ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸುನಿಲ್ ದಾಖಲೆ ಅರ್ಧಶತಕ, ಆರ್ ಸಿಬಿ ವಿರುದ್ಧ ಕೆಕೆಆರ್ ಗೆ ಜಯ

ಸತತ ಸೋಲಿನ ಬಳಿಕ ಗೆಲ್ಲಬೇಕಾದ ಒತ್ತಡದಲ್ಲಿದ್ದ ಕೆಕೆಆರ್ ತಂಡಕ್ಕೆ ಆರ್ ಸಿಬಿ ಸುಲಭ ತುತ್ತಾಗಿದೆ. ಆರ್ ಸಿಬಿ ನೀಡಿದ್ದ 159ರನ್ ಗುರಿಯನ್ನು 15.1ಓವರ್ ಗಳಲ್ಲಿ ತಲುಪಿ 6 ವಿಕೆಟ್ ಗಳಿಂದ ಗೆಲುವು ದಾಖಲಿಸಿದೆ.

By Mahesh

ಬೆಂಗಳೂರು, ಮೇ 07: ಸತತ ಸೋಲಿನ ಬಳಿಕ ಗೆಲ್ಲಲೇಬೇಕಾದ ಒತ್ತಡದಲ್ಲಿರುವ ಕೆಕೆಆರ್ ತಂಡಕ್ಕೆ ಆರ್ ಸಿಬಿ ಸುಲಭವಾಗಿ ಶರಣಾಯಿತು. ಆರ್ ಸಿಬಿಯನ್ನು 158ಸ್ಕೋರಿಗೆ ನಿಯಂತ್ರಿಸಿದ್ದಲ್ಲದೆ, ಸುಲಭವಾಗಿ ರನ್ ಚೇಸ್ ಮಾಡಿ ಗೆಲುವು ದಾಖಲಿಸಿತು. ಕೆಕೆಆರ್ ತಂಡದ ಗೆಲುವಿಗೆ ಸುನಿಲ್ ನಾರಾಯಣ್ ಅವರ ತ್ವರಿತಗತಿ ಅರ್ಧಶತಕ(15 ಎಸೆತ) ಕಾರಣವಾಯಿತು.

ಮಳೆಯಿಂದ ಮಧ್ಯದಲ್ಲಿ ಕೆಲ ಸಮಯ ಪಂದ್ಯ ನಿಂತರೂ, ಕೆಕೆಆರ್ ತನ್ನ ಹಿಡಿತ ಸಡಿಸಲಿಲ್ಲ. ಪಂದ್ಯದುದ್ದಕ್ಕೂ ಉತ್ತಮವಾಗಿ ಆಡಿ 6 ವಿಕೆಟ್ ಗಳಿಂದ ಅರ್ಹ ಜಯ ದಾಖಲಿಸಿತು.

ಕೆಕೆಆರ್ ರನ್ ಚೇಸ್: ಮೊದಲ ಆರು ಓವರ್ ಗಳಲ್ಲೆ ಪಂದ್ಯದ ಹಣೆಬರಹ ಬರೆದ ಕೆಕೆಆರ್
* ಸುನಿಲ್ ನಾರಾಯಣ್ 15 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಹೊಸ ಐಪಿಎಲ್ ದಾಖಲೆ

* 17 ಎಸೆತಗಳಲ್ಲಿ 54 (6 ಬೌಂಡರಿ, 4 ಸಿಕ್ಸರ್) ರನ್ ಬಾರಿಸಿದ ಸುನಿಲ್ ನಾರಾಯಣ್
* ಮತ್ತೆ ತಂಡಕ್ಕೆ ಮರಳಿದ ಕ್ರಿಸ್ ಲಿನ್ 22 ಎಸೆತಗಳಲ್ಲಿ 50ರನ್ ಬಾರಿಸಿದರು.
* ಗೌತಮ್ ಗಂಭೀರ್ 14, ಕಾಲಿನ್ 34ರನ್ ಗಳಿಸಿ 15.1 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 159ರನ್

Sunil Narine


* ಆರ್ ಸಿಬಿ ಇನ್ನಿಂಗ್ಸ್: ಮೊದಲ ಎಸೆತದಲ್ಲೇ ಗೇಲ್ ಕ್ಯಾಚಿತ್ತು ಔಟ್.
* ಉತ್ತಮ ಲಯದಲ್ಲಿರುವ ಮನ್ದೀಪ್ ಸಿಂಗ್ 43 ಎಸೆತಗಳಲ್ಲಿ 52ರನ್ ಗಳಿಸಿದರು.
* ವಿರಾಟ್ ಕೊಹ್ಲಿ 5. ಎಬಿ ಡಿವಿಲಿಯರ್ಸ್ 10 ಮತ್ತೊಮ್ಮೆ ವಿಫಲ.*
* ಏಕಾಂಗಿ ಹೋರಾಟ ನಡೆಸಿದ ಟ್ರಾವಿಸ್ ಹೆಡ್ 47 ಎಸೆತಗಳಲ್ಲಿ 75ರನ್ (3 ಬೌಂಡರಿ, 5 ಸಿಕ್ಸರ್) ಗಳಿಸಿ ಅಜೇಯರಾಗಿ ಉಳಿದರು.
* ಆರ್ ಸಿಬಿ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 158 ಸ್ಕೋರ್ ಮಾಡಿತು

ಮೊದಲು ಬ್ಯಾಟ್ ಮಾಡುವ ಅವಕಾಶ ಸಿಕ್ಕರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತೊಮ್ಮೆ ಆಘಾತಕಾರಿ ಆರಂಭ ಪಡೆಯಿತು. ಟಾಪ್ ಸ್ಟಾರ್ ಆಟಗಾರರಾದ ಕ್ರಿಸ್ ಗೇಲ್, ವಿರಾಟ್ ಕೊಹ್ಲಿ ಹಾಗೂ ಎಬಿ ಡಿ ವಿಲಿಯರ್ಸ್ ವಿಕೆಟ್ ಕಳೆದುಕೊಂಡಿದೆ.[ಗೋ ಗ್ರೀನ್ ಎಂದು ಬಿಎಂಟಿಸಿ ಹತ್ತಿದ ಕೊಹ್ಲಿ ಪಡೆ]

ಹಸಿರು ಅಭಿಯಾನವನ್ನು ಮುಂದುವರೆಸಿರುವ ಅರ್ ಸಿಬಿ ತನ್ನ ತವರು ನೆಲದ ಕೊನೆ ಪಂದ್ಯದಲ್ಲಿ ಹಸಿರು ಜರ್ಸಿ ತೊಟ್ಟು ಕಣಕ್ಕಿಳಿದಿದೆ. ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಅವಕಾಶ ಪಡೆದರೂ ಹೆಚ್ಚಿನ ಲಾಭ ಪಡೆಯುವಲ್ಲಿ ವಿಫಲವಾಗಿದೆ.
IPL 2017: Match 46: Umesh Yadav removes Kohli-Gayle cheaply as KKR opt to field


ಇನ್ನೊಂದೆಡೆ ಪ್ಲೇ ಅಫ್ ಕನಸು ಜೀವಂತವಾಗಿರಿಸಿಕೊಂಡಿರುವ ಕೆಕೆಆರ್ ತಂಡವು, ಪುಣೆ ಹಾಗೂ ಹೈದರಾಬಾದ್ ವಿರುದ್ಧ ಸೋಲು ಕಂಡು ಸ್ವಲ್ಪ ಹಿನ್ನಡೆ ಅನುಭವಿಸಿದೆ.


ಆಡುವ XIs: ಕೆಕೆಆರ್: ಗೌತಮ್ ಗಂಭೀರ್ (ನಾಯಕ), ಕ್ರಿಸ್ ಲಿನ್, ಮನೀಶ್ ಪಾಂಡೆ, ಯೂಸುಫ್ ಪಠಾಣ್, ಶೆಲ್ಡನ್ ಜಾಕ್ಸನ್ (ವಿಕೆಟ್ ಕೀಪರ್), ಕ್ರಿಸ್ ವೊಕ್ಸ್, ಕಾಲಿನ್ ಡಿ ಗ್ರಾಂಡ್ ಹೊಮ್, ಸುನಿಲ್ ನಾರಾಯಣ್, ಪಿಯೂಷ್ ಚಾವ್ಲಾ, ಅಂಕಿತ್ ರಾಜ್ ಪೂತ್, ಉಮೇಶ್ ಯಾದವ್

ಆರ್ ಸಿಬಿ: ವಿರಾಟ್ ಕೊಹ್ಲಿ (ನಾಯಕ), ಕ್ರಿಸ್ ಗೇಲ್, ಎಬಿ ಡಿ ವಿಲಿಯರ್ಸ್, ಮನ್ದೀಪ್ ಸಿಂಗ್, ಟ್ರಾವಿಸ್ ಹೆಡ್, ಕೇದಾರ್ ಜಾಧನ್ (ವಿಕೆಟ್ ಕೀಪರ್), ಪವನ್ ನೇಗಿ, ಸ್ಯಾಮುಯಲ್ ಬದ್ರಿ, ಶ್ರೀನಾಥ್ ಅರವಿಂದ್, ಯಜುವೇಂದ್ರ ಚಾಹಲ್, ಅನಿಕೇತ್ ಚೌಧರಿ.

Story first published: Wednesday, January 3, 2018, 10:04 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X