ದ.ಆಫ್ರಿಕಾ ವಿರುದ್ಧ ಪಂದ್ಯದಲ್ಲಿ ಭಾರತ ನಿರ್ಮಿಸಿದ ದಾಖಲೆಗಳ ಪಟ್ಟಿ

Posted By:

ಕೇಪ್‌ಟೌನ್, ಫೆಬ್ರವರಿ 08: ಭಾರತ ಕ್ರಿಕೆಟ್‌ ಅಭಿಮಾನಿಗಳಿಗೆ ನಿನ್ನೆ (ಫೆ.07) ಸಂತಸದ ತಂಡ ದಿನ. ಭಾರತ ಪುರುಷ ಹಾಗೂ ಮಹಿಳಾ ಕ್ರಿಕೆಟ್‌ ತಂಡಗಳೆರೆಡೂ ದ.ಆಫ್ರಿಕಾ ವಿರುದ್ಧ ಭರ್ಜರಿ ಗೆಲುವು ಸಾಧಿಸಿದವು.

ಭಾರತ ಕ್ರಿಕೆಟ್ ತಂಡ ಕೇಪ್‌ಟೌನ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಭರ್ಜರಿ ಗೆಲವು ಸಾಧಿಸಿತು. ಆ ಪಂದ್ಯದಲ್ಲಿ ಸಾಕಷ್ಟು ಹೊಸ ದಾಖಲೆಗಳನ್ನೂ ಭಾರತ ತಂಡ ನಿರ್ಮಿಸಿತು.

ಇದೇ ಮೊದಲ ಬಾರಿಗೆ ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ಸತತ 3 ಗೆಲುವು

ಮೊಟ್ಟ ಮೊದಲ ಬಾರಿಗೆ ದ.ಆಫ್ರಿಕಾ ನೆಲದಲ್ಲಿ ಮೂರು ಜಯಗಳಿಸಿರುವ ಭಾರತ ಇದೊಂದೆ ಅಲ್ಲದೆ ಹಲವು ಹಳೆಯ ದಾಖಲೆಗಳನ್ನು ಮುರಿದು, ತಂಡವಾಗಿ ದಾಖಲೆ ನಿರ್ಮಿಸುವ ಜೊತೆಗೆ ಹಲವು ಆಟಗಾರರು ವೈಯಕ್ತಿಕವಾಗಿಯೂ ದಾಖಲೆಗಳನ್ನು ಸ್ಥಾಪಿಸಿದರು.

ಸ್ಕೋರ್ ಕಾರ್ಡ್

ದಕ್ಷಿಣ ಆಫ್ರಿಕಾ ವಿರುದ್ಧ ಮೂರನೇ ಏಕದಿನ ಪಂದ್ಯದಲ್ಲಿ ಸ್ಥಾಪಿತವಾದ ದಾಖಲೆಗಳನ್ನು ತಿಳಿಯಲು ಮುಂದೆ ಓದಿ...

ಅತಿ ಹೆಚ್ಚು ಶತಕ

ಅತಿ ಹೆಚ್ಚು ಶತಕ

ಕೊಹ್ಲಿ ಪ್ರತಿ ಶತಕ ಭಾರಿಸಿದಾಗಲು ಯಾವುದಾದರೊಂದು ದಾಖಲೆ ಮುರಿಯುತ್ತದೆ. ನಿನ್ನೆಯೂ ಅಷ್ಟೆ ಅವರು ಭಾರಿಸಿದ ಶತಕ ದಾಖಲೆ ನಿರ್ಮಿಸಿದೆ. ನಾಯಕರಾಗಿ ಅತಿ ಹೆಚ್ಚು ಶತಕ ಭಾರಿಸಿದವರ ಪಟ್ಟಿಯಲ್ಲಿ ಕೊಹ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಮೊದಲ ಸ್ಥಾನದಲ್ಲಿ ರಿಕಿ ಪಾಂಟಿಗ್ (22 ಶತಕ) ಮತ್ತು ಎರಡನೇ ಸ್ಥಾನದಲ್ಲಿ ಎಬಿ ಡಿವಿಲಿಯರ್ಸ್ (13 ಶತಕ) ಇದ್ದಾರೆ. ಕೊಹ್ಲಿ ನಾಯಕರಾದ ಮೇಲೆ 12 ಶತಕ ಭಾರಿಸಿದ್ದಾರೆ.

ಓಟದಲ್ಲೇ 100 ರನ್ ಗಳಿಸಿದ ಕೊಹ್ಲಿ

ಓಟದಲ್ಲೇ 100 ರನ್ ಗಳಿಸಿದ ಕೊಹ್ಲಿ

ಕೊಹ್ಲಿ ನಿನ್ನೆ ಗಳಿಸಿದ 160 ರನ್‌ಗಳಲ್ಲಿ 100 ರನ್ ಬರೀ ಪಿಚ್‌ ನಡುವೆ ಓಟದಲ್ಲಿ ಗಳಿಸಿದ್ದು, ಉಳಿದ 60 ರನ್ ಬೌಂಡರಿಗಳಿಂದ ಬಂತು. ಈ ರೀತಿಯ ಸಾಧನೆ ಮಾಡಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಎಂಬ ಶ್ರೇಯ ಕೊಹ್ಲಿಗೆ ಪಾಲಿಗಾಯಿತು. ಈ ರೀತಿಯ ಸಾಧನೆ ಮಾಡಿದ ವಿಶ್ವದ 5 ಬ್ಯಾಟ್ಸ್‌ಮನ್‌ಗಳಲ್ಲಿ ಕೊಹ್ಲಿ ಕೂಡಾ ಒಬ್ಬರಾದರು. ಕೊಹ್ಲಿ ಅವರ ಇನ್ನಿಂಗ್ಸ್‌ನಲ್ಲಿ 75 ಸಿಂಗಲ್ಸ್‌, 16 ಡಬಲ್ಸ್‌, 1 ತ್ರಿಬಲ್, 12 ಬೌಂಡರಿ ಮತ್ತು 2 ಸಿಕ್ಸರ್‌ ಇತ್ತು.

ಏಕದಿನ ಕ್ರಿಕೆಟ್ ನಲ್ಲಿ 34ನೇ ಶತಕ ಸಿಡಿಸಿದ ವಿರಾಟ್ ಕೊಹ್ಲಿ

ಕೊಹ್ಲಿ ಅತ್ಯುತ್ತಮ ಜೊತೆಗಾರ

ಕೊಹ್ಲಿ ಅತ್ಯುತ್ತಮ ಜೊತೆಗಾರ

ವಿಶ್ವ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಬಾರಿ 300 ರನ್‌ ಜೊತೆಯಾಟದಲ್ಲಿ ಭಾಗಿಯಾದ ಶ್ರೇಯ ನಿನ್ನೆ ಕೊಹ್ಲಿ ಪಾಲಾಯಿತು. ಕೊಹ್ಲಿ ಈ ವರೆಗೆ 42 ಬಾರಿ 300 ರನ್ ಜೊತೆಯಾಟದಲ್ಲಿ ಭಾಗಿಯಾಗಿದ್ದಾರೆ. ಕೊಹ್ಲಿ ನಂತರದ ಸ್ಥಾನ ಇರುವುದು ಎಂ.ಎಸ್.ಧೋನಿಗೆ. ಅವರು 38 ಬಾರಿ 300 ರನ್ ಜೊತೆಯಾಟದಲ್ಲಿ ಭಾಗಿಯಾಗಿದ್ದಾರೆ.

ರೋಹಿತ್‌ ಶರ್ಮಾಗೆ ರಬಾಡ ಶನಿ

ರೋಹಿತ್‌ ಶರ್ಮಾಗೆ ರಬಾಡ ಶನಿ

ಭಾರತ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಈ ವರೆಗೆ ಟೆಸ್ಟ್ ದ.ಆಫ್ರಿಕಾ ಬೌಲರ್‌ ಕಗಿಸೊ ರಬಾಡಾ ಅವರು ರೋಹಿತ್ ಶರ್ಮಾ ಅವರನ್ನು 5 ಬಾರಿ ಔಟ್ ಮಾಡಿದ್ದಾರೆ. ಕಗೀಸೊ ರಬಾಡ ಅವರ ಬೌಲಿಂಗ್‌ನಲ್ಲಿ 82 ಎಸೆತಗಳನ್ನು ಎದುರಿಸಿರುವ ರೋಹಿತ್ 5 ಬಾರಿ ಅವರಿಗೆ ವಿಕೆಟ್ ಒಪ್ಪಿಸಿದ್ದಾರೆ. ಉಳಿದ ಬೌಲರ್‌ಗಳ 161 ಬಾಲ್‌ಗಳನ್ನು ಅವರು 2 ಬಾರಿ ಮಾತ್ರ ಬೇರೆ ಅವರಿಗೆ ವಿಕೆಟ್ ಒಪ್ಪಿಸಿದ್ದಾರೆ. ದ.ಆಫ್ರಿಕಾ ಪ್ರವಾಸದಲ್ಲಿ ರಬಾಡಾ ಅವರು ರೋಹಿತ್‌ಗೆ ಶನಿಯಾಗಿ ಕಾಡುತ್ತಿದ್ದಾರೆ.

ವಿಕೆಟ್ ಹಿಂದಿನ ವೀರ

ವಿಕೆಟ್ ಹಿಂದಿನ ವೀರ

ಎಂ.ಎಸ್.ಧೋನಿ ವಿಶ್ವದ ಅತ್ಯುತ್ತಮ ವಿಕೆಟ್ ಕೀಪರ್‌ ಎಂಬುದರಲ್ಲಿ ಅನುಮಾನವೇ ಇಲ್ಲ. ಅವರು ನಿನ್ನೆಯ ಪಂದ್ಯದಲ್ಲಿ ದ.ಆಫ್ರಿಕಾ ನಾಯಕ ಮಾರ್ಕ್ರಮ್ ಅವರನ್ನು ಸ್ಟಂಪ್ ಔಟ್ ಮಾಡುತ್ತಿದ್ದಂತೆಯೇ ಹೊಸ ದಾಖಲೆಯೊಂದನ್ನು ಬರೆದರು. ವಿಕೆಟ್ ಹಿಂದೆ 400 ಬಲಿ ಪಡೆದ ಮೊದಲ ಭಾರತೀಯ ವಿಕೆಟ್ ಕೀಪರ್ ಹಾಗೂ ವಿಶ್ವದ ನಾಲ್ಕನೇ ವಿಕೆಟ್ ಕೀಪರ್ ಎನಿಸಿಕೊಂಡರು. ಧೋನಿ ಹೊರತು ಪಡಿಸಿ ಕುಮಾರ ಸಂಗಾಕ್ಕಾರ (482), ಆಡಂ ಗಿಲ್‌ಕ್ರಿಸ್ಟ್‌ (472), ಮಾರ್ಕ್‌ ಬೌಚರ್‌ (424) ಈ ಸಾಧನೆ ಮಾಡಿದ್ದಾರೆ.

ವೈಯಕ್ತಿಕ ಹೆಚ್ಚು ಮೊತ್ತ

ವೈಯಕ್ತಿಕ ಹೆಚ್ಚು ಮೊತ್ತ

ದ.ಆಫ್ರಿಕಾ ನೆಲದಲ್ಲಿ ಸತತ ಮೂರು ಗೆಲುವು ಸಾಧಿಸಿದ ದಾಖಲೆ ಬರೆತ ಭಾರತ ತಂಡ ಅದರ ಜೊತೆಗೆ. ಮೊದಲ ಬಾರಿಗೆ ದ.ಆಫ್ರಿಕಾ ನೆಲದಲ್ಲಿ ಅದೇ ತಂಡದ ವಿರುದ್ಧ 300 ರನ್ ಗಡಿ ದಾಟಿ ದಾಖಲೆ ನಿರ್ಮಿಸಿದೆ. ಅಷ್ಟೆ ಅಲ್ಲದೆ ದ.ಆಫ್ರಿಕಾ ವಿರುದ್ಧ ಕೊಹ್ಲಿ ಗಳಿಸಿದ 160ರನ್ ಕೂಡ ಭಾರತೀಯ ಬ್ಯಾಟ್ಸ್‌ಮನ್‌ ಒಬ್ಬನ ದ.ಆಫ್ರಿಕಾ ವಿರುದ್ಧ ಗಳಿಸಿದ ಅತಿ ಹೆಚ್ಚು ರನ್ ಎನಿಸಿಕೊಂಡಿದೆ.

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Thursday, February 8, 2018, 12:44 [IST]
Other articles published on Feb 8, 2018
POLLS

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ