ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ತಂಡದ ನಾವೆಲ್ಲರೂ ವಾಟ್ಸನ್ ಔಟ್ ಎಂದೇ ಭಾವಿಸಿದ್ದೆವು'

The whole dressing room believes Watson was out: Shreyas Iyer

ಪುಣೆ, ಮೇ 1: ಡೆಲ್ಲಿ ತಂಡದ ನೂತನ ನಾಯಕ ಶ್ರೇಯಸ್ ಐಯರ್ ಸೋಮವಾರದ ಡೆಲ್ಲಿ-ಚೆನ್ನೈ ಪಂದ್ಯದ ಬಗ್ಗೆ ಮಾತನಾಡುತ್ತ, ಪಂದ್ಯದಲ್ಲಿ ಬೌಲ್ಟ್ ಅವರ ಮೊದಲ ಎಸೆತಕ್ಕೆ ವಾಟ್ಸನ್ ಔಟಾಗಿದ್ದಾರೆ ಎಂದೇ ಭಾವಿಸಿದ್ದೆವು. ಆದರೆ ಅದಾಗಲಿಲ್ಲ ಎಂದಿದ್ದಾರೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಗೆ ಇಳಿದಿದ್ದ ಚೆನ್ನೈ ತಂಡದ ಆರಂಭಿಕ ಬ್ಯಾಟ್ಸ್ಮನ್ ಶೇನ್ ವಾಟ್ಸನ್ ಅವರು ಡೆಲ್ಲಿ ತಂಡದ ಟ್ರೆಂಟ್ ಬೌಲ್ಟ್ ಮೊದಲ ಎಸೆತಕ್ಕೆ ಎಲ್‌ಬಿಡಬ್ಲ್ಯು ಆದಂತೆ ಕಂಡು ಬಂದಿತ್ತಾದರೂ ಅಂಪೈರ್ ನಿಂದ ಔಟ್ ತೀರ್ಮಾನ ಬರಲಿಲ್ಲ. ನಂತರ ವಾಟ್ಸನ್ ಸ್ಫೋಟಕ ಬ್ಯಾಟಿಂಗ್ ಮೂಲಕ 78 (40) ರನ್ ಸಿಡಿಸಿ ಡೆಲ್ಲಿ ತಂಡದ ಸೋಲಿಗೂ ಕಾರಣರಾದರು.

ಈ ವಿಚಾರವಾಗಿ ಅಭಿಪ್ರಾಯ ಹಂಚಿಕೊಂಡ ಐಯರ್, 'ಡ್ರೆಸ್ಸಿಂಗ್ ರೂಮ್ ನಲ್ಲಿ ನಾವೆಲ್ಲರೂ ಬೌಲ್ಟ್ ಮೊದಲ ಎಸೆತಕ್ಕೆ ವಾಟ್ಸನ್ ಔಟೆಂದೇ ಮಾತನಾಡಿಕೊಂಡೆವು. ಆದರೆ ಪಂದ್ಯದ ವೇಳೆ ಅಂಪೈರ್ ರಿಂದ ಔಟ್ ತೀರ್ಮಾನ ಬರಲಿಲ್ಲ. ವೀಡಿಯೋ ವಿಮರ್ಶೆಗೆ ಮನವಿ ಮಾಡಿದರೂ ಪ್ರಯೋಜನಕ್ಕೆ ಬರಲಿಲ್ಲ' ಎಂದರು.

'ಮಾತು ಮುಂದುವರೆಸಿದ ಶ್ರೇಯಸ್, 'ಹಾಗೆ ಜೀವದಾನ ಪಡೆದ ವಾಟ್ಸನ್ ಚೆನ್ನೈ ತಂಡವನ್ನು ಗೆಲ್ಲಿಸಿಕೊಡುವಲ್ಲಿ ನೆರವಾದರು. ಒಂದರ್ಥದಲ್ಲಿ ಹೇಳುವುದಾದರೆ ವಾಟ್ಸನ್ ಪರವಾದ ಆ ತೀರ್ಮಾನವೇ ನಮ್ಮನ್ನು ಸೋಲಿನಂಚಿಗೆ ತಳ್ಳಿತು' ಎಂದು ಹೇಳಿದರು.

ಸೋಮವಾರ ಐಪಿಎಲ್ 30ನೇ ಪಂದ್ಯವಾಗಿ ನಡೆದ ಡೆಲ್ಲಿ-ಚೆನ್ನೈ ಹಣಾಹಣಿಯಲ್ಲಿ ಡೆಲ್ಲಿ ತಂಡ ಚೆನ್ನೈ ವಿರುದ್ಧ 13 ರನ್ ಸೋತಿತ್ತು. ಚೆನ್ನೈ ನೀಡಿದ್ದ 212 ರನ್ ಗುರಿ ಬೆನ್ನಟ್ಟಿದ ಡೆಲ್ಲಿ 20 ಓವರ್ ಗೆ ಒಟ್ಟು 198 ರನ್ ಪೇರಿಸಿ ಶರಣಾಗಿತ್ತು.

ಶೇನ್ ವಾಟ್ಸನ್ ನಾಟೌಟ್ ತೀರ್ಮಾನದ ಕುರಿತು ಟ್ವೀಟ್ ತಮಾಷೆ.

Story first published: Tuesday, May 8, 2018, 15:01 [IST]
Other articles published on May 8, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X