ಕೊನೆಯ ಟಿ20 ಪಂದ್ಯದಲ್ಲಿ ಭಾರತದ ಮಹಿಳೆಯರು ಬ್ಯಾಟಿಂಗ್‌

Posted By:
Indian women playing their tours final t20 match against South Africa women

ಕೇಪ್ ಟೌನ್, ಫೆಬ್ರವರಿ 24: ದಕ್ಷಿಣ ಆಫ್ರಿಕಾ ಮಹಿಳೆಯರ ವಿರುದ್ಧ 5 ಪಂದ್ಯಗಳ ಟಿ20 ಸರಣಿಯ ಕೊನೆಯ ಪಂದ್ಯ ಆಡುತ್ತಿರುವ ಭಾರತದ ಮಹಿಳೆಯರು ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟಿದ್ದಾರೆ.

ಈಗಾಗಲೇ ಸರಣಿಯಲ್ಲಿ 2-1ರಲ್ಲಿ ಮುನ್ನಡೆ ಸಾಧಿಸಿರುವ ಭಾರತದ ಮಹಿಳೆಯರು ಈ ಪಂದ್ಯವನ್ನೂ ಗೆದ್ದು ಸರಣಿ ಜಯಿಸುವ ವಿಶ್ವಾಸದಲ್ಲಿದ್ದಾರೆ. ಈ ಪಂದ್ಯವನ್ನು ಭಾರತ ಸೋತರೂ ಸಹಿತ ಸರಣಿ ಸಮಬಲವಾಗಲಿದೆ.

ಈ ಪಂದ್ಯಕ್ಕೂ ಮಳೆ ಅಡ್ಡಿ ಪಡಿಸಿದ್ದು, ಪಂದ್ಯ ವಿಳಂಬವಾಗಿದ. ನಾಲ್ಕನೇ ಪಂದ್ಯದಂತೆ ಈ ಪಂದ್ಯವೂ ಮಳೆಗೆ ಆಹುತಿಯಾದಲ್ಲಿ 2-1 ರಲ್ಲಿ ಮುನ್ನಡೆಯಲ್ಲಿರುವ ಭಾರತದ ಮಹಿಳೆಯರು ಸರಣಿ ಜಯಿಸಲಿದ್ದಾರೆ.

ಭಾರತವು ಈಗಾಗಲೇ ಏಕದಿನ ಸರಣಿ ಜಯಿಸಿ ಇತಿಹಾಸ ಸೃಷ್ಠಿಸಿದ್ದು, ಟಿ20 ಸರಣಿಯನ್ನೂ ಗೆದ್ದಲ್ಲಿ ಹೊಸ ದಾಖಲೆಯೇ ನಿರ್ಮಾಣವಾಗಲಿದೆ. ಸ್ಮೃತಿ ಮಂದಾನಾ, ಸ್ಮೃತಿ ಇರಾನಿ, ವೇದಾ ಕೃಷ್ಣಮೂರ್ತಿ ಅವರುಗಳು ಅತ್ಯುತ್ತಮ ಫಾರ್ಮ್ ನಲ್ಲಿದ್ದು ಪಂದ್ಯವನ್ನು ಗೆಲ್ಲುತ್ತಾರೆಂಬ ಭರವಸೆ ಇದೆ.

Story first published: Saturday, February 24, 2018, 17:00 [IST]
Other articles published on Feb 24, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ