ಕ್ರಿಕೆಟ್: ದ.ಆಫ್ರಿಕಾಕ್ಕೆ 214 ರನ್ ಗುರಿ ನೀಡಿದ ಭಾರತದ ವನಿತೆಯರು

Posted By:
Indian women cricket team gave 214 target to S.Africa team

ಕಿಂಬರ್ಲಿ, ಫೆಬ್ರವರಿ 05: ದ.ಆಫ್ರಿಕಾ ವಿರುದ್ಧ ಮಹಿಳಾ ಕ್ರಿಕೆಟ್ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ದ.ಆಪ್ರಿಕಾಕ್ಕೆ ಗೆಲ್ಲಲು ಭಾರತದ ವನಿತೆಯರು 2013 ರನ್‌ಗಳ ಗುರಿ ನೀಡಿದ್ದಾರೆ.

ಟಾಸ್‌ ಗೆದ್ದು ಬ್ಯಾಟಿಂಗ್ ಆಯ್ದು ಕೊಂಡ ಭಾರತದ ಉತ್ತಮ ಆರಂಭವನ್ನೇ ಕಂಡಿತು. ರೌತ್ ಅವರು 19 ರನ್ ಗಳಿಸಿ ಔಟಾದರೂ ಮತ್ತೊಬ್ಬ ಆರಂಭಿಕ ಆಟಗಾರ್ತಿ ಸ್ಮೃತಿ ಮಂದನ್ನ ಅವರು ಬರೋಬ್ಬರಿ 84 ರನ್ ಗಳಿಸಿದರು.

ಅತ್ಯುತ್ತಮ ಬ್ಯಾಟಿಂಗ್ ನಡೆಸಿದ ಮಂದನ್ನ ಅವರು 98 ಬಾಲ್ ಎದುರಿಸಿ 84 ರನ್ ಗಳಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 8 ಬೌಂಡರಿ ಮತ್ತು 1 ಸಿಕ್ಸರ್‌ ಸಿಡಿಸಿದರು. ಅವರಿಗೆ ಅತ್ಯುತ್ತಮ ಬೆಂಬಲ ನೀಡಿದ ನಾಯಕಿ ಮಿಥಾಲಿ ರಾಜ್ ಅವರು 70 ಬಾಲ್ ಎದುರಿಸಿ 45 ರನ್ ಗಳಿಸಿದರು. ತಾಳ್ಮೆಯ ಆಟವಾಡಿದ ಅವರು 2 ಬೌಂಡರಿ ಗಳಿಸಿದರು.

ಮಿಥಾಲಿ ರಾಜ್ ಹಾಗೂ ಸ್ಮೃತಿ ಮಂದನ್ನ ಅಂಗಳದಲ್ಲಿದ್ದಾಗ ಅತ್ಯುತ್ತಮವಾಗಿ ರನ್‌ ಸರಾಸರಿ ಇತ್ತು. ಆದರೆ ಇವರಿಬ್ಬರೂ ಆಟಗಾರ್ತಿಯರು ಎರಡು ಓವರ್ ಅಂತರದಲ್ಲಿ ಔಟ್ ಆದರು. ಆ ನಂತರ ಬಂದ್ ಯಾವುದೇ ಆಟಗಾರ್ತಿ ಉತ್ತಮ ಬ್ಯಾಟಿಂಗ್ ಮಾಡುವಲ್ಲಿ ವಿಫಲರಾದರು.

ಸುಷ್ಮಾ ವರ್ಮಾ ಹೊರತುಪಡಿಸಿ ಮಿಥಾಲಿ ರಾಜ್ ಔಟಾದ ಬಳಿಕ ಸ್ಕ್ರೀಜಿಗೆ ಬಂದ ಯಾವೊಬ್ಬ ಆಟಗಾರ್ತಿಯೂ ಎರಡಂಕಿ ರನ್ ಗಳಿಸಲಿಲ್ಲ. ಅದರಲ್ಲಿಯೂ ವೇದಾ ಕೃಷ್ಣಮೂರ್ತಿ ಮತ್ತು ದೀಪ್ತಿ ಶರ್ಮಾ ಅವರು ಇಲ್ಲದ ರನ್ ಕದಿಯಲು ಹೋಗಿ ಇಬ್ಬರೂ ರನ್‌ಔಟ್ ಆದರು.

ದ.ಆಫ್ರಿಕಾ ಪರ ಏಳು ಮಂದಿ ಬೌಲಿಂಗ್ ಮಾಡಿದರು. ಕಾಪ್ ಮತ್ತು ಅಯೋಬಾಂಗ್ ಖಾಕ ತಲಾ ಎರಡು ವಿಕೆಟ್ ಪಡೆದರು.

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Monday, February 5, 2018, 18:19 [IST]
Other articles published on Feb 5, 2018
POLLS

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ