ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್: ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಪ್ ಗೆಲ್ಲುತ್ತಾ, ಇಲ್ವಾ?!

IPL 2019: Can Royal Challengers Bangalore win the title?

ಬೆಂಗಳೂರು, ಏಪ್ರಿಲ್ 4: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 12ನೇ ಆವೃತ್ತಿಯಲ್ಲಿ ಈವರೆಗೆ ಆಡಿರುವ ನಾಲ್ಕೂ ಪಂದ್ಯಗಳಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೋತಿದೆ. ಆರ್‌ಸಿಬಿ ಇನ್ನುಳಿದ 10 ಪಂದ್ಯಗಳಲ್ಲೂ ಗೆಲ್ಲುತ್ತೆ ಅನ್ನೋದಕ್ಕೆ ಗ್ಯಾರಂಟಿಯಿಲ್ಲ. ಹಾಗಾದರೆ ಬೆಂಗಳೂರಿಗೆ ಟ್ರೋಫಿ ಬರೀ ಕನಸಾಗಲಿದೆಯಾ? ಈ ಸಾರಿಯೂ ಕಪ್ ನಮ್ದಾಗಲ್ವಾ?

ಮೈಖೇಲ್ ಕನ್ನಡ - ಐಪಿಎಲ್ 2019 'ವಿಶೇಷ ಮುಖಪುಟ'ಮೈಖೇಲ್ ಕನ್ನಡ - ಐಪಿಎಲ್ 2019 'ವಿಶೇಷ ಮುಖಪುಟ'

ಅದು ತಂಡವಾಗಲಿ ಇಲ್ಲ ಒಬ್ಬನೇ ವ್ಯಕ್ತಿಯಾಗಲಿ. ಆರಂಭದಲ್ಲಿ ಸಾಲು ಸಾಲಾಗಿ ಸೋತ ಮಾತ್ರಕೆ ಗೆಲುವು ದಕ್ಕೋದೆಯಿಲ್ಲಯೆಂದೇನಿಲ್ಲ. ಗೆಲುವಿನೆಡೆಗಿನ ಪ್ರಯತ್ನ ನಿಲ್ಲಿಸದಿದ್ದರೆ ಆರಂಭದಲ್ಲಿ ಸೋತವರೂ ಗೆದ್ದ ನಿರ್ದರ್ಶನಗಳಿವೆ. ಐಪಿಎಲ್‌ನಲ್ಲೂ ಇದಕ್ಕೆ ಸಾಕ್ಷಿಗಳಿವೆ.

ರೈನಾಗೆ ಪೆವಿಲಿಯನ್‌ ದಾರಿ ತೋರಿದ ಸೂಪರ್‌ಮ್ಯಾನ್ ಪೊಲಾರ್ಡ್: ವಿಡಿಯೋರೈನಾಗೆ ಪೆವಿಲಿಯನ್‌ ದಾರಿ ತೋರಿದ ಸೂಪರ್‌ಮ್ಯಾನ್ ಪೊಲಾರ್ಡ್: ವಿಡಿಯೋ

ಆರಂಭಿಕ ಪಂದ್ಯಗಳಲ್ಲಿ ಸಾಲು ಸಾಲಾಗಿ ಸೋಲೋದು ಮುಂಬೈ ಇಂಡಿಯನ್ಸ್‌ ಪಾಲಿಗಂತೂ ಮಾಮೂಲಿ ಆಗಿಬಿಟ್ಟಿದೆ. ಆದರೆ ಹಾಗೆ ಆರಂಭಿಕ ನಾಲ್ಕೈದು ಪಂದ್ಯಗಳನ್ನು ಸೋತು ಮುಂಬೈ ಕಪ್ ಗೆದ್ದಿಲ್ಲವೆ? ಆರ್‌ಸಿಬಿ ತಂಡವನ್ನೂ, ಅಭಿಮಾನಿಗಳನ್ನೂ ಇಂಥದ್ದೊಂದು ಆಶಾಭಾವ ಕಾಯಬೇಕಿದೆ. ಆಲ್ ರೈಟ್, ಮುಂದಕ್ಹೋಗೋಣ ಬನ್ನಿ.

ಈ 'ಸಾರಿ ಕಪ್ ಬಿಡಲ್ಲ' ಅನ್ನೋ ಹುರುಪು

ಈ 'ಸಾರಿ ಕಪ್ ಬಿಡಲ್ಲ' ಅನ್ನೋ ಹುರುಪು

ಐಪಿಎಲ್‌ ನಲ್ಲಿ ಟ್ರೋಫಿಯೇ ಗೆಲ್ಲದ ತಂಡವಾಗಿ ವಿರಾಟ್ ಕೊಹ್ಲಿ ಬಳಗ ಆರ್‌ಸಿಬಿಯಿದೆ. ಆದರೆ 'ಈ ಸಾರಿ ಕಪ್ ಬಿಡಲ್ಲ' ಅಂತ ಬೆಂಗಳೂರು ತಂಡದಲ್ಲಿ ಅನೇಕ ಬದಲಾವಣೆಗಳನ್ನು ಮಾಡಿಕೊಂಡಿತ್ತು. ಆಟಗಾರರ ಹರಾಜಿನ ವೇಳೆ ಉತ್ತಮ ಆಟಗಾರರನ್ನು ತಂಡಕ್ಕೆ ಸೇರಿಸಿಕೊಂಡಿತ್ತು. ಗ್ಯಾರಿ ಕಸ್ಟರ್ನ್, ಆಶೀಷ್ ನೆಹ್ರಾ ಕೋಚಿಂಗ್ ವಿಭಾಗವನ್ನು ಬಲಗೊಳಿಸಿದ್ದರು.

ಆರ್ಸಿಬಿ ಸೋಲಿನ ದಾರಿ

ಆರ್ಸಿಬಿ ಸೋಲಿನ ದಾರಿ

ಆರ್ಸಿಬಿ ತಂಡ ಈ ಬಾರಿ ಐಪಿಎಲ್ ಉದ್ಘಾಟನಾ ಪಂದ್ಯದಲ್ಲೇ ಸಿಎಸ್‌ಕೆ ವಿರುದ್ಧ ಸೋತು ಅಭಿಮಾನಿಗಳನ್ನು ನಿರಾಶೆಗಳಿಸಿತ್ತು. ಅನಂತರ ಮತ್ತೂ ಮೂರು ಪಂದ್ಯಗಳಲ್ಲಿ ಸೋಲಿನ ದಾರಿಯನ್ನೇ ಹಿಡಿದಿತ್ತು. ಹೀಗಾಗಿ ಆರ್‌ಸಿಬಿ ಅಭಿಮಾನಿಗಳೂ, ನಾಯಕ ವಿರಾಟ್ ಕೊಹ್ಲಿಯೂ ಇನ್ನಷ್ಟು ನಿರಾಶೆ ಪಡುವಂತಾಗಿದೆ.

ಮುಂಬೈ ಇದಕ್ಕಿಂತಲೂ ಕೆಟ್ಟ ಪ್ರದರ್ಶನ ನೀಡಿತ್ತು

ಮುಂಬೈ ಇದಕ್ಕಿಂತಲೂ ಕೆಟ್ಟ ಪ್ರದರ್ಶನ ನೀಡಿತ್ತು

ಆರ್‌ಸಿಬಿಗೆ ಟ್ರೋಫಿ ಗೆಲ್ಲಲು ಇನ್ನೂ ಅವಕಾಶವಿದೆ ಎನ್ನುತ್ತಿದೆ ಐಪಿಎಲ್ ಇತಿಹಾಸ. ಯಾಕೆಂದರೆ ಐಪಿಎಲ್‌ನಲ್ಲಿ ಒಟ್ಟು ಮೂರು ಸಾರಿ ಚಾಂಪಿಯನ್ ಅನ್ನಿಸಿದ್ದ ಮುಂಬೈ ಇಂಡಿಯನ್ಸ್ ಆರಂಭದಲ್ಲಿ ಅತೀ ಕೆಟ್ಟ ಪ್ರದರ್ಶನ ನೀಡಿಯೂ ಒಂದುಸಾರಿ ಪ್ಲೇ-ಆಫ್ ಪ್ರವೇಶಿಸಿದೆ. ಇನ್ನೊಂದು ಸಾರಿ ಟ್ರೋಫಿಯೇ ಗೆದ್ದಿದೆ! (ಚಿತ್ರ ಕೃಪೆ: ಬಿಸಿಸಿಐ).

ಆರ್‌ಸಿಬಿ ಕಪ್ಪಿನಾಸೆ ಈಗಲೂ ಜೀವಂತ

ಆರ್‌ಸಿಬಿ ಕಪ್ಪಿನಾಸೆ ಈಗಲೂ ಜೀವಂತ

ಮುಂಬೈ ಹೆಚ್ಚಿನ ಸಾರಿ ಐಪಿಎಲ್ ಆರಂಭಿಕ ಪಂದ್ಯಗಳಲ್ಲಿ ಸೋಲೋದು ಮಾಮೂಲಿಯಾಗಿದೆ. ಆಗಿದ್ದೂ ಮುಂಬೈ ಇಂಡಿಯನ್ಸ್ 2014ರಲ್ಲಿ ಪ್ಲೇ ಆಫ್‌ಗೆ ಪ್ರವೇಶಿಸಿತ್ತು. 2015ರಲ್ಲಿ ಚಾಂಪಿಯನ್ ಆಗಿತ್ತು. ಅಂದ್ಹಾಗೆ 2014ರ ಸೀಸನ್ ಆರಂಭದ 5 ಪಂದ್ಯಗಳನ್ನು ಮತ್ತು 2015ರ ಆರಂಭಿಕ 4 ಪಂದ್ಯಗಳನ್ನು ಸೋತು ಮುಂಬೈ ಮುಖಭಂಗ ಅನುಭವಿಸಿತ್ತು. ಆದರೆ ಹಾಗೆ ಸೋತರೂ ಮತ್ತೆ ಪ್ಲೇ ಆಫ್ ಪ್ರವೇಶಿಸಿ, ಟ್ರೋಫಿ ಗೆದ್ದು ಬೆರಗು ಮೂಡಿಸಿತ್ತು! ಆರ್‌ಸಿಬಿ ಇನ್ನುಳಿದ ಪಂದ್ಯಗಲ್ಲಿ ಹೆಚ್ಚಿನವನ್ನು ಗೆದ್ದರೆ ಕಪ್ ನಮ್ಮದಾಗುವ ಅವಕಾಶ ಖಂಡಿತಾ ಇದೆ.

Story first published: Thursday, April 4, 2019, 1:21 [IST]
Other articles published on Apr 4, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X