲೂ ನಿರೀಕ್ಷಿತ ಪ್ರದರ್ಶನ ಬಾರಲಿಲ್ಲ. ಆದರೆ ಈ ಹಂತದಲ್ಲಿ ಭಾರತ ತಂಡಕ್ಕೆ ಆಸರೆಯಾಗಿದ್ದು ದೀಪಕ್ ಹೂಡಾ ಹಾಗೂ ಅಕ್ಷರ್ ಪಟೇಲ್.

ಹೂಡಾ, ಅಕ್ಷರ್ ಅಮೋಘ ಪ್ರದರ್ಶನ

ಹೂಡಾ, ಅಕ್ಷರ್ ಅಮೋಘ ಪ್ರದರ್ಶನ

15ನೆ ಓವರ್‌ನ ಮೊದಲ ಎಸೆತದಲ್ಲಿ ನಾಯಕ ಹಾರ್ದಿಕ್ ಪಾಂಡ್ಯ ವಿಕೆಟ್ ಕಳೆದುಕೊಳ್ಳುವ ಮೂಲಕ ಟೀಮ್ ಇಂಡಿಯಾ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿತ್ತು. ಈ ಸಂದರ್ಭದಲ್ಲಿ ಟೀಮ್ ಇಂಡಿಯಾ 94 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡಿತ್ತು. ಬಳಿಕ ಹೂಡಾ ಅವರನ್ನು ಸೇರಿಕೊಂಡ ಅಕ್ಷರ್ ಪಟೇಲ್ ಉತ್ತಮ ಕೊಡುಗೆ ನೀಡಿದರು. ಸ್ಪೋಟಕ ಬ್ಯಾಟಿಂಗ್ ನಡೆಸಿದ ಈ ಜೋಡಿ ಅಂತಿಮ 35 ಎಸೆತಗಳಲ್ಲಿ 68 ರನ್‌ಗಳನ್ನು ಸೇರಿಸುವಲ್ಲಿ ಯಶಸ್ವಿಯಾದರು. ದೀಪಕ್ ಹೂಡಾ 23 ಎಸೆತದಲ್ಲಿ 4 ಸಿಕ್ಸರ್‌ಗಳ ಸಹಿತ 41 ರನ್‌ಗಳಿಸಿದರೆ ಅಕ್ಷರ್ ಪಟೇಲ್ 20 ಎಸೆತಗಳಲ್ಲಿ 31 ರನ್ ಗಳಿಸಿದರು. ಈ ಜೋಡಿಯ ಅದ್ಭುತ ಬ್ಯಾಟಿಂಗ್‌ನ ಕಾರಣದಿಂದಾಗಿ ಭಾರತ ನಿಗದಿತ 20 ಓವರ್‌ಗಳಲ್ಲಿ 162 ರನ್‌ಗಳನ್ನು ಗಳಿಸಲು ಕಾರಣವಾದರು.

ಲಂಕಾಗೆ ಆಘಾತ ನೀಡಿದ ಮಾವಿ

ಲಂಕಾಗೆ ಆಘಾತ ನೀಡಿದ ಮಾವಿ

ಇನ್ನು ಭಾರತ ತಂಡ ನೀಡಿದ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಶ್ರೀಲಂಕಾ ತಂಡಕ್ಕೆ ಆರಂಭದಲ್ಲಿಯೇ ಆಘಾತ ನೀಡಿದ್ದು ಚೊಚ್ಚಲ ಪಂದ್ಯವನ್ನು ಆಡಿದ ಶಿವಂ ಮಾವಿ. ತಾವು ಎಸೆದ ಮೊದಲ ಓವರ್‌ನ ಐದನೇ ಎಸೆತದಲ್ಲಿ ಮೊದಲ ವಿಕೆಟ್ ಪಡೆದು ಭಾರತಕ್ಕೆ ಆರಂಭಿಕ ಯಶಸ್ಸು ನೀಡಿದ ಮಾವಿ ತಮ್ಮ ಎರಡೇ ಓವರ್‌ನ ಐದನೇ ಎಸೆತದಲ್ಲಿಯೂ ವಿಕೆಟ್ ಕಿತ್ತರು. ಈ ಮೂಲಕ ಶ್ರೀಲಂಕಾ ತಂಡಕ್ಕೆ ಹಿನ್ನಡೆಯುಂಟು ಮಾಡಿದರು. ಬಳಿಕ ತಮ್ಮ ಎರಡನೇ ಸ್ಪೆಲ್‌ನಲ್ಲಿಯೂ ಎರಡು ವಿಕೆಟ್ ಪಡೆದ ಮಾವಿ ಚೊಚ್ಚಲ ಪಂದ್ಯದಲ್ಲಿ ನಾಲ್ಕು ವಿಕೆಟ್ ಪಡೆದು ಮಿಂಚಿದ್ದಾರೆ.

ದಾಸುನ್ ಶನಕ ಏಕಾಂಗಿ ಹೋರಾಟ

ದಾಸುನ್ ಶನಕ ಏಕಾಂಗಿ ಹೋರಾಟ

ಇನ್ನು ಈ ಪಂದ್ಯದಲ್ಲಿ ನಾಯಕ ದಾಸುನ್ ಶನಕ ಅದ್ಭುತ ಹೋರಾಟ ನಡೆಸಿ ಗೆಲುವಿಗಾಗಿ ಶ್ರಮಿಸಿದರು. ಆದರೆ ತಂಡದ ಗೆಲುವಿಗೆ 34 ರನ್‌ಗಳ ಅಗತ್ಯವಿದ್ದಾಗ ನಾಯಕ ಶನಕ 45 ರನ್‌ಗಳಿಸಿ ಉಮ್ರಾನ್ ಮಲಿಕ್‌ಗೆ ವಿಕೆಟ್ ಒಪ್ಪಿಸಿದರು. ಬಳಿಕವೂ ಹೋರಾಟ ಕೈಬಿಡದ ಶ್ರೀಲಂಕಾ ಪರವಾಗಿ ಚಾಮಿಕ ರತ್ನೆ ಗೆಲುವಿನ ಭರವಸೆ ಮೂಡಿಸಿದರು. ಆದರೆ ಅಂತಿಮವಾಗಿ ಶ್ರೀಲಂಕಾ ಕೇವಲ 2 ರನ್‌ಗಳ ಅಂತರದಿಂದ ಸೋಲು ಅನುಭವಿಸಿದೆ. ಈ ಮೂಲಕ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ 1-0 ಅಂತರದ ಮುನ್ನಡೆ ಸಾಧಿಸಿದೆ.

ಇತ್ತಂಡಗಳ ಆಡುವ ಬಳಗ

ಇತ್ತಂಡಗಳ ಆಡುವ ಬಳಗ

ಶ್ರೀಲಂಕಾ ಪ್ಲೇಯಿಂಗ್ XI: ಪಾತುಮ್ ನಿಸ್ಸಾಂಕ, ಕುಸಲ್ ಮೆಂಡಿಸ್(ವಿಕೆಟ್ ಕೀಪರ್), ಧನಂಜಯ ಡಿ ಸಿಲ್ವಾ, ಚರಿತ್ ಅಸಲಂಕಾ, ಭಾನುಕಾ ರಾಜಪಕ್ಸೆ, ದಸುನ್ ಶನಕ(ನಾಯಕ), ವನಿಂದು ಹಸರಂಗ, ಚಮಿಕಾ ಕರುಣಾರತ್ನೆ, ಮಹೀಶ್ ತೀಕ್ಷಣ, ಕಸುನ್ ರಜಿತ, ದಿಲ್ಶನ್ ಮಧುಶಂಕ
ಬೆಂಚ್: ಲಹಿರು ಕುಮಾರ, ಅವಿಷ್ಕ ಫೆರ್ನಾಂಡೋ, ಅಶೇನ್ ಬಂಡಾರ, ಪ್ರಮೋದ್ ಮದುಶನ್, ದುನಿತ್ ವೆಳ್ಳಾಲಗೆ, ನುವಾನ್ ತುಷಾರ, ಸದೀರ ಸಮರವಿಕ್ರಮ

ಭಾರತ ಆಡುವ XI: ಇಶಾನ್ ಕಿಶನ್(ವಿಕೆಟ್ ಕೀಪರ್), ಶುಬ್ಮನ್ ಗಿಲ್, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ(ನಾಯಕ), ದೀಪಕ್ ಹೂಡಾ, ಅಕ್ಸರ್ ಪಟೇಲ್, ಹರ್ಷಲ್ ಪಟೇಲ್, ಶಿವಂ ಮಾವಿ, ಉಮ್ರಾನ್ ಮಲಿಕ್, ಯುಜ್ವೇಂದ್ರ ಚಾಹಲ್
ಬೆಂಚ್: ಋತುರಾಜ್ ಗಾಯಕ್ವಾಡ್, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ರಾಹುಲ್ ತ್ರಿಪಾಠಿ, ಮುಖೇಶ್ ಕುಮಾರ್

Story first published: Tuesday, January 3, 2023, 22:46 [IST]
Other articles published on Jan 3, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X